ಉದ್ದಿಮೆಗೆ ಗಾಳ ಕೀಳು ಅಭಿರುಚಿ: ನೆರೆ ರಾಜ್ಯಗಳ ಮೇಲೆ ಬೊಮ್ಮಾಯಿ ಗರಂ

Published : Apr 09, 2022, 04:40 AM IST
ಉದ್ದಿಮೆಗೆ ಗಾಳ ಕೀಳು ಅಭಿರುಚಿ: ನೆರೆ ರಾಜ್ಯಗಳ ಮೇಲೆ ಬೊಮ್ಮಾಯಿ ಗರಂ

ಸಾರಾಂಶ

*  ಇನ್ನೊಂದು ರಾಜ್ಯವನ್ನು ತೆಗಳಿ ಹೂಡಿಕೆಗೆ ಆಹ್ವಾನಿಸಲ್ಲ *  ತಮಿಳುನಾಡು, ತೆಲಂಗಾಣದ್ದು ಹತಾಶೆಯ ನಡವಳಿಕೆ *  ಬನ್ನಿ ಎನ್ನುತ್ತಿದ್ದಾರೆಂದರೆ ಅಲ್ಲಿಗೆ ಯಾರೂ ಹೋಗ್ತಿಲ್ಲ   

ಬೆಂಗಳೂರು(ಏ.09):  ‘ಕರ್ನಾಟಕದಿಂದ ಉದ್ದಿಮೆಗಳನ್ನು ಸೆಳೆಯಲು ನೆರೆ ರಾಜ್ಯಗಳು ಆರಂಭಿಸಿರುವ ಅಭಿಯಾನ ಕೀಳು ಅಭಿರುಚಿಯಿಂದ ಕೂಡಿದೆ’ ಎಂದು ತೀಕ್ಷ್ಣವಾಗಿ ಹೇಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಕರ್ನಾಟಕದ ಪ್ರಗತಿಯನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ. ‘ಯಾರು ಏನೇ ಅಭಿಯಾನ ಮಾಡಿದರೂ ಕರ್ನಾಟಕದ ಪ್ರಗತಿ ನಿರಂತರವಾಗಿ ಮುಂದುವರೆಯಲಿದೆ. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ’ ಎಂದು ಅವರು ಹೇಳಿದ್ದಾರೆ.

ನೆರೆಯ ರಾಜ್ಯಗಳ(Neighboring States) ಸಚಿವರು ಬೆಂಗಳೂರು(Bengaluru) ಮೂಲಸೌಕರ್ಯಗಳ ಬಗ್ಗೆ ಮಾಡಿರುವ ಟ್ವೀಟ್‌ಗಳ ಬಗ್ಗೆ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ತಮಿಳುನಾಡು(Tamil Nadu) ಮತ್ತು ತೆಲಂಗಾಣ(Telangana) ರಾಜ್ಯಗಳು ಬಹಳಷ್ಟು ಹತಾಶವಾಗಿವೆ. ಕರ್ನಾಟಕ(Karnataka) ಮತ್ತು ಬೆಂಗಳೂರನ್ನು ಯಾವುದೇ ರಾಜ್ಯದೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಏಕೆಂದರೆ, ಆ ರಾಜ್ಯಗಳು ಈಗಷ್ಟೇ ಅಭಿವೃದ್ಧಿಯ ಪ್ರಯತ್ನ ಮಾಡುತ್ತಿವೆ. ತಮ್ಮ ರಾಜ್ಯದ ಬಗ್ಗೆ ಉತ್ತಮವಾದುದ್ದನ್ನು ಹೇಳಿ ಬಂಡವಾಳ ಹೂಡಿಕೆಗೆ ಕರೆಯಬೇಕು. ನಾವು ಇನ್ನೊಂದು ರಾಜ್ಯವನ್ನು ತೆಗಳಿ ಬಂಡವಾಳ ಹೂಡಿಕೆಗೆ ಆಹ್ವಾನಿಸುವ ಅಗತ್ಯವಿಲ್ಲ’ ಎಂದರು.

Direct Tax Collection: ದಾಖಲೆಯ ನೇರ ತೆರಿಗೆ ಸಂಗ್ರಹ; ಮೆಟ್ರೋ ನಗರಗಳಲ್ಲಿ ಮುಂಬೈಗೆ ಪ್ರಥಮ, ಬೆಂಗಳೂರಿಗೆ ದ್ವಿತೀಯ ಸ್ಥಾನ

