
ನವದೆಹಲಿ(ಜು.01): ಆಂಧ್ರಪ್ರದೇಶ, ಗುಜರಾತ್, ತೆಲಂಗಾಣ, ಹರ್ಯಾಣ ಹಾಗೂ ಕರ್ನಾಟಕ ರಾಜ್ಯಗಳು ದೇಶದಲ್ಲೇ ಅತ್ಯಂತ ಉತ್ತಮ ಉದ್ಯಮಸ್ನೇಹಿ ವಾತಾವರಣ ಹೊಂದಿರುವ ಐದು ರಾಜ್ಯಗಳಾಗಿ ಹೊರಹೊಮ್ಮಿವೆ. ಕೇಂದ್ರ ವಿತ್ತ ಹಾಗೂ ವಾಣಿಜ್ಯ ಸಚಿವಾಲಯ 2022ನೇ ಸಾಲಿನ ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ರಾಜ್ಯಗಳು ಉನ್ನತ ಸ್ಥಾನ ಪಡೆದಿವೆ.
ಉದ್ಯಮಸ್ನೇಹಿ ವಾತಾವರಣವನ್ನು ಅಳೆಯಲು ಈ ಬಾರಿ ಉದ್ಯಮ ಸುಧಾರಣೆ ಕ್ರಿಯಾಯೋಜನೆ (ಬಿಆರ್‌ಎಪಿ)ಗೆ ಅನುಗುಣವಾಗಿ 15 ವಿಭಾಗಗಳನ್ನು ಮಾಡಿ ರಾಜ್ಯಗಳಿಗೆ ರಾರಯಂಕಿಂಗ್ ನೀಡಲಾಗಿದೆ. ಅದರಲ್ಲಿ ಕರ್ನಾಟಕವು ‘ಈಸ್ ಆಫ್ ಡೂಯಿಂಗ್ ಬಿಸಿನೆಸ್’ ವಿಭಾಗದಲ್ಲಿ ಐದನೇ ಸ್ಥಾನ ಪಡೆದಿದೆ. ಉದ್ದಿಮೆಗಳಿಗೆ ಮಾಹಿತಿಯ ಲಭ್ಯತೆ, ಏಕಗವಾಕ್ಷಿ ವ್ಯವಸ್ಥೆ, ಕಾರ್ಮಿಕ ಹಾಗೂ ಭೂಸುಧಾರಣೆ ಮುಂತಾದ ಅಂಶಗಳನ್ನು ರ‍್ಯಾಂಕಿಂಗ್‌ಗೆ ಪರಿಗಣಿಸಲಾಗಿದೆ.
Karnataka Business Award: ಅಪೋನಿಕ್ಸ್ ಟೆಕ್ನಾಲಾಜಿಸ್ ಅಮರ್ ಜೆ.ಕೆಗೆ ಕರ್ನಾಟಕ ಬ್ಯುಸಿನೆಸ್ ಅವಾರ್ಡ್
2015ರಿಂದ ಕೇಂದ್ರ ಸರ್ಕಾರವು ಹೊಸ ಮಾನದಂಡಗಳಿಗೆ ಅನುಗುಣವಾಗಿ ಉದ್ಯಮಸ್ನೇಹಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ ಬಿಡುಗಡೆ ಮಾಡುತ್ತಿದೆ. ಈ ಬಾರಿ ಮಾನದಂಡಗಳನ್ನು ಇನ್ನಷ್ಟು ಸುಧಾರಣೆ ಮಾಡಿ ರ‍್ಯಾಂಕಿಂಗ್ ನೀಡಲಾಗಿದೆ. ಈ ಬಾರಿ ಅತ್ಯಂತ ಉದ್ಯಮ ಸ್ನೇಹಿ, ಉದ್ಯಮ ಸ್ನೇಹಿ, ಭರವಸೆಯ ರಾಜ್ಯಗಳು ಮತ್ತು ಉದಯೋನ್ಮುಖ ಉದ್ಯಮ ಸ್ನೇಹಿ ರಾಜ್ಯಗಳು ಎಂದು 4 ಭಾಗ ಮಾಡಲಾಗಿದೆ.
ಟಾಪ್ 7 ಉದ್ಯಮಸ್ನೇಹಿ ರಾಜ್ಯಗಳು
ಆಂಧ್ರಪ್ರದೇಶ
ಗುಜರಾತ್
ತೆಲಂಗಾಣ
ಹರ್ಯಾಣ
ಕರ್ನಾಟಕ
ಪಂಜಾಬ್
ತಮಿಳುನಾಡು
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.