ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 16ನೇ ಬಜೆಟ್ ಮಂಡನೆ ಮಾಡಿದ್ದಾರೆ. ಬರೋಬ್ಬರಿ 4.09 ಲಕ್ಷ ಕೋಟಿ ಮೌಲ್ಯದ ಬಜೆಟ್ ಅನ್ನು ಮಂಡಿಸಿದ್ದಾರೆ. ಇದರಲ್ಲಿ 1.15 ಲಕ್ಷ ಕೋಟಿ ರೂ.ಗಳನ್ನು ಸಾಲ ಮಾಡಿದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನ ನೀಡುವ ಜೊತೆಗೆ ಬಹುದೊಡ್ಡದಲ್ಲದಿದ್ದರೂ ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಹಂಚಿಕೆ ಮಾಡಿದ್ದಾರೆ. ಈ ಪೈಕಿ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಎಲ್ಲರ ಕಣ್ಣಿಗೆ ಕಾಣುವಂತೆ ಭರಪೂರ ಅನುದಾನವನ್ನು ಕೊಟ್ಟಿದ್ದಾರೆ. ಆದರೆ, ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಹಲಾಲ್ ಬಜೆಟ್, ಮುಸ್ಲಿಂ ಓಲೈಕೆಯ ಬಜೆಟ್ ಎಂದು ವಿಪಕ್ಷಗಳ ನಾಯಕರು ಟೀಕೆ ಮಾಡಿದ್ದಾರೆ. ಆದರೆ, ನಮಗೆ ಜನಸಂಖ್ಯೆ ಆಧಾರದಲ್ಲಿ ರಾಜ್ಯ ಸರ್ಕಾರ 60 ಸಾವಿರ ಕೋಟಿ ರೂ. ಅನುದಾನ ನೀಡುವಂತೆ ಸಚಿವ ಜಮೀರ್ ಅಹಮದ್ ಖಾನ್ ಆಗ್ರಹ ಮಾಡಿದ್ದಾರೆ. ಕರ್ನಾಟಕ ಬಜೆಟ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ...

05:14 PM (IST) Mar 07
ಕರ್ನಾಟಕ ಬಜೆಟ್ 2025 ಮಾಹಿತಿ ಕೈಪಿಡಿ: Karnataka Budget 2025 pdf
04:03 PM (IST) Mar 07
ವಿಪಕ್ಷ ನಾಯಕ ಆರ್. ಅಶೋಕ ಅವರು ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ನಿರಾಶಾದಾಯಕ ಮತ್ತು ಮುಸ್ಲಿಂ ಓಲೈಕೆಯ ಬಜೆಟ್ ಆಗಿದೆ ಎಂದಿದ್ದಾರೆ. ಪ್ರತಿಯೊಬ್ಬ ಕನ್ನಡಿಗರ ಮೇಲೆ ₹1 ಲಕ್ಷ ಸಾಲ ಹೊರಿಸಿದ ಬೊಗಳೆರಾಮಯ್ಯ ಎಂದು ಟೀಕಿಸಿದ್ದಾರೆ.
ಪೂರ್ತಿ ಓದಿ03:46 PM (IST) Mar 07
03:45 PM (IST) Mar 07
03:45 PM (IST) Mar 07
03:34 PM (IST) Mar 07
ಸಿದ್ದರಾಮಯ್ಯ 1995ರಲ್ಲಿ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡಿದಾಗ ಅದರ ಗಾತ್ರ 12,000 ಕೋಟಿ ರೂ. ಆಗಿತ್ತು. ಇದೀಗ 16ನೇ ಬಜೆಟ್ ಮಂಡನೆ ಮಾಡಿದ್ದು 4.09 ಲಕ್ಷ ಕೋಟಿ ರೂ. ಗಾತ್ರವಾಗಿದೆ. ಇದು ಸಾಮಾಜಿಕ ಕಳಕಳಿ ಮತ್ತು ಉದ್ಯಮ ಸ್ನೇಹಿ ಬಜೆಟ್ ಎಂದು ಸಚಿವ ಎಂ.ಬಿ. ಪಾಟೀಲ ಶ್ಲಾಘಿಸಿದ್ದಾರೆ.
ಪೂರ್ತಿ ಓದಿ01:44 PM (IST) Mar 07
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಭರಪೂರ ಕೊಡುಗೆಗಳನ್ನು ನೀಡಲಾಗಿದೆ. ಒಲಿಂಪಿಕ್ಸ್‌ಗೆ ತಯಾರಿ, ಕ್ರೀಡಾಂಗಣಗಳ ಅಭಿವೃದ್ಧಿ, ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.
01:38 PM (IST) Mar 07
ಸಿದ್ದರಾಮಯ್ಯನವರ ಬಜೆಟ್‌ನಲ್ಲಿ ವಿಮಾನ ನಿಲ್ದಾಣಗಳು, ರೈಲ್ವೆ ಯೋಜನೆಗಳು ಮತ್ತು ಜಲಸಾರಿಗೆ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಕರಾವಳಿ ಪ್ರದೇಶದಲ್ಲಿ ಕಡಲು ಕೊರೆತ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು.
