Bonus Alert: ಏಳು ವರ್ಷಗಳ ಬಳಿಕ ಷೇರುದಾರರಿಗೆ ಗಿಫ್ಟ್‌ ನೀಡಲು ಮುಂದಾದ ಖಾಸಗಿ ಬ್ಯಾಂಕ್‌!

Published : Jul 19, 2025, 02:29 PM IST
bonus-Shares

ಸಾರಾಂಶ

ಕರೂರ್ ವೈಶ್ಯ ತನ್ನ ಷೇರುದಾರರಿಗೆ ಬೋನಸ್ ಷೇರುಗಳನ್ನು ನೀಡುತ್ತಿರುವ ನಾಲ್ಕನೇ ಉದಾಹರಣೆ ಇದಾಗಿದೆ. 

ಮುಂಬೈ (ಜು.19): ದೇಶದ ಅತಿದೊಡ್ಡ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ ತನ್ನ ಷೇರುದಾರರಿಗೆ ಇದೇ ಮೊದಲ ಬಾರಿಗೆ ಬೋನಸ್‌ ಷೇರು ನೀಡುವ ತೀರ್ಮಾನ ಮಾಡಿದೆ. ಇದರ ನಡುವೆ ದೇಶದ ಮತ್ತೊಂದು ಖಾಸಗಿ ಬ್ಯಾಂಕ್‌ ತನ್ನ ಷೇರುದಾರರಿಗೆ ಗಿಫ್ಟ್‌ ನೀಡಿದೆ. ಅಂದಾಜು ಏಳು ವರ್ಷಗಳ ಬಳಿಕ ಷೇರುದಾರರಿಗೆ ಬೋನಸ್‌ ಷೇರು ನೀಡುವ ತೀರ್ಮಾನ ಮಾಡಿದೆ.

ತಮಿಳುನಾಡು ಮೂಲದ ಖಾಸಗಿ ಸಾಲದಾತ ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್, ಷೇರುಗಳ ಬೋನಸ್ ವಿತರಣೆಯನ್ನು ಪರಿಗಣಿಸಲು ಜುಲೈ 24ರ ಗುರುವಾರ ಮಂಡಳಿಯ ಸಭೆಯನ್ನು ನಡೆಸಲಿದೆ ಎಂದು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ. ಕಳೆದ ಏಳು ವರ್ಷಗಳಲ್ಲಿ ಕರೂರ್‌ ವೈಶ್ಯ ಬ್ಯಾಂಕ್‌ ತನ್ನ ಷೇರುದಾರರಿಗೆ ಬೋನಸ್ ವಿತರಣೆಯನ್ನು ಪರಿಗಣಿಸುತ್ತಿರುವುದು ಇದೇ ಮೊದಲು.

ಸಾಲದಾತ ಸಂಸ್ಥೆಯು ತನ್ನ ಷೇರುದಾರರಿಗೆ ಬೋನಸ್ ಷೇರುಗಳನ್ನು ನೀಡುತ್ತಿರುವ ನಾಲ್ಕನೇ ನಿದರ್ಶನ ಇದಾಗಿದೆ.ಇದಕ್ಕೂ ಮೊದಲು, ಕರೂರ್ ವೈಶ್ಯ ಬ್ಯಾಂಕ್ 2002 ರಲ್ಲಿ ಷೇರುದಾರರಿಗೆ ಬಹುಮಾನ ಘೋಷಣೆ ಮಾಡಿತ್ತು. ತನ್ನ ಷೇರು ಹೊಂದಿರುವ ಪ್ರತಿ ಒಂದು ಷೇರಿಗೆ ಒಂದು ಬೋನಸ್ ಷೇರು ನೀಡಿತ್ತು. 2010 ರಲ್ಲಿ ಅದು ಹೊಂದಿರುವ ಪ್ರತಿ ಐದು ಷೇರುಗಳಿಗೆ ಎರಡು ಬೋನಸ್ ಷೇರುಗಳನ್ನು ನೀಡಿತು (2:5), ಮತ್ತು 2018 ರಲ್ಲಿ, ಹೊಂದಿರುವ ಪ್ರತಿ ಹತ್ತು ಷೇರುಗಳಿಗೆ ಒಂದು ಬೋನಸ್ ಷೇರು ನೀಡಿತು (1:10). ಬೋನಸ್ ವಿತರಣೆಯ ದಾಖಲೆ ದಿನಾಂಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಜುಲೈ 24 ರಂದು ಕರೂರ್ ವೈಶ್ಯ ಬ್ಯಾಂಕ್ ಜೂನ್ ತ್ರೈಮಾಸಿಕದ ಫಲಿತಾಂಶಗಳನ್ನು ಪರಿಗಣಿಸಲಿದೆ. ಕರೂರ್ ವೈಶ್ಯ ಬ್ಯಾಂಕಿನ ಷೇರುಗಳು ಶುಕ್ರವಾರ ಶೇ. 0.8 ರಷ್ಟು ಕುಸಿತ ಕಂಡು ₹268.3 ಕ್ಕೆ ತಲುಪಿದೆ. ಷೇರುಗಳು 52 ವಾರಗಳ ಗರಿಷ್ಠ ₹277.5 ಕ್ಕೆ ತಲುಪಿದೆ. ಕಳೆದ ಒಂದು ತಿಂಗಳಲ್ಲಿ ಷೇರುಗಳು ಶೇ. 10 ರಷ್ಟು ಮತ್ತು ಕಳೆದ ಒಂದು ವರ್ಷದಲ್ಲಿ ಶೇ. 19 ರಷ್ಟು ಏರಿಕೆ ಕಂಡಿವೆ.

 

PREV
4
ನಾಲ್ಕನೇ ಬಾರಿಗೆ ಬೋನಸ್‌ ಷೇರು
ಕರೂರ್‌ ವೈಶ್ಯ ಬ್ಯಾಂಕ್‌ 4ನೇ ಬಾರಿಗೆ ಬೋನಸ್‌ ಷೇರು ನೀಡುತ್ತಿದೆ. ಇದಕ್ಕೂ ಮುನ್ನ 2002, 2010 ಹಾಗೂ 2018ರಲ್ಲಿ ನೀಡಿತ್ತು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

'ತೆರಿಗೆ ಶೇ.50 ರಿಂದ 15ಕ್ಕೆ ಇಳಿಸಿ..'ಅಮೆರಿಕದ ಜೊತೆಗಿನ ಒಪ್ಪಂದಕ್ಕೆ ಕೊನೇ ಆಫರ್‌ ನೀಡಿದ ಭಾರತ!
Swiggy Report 2025: ಸೆಕೆಂಡಿಗೆ 3ರಂತೆ, 93 ಮಿಲಿಯನ್ ಬಿರಿಯಾನಿ ಆರ್ಡರ್‌ ಬಂದಿವೆ! ಬೆಚ್ಚಿಬೀಳಿಸುತ್ತೆ ವರದಿ!