Credit Card Rules Change:ಕ್ರೆಡಿಟ್ ಕಾರ್ಡ್ ಬಳಕೆದಾರರೇ ಗಮನಿಸಿ; ನಾಳೆಯಿಂದ ಈ ನಿಯಮಗಳಲ್ಲಿ ಬದಲಾವಣೆ

By Suvarna News  |  First Published Jun 30, 2022, 4:44 PM IST

*ಹೊಸ ನಿಯಮ ಎಲ್ಲ ಶೆಡ್ಯೂಲ್ಡ್ ಬ್ಯಾಂಕ್ ಹಾಗೂ ಎಲ್ಲ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳಿಗೆ ಅನ್ವಯ
*ಗ್ರಾಹಕರ ಕೋರಿಕೆಯಿಲ್ಲದೆ ಕ್ರೆಡಿಟ್ ಕಾರ್ಡ್ ವಿತರಣೆ ನಿರ್ಬಂಧ
*ಗ್ರಾಹಕರ ಮನವಿ ಹೊರತಾಗಿಯೂ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡದಿದ್ರೆ ದಂಡ
 


ನವದೆಹಲಿ (ಜೂ.30): ಕ್ರೆಡಿಟ್ ಕಾರ್ಡ್ಗೆ ( Credit Card) ಸಂಬಂಧಿಸಿದ ಕೆಲವು ನಿಯಮಗಳು (Rules) ನಾಳೆಯಿಂದ (ಜು.1) ಬದಲಾಗಲಿವೆ. ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳ ಅಡಿಯಲ್ಲಿ ಕ್ರೆಡಿಟ್ ಕಾರ್ಡ್ ವಿತರಣೆ (Issue), ಬಿಲ್ಲಿಂಗ್ (Billing) ಹಾಗೂ ಕಾರ್ಡ್ ಮುಚ್ಚುವಿಕೆಗೆ (Card closure) ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಬದಲಾವಣೆಗಳನ್ನು ಸಾಮಾನ್ಯ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿದೆ. 

ಜುಲೈ 1ರಿಂದ ಜಾರಿಗೆ ಬರಲಿರುವ ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಶೆಡ್ಯೂಲ್ಡ್ ಬ್ಯಾಂಕ್ (ಪೇಮೆಂಟ್ಸ್ ಬ್ಯಾಂಕ್ಸ್, ರಾಜ್ಯ ಸಹಕಾರಿ ಬ್ಯಾಂಕುಗಳು ಹಾಗೂ ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳನ್ನು ಹೊರತುಪಡಿಸಿ)  ಹಾಗೂ ಎಲ್ಲ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳಿಗೆ  (NBFCs) ಅನ್ವಯಿಸಲಿವೆ. ಹಾಗಾದ್ರೆ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆಗಳಾಗಲಿವೆ? 

Tap to resize

Latest Videos

Tokenization Deadline:ಟೋಕನೈಸೇಷನ್ ಗಡುವು ಮತ್ತೆ ವಿಸ್ತರಣೆ; ಸೆ.30ರ ತನಕ ಕಾಲಾವಕಾಶ

ಕೋರಿಕೆಯಿಲ್ಲದೆ ಕ್ರೆಡಿಟ್ ಕಾರ್ಡ್ ವಿತರಿಸುವಂತಿಲ್ಲ
ಗ್ರಾಹಕರ (Customer) ಕೋರಿಕೆಯಿಲ್ಲದೆ ಕ್ರೆಡಿಟ್ ಕಾರ್ಡ್ (Credit card) ವಿತರಣೆಯನ್ನು ಹೊಸ ಕ್ರೆಡಿಟ್ ಕಾರ್ಡ್ ನಿಯಮಗಳಡಿಯಲ್ಲಿ ಆರ್ ಬಿಐ (RBI) ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ. 'ಒಂದು ವೇಳೆ ಕೋರಿಕೆಯಿಲ್ಲದೆ ಕಾರ್ಡ್ ವಿತರಿಸಿದ್ರೆ ಅಥವಾ ಈಗಿರುವ ಕಾರ್ಡ್ ಅನ್ನು ಮೇಲ್ದರ್ಜೆಗೇರಿಸಿದ್ರೆ ಹಾಗೂ ಸ್ವೀಕರಿಸುವರ ಒಪ್ಪಿಗೆಯಿಲ್ಲದೆ ಸಕ್ರಿಯಗೊಳಿಸಿದ್ರೆ ಹಾಗೂ ಅದೇ ಕಾರಣಕ್ಕೆ ಬಿಲ್ ಮಾಡಿದ್ರೆ ಕಾರ್ಡ್ ವಿತರಕ ಸಂಸ್ಥೆ ಶುಲ್ಕಗಳನ್ನು ಹಿಂತಿರುಗಿಸೋದು ಮಾತ್ರವಲ್ಲ, ದುಪ್ಪಟ್ಟು ದಂಡವನ್ನು ಕೂಡ ಪಾವತಿಸಬೇಕು' ಎಂದು ಆರ್ ಬಿಐ ತಿಳಿಸಿದೆ. ಇನ್ನು ಯಾರ ಹೆಸರಿನಲ್ಲಿ ಕಾರ್ಡ್ ವಿತರಿಸಲಾಗಿದೆಯೋ ಆ ವ್ಯಕ್ತಿ ಕೂಡ ಭಾರತೀಯ ರಿಸರ್ವ್ ಬ್ಯಾಂಕಿನ ಒಂಬುಡ್ಸ್ ಮನ್ (Ombudsman) ಅವರನ್ನು ಸಂಪರ್ಕಿಸಬಹುದು.ನಿಯಮಗಳಿಗನುಸಾರವಾಗಿ ಒಂಬುಡ್ಸ್ ಮನ್ ದಂಡದ (Fine) ಮೊತ್ತವನ್ನು ನಿರ್ಧರಿಸುತ್ತಾರೆ.

ಮನವಿ ಹೊರತಾಗಿಯೂ ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡದಿದ್ರೆ ದಂಡ
ಕ್ರೆಡಿಟ್ ಕಾರ್ಡ್ ವಿತರಕರು ಕಾರ್ಡ್ ಹೊಂದಿರುವ ವ್ಯಕ್ತಿಗಳಿಂದ ಕಾರ್ಡ್ ಮುಚ್ಚುವಂತೆ ಯಾವುದೇ ಮನವಿ ಬಂದರೆ, 7 ಕಾರ್ಯನಿರತ ದಿನಗಳೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆರ್ ಬಿಐ ತಿಳಿಸಿದೆ. ಅಲ್ಲದೆ, ಕ್ರೆಡಿಟ್ ಕಾರ್ಡ್ ಮುಚ್ಚಿರುವ ಬಗ್ಗೆ ಕಾರ್ಡ್ ದಾರರಿಗೆ ಇ-ಮೇಲ್ (e-mail), ಎಸ್ ಎಂಎಸ್ (SMS) ಇತ್ಯಾದಿ ಮೂಲಕ ಕಾರ್ಡ್ ವಿತರಕ ಸಂಸ್ಥೆ ತಕ್ಷಣ ಮಾಹಿತಿ ನೀಡಬೇಕು ಎಂದು ಆರ್ ಬಿಐ ತನ್ನ ಮಾರ್ಗಸೂಚಿಗಳಲ್ಲಿ ತಿಳಿಸಿದೆ. ಒಂದು ವೇಳೆ ಕಾರ್ಡ್ ವಿತರಕ ಸಂಸ್ಥೆ 7 ಕಾರ್ಯನಿರತ ದಿನಗಳೊಳಗೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ರೆ ಪ್ರತಿ ದಿನಕ್ಕೆ 500 ರೂ. ದಂಡವನ್ನು ಗ್ರಾಹಕನಿಗೆ ಪಾವತಿಸಬೇಕು ಎಂದು ಆರ್ ಬಿಐ ಸೂಚಿಸಿದೆ.