‘ತಮಿಳುನಾಡು ಹಾಗೂ ತೆಲಂಗಾಣದವರನ್ನು ನಾವು ಇಲ್ಲಿಗೆ ಬನ್ನಿ ಎಂದು ಕರೆಯುತ್ತಿಲ್ಲ. ಅದೇ ನಮ್ಮ ಶಕ್ತಿ. ಆದರೆ, ಅವರು ಪಕ್ಕದ ರಾಜ್ಯದವರನ್ನು (ಕರ್ನಾಟಕದ ಉದ್ದಿಮೆಗಳನ್ನು) ಬನ್ನಿ ಎಂದು ಕರೆಯುತ್ತಿದ್ದಾರೆ ಎಂದರೆ, ಅಲ್ಲಿಗೆ ಯಾರೂ ಬರುತ್ತಿಲ್ಲ ಎಂದರ್ಥ. ಇದು ಅವರ ದೌರ್ಬಲ್ಯ. ಕರ್ನಾಟಕಕ್ಕೆ ಅಂತಾರಾಷ್ಟ್ರೀಯ ಮಟ್ಟದ ಹೂಡಿಕೆದಾರರು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ದೊಡ್ಡ ಪ್ರಮಾಣ ಬಂಡವಾಳ ಬರಲಿದೆ. ಕರ್ನಾಟಕಕ್ಕೆ ಕಳೆದ ಮೂರು ತ್ರೈಮಾಸಿಕದಲ್ಲಿ ಅತಿಹೆಚ್ಚು ವಿದೇಶಿ ನೇರ ಬಂಡವಾಳ (FDI) ಬಂದಿದೆ. ಸ್ಟಾರ್ಟ್ಅಪ್‌ನಲ್ಲಿ 2.24 ಶತಕೋಟಿ ಡಾಲರ್‌ ಮೊತ್ತದ ವ್ಯವಹಾರವಾಗುತ್ತಿದೆ. ನಮ್ಮ ಶಕ್ತಿ, ನಮ್ಮ ಪ್ರತಿಭಾನ್ವಿತ ಮಾನವ ಸಂಪನ್ಮೂಲ ನೋಡಿ ಹೆಚ್ಚು ಬಂಡವಾಳ ಹೂಡಿಕೆಯಾಗುತ್ತಿದೆ’ ಎಂದು ಮುಖ್ಯಮಂತ್ರಿಗಳು ಹೇಳಿದರು.

ಬೆಂಗಳೂರು ರಸ್ತೆ ಸರಿ ಇಲ್ಲ: ಪೈ ಅತೃಪ್ತಿ

2021-22ನೇ ಸಾಲಿನಲ್ಲಿ ಬೆಂಗಳೂರು 1.69 ಲಕ್ಷ ಕೋಟಿ ರು. ಆದಾಯ ತೆರಿಗೆ ಪಾವತಿಸಿದೆ. ತನ್ಮೂಲಕ ತೆರಿಗೆ ಪಾವತಿಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಆದರೂ ಸರ್ಕಾರ ನಮ್ಮನ್ನು ಕಡೆಗಣಿಸಿದೆ. ನಮ್ಮ ರಸ್ತೆಗಳು ಕೆಟ್ಟದಾಗಿವೆ. ಸಂಚಾರ ಸಮಸ್ಯೆ ಇದೆ. ಜೀವನ ಗುಣಮಟ್ಟಕುಸಿಯುತ್ತಿದೆ. ಪ್ರಧಾನಿ ಮೋದಿ ಅವರು ಮಧ್ಯಪ್ರವೇಶಿಸಬೇಕು ಅಂತ ಉದ್ಯಮಿ ಮೋಹನದಾಸ್‌ ಪೈ ತಿಳಿಸಿದ್ದಾರೆ. 

ದುರಸ್ತಿ ಮಾಡ್ತೀವಿ: ಪೈಗೆ ಸಿಎಂ ಭರವಸೆ

ಬೆಂಗಳೂರಿನ ರಸ್ತೆಗಳು ಸುಧಾರಣೆಯಾಗುತ್ತಿವೆ. ಮಳೆಗಾಲದಿಂದಾಗಿ ಕೊಂಚ ತೊಂದರೆಯಾಗಿತ್ತು. ಮೋಹನ್‌ದಾಸ್‌ ಪೈ ಅವರ ಜತೆ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆ ದುರಸ್ತಿ ಕಾಮಗಾರಿ ನಡೆಸಲಾಗುವುದು. ಸ್ವಚ್ಛತೆ, ಮೂಲಸೌಕರ್ಯ ಸಮಸ್ಯೆ ಸರಿಪಡಿಸಲಾಗುವುದು ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.  

ಕೇಂದ್ರ ಸರ್ಕಾರದ ನೀತಿಯಿಂದ ಸ್ಟಾರ್ಟಪ್‌ ಹೆಚ್ಚಳ: ರಾಜೀವ್‌ ಚಂದ್ರಶೇಖರ್‌

ಕರ್ನಾಟಕ ಉದ್ದಿಮೆಗಳಿಗೆ ನೆರೆ ರಾಜ್ಯಗಳಿಂದ ಗಾಳ

ಹೈದರಾಬಾದ್‌/ಚೆನ್ನೈ: ಬಂಡವಾಳ(Investment) ಹೂಡಿಕೆಯಲ್ಲಿ ದೇಶದ ಅಗ್ರಗಣ್ಯ ರಾಜ್ಯಗಳ ಪೈಕಿ ಒಂದಾಗಿರುವ ಕರ್ನಾಟಕದಿಂದ ಉದ್ಯಮಗಳು ಮತ್ತು ಉದ್ಯಮಿಗಳನ್ನು ನೇರವಾಗಿ ಸೆಳೆಯಲು ಸಾಧ್ಯವಾಗದ ನೆರೆಯ ತೆಲಂಗಾಣಮತ್ತು ತಮಿಳುನಾಡು ಸರ್ಕಾರಗಳು ಇದೀಗ ