ತನ್ನಿಂದ ರಾಜ್ಯಗಳಿಗೆ ಸಂದಾಯವಾಗಬೇಕಿದ್ದ ಜಿಎಸ್‌ಟಿ ಪರಿಹಾರದ ಕೊರತೆ| ಜಿಎಸ್‌ಟಿ ಪರಿಹಾರದ ಕೊರತೆ ನೀಗಿಸಲು ಸಾಲ ಪಡೆಯಲು 13 ರಾಜ್ಯಗಳ ಒಪ್ಪಿಗೆ
ನವದೆಹಲಿ(ಸೆ.14): ತನ್ನಿಂದ ರಾಜ್ಯಗಳಿಗೆ ಸಂದಾಯವಾಗಬೇಕಿದ್ದ ಜಿಎಸ್‌ಟಿ ಪರಿಹಾರದ ಕೊರತೆ ಸರಿದೂಗಿಸಿಕೊಳ್ಳಲು ಕೇಂದ್ರ ಸರ್ಕಾರ ನೀಡಿದ್ದ ಸಾಲ ಪಡೆಯುವ ಆಯ್ಕೆಗೆ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಬೆಂಬಲಿತ ಪಕ್ಷಗಳ ಆಡಳಿತದಲ್ಲಿರುವ 13 ರಾಜ್ಯಗಳು ಸಮ್ಮತಿ ವ್ಯಕ್ತಪಡಿಸಿವೆ.
ಈ ಪೈಕಿ ಕರ್ನಾಟಕ, ಮಧ್ಯಪ್ರದೇಶ, ಮೇಘಾಲಯ, ಸಿಕ್ಕಿಂ, ತ್ರಿಪುರ ಸೇರಿದಂತೆ ಇನ್ನಿತರ ರಾಜ್ಯಗಳು ಆರ್‌ಬಿಐನಿಂದ ವಿಶೇಷ ಅನುದಾನದಡಿ 97 ಸಾವಿರ ರು. ಸಾಲ ಪಡೆಯಲು ಮುಂದಾಗಿವೆ.
GST ನಷ್ಟ ಭರ್ತಿಗೆ ಸಾಲ ಪಡೆಯಿರಿ: ರಾಜ್ಯಕ್ಕೆ ಕೇಂದ್ರದ ಉಚಿತ ಸಲಹೆ
ಆದರೆ, ತಮ್ಮ ಪಾಲಿನ ಜಿಎಸ್‌ಟಿ ಪರಿಹಾರವನ್ನು ಕೇಂದ್ರ ಸರ್ಕಾರ ಸಾಲ ಮಾಡಿಯಾದರೂ ಸಂದಾಯ ಮಾಡಬೇಕು ಎಂದು ಪ್ರತಿಪಕ್ಷಗಳ ಹಿಡಿತದಲ್ಲಿರುವ ರಾಜ್ಯಗಳು ಪಟ್ಟು ಹಿಡಿದಿವೆ.
ಕೇಂದ್ರಕ್ಕೆ ಶಾಕ್ ನೀಡಲು ಮುಂದಾಗಿವೆ ಈ ರಾಜ್ಯಗಳು!
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜಾರಿಯಿಂದಾಗಿ ರಾಜ್ಯಗಳಿಗೆ ಈ ವರ್ಷ ಉಂಟಾಗುವ ನಷ್ಟವನ್ನು ಭರಿಸಿಕೊಳ್ಳಲು ರಾಜ್ಯ ಸರ್ಕಾರಗಳೇ ಸಾಲ ಮಾಡಬೇಕು ಎಂದು ಹೇಳಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಯೇತರ ಪಕ್ಷಗಳ ಆಳ್ವಿಕೆಯ ರಾಜ್ಯಗಳು ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿವೆ. ಈ ನಿಟ್ಟಿನಲ್ಲಿ ಮುಂದಿನ ನಡೆ ನಿರ್ಧರಿಸಲು ಸೋಮವಾರ ಈ ರಾಜ್ಯಗಳ ಪ್ರತಿನಿಧಿಗಳು ಸಭೆ ನಡೆಸಲಿದ್ದಾರೆ.
ನಿರ್ಮಲಾಗೆ ಠಕ್ಕರ್, ಅರ್ಥವ್ಯವಸ್ಥೆ ಸುಧಾರಣೆಗೆ ರಾಹುಲ್ ಮಾಸ್ಟರ್!
ಬಿಜೆಪಿ ಆಳ್ವಿಕೆಯ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರ ನೀಡಿರುವ ಎರಡು ಆಯ್ಕೆಗಳಲ್ಲಿ ಯಾವುದು ತಮಗೆ ಅನುಕೂಲಕರವಾಗಿವೆ ಎಂದು ನಿಷ್ಕರ್ಷಿಸಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸುತ್ತಿವೆ. ಆದರೆ, ಬಿಜೆಪಿಯೇತರ ಪಕ್ಷಗಳ ಆಳ್ವಿಕೆಯಿರುವ ರಾಜ್ಯಗಳು ಕೇಂದ್ರ ಸರ್ಕಾರವೇ ಬೇಕಿದ್ದರೆ ಸಾಲ ಮಾಡಿ ತಮಗಾಗಿರುವ ನಷ್ಟಭರಿಸಬೇಕು. ಅದರ ಬದಲು ತಮಗೇ ಸಾಲ ಮಾಡಲು ಹೇಳುತ್ತಿರುವುದು ಸರಿಯಲ್ಲ ಎಂಬ ನಿಲುವು ತಾಳಿವೆ.
ಸಾಲ ಮಾಡಲು ಅಥವಾ ಹಣ ಸಂಗ್ರಹಿಸಲು ರಾಜ್ಯಗಳಿಗಿಂತ ಕೇಂದ್ರ ಸರ್ಕಾರಕ್ಕೇ ಹೆಚ್ಚು ಅವಕಾಶಗಳಿವೆ. ಬಹಳ ಕಡಿಮೆ ಬಡ್ಡಿ ದರದಲ್ಲಿ ಕೇಂದ್ರ ಸರ್ಕಾರ ಸಾಲ ತರಬಹುದು. ರಾಜ್ಯಗಳು ಸಾಲ ಮಾಡಬೇಕು ಎಂಬ ಸೂಚನೆಗೆ ನಮ್ಮ ವಿರೋಧವಿದೆ. ಸಾಲ ಮಾಡುವಂತೆ ಕೇಂದ್ರ ಸರ್ಕಾರ ನಮ್ಮ ಮೇಲೆ ಒತ್ತಡ ಹೇರುತ್ತಿದೆ. ಸೋಮವಾರ ಈ ಬಗ್ಗೆ ಸಭೆ ನಡೆಸಿ ಮುಂದಿನ ನಡೆಯ ಬಗ್ಗೆ ನಿರ್ಧರಿಸುತ್ತೇವೆ ಎಂದು ಛತ್ತೀಸ್‌ಗಢದ ಸಚಿವ ಹಾಗೂ ಜಿಎಸ್‌ಟಿ ಮಂಡಳಿಯ ಪ್ರತಿನಿಧಿ ಟಿ.ಎಸ್.ಸಿಂಗ್ ದೇವ್ ಹೇಳಿದ್ದಾರೆ.