ಕ್ರೆಡಿಟ್ ಬ್ಯಾಲೆನ್ಸ್ ಕಾರ್ಡ್ ದಾರರ ಖಾತೆಗೆ ಜಮೆ 
ಒಂದು ವೇಳೆ ಕಾರ್ಡ್ ದಾರರ ಖಾತೆಯಲ್ಲಿ ಕ್ರೆಡಿಟ್ ಬ್ಯಾಲೆನ್ಸ್ ಇದ್ರೆ ಹೊಸ ನಿಯಮಗಳ ಪ್ರಕಾರ ಅದನ್ನು ಅವರ ಬ್ಯಾಂಕ್ ಖಾತೆಗಳಿಗೆ ಕ್ರೆಡಿಟ್ ಮಾಡಬೇಕು. ಕ್ರೆಡಿಟ್ ಕಾರ್ಡ್ ಖಾತೆ ಕ್ಲೋಸ್ ಮಾಡಿದ ಬಳಿಕ ಯಾವುದೇ ಕ್ರೆಡಿಟ್ ಬ್ಯಾಲೆನ್ಸ್ ಉಳಿದಿದ್ರೆ ಅದನ್ನು ಕಾರ್ಡ್ ದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಬೇಕು. ಕಾರ್ಡ್ ದಾರರ ಬ್ಯಾಂಕ್ ಖಾತೆ ಮಾಹಿತಿಗಳನ್ನು ಕಾರ್ಡ್ ವಿತರಕರು ಹೊಂದಿರಬೇಕು' ಎಂದು ಆರ್ ಬಿಐ ತಿಳಿಸಿದೆ.

ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಆಯ್ಕೆ ಮಾಡಿ
ಜುಲೈ 1ರಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್  ಹಿಂದಿನ ತಿಂಗಳ 11ರಿಂದ ಪ್ರಾರಂಭವಾಗಿ ಪ್ರಸ್ತುತ ತಿಂಗಳ 11ಕ್ಕೆ ಮುಕ್ತಾಯವಾಗಲಿದೆ ಎಂದು ಆರ್ ಬಿಐ ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. 

ರಿಲಯನ್ಸ್ ರಿಟೇಲ್ ಕಂಪನಿಗೆ ಇಶಾ ಅಂಬಾನಿ ಚೇರ್ಮನ್?

ತಪ್ಪು ಬಿಲ್ ಗಳನ್ನು ಕಳುಹಿಸುವಂತಿಲ್ಲ
ಈ ನಿಯಮಗಳ ಹೊರತಾಗಿ ಕ್ರೆಡಿಟ್ ಕಾರ್ಡ್ ಕಂಪನಿಗಳು ತಪ್ಪು ಬಿಲ್ ಗಳನ್ನು ಕಳುಹಿಸುವಂತಿಲ್ಲ. ಒಂದು ವೇಳೆ ಕಾರ್ಡ್ ದಾರರು ಬಿಲ್ ಬಗ್ಗೆ ತಕರಾರು ತೆಗೆದ್ರೆ ಕಾರ್ಡ್ ವಿತರಕ ಸಂಸ್ಥೆಈ ಬಗ್ಗೆ ವಿವರಣೆ ನೀಡಬೇಕು. ಅಗತ್ಯವಿದ್ರೆ ಸೂಕ್ತ ಸಾಕ್ಷ್ಯಗಳನ್ನು ಕಾರ್ಡ್ ದಾರರಿಗೆ ದೂರು ನೀಡಿದ ಗರಿಷ್ಠ 30ದಿನಗಳೊಳಗೆ ಒದಗಿಸಬೇಕು ಎಂದು
ಆರ್ ಬಿಐ ತಿಳಿಸಿದೆ. 

click me!