ಕರ್ನಾಟಕ ಸತತ 2ನೇ ಬಾರಿ ನಂ.1 ಸ್ಟಾರ್ಟಪ್ ರಾಜ್ಯ| ಉನ್ನತ ಶ್ರೇಣಿ ವಿಭಾಗದಲ್ಲಿ ಸ್ಥಾನ ಪಡೆದ ಕರುನಾಡು| ಅತ್ಯುತ್ತಮ ವಿಭಾಗದಲ್ಲಿ ಗುಜರಾತ್ ಮತ್ತೆ ನಂ.1| 2019ನೇ ಸಾಲಿನ ಸ್ಟಾರ್ಟಪ್ ರಾರಯಂಕಿಂಗ್ ಬಿಡುಗಡೆ
ನವದೆಹಲಿ(ಸೆ.12): ದೇಶದ ಹಲವು ಖ್ಯಾತನಾಮ ಸ್ಟಾರ್ಟಪ್ ಕಂಪನಿಗಳ ತವರೂರು ಎನಿಸಿಕೊಂಡಿರುವ ಕರ್ನಾಟಕ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 2019ನೇ ಸಾಲಿನ ಸ್ಟಾರ್ಟಪ್ ರಾರಯಂಕಿಂಗ್‌ನ ಉನ್ನತ ಶ್ರೇಣಿ ವಿಭಾಗದಲ್ಲಿ ಸತತ ಎರಡನೇ ವರ್ಷವೂ ಪ್ರಥಮ ಸ್ಥಾನ ಪಡೆದುಕೊಂಡಿದೆ. ಇದೇ ವೇಳೆ, ಅತ್ಯುತ್ತಮ ವಿಭಾಗದಲ್ಲಿ ಗುಜರಾತ್ ಪ್ರಥಮ ಸ್ಥಾನದಲ್ಲಿ ಮುಂದುವರಿದಿದೆ.
ಸ್ಟಾರ್ಟಪ್ ಕಂಪನಿಗಳಿಗೆ ಪೂರಕ ವಾತಾವರಣ ಅಭಿವೃದ್ಧಿಪಡಿಸಿದ ರಾಜ್ಯಗಳನ್ನು ಅತ್ಯುತ್ತಮ ಸಾಧಕ, ಉನ್ನತ ಸಾಧಕ, ನಾಯಕ, ಆಕಾಂಕ್ಷಿ, ಉದಯೋನ್ಮುಖ ಎಂಬ ಐದು ವಿಭಾಗಗಳಲ್ಲಿ ವಿಂಗಡಿಸಿ ರಾರಯಂಕಿಂಗ್ ಪ್ರಕಟಿಸಲಾಗಿದೆ. ಇದಕ್ಕಾಗಿ ದೇಶವನ್ನು 2 ಭಾಗಗಳಾಗಿ ಮಾಡಿಕೊಳ್ಳಲಾಗಿದೆ. ‘ವೈ’ ಎಂಬ ವಿಭಾಗದಲ್ಲಿ ದೆಹಲಿ ಹೊರತುಪಡಿಸಿ ಎಲ್ಲ ಕೇಂದ್ರಾಡಳಿತ ಪ್ರದೇಶಗಳು, ಅಸ್ಸಾಂ ಹೊರತುಪಡಿಸಿ ಎಲ್ಲ ಈಶಾನ್ಯ ರಾಜ್ಯಗಳು ಸ್ಥಾನ ಪಡೆದಿವೆ. ‘ಎಕ್ಸ್’ ವಿಭಾಗದಲ್ಲಿ ಎಲ್ಲ ರಾಜ್ಯ ಹಾಗೂ ದೆಹಲಿ ಸ್ಥಾನ ಹೊಂದಿವೆ.
‘ಎಕ್ಸ್’ ವಿಭಾಗದ ಅತ್ಯುತ್ತಮ ವಿಭಾಗದಲ್ಲಿ ಗುಜರಾತ್, ಅಂಡಮಾನ್- ನಿಕೋಬಾರ್ ದ್ವೀಪಗಳಿಗೆ ರಾರಯಂಕ್ ಸಿಕ್ಕಿದೆ. ಉನ್ನತ ವಿಭಾಗದಲ್ಲಿ ಕರ್ನಾಟಕ, ಕೇರಳಕ್ಕೆ ಸ್ಥಾನ ದೊರೆತಿದೆ. 2018ರಲ್ಲೂ ಅತ್ಯುತ್ತಮ ವಿಭಾಗದಲ್ಲಿ ಗುಜರಾತ್, ಉನ್ನತ ವಿಭಾಗದಲ್ಲಿ ಕರ್ನಾಟಕ, ಕೇರಳ ಸ್ಥಾನ ಪಡೆದಿದ್ದವು.