ಪೂರ್ತಿ ಓದಿ01:20 PM (IST) Mar 07
ಕೊಡಗು: ರಾಜ್ಯದ ಬಜೆಟ್ ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್. ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡುವ ಬಜೆಟ್. ಅದಕ್ಕಾಗಿ ಬಹಳಷ್ಟು ಯೋಜನೆ ರೂಪಿಸಿದ್ದಾರೆ. ಇದರಿಂದ ನಮಗೇನೂ ಸಮಸ್ಯೆ ಇಲ್ಲ. ಎಲ್ಲರಿಗೂ ಒಳ್ಳೆಯದಾಗಬೇಕು, ಲಾಭವಾಗಬೇಕು.ಆದರೆ ಹಿಂದೂಗಳಿಗೆ ಕೊಡಬೇಕಾಗಿರುವುದನ್ನು ಕೊಡುವುದರಲ್ಲಿ ವಿಫಲವಾಗಿದೆ. ಅದು ಮುಖ್ಯವಾಗಿ ಎದ್ದು ಕಾಣುತ್ತಿದೆ. ಬರೀ ಅಲ್ಪಸಂಖ್ಯಾತರನ್ನು ಓಲೈಸಿರುವ ರೀತಿ ಬಜೆಟ್ ರೂಪಿಸಿರುವುದು ಕಾಣುತ್ತದೆ. ರಾಜ್ಯದಲ್ಲಿ ವಿಶ್ವ ವಿದ್ಯಾಲಯಗಳನ್ನು ಮುಚ್ಚುವುದಕ್ಕೆ ಸರ್ಕಾರ ಮುಂದಾಗಿದೆ. ಆದರೆ ವಿದೇಶದಲ್ಲಿ ಓದುವ ಅಲ್ಪಸಂಖ್ಯಾತರಿಗೆ ಇದ್ದ ಸಹಾಯಧನವನ್ನು 20 ರಿಂದ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಲ್ಪಸಂಖ್ಯಾತರ ವಿದ್ಯಾಭ್ಯಾಸಕ್ಕಾಗಿ ಅವರು ಅವಕಾಶ ನೀಡುತ್ತಿದ್ದಾರೆ. ಒಳ್ಳೆಯ ಕೆಲಸವಿದ್ದರೆ ನಾವು ಬೆಂಬಲಿಸುತ್ತೇವೆ. ಆದರೆ ಬರೀ ಘೋಷಣೆಗಳು ಆಗುತ್ತಿವೆ. ಘೋಷಣೆಗಳು ಅನುಷ್ಠಾನ ಆಗುವುದರಲ್ಲಿ ವಿಫಲವಾಗುತ್ತಿವೆ.
ಕೇಂದ್ರ ಹಲವು ಯೋಜನೆಗಳ ಪೂರೈಸಲು ರಾಜ್ಯದ ಪಾಲು ಕೊಡುವ ನಿರೀಕ್ಷೆ ಇತ್ತು. ಮೈಸೂರು ಏರ್ ಪೋರ್ಟಿಗೆ ಕೇವಲ 120 ಕೋಟಿ ಬೇಕಿತ್ತು.ಆದರೆ ಇದುವರೆಗೆ ಅದರ ಮಾಹಿತಿ ಇಲ್ಲ. ಮೈಸೂರು ಕುಶಾಲನಗರ ರೈಲ್ವೆ ಸಂಪರ್ಕ ಆಗಬೇಕಾಗಿತ್ತು. ಅದಕ್ಕಾಗಿ ಭೂಸ್ವಾದೀನಕ್ಕೆ ಅನುದಾನ ನಿಗಧಿ ಮಾಡಬೇಕಾಗಿತ್ತು. ಅದರಲ್ಲೂ ಕೂಡ ಏನೂ ಕೊಟ್ಟಿಲ್ಲ ವಿಫಲರಾಗುತ್ತಿದ್ದಾರೆ. ಕನಿಷ್ಠ ಕೊಡಗಿನ ರಸ್ತೆಗಳ ಅಭಿವೃದ್ಧಿಗಾದರೂ ಅನುದಾನ ಕೊಡಬೇಕಾಗಿತ್ತು. ಅದನ್ನು ಮಾಡಿದ್ದರೂ ಕೊಡಗಿಗೆ ದೊಡ್ಡ ಲಾಭವಾಗುತಿತ್ತು . ಕೊಡಗಿನ ಎಲ್ಲಾ ರಸ್ತೆಗಳು ಗುಂಡಿಬಿದ್ದಿವೆ. ಅದರ ಬಗ್ಗೆಯೂ ನಿರೀಕ್ಷೆ ಇತ್ತು. ಮತ್ತೊಂದು ಕಡೆ ಆದಿವಾಸಿಗಳಿಗೆ ಮೂಲಸೌಕರ್ಯ ಕೊಡುವ ಕೆಲಸ ಆಗಿಲ್ಲ. ಕಾಡು ಬಿಟ್ಟು ನಾಡಿಗೆ ಬಂದಿರುವ ಜನರಿಗೂ ಮೂಲಸೌಕರ್ಯ ಕೊಟ್ಟಿಲ್ಲ. ಇದೆಲ್ಲವೂ ರಾಜ್ಯದ ಬಜೆಟ್ನಲ್ಲಿ ನಿರೀಕ್ಷೆಯಿತ್ತು. ಸಿದ್ದರಾಮಯ್ಯನವರು 16 ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ಈಗಲಾದರೂ ಒಂದು ಒಳ್ಳೆಯ ಕೆಲಸ ಮಾಡಬಹುದಿತ್ತು. ಬಜೆಟ್ ನಲ್ಲಿ ನನಗೆ ಯಾವುದೇ ತೃಪ್ತಿಯಿಲ್ಲ ಎಂದ ಸಂಸದ ಯದುವೀರ್ ಒಡೆಯರ್.
01:20 PM (IST) Mar 07
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಅನ್ನು ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಹೊಗಳಿದ್ದಾರೆ. ಆದರೆ, ಶಾಸಕ ಪ್ರಭು ಚೌವ್ಹಾಣ್ ಟೀಕಿಸಿದ್ದು, ಪಶು ಸಂಗೋಪನೆಗೆ ಏನೂ ನೀಡಿಲ್ಲ ಎಂದಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಮ್ಮ ಕ್ಷೇತ್ರದ ಬೇಡಿಕೆ ಈಡೇರಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿ01:08 PM (IST) Mar 07
ಸಿಟಿ ರವಿ ಹೇಳಿಕೆ
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 16 ನೇ ಬಜೆಟ್. ಬಜೆಟ್‌ನಲ್ಲೂ ದಾಖಲೆ ಸಾಲದಲ್ಲೂ ದಾಖಲೆ. ಅತೀ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತುಯೂ ಅವರದೇ. ಅತೀ ಹೆಚ್ಚು ಸಾಲ ಮಾಡಿದ ಕುಖ್ಯಾತಿಯೂ ಸಿಎಂ ಸಿದ್ದರಾಮಯ್ಯ ಅವರದೇ ಆಗಿದೆ. ಊದೋ ಶಂಖ ... ಕೋಗೋ ಶಂಖ ಅನ್ನೋ ಹಾಗೆ. ಇದು ಅನುಷ್ಠಾನ ಆಗೋ ಬಜೆಟೋ ಅಥ್ವಾ ಘೋಷಣೆಯ ಬಜೆಟೋ ಅನ್ನೋದನ್ನ ಸಿದ್ದರಾಮಯ್ಯ ಹೇಳಬೇಕು. ಕಳೆದ ವರ್ಷದ ಬಜೆಟ್ ಶೇಕಾಡ 50% ಅನುಷ್ಠಾನಕ್ಕೆ ಬಂದಿಲ್ಲ.
01:03 PM (IST) Mar 07
ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರವು 7,000 ಕೋಟಿ ರೂ. ಅನುದಾನವನ್ನು ಹೆಚ್ಚಿಸಿದೆ. ಸುರಂಗ ಮಾರ್ಗಗಳು, ರಸ್ತೆಗಳ ಅಭಿವೃದ್ಧಿ, ಮೆಟ್ರೋ ವಿಸ್ತರಣೆ ಮತ್ತು ಕೆರೆಗಳ ಪುನರುಜ್ಜೀವನ ಸೇರಿದಂತೆ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಪೂರ್ತಿ ಓದಿ12:50 PM (IST) Mar 07
ಬಿಜೆಪಿ ಶಾಸಕ.ಶಿವರಾಮ್ ಹೆಬ್ಬಾರ್ ಹೇಳಿಕೆ, ಇದೊಂದು ಸಮಾಜಮುಖಿ ಬಜೆಟ್. ಎಲ್ಲ ವರ್ಗಕ್ಕೂ ಸಮುದಾಯಕ್ಕೂ ಅಭಿವೃದ್ಧಿ ಕೊಟ್ಟಿದ್ದಾರೆ. ಕರಾವಳಿ ಭಾಗಕ್ಕೆ ಒಳ್ಳೆ ಯೋಜನೆ ಘೋಷಣೆ ಮಾಡಿದ್ದಾರೆ. ನಾನು ಯಾವುದೇ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ. ನಾನು ಪಕ್ಷಪಾತ ಮಾಡಲ್ಲ.ಶಾಸಕನಾಗಿ ಹೇಳುತ್ತಿದ್ದೇನೆ ಒಳ್ಳೆಯ ಬಜೆಟ್. ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಹೆಬ್ಬಾರ್. ಬಿಜೆಪಿ ಅವರು ಆರೋಪ ಮಾಡಲಿ. ನಾನು ಶಾಸಕನಾಗಿ ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ
12:46 PM (IST) Mar 07
ಮಾಜಿ ಸಚಿವ ಪ್ರಭು ಚೌವ್ಹಾಣ್ ಹೇಳಿಕೆ, ಸಿದ್ದರಾಮಯ್ಯ ಅವರ ಬಜೆಟ್ ನಿರ್ಜೀವ ಬಜೆಟ್. ಬಜೆಟ್ ನಲ್ಲಿ ಜೀವ ಇಲ್ಲ. ಪಶು ಸಂಗೋಪನೆ ಇಲಾಖೆಗೆ ಏನೂ ಕೊಟ್ಟಿಲ್ಲ. ಖಸಾಯಿ ಖಾನಾಗೆ ಕೊಟ್ಟಿಲ್ಲ, ಪ್ರಾಣಿ ಸಹಾವಾಣಿ ಕೇಂದ್ರ ಬಂದ್ ಆಗಿದೆ. ಈ ಬಜೆಟ್ ನಿರ್ಜೀವ ಬಜೆಟ್, ಜೀವ ಇಲ್ಲ. ಏಳು ಕೋಟಿ ಜನತೆಗೆ ಮೋಸದ ಬಜೆಟ್. ನಮ್ಮ ತಾಲೂಕಿಗೆ ಏನೂ ಕೊಟ್ಟಿಲ್ಲ, ಕಲ್ಯಾಣ ಕರ್ನಾಟಕ ಕ್ಕೂ ಹಣ ನೀಡಿಲ್ಲ. ಈ ಸರ್ಕಾರ ಮೂಖ ಪ್ರಾಣಿಗಳ ವಿರೋಧಿ ಸರ್ಕಾರ. ಗೋ ಶಾಲೆ ಗಳು ಬಂದ್ ಮಾಡಿದ್ದಾರೆ. ಪ್ರಾಕ್ಟೀಕಲ್ ಸಾಧನೆಗೆ ಅರ್ಥ ಇಲ್ಲ.
12:43 PM (IST) Mar 07
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವು ಸಾವಯವ ಕೃಷಿಗೆ ಉತ್ತೇಜನ ನೀಡುತ್ತಿದ್ದು, ರೈತರಿಗೆ ವಿವಿಧ ಯೋಜನೆಗಳ ಮೂಲಕ ಸಹಾಯಧನ ಒದಗಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಲಾಗುವುದು.
ಪೂರ್ತಿ ಓದಿ12:30 PM (IST) Mar 07
ಚಿತ್ರದುರ್ಗ: ಅಂಗನವಾಡಿ ಕಾರ್ಯಕರ್ತರಿಗೆ ಅಲ್ಪ ಗೌರವಧನ ಹೆಚ್ಚಳಕ್ಕೆ ಕಿಡಿ. ಚಿತ್ರದುರ್ಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ. ಬಜೆಟ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಘೋಷಣೆ. ಅಂಗನವಾಡಿ ಕಾರ್ಯಕರ್ತರಿಗೆ ₹1ಸಾವಿರ. ಅಂಗನವಾಡಿ ಸಹಾಯಕರಿಗೆ ₹750 ಹೆಚ್ಚಿಸಿರುವ ಸರ್ಕಾರ. ಅಂಗನವಾಡಿ ಕಾರ್ಯಕರ್ತೆಯರಿಗೆ 15ಸಾವಿರ ರೂ. ಅಂಗನವಾಡಿ ಸಹಾಯಕರಿಗೆ 10ಸಾವಿರ ರೂ ಹೆಚ್ಚಳಕ್ಕೆ ಡಿಮ್ಯಾಂಡ್. ಸಿಎಂ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ
12:29 PM (IST) Mar 07
ಸಿದ್ದರಾಮಯ್ಯ ಬಜೆಟ್ ಮಂಡನೆ ವಿಚಾರ, ಮಾಜಿ ಸಚಿವ ವಿ. ಸುನೀಲ್ ಕುಮಾರ್ ಹೇಳಿಕೆ
ದಾಖಲೆಯ ಬಜೆಟ್ ಅಂತ ಸಾಲದ ಬಜೆಟ್ ಮಂಡಿಸಿದ್ದಾರೆ. ಮೂಲಭೂತ ಸೌಕರ್ಯ ಕೊಡೋದ್ರಲ್ಲಿ ವಿಫಲರಾಗಿದ್ದಾರೆ. ಸಿಎಂ ಸಮಾಜ ವಿಭಜನೆ ಮಾಡಿ, ಆರ್ಥಿಕ ವಿಭಜನೆ ಮಾಡಿದ್ದಾರೆ. ಕೆಐಡಿಬಿಐಯಲ್ಲಿ ಮುಸ್ಲಿಂಮರಿಗೆ ಮೀಸಲಾತಿ ನೀಡಿ ಆರ್ಥಿಕ ವಿಭಜನೆಗೆ ಹೊರಟಿದೆ. ನಕ್ಸಲ್ ನಿಗೃಹ ದಳವನ್ನು ವಾಪಾಸ್ ತಗೆದುಕೊಳ್ಳಲು ಹೊರಟಿದ್ದಕ್ಕೆ ವಿರೋಧ ಇದೆ. ಕೊಂಕಣ ರೈಲ್ವೆಗೆ ಯಾವುದೇ ಸಹಾಯ ಕೊಡಲಿಲ್ಲ
12:28 PM (IST) Mar 07
ಉತ್ತರ ಕರ್ನಾಟಕ ಅಭಿವೃದ್ಧಿ ಸಂಪೂರ್ಣ ಕಡೆಗಣಿಸಲಾಗಿದೆ.ವಾಣಿಜ್ಯೋದ್ಯಮ ಸಂಘದ ಮಾಜಿ ಅಧ್ಯಕ್ಷ ರಮೇಶ್ ಪಾಟೀಲ್ ತೀವ್ರ ಅಸಮಾಧಾನ. ಇದು ಬೆಂಗಳೂರು ಬಜೆಟ್, ಇದು ಕರ್ನಾಟಕದ ಬಜೆಟ್ ಅಲ್ಲವೇ ಅಲ್ಲ.ಉತ್ತರ ಕರ್ನಾಟಕ ಪ್ರತ್ಯೇಕ ಮಾಡಿಕೊಳ್ಳಿ ಅಂತ ಹೇಳಿದಂತಿದೆ. ಉತ್ತರ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಏನ್ ಕೊಟ್ಟಿದ್ದಾರೆ? ಇನ್ನು ಕೈಗಾರಿಕೆ ಸ್ಥಾಪಿಸುವ ಮುಸ್ಲಿಮರಿಗೆ 20% ಮೀಸಲಾತಿ ವಿಚಾರ. ಕೈಗಾರಿಕೆಗಳಿಗೆ ಉತ್ಪಾದನೆ ಸಾಮಾರ್ಥ್ಯದ ಮೇಲೆ ಭೂಮಿ ನೀಡಬೇಕು. ಧರ್ಮ ನೋಡಿ ಅಲ್ಲ, ಕೈಗಾರಿಕೆಗಳು ವಸ್ತುಗಳನ್ನು ಉತ್ಪಾದಿಸುತ್ತವೆ, ಕೈಗಾರಿಕೆಯಲ್ಲಿ ಧರ್ಮ ಬೆಳೆಸಲು ಭೂಮಿ ಕೊಟ್ಟಿದ್ದಾರೆ. ಇದು ತುಷ್ಟಿಕರಣಣ ಪರಮಾವಧಿ.
12:26 PM (IST) Mar 07
ಕನ್ನಡ ಚಲನಚಿತ್ರ ಪ್ರೋತ್ಸಾಹಕ್ಕಾಗಿ OTT ವೇದಿಕೆ ಸೃಷ್ಟಿಗೆ ಕ್ರಮ
ಪತ್ರಕರ್ತರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆ
ಮಾನ್ಯತೆ ಪಡೆದ ಪತ್ರಕರ್ತರಿಗೆ 5 ಲಕ್ಷವರೆಗೆ ನಗದು ರಹಿತ ಚಿಕಿತ್ಸೆ
ಎಲ್ಲ ಮಲ್ಟಿಪ್ಲೆಕ್ಸ್, ಚಿತ್ರಮಂದಿರಗಳಲ್ಲಿ ಟಿಕೆಟ್ ದರ 200 ರೂ. ಫಿಕ್ಸ್
ಪತ್ರಕರ್ತರ ಮಾಶಾಸನ 12ರಿಂದ 15,000 ಸಾವಿರಕ್ಕೆ ಏರಿಕೆ
12:24 PM (IST) Mar 07
ರಾಜ್ಯ ಸರ್ಕಾರವು ವೈದ್ಯಕೀಯ ಶಿಕ್ಷಣವನ್ನು ಬಲಪಡಿಸಲು ಹೊಸ ಯೋಜನೆಗಳನ್ನು ಪ್ರಾರಂಭಿಸಿದೆ. ಇದರಲ್ಲಿ ಆಸ್ಪತ್ರೆಗಳ ಉನ್ನತೀಕರಣ, ಹೊಸ ಘಟಕಗಳ ಸ್ಥಾಪನೆ, ಮತ್ತು ವೈದ್ಯಕೀಯ ಕಾಲೇಜುಗಳ ಅಭಿವೃದ್ಧಿ ಸೇರಿವೆ.
ಪೂರ್ತಿ ಓದಿ12:23 PM (IST) Mar 07
ಬೆಂಗಳೂರಲ್ಲಿ EV ಕ್ಲಸ್ಟರ್ ನಿರ್ಮಾಣ - 25 ಕೋಟಿ ಅನುದಾನ
ದೇವನಹಳ್ಳಿಯಲ್ಲಿ Foxconn ಸಂಸ್ಥೆಯ ಮೊಬೈಲ್ ಘಟಕ
ಕೋಲಾರದ ನರಸಾಪುರದಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಾಣ
ಖಾಲಿಯಿರುವ ಮದ್ಯದ ಲೈಸೆನ್ಸ್ ಹರಾಜು ಹಾಕಲು ನಿರ್ಧಾರ
ಸಮಾಜ ಕಲ್ಯಾಣ ನಿಗಮಗಳಿಗೆ 488 ಕೋಟಿ ಅನುದಾನ
12:22 PM (IST) Mar 07
ನೇಕಾರರಿಗೆ ಸ್ವಾವಲಂಬನೆಗಾಗಿ ‘ನೇಕಾರರ ಪ್ಯಾಕೇಜ್-2.0' ಜಾರಿ
ನೇಕಾರರ ವಿದ್ಯುತ್ ಮಗ್ಗಗಳಿಗೆ ವಿದ್ಯುತ್ ಮಿತಿ ಸಡಿಲಿಕೆ
ನೇಕಾರರಿಗೆ ಒದಗಿಸಲು 100 ಕೋಟಿ ರೂ. ಅನುದಾನ
ತುಮಕೂರಲ್ಲಿ 20 ಕೋಟಿ ವೆಚ್ಚದಲ್ಲಿ ಮಹಿಳಾ ವಸತಿ ನಿಲಯ
ಕೋಲಾರ ಜಿಲ್ಲೆಯ ಶಿವಾರಪಟ್ಟಣದಲ್ಲಿ ಇಂಡಸ್ಟ್ರಿಯಲ್ ಪಾರ್ಕ್
12:20 PM (IST) Mar 07
ಯಲಬುರ್ಗಾ, ಜೇವರ್ಗಿ, ಯಾದಗಿಯಲ್ಲಿ ನರ್ಸಿಂಗ್ ಕಾಲೇಜು
ಮೈಸೂರು, ಕಲಬುರಗಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆ
ಕೊಪ್ಪಳದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
ರಾಯಚೂರಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣ
ಚಂದ್ರಗುತ್ತಿಯಲ್ಲಿ ಪ್ರವಾಸೋದ್ಯಮ ತಾಣ ಅಭಿವೃದ್ಧಿ
12:16 PM (IST) Mar 07
ಅರ್ಚಕರ ವಾರ್ಷಿಕ ತಸ್ತೀಕ್ ಮೊತ್ತ 60 ರಿಂದ 72 ಸಾವಿರ ರೂ.ಗೆ ಏರಿಕೆ
ಜೈನ್ ಅರ್ಚಕರು, ಸಿಖ್ ಮುಖ್ಯ ಗ್ರಂಥಿಗಳು, ಇಮಾಮ್ಗಳ ಗೌರವಧನ 6 ಸಾವಿರಕ್ಕೆ ಏರಿಕೆ
ಧಾರ್ಮಿಕ ದತ್ತಿ ಇಲಾಖೆಯ ಸರ್ಕಾರಿ ಅಧಿಕಾರಿ/ನೌಕರರಿಗೆ ಸರ್ಕಾರದಿಂದಲೇ ವೇತನ
400 ದೇವಾಲಯ, ಹೊರರಾಜ್ಯದ ಛತ್ರಗಳಲ್ಲಿರುವ 3,500 ಕೊಠಡಿಗಳಲ್ಲಿ ಕಾಯ್ದಿರಿಸಲು ಕರ್ನಾಟಕ ದೇವಾಲಯಗಳ ವಸತಿ ಕೋಶ' ಸ್ಥಾಪನೆ
12:15 PM (IST) Mar 07
ರಾಜ್ಯ ಮಟ್ಟದಲ್ಲಿ 'ಅಕ್ಕ ಕೋ-ಆಪರೇಟಿವ್ ಸೊಸೈಟಿ' ಸ್ಥಾಪನೆ
‘ಗೃಹಲಕ್ಷ್ಮಿ’ ಯೋಜನೆಯ ಯಜಮಾನಿಯರಿಗಾಗಿ ಸ್ತ್ರೀಶಕ್ತಿ ಸಂಘ ನಿರ್ಮಾಣ
‘ಅಕ್ಕ ಕೋ-ಆಪರೇಟಿವ್ ಸೊಸೈಟಿ’ ವ್ಯಾಪ್ತಿಗೆ ಸ್ತ್ರೀ ಶಕ್ತಿ ಸಂಘಗಳ ಸೇರ್ಪಡೆ
ಮಹಿಳಾ ಸ್ವ-ಸಹಾಯ ಸಂಘಗಳಿಂದ 50 ಸ್ಥಳಗಳಲ್ಲಿ ಶಿಶು ಪಾಲನೆಗಾಗಿ 'ವಾತ್ಸಲ್ಯ ಕೇಂದ್ರ' ಸ್ಥಾಪನೆ
ಮಹಿಳಾ ಸಬಲೀಕರಣಕ್ಕೆ ಜಿಪಂ.ತಾಪಂ ಕಚೇರಿ ಆವರಣದಲ್ಲಿ ಅಕ್ಕ ಕೆಫೆ ಮತ್ತು ಕ್ಯಾಂಟಿನ್ ಸ್ಥಅಪನೆ
ಇಂದಿರಾ ಕ್ಯಾಂಟಿನ್ ಮಹಿಳಾ ಸ್ತ್ರೀಶಕ್ತಿ ಸಂಘದಿಂದ ನಿರ್ವಹಣೆ
ಪ್ರಾಯೋಗಿಕವಾಗಿ 10 ನಗರ ಪ್ರದೇಶಗಳಲ್ಲಿ ಮಹಿಳೆಯರಿಂದ ಇಂದಿರಾ ಕ್ಯಾಂಟಿನ್ ನಿರ್ವಹಣೆ
12:14 PM (IST) Mar 07
ಅರ್ಚಕರಿಗೆ 60 ಸಾವಿರದಿಂದ 72 ಸಾವಿರಕ್ಕೆ ಏರಿಕೆ
ಕಲಬುರಗಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ
ಪಂಚ ಗ್ಯಾರಂಟಿಗೆ 51,034 ಕೋಟಿ ಅನುದಾನ ಮೀಸಲು
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ 34 ಕೋಟಿ ರೂ.
ಬೆಳಗಾವಿ, ಮೈಸೂರಲ್ಲಿ ಹೊಸ ಕ್ರಿಡಾ ವಿಜ್ಞಾನ ಕೇಂದ್ರ
ಗೃಹಜ್ಯೋತಿಗೆ 10,100 ಕೋಟಿ ಅನುದಾನ
ದೇವನಹಳ್ಳಿವರೆಗೂ ಮೆಟ್ರೋ ಜಾಲ ವಿಸ್ತರಣೆ
ಬೆಂಗಳೂರು ಕೆರೆ ಅಭಿವೃದ್ಧಿಗೆ 234 ಕೋಟಿ ಅನುದಾನ
12:13 PM (IST) Mar 07
ಯಲಬುರ್ಗಾ, ಜೇವರ್ಗಿ, ಯಾದಗಿಯಲ್ಲಿ ನರ್ಸಿಂಗ್ ಕಾಲೇಜು
ಮೈಸೂರು, ಕಲಬುರಗಿಯಲ್ಲಿ ನಿಮ್ಹಾನ್ಸ್ ಆಸ್ಪತ್ರೆ
ಕೊಪ್ಪಳದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
ರಾಯಚೂರಲ್ಲಿ ಕಿದ್ವಾಯಿ ಆಸ್ಪತ್ರೆ ನಿರ್ಮಾಣ
ಚಂದ್ರಗುತ್ತಿಯಲ್ಲಿ ಪ್ರವಾಸೋದ್ಯಮ ತಾಣ ಅಭಿವೃದ್ಧಿ
ನಕ್ಸಲ್ ಪೀಡಿತ ಪ್ರದೇಶಗಳಿಗೆ 10 ಕೋಟಿ ಅನುದಾನ
12:13 PM (IST) Mar 07
ಬಜೆಟ್ನಲ್ಲಿ 40 ಕೋಟಿ ರೂ. ವೆಚ್ಚದ ಟನಲ್ ರಸ್ತೆ ಘೋಷಣೆ
ಬೆಂಗಳೂರಿನ ಉತ್ತರ ದಕ್ಷಿಣ ಪೂರ್ವ ಪಶ್ಚಿಮ ಭಾಗಕ್ಕೆ ಸಂಪರ್ಕ
ಟ್ರಾಫಿಕ್ ದಟ್ಟಣೆ ತಗ್ಗಿಸಲುವ ನಿಟ್ಟಿನಲ್ಲಿ ಟನಲ್ ರಸ್ತೆ ನಿರ್ಮಾಣ
ಉತ್ತರ ದಕ್ಷಿಣ ಮತ್ತು ಪೂರ್ವ - ಪಶ್ಚಿಮ ಸುರಂಗ ಮಾರ್ಗದ ಕಾರಿಡಾರ್
ಹೆಬ್ಬಾಳದ ಎಸ್ಟೀಮ್ ಮಾಲ್ ನಿಂದ ಸಿಲ್ಕ್ ಬೋರ್ಡ್ ವರೆಗೆ
ಸುಮಾರು 18 ಕಿಮೀ ಉದ್ದದ 12, 690 ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ
12:12 PM (IST) Mar 07
ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆಗಳ ಕೈಗೊಳ್ಳಲು ತ್ವರಿತ ಸಾಲ ಸೌಲಭ್ಯ ಒದಗಿಸುವುದು ಇದರ ಉದ್ದೇಶ.
ಆರ್ಥಿಕ ಅಗತ್ಯಗಳ ಪೂರೈಕೆ ಮತ್ತು ಭದ್ರತೆ ಒದಗಿಸುವುದು.
ಉಳಿತಾಯ ಮತ್ತು ಉದ್ಯಮಶೀಲತೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ
ಹಾಗಾಗಿ ರಾಜ್ಯಮಟ್ಟದಲ್ಲಿ ಅಕ್ಕ ಕೋ ಅಪರೇಟಿವ್ ಸೊಸೈಟಿ ಸ್ಥಾಪಿಸಿದ ಸರ್ಕಾರ
ಗೃಹಲಕ್ಷ್ಮಿ ಯೋಜನೆಯ ಯಜಮಾನಿಯರನ್ನ ಸ್ವಸಹಾಯ ಗುಂಪುಗಳ ಸದಸ್ಯರುಗಳನ್ನಾಗಿಸುವ ಉದ್ದೇಶ
ತಿಂಗಳ ಗೃಹಲಕ್ಷ್ಮಿ ಹಣ ಮತ್ತೆ ಹೂಡಿಕೆ ಮಾಡಿಸುವ ಪ್ಲಾನ್ ಇದ್ದಂತೆ ಇದೆ
12:11 PM (IST) Mar 07
ಬರೋಬ್ಬರಿ ಶೇ.18 ವೆಚ್ಚದಲ್ಲಿ ಸಾಲ ಮರುಪಾವತಿ ಮಾಡಲು ತಿರ್ಮಾನ.
ಸಾಮಾನ್ಯ ಸೇವೆಗಳಿಗೆ ಶೇ.18 ವೆಚ್ಚ.
ಕೃಷಿ ನೀರಾವರಿ ಗ್ರಾಮೀಣಾಭಿವೃದ್ಧಿಗೆ ಶೇ.14.
ಶಿಕ್ಷಣ ಶೇ.10
ಸಮಾಜ ಕಲ್ಯಾಣ ಶೇ.15
ಆರ್ಥಿಕ ಸೇವೆಗಳು ಶೇ.14
ಆರೋಗ್ಯ ಶೇ.5
ಇತರ ಸಾಮಾಜಿಕ ಸೇವೆಗಳು ಶೇ.3
ನೀರು ಪೂರೈಕೆ ನೈರ್ಮಲ್ಯ ಶೇ.3
12:07 PM (IST) Mar 07
ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯಧನ
50 ಸಾವಿರ ರೈತರಿಗೆ ಸಹಾಯಧನಕ್ಕೆ 428 ಕೋಟಿ ರೂ. ಅನುದಾನ
ಕೃಷಿ ಬೆಳೆಗಳಲ್ಲಿ ನೀರನ್ನು ಸಮರ್ಥ ಬಳಕೆ ಮಾಡಿ, ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ
ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ 440 ಕೋಟಿ ರೂ.
ರೈತರ ಆದಾಯ ಮತ್ತು ಪೌಷ್ಟಿಕ ಭದ್ರತೆಯನ್ನು ಸುಧಾರಿಸಲು 88 ಕೋಟಿ ರೂ.
ರಾಜ್ಯದಲ್ಲಿ 6,000 ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ
ಕೃಷಿ ಭಾಗ್ಯ ಯೋಜನೆಯಡಿ 12,000, ಕೃಷಿ ಹೊಂಡಗಳನ್ನು ನಿರ್ಮಿಸಲಾಗುವುದು
ಮಂಡ್ಯ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಅನುಮೋದನೆ
ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸ್ಯ ಫೀನೋಟೈಪಿಂಗ್ ಸೌಲಭ್ಯ
20 ಕೋಟಿ ರೂ. ಮೊತ್ತದಲ್ಲಿ ʻಸಾವಯವ ಮತ್ತು ಸಿರಿಧಾನ್ಯಗಳ ಹಬ್ʼ ಸ್ಥಾಪನೆ
ವಿಜಯಪುರದ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರ
ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಹೊಸ ಕೃಷಿ ಕಾಲೇಜನ್ನು ಸ್ಥಾಪನೆ
12:03 PM (IST) Mar 07
11:45 AM (IST) Mar 07
ಸಿಎಂ ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಶಿಕ್ಷಣ ಕ್ಷೇತ್ರಕ್ಕೆ ಭರ್ಜರಿ ಕೊಡುಗೆಗಳನ್ನು ನೀಡಿದ್ದಾರೆ. ಮೌಲಾನಾ ಆಜಾದ್ ಶಾಲೆಗಳ ಉನ್ನತೀಕರಣ, ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗದ ಪ್ರಾರಂಭ, ಮತ್ತು ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಗಳು ಇದರಲ್ಲಿ ಸೇರಿವೆ.
11:40 AM (IST) Mar 07
ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 233 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಸೇರಿದಂತೆ 6 ಆಯಾಮಗಳನ್ನು ಗುರುತಿಸಿ ಸಿದ್ದರಾಮಯ್ಯನವರ ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದೆ.
ಪೂರ್ತಿ ಓದಿ11:39 AM (IST) Mar 07
ಮದ್ಯ ದರ ಏರಿಕೆಗೆ ಶಿಪಾರಸು.
ಕೆಐಎಡಿಬಿ ಕೈಗಾರಿಕಾ ಪ್ರದೇಶದ ಜಾಗ ಹಂಚಿಕೆಯಲ್ಲೂ ಮುಸ್ಲಿಮರಿಗೆ ಮೀಸಲಾತಿ.
ಶೇ.20 ರಷ್ಟು ಭೂಮಿ ಹಂಚಿಕೆ ಮೀಸಲು ಘೋಷಣೆ
ಪ್ರವರ್ಗ-1, ಪ್ರವರ್ಗ-2A 2B ಗೆ ಶೇ.20% ಮೀಸಲು
11:30 AM (IST) Mar 07
karnataka movie ticket price in theatre: ಕರ್ನಾಟಕ ರಾಜ್ಯದಲ್ಲಿ ಸಿನಿಮಾ ಟಿಕೆಟ್ ದರ ಹೆಚ್ಚು ಎಂದು ವೀಕ್ಷಕರು ದೂರುತ್ತಿರುವುದು ಸಾಮಾನ್ಯವಾಗಿತ್ತು. ಇನ್ನೊಂದು ಕಡೆ ವಿತರಕರು ಸಿನಿಮಾ ಟಿಕೆಟ್ ದರ ಕಡಿಮೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಈಗ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಬಹುಮುಖ್ಯವಾದ ನಿರ್ಣಯವನ್ನು ತಗೊಂಡಿದ್ದಾರೆ.
11:27 AM (IST) Mar 07
ಬೆಂಗಳೂರು ಉಪನಗರ ರೈಲ್ವೇ ಯೋಜನೆಯನ್ನು 15,767 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯು 58 ರೈಲ್ವೇ ನಿಲ್ದಾಣಗಳು ಹಾಗೂ 148 ಕಿ.ಮೀ ಉದ್ದದ ರೈಲ್ವೇ ಜಾಲವನ್ನು ಹೊಂದಿರುತ್ತದೆ. ನಾಲ್ಕು ಕಾರಿಡಾರ್‌ಗಳನ್ನೊಳಗೊಂಡ ಈ ಯೋಜನೆಯ ಎರಡು ಕಾರಿಡಾರ್‌ಗಳ ಕಾಮಗಾರಿಗಳು ಪ್ರಗತಿಯಲ್ಲಿದೆ. ಇನ್ನುಳಿದ ಎರಡು ಕಾರಿಡಾರ್‌ಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲಾಗುವುದು.
ಕರ್ನಾಟಕ ರಾಜ್ಯದಲ್ಲಿ ಜಲಸಾರಿಗೆ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಅಪಾರ ಸಾಧ್ಯತೆಗಳಿವೆ. ಅಭಿವೃದ್ಧಿ ಯೋಜನೆಗಳಿಗೆ ಪೂರಕವಾಗಿ ಈಗಾಗಲೇ ಕರ್ನಾಟಕ ಜಲಸಾರಿಗೆ ನೀತಿಗೆ ಮಂಜೂರಾತಿ ನೀಡಲಾಗಿದೆ. ಕರಾವಳಿಯಲ್ಲಿ ವ್ಯವಸ್ಥಿತ ಮೂಲ ಸೌಲಭ್ಯ ಒದಗಿಸಲು ಹಾಗೂ ನೌಕಾ ಚಟುವಟಿಕೆಗಳ ನಿರ್ವಹಣೆಯಲ್ಲಿ ದಕ್ಷತೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ. ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಕ್ರೂಸ್, ವಾಟರ್ ಮೆಟ್ರೋ, ಕೋಸ್ಟಲ್ ಬರ್ತ್, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಕಿ ಬಂದರು, ಹೊನ್ನಾವರದಲ್ಲಿ ಹಡಗು ನಿರ್ಮಾಣ ಕ್ಷೇತ್ರ ಹಾಗೂ ನದಿ ಕ್ರೂಸ್ ಪ್ರವಾಸೋದ್ಯಮ ಯೋಜನೆಗಳಿಗೆ ವಿಸ್ತ್ರತ ಯೋಜನೆ ಸಿದ್ದಪಡಿಸಲಾಗುವುದು.
11:23 AM (IST) Mar 07
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗಕ್ಕೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳಿಗೆ ಡಾ. ಬಿಆರ್ ಅಂಬೇಡ್ಕರ್ ಯೋಜನೆ ಒಂದು ಕೋಟಿ ಅನುದಾನ.
ಬಂಜಾರ ಸಮುದಾಯದ ಪ್ರಮುಖ ಧಾರ್ಮಿಕ ಸ್ಥಳವಾದ ದಾವಣಗೆರೆ ಜಿಲ್ಲೆಯ ಸಂತ ಸೇವಾಲಾಲ್ ಪುಣ್ಯಕ್ಷೇತ್ರ ಸೂರಗೊಂಡನ ಕೊಪ್ಪದಲ್ಲಿ ಒಂದು ವಸತಿ ಶಾಲೆಯನ್ನು ಕ್ರೈಸ್ ವತಿಯಿಂದ ಪ್ರಾರಂಭ.
ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗಾಗಿ ಹಂಚಿರುವ ಅನುದಾನದ ಸದ್ಬಳಕೆಯ ಬಗ್ಗೆ ಮೌಲ್ಯಮಾಪನವನ್ನು ಮಾಡಲಾಗುವುದು
11:18 AM (IST) Mar 07
500 ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನ ಪ್ರಾರಂಭಿಸಲಾಗುವುದು. ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ ನೆರವಿನೊಂದಿಗೆ ಪ್ರಾರಂಭ. 2500 ಕೋಟಿ ವೆಚ್ಚದಲ್ಲಿ ಪ್ರಾರಂಭ. ಶಾಲೆಗಳ 53 ಲಕ್ಷ ಮಕ್ಕಳಿಗೆ ಮೊಟ್ಟೆ ಬಾಳೆಹಣ್ಣು ವಿತರಣೆ. ಎರಡು ದಿನ ನೀಡಲಾಗುತ್ತಿತ್ತು. ಇದೀಗ 6 ದಿನ ಮೊಟ್ಟೆ ಬಾಳೆಹಣ್ಣು ನೀಡಲು ಮುಂದಾದ ಸರ್ಕಾರ. ಅಜೀಮ್ ಪ್ರೇಮ್ ಜೀ ಫೌಂಡೇಶನ್ ಸಹಕಾರದೊಂದಿಗೆ ವಿತರಣೆ.
11:18 AM (IST) Mar 07
ನಗರದಲ್ಲಿ 120 ಕಿ.ಮೀ. ಉದ್ದದ Flyover ಹಾಗೂ Grade Separator ಗಳನ್ನು ನಿರ್ಮಾಣ.
' brand Bengaluru ಯೋಜನೆಯಡಿ 2024-25 ಸಾಲಿನಲ್ಲಿ ಅನುಮೋದನೆಗೊಂಡ 21 ಯೋಜನೆಗಳನ್ನು 1,800 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನ.
ಬೆಂಗಳೂರನ್ನು ಅಂತಾರಾಷ್ಟ್ರೀಯ ಆರೋಗ್ಯ ಮಾನದಂಡಗಳ ನಗರವನ್ನಾಗಿ ಮಾಡಲು, 'ಬ್ರಾಂಡ್ ಬೆಂಗಳೂರು' ಅಭಿಯಾನದ ಅಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ 413 ಕೋಟಿ ರೂ. ವೆಚ್ಚದಲ್ಲಿ 'ಸಮಗ್ರ ಜಾರಿಗೊಳಿಸಲಾಗುವುದು. ಆರೋಗ್ಯ ಯೋಜನೆ'ಯನ್ನು
286. ಹವಾಮಾನ ವೈಪರೀತ್ಯದ ಪರಿಣಾಮವಾಗಿ ಬೆಂಗಳೂರು ನಗರವು ಎದುರಿಸುತ್ತಿರುವ ಪ್ರವಾಹವನ್ನು ನಿಯಂತ್ರಿಸಲು ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್.ಟಿ.ಪಿ ಗಳನ್ನು ನಿರ್ಮಿಸಲು ಸರ್ಕಾರವು BBMP ಹಾಗೂ BWSSB ಗೆ 3,000 ಕೋಟಿ ರೂ. ಆರ್ಥಿಕ ನೆರವು ನೀಡಲು ತೀರ್ಮಾನಿಸಲಾಗಿರುತ್ತದೆ.