Fuel Price Cut ಕೇಂದ್ರದ ಬೆನ್ನಲ್ಲೇ ರಾಜ್ಯ ಸರ್ಕಾರಗಳಿಂದ ಮಹತ್ವದ ಘೋಷಣೆ, ಪೆಟ್ರೋಲ್ ಡೀಸೆಲ್ ಮೇಲಿನ ವ್ಯಾಟ್ ಕಡಿತ!

Published : May 22, 2022, 05:01 PM ISTUpdated : May 22, 2022, 06:32 PM IST
Fuel Price Cut  ಕೇಂದ್ರದ ಬೆನ್ನಲ್ಲೇ ರಾಜ್ಯ ಸರ್ಕಾರಗಳಿಂದ ಮಹತ್ವದ ಘೋಷಣೆ, ಪೆಟ್ರೋಲ್ ಡೀಸೆಲ್ ಮೇಲಿನ ವ್ಯಾಟ್ ಕಡಿತ!

ಸಾರಾಂಶ

ಪೆಟ್ರೋಲ್ ಡೀಸೆಲ್ ಮತ್ತಷ್ಟು ಅಗ್ಗ ಕೇಂದ್ರ ಸರ್ಕಾರದಿಂದ ಅಬಕಾರಿ ಸುಂಕ ಕಡಿತ ರಾಜ್ಯ ಸರ್ಕಾರಗಳಿಂದ ವ್ಯಾಟ್ ಕಡಿತ

ನವದೆಹಲಿ(ಮೇ.22) ಹಣದುಬ್ಬರ, ಬೆಲೆ ಏರಿಕೆ, ಆರ್ಥಿಕ ಸಂಕಷ್ಟಗಳಿಂದ ಆತಂಕಗೊಂಡಿದ್ದ ಜನತಗೆ ಕೇಂದ್ರ ಸರ್ಕಾರ ನಿನ್ನೆ(ಮೇ.21) ಗುಡ್ ನ್ಯೂಸ್ ನೀಡಿತ್ತು. ಪೆಟ್ರೋಲ್ ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸಿತ್ತು. ಇದೀಗ ರಾಜ್ಯ ಸರ್ಕಾರಗಳಾದ ಮಹರಾಷ್ಟ್ರ (Maharashtra) ಕೇರಳ (Kerala) ಹಾಗೂ ರಾಜಸ್ಥಾನ (Rajasthan) ಮತ್ತೊಂದು ಸಿಹಿ ಸುದ್ದಿ ನೀಡಿದೆ. ತೈಲದ ಮೇಲಿನ ವ್ಯಾಟ್ ಕಡಿತಗೊಳಿಸಿದೆ. ಇದರಿಂದ ಪೆಟ್ರೋಲ್ ಡೀಸೆಲ್ ಮತ್ತಷ್ಟು ಅಗ್ಗವಾಗಿದೆ. 

ಕೇರಳದಲ್ಲಿ ಪೆಟ್ರೋಲ್ ಮೇಲಿನ ವ್ಯಾಟ್ ಪ್ರತಿ ಲೀಟರ್‌ಗೆ 2.41 ರೂಪಾಯಿ ಕಡಿತಗೊಳಿಸಿದ್ದರೆ, ಡೀಸೆಲ್ ಮೇಲೆ 1.36 ರೂಪಾಯಿ ಕಡಿತಗೊಳಿಸಿದೆ. ಇನ್ನು ರಾಜಸ್ಥಾನ ಸರ್ಕಾರ ಪೆಟ್ರೋಲ್ ಮೇಲಿನ ವ್ಯಾಟ್ ರೂ 2.48 ರೂಪಾಯಿ ಪ್ರತಿ ಲೀಟರ್‌ಗೆ ಕಡಿತಗೊಳಿಸಿದ್ದರೆ, ಡೀಸೆಲ್ ಮೇಲೆ 1.16 ರೂಪಾಯಿ ಕಡಿತಗೊಳಿಸಿದೆ. ಮಹಾರಾಷ್ಟ್ರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 2.08 ರೂಪಾಯಿ ವ್ಯಾಟ್ ಕಡಿತಗೊಳಿಸಿದ್ದರೆ, ಪ್ರತೀ ಲೀಟರ್ ಡೀಸೆಲ್ ಮೇಲೆ 1.44 ರೂಪಾಯಿ ವ್ಯಾಟ್ ಕಡಿತಗೊಳಿಸಲಾಗಿದೆ.

 ಸುಂಕ ಕಡಿತದ ಬಳಿಕ ರಾಜ್ಯಾದ್ಯಂತ ಹೀಗಿದೆ ಪೆಟ್ರೋಲ್, ಡೀಸೆಲ್ ಇಂದಿನ ದರ!

ರಾಜಸ್ಥಾನ ಹಾಗೂ ಕೇರಳದಲ್ಲಿ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಮತ್ತಷ್ಟು ಅಗ್ಗವಾಗಿದೆ. ಕಾರಣ ಕೇಂದ್ರ ಸರ್ಕಾರದ ಕಡಿತಗೊಳಿಸಿರುವ ಅಬಕಾರಿ ಸುಂಕ ಹಾಗೂ ರಾಜ್ಯ ಸರ್ಕಾರದ ವ್ಯಾಟ್ ಕಡಿತ ಎರಡೂ ಕೂಡ ಜನಸಾಮಾನ್ಯರ ಹೊರೆಯನ್ನು ತಪ್ಪಿಸಿದೆ.

ಕೇಂದ್ರ ಸರ್ಕಾರ ಪೆಟ್ರೋಲ್ ಮೇಲಿ 8 ರೂಪಾಯಿ ಅಬಕಾರಿ ಸುಂಕ ಕಡಿತ ಮಾಡಿದ್ದರೆ, ಡೀಸೆಲ್ ಮೇಲೆ 6 ರೂಪಾಯಿ ಅಬಕಾರಿ ಸುಂಕ ಕಡಿತ ಮಾಡಿತ್ತು. ಇದರಿಂದ ಒಂದು ಲೀಟರ್ ಪೆಟ್ರೋಲ್ ಬೆಲೆ 9.50 ರೂಪಾಯಿ ಕಡಿತಗೊಂಡಿದ್ದರೆ, ಡೀಸೆಲ್ ಬೆಲೆ 7 ರೂಪಾಯಿ ಕಡಿತಗೊಂಡಿದೆ. ಇದಕ್ಕೆ ಕೇರಳ ಹಾಗೂ ರಾಜಸ್ಥಾನದಲ್ಲಿ ಹೆಚ್ಟುವರಿಯಾಗಿ ವ್ಯಾಟ್ ಕಡಿತವೂ ಸೇರಿಕೊಂಡಿದೆ. 

ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 8 ರು. ಹಾಗೂ 6 ರು. ಕಡಿತ ಮಾಡಿದ ಬೆನ್ನಲ್ಲೇ ಕೇರಳ ಸರ್ಕಾರವೂ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತನ್ನ ಪಾಲಿನ ರಾಜ್ಯ ತೆರಿಗೆಯನ್ನು ಕ್ರಮವಾಗಿ 2.41 ರು. ಮತ್ತು 1.36 ರು. ಕಡಿತ ಮಾಡಿದೆ. ಇದರಿಂದಾಗಿ ರಾಜ್ಯದಲ್ಲಿ ಪೆಟ್ರೋಲ್‌ ಸುಮಾರು 11 ರು. ಹಾಗೂ ಡೀಸೆಲ್‌ ಸುಮಾರು 9 ರು. ಅಗ್ಗವಾಗಲಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕೇರಳ ಇಳಿಕೆ ಮಾಡಿರಲಿಲ್ಲ. ಮತ್ತೊಮ್ಮೆ ಕಳೆದ ತಿಂಗಳು ಕೇಂದ್ರ ಸರ್ಕಾರ ಇಳಿಕೆ ಮಾಡುವಂತೆ ಸೂಚಿಸಿದಾಗಲೂ ಕೇರಳ ಸರ್ಕಾರ ಇದನ್ನು ತಿರಸ್ಕರಿಸಿತ್ತು. 

ಮೂರು ರಾಜ್ಯಗಳ ತೈಲ ಮೇಲಿನ ವ್ಯಾಟ್ ಕಡಿತ ಮಾಡಿದೆ. ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಐ(ಎಂ) ಪಕ್ಷ ಆಡಳಿತಿದಲ್ಲಿದೆ. ಇನ್ನು ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ನೇತೃತ್ವದ ಮೈತ್ರಿ ಸರ್ಕಾರವಿದೆ. ಇನ್ನು ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ತೈಲ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸದ ಸಂದರ್ಬದಲ್ಲಿ ಬಿಜೆಪಿ ಆಡಳಿತದ ರಾಜ್ಯಗಳು ರಾಜ್ಯ ತೆರೆಗಿಯನ್ನು ಕಡಿತಗೊಳಿಸಿತ್ತು. ಈ ವೇಳೆ ಈ ಮೂರು ರಾಜ್ಯಗಳು ಯಾವುದೇ ತೆರಿಗೆ ಕಡಿತ ಮಾಡಿಲ್ಲ. ಕೇವಲ ಪಂಜಾಬ್‌ನಲ್ಲಿದ್ದ ಚರಣಜಿತ್ ಸಿಂಗ್ ಚನಿ ಸರ್ಕಾರ ತೆರಿಗೆ ಕಡಿತ ಮಾಡಿತ್ತು.

Petrol Diesel Price: ಪೆಟ್ರೋಲ್‌ ಲೀಟರ್‌ಗೆ ರೂ 9.5, ಡೀಸೆಲ್‌ ರೂ 7 ಬೆಲೆ ಇಳಿಕೆ, ಗ್ಯಾಸ್‌ಗೆ ರೂ 200 ಸಬ್ಸಿಡಿ

ಭಾನುವಾರದಿಂದಲೇ ಜಾರಿ:
ದರ ಇಳಿಕೆ ಘೋಷಣೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ‘ಪೆಟ್ರೋಲ್‌ ಮೇಲಿನ ಕೇಂದ್ರೀಯ ಸುಂಕವನ್ನು 8 ರು. ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು 6 ರು. ಕಡಿತ ಮಾಡುತ್ತಿದ್ದೇವೆ. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 1 ಲಕ್ಷ ಕೋಟಿ ರು.ನಷ್ಟುಹೊರೆ ಬೀಳಲಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಈ ತೆರಿಗೆ ಕಡಿತದ ನಂತರ ಪೆಟ್ರೋಲ್‌ ಮೇಲಿನ ಕೇಂದ್ರ ತೆರಿಗೆಯು ಲೀಟರ್‌ಗೆ 19.9 ರು. ಮತ್ತು ಡೀಸೆಲ್‌ ಮೇಲಿನ ತೆರಿಗೆ 15.8 ರು. ಆಗಲಿದೆ. ಭಾನುವಾರದಿಂದ ದೆಹಲಿಯಲ್ಲಿ 1 ಲೀಟರ್‌ ಪೆಟ್ರೋಲ್‌ ಬೆಲೆ 95.91 ರು.ಗೆ, ಡೀಸೆಲ್‌ ದರ 89.67ಕ್ಕೆ ಇಳಿಕೆಯಾಗಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!