ಹೆಚ್ಚು ಜಿಎಸ್‌ಟಿ ಪರಿಹಾರ ಪಡೆವ 2ನೇ ರಾಜ್ಯ ಕರ್ನಾಟಕ| ರಾಜ್ಯಕ್ಕೆ ಸಿಗಲಿದೆ 13,763 ಕೋಟಿ ರು.
ನವದೆಹಲಿ(ಸೆ.15):: ಕೊರೋನಾ ವೈರಸ್ ನಿಗ್ರಹಕ್ಕೆ ಲಾಕ್‌ಡೌನ್ ಹೇರಿದ್ದರಿಂದ ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ಜಿಎಸ್‌ಟಿ ಸಂಗ್ರಹದಲ್ಲಿ ಇಳಿಕೆ ಆಗಿದ್ದು, ರಾಜ್ಯಗಳು ಜಿಎಸ್‌ಟಿ ಪರಿಹಾರವಾಗಿ 1.51 ಲಕ್ಷ ಕೋಟಿ ರು. ಪಡೆಯಲಿವೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಸೋಮವಾರ ತಿಳಿಸಿದ್ದಾರೆ.
ಜಿಎಸ್‌ಟಿ ಪರಿಹಾರ, ಸಾಲ ಪಡೆಯಲು 13 ರಾಜ್ಯಗಳ ಒಪ್ಪಿಗೆ!
ಜಿಎಸ್‌ಟಿ ಪರಿಹಾರದಲ್ಲಿ ಮಹಾರಾಷ್ಟ್ರ ಅತಿ ಹೆಚ್ಚಿನ 22,485 ಕೋಟಿ ರು. ಪಡೆಯಲಿದ್ದು, ನಂತರದಲ್ಲಿ ಕರ್ನಾಟಕ ಎರಡನೇ ಅತಿ ಹೆಚ್ಚು ಪರಿಹಾರ ಮೊತ್ತವಾದ 13,763 ಕೋಟಿ ರು. ಪಡೆಯಲಿದೆ. ಉತ್ತರ ಪ್ರದೇಶಕ್ಕೆ 11,742 ಕೋಟಿ ರು., ಗುಜರಾತ್‌ಗೆ 11,563 ಕೋಟಿ ರು., ತಮಿಳುನಾಡಿಗೆ 11,269 ಕೋಟಿ ರು. ಪರಿಹಾರ ಲಭ್ಯವಾಗಲಿದೆ. ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿರುವ ಜಿಎಸ್‌ಟಿ ಪರಿಹಾರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಮುಂದಿನ ಆರ್ಥಿಕ ಕ್ರಮಗಳ ಕುರಿತು ಆ.27ರಂದು ನಡೆಯಲಿರುವ 31ನೇ ಜಿಎಸ್‌ಟಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
'ಡಿಮಾನಿಟೈಸೇಶನ್ ಪರಿಣಾಮ ಈಗ ಗೊತ್ತಾಗುತ್ತಿದೆ'
ಪ್ರಸ್ತುತ ಹಣಕಾಸು ವರ್ಷದಲ್ಲಿ ರಾಜ್ಯಗಳಿಗೆ 2.35 ಲಕ್ಷ ಕೋಟಿ ರು. ಜಿಎಸ್‌ಟಿ ಆದಾಯ ನಷ್ಟಆಗಲಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಜಿಎಸ್‌ಟಿ ಜಾರಿಯಿಂದಾಗಿ 97,000 ಕೋಟಿ ರು.ನಷ್ಟು ನಷ್ಟ ಸಂಭವಿಸಿದೆ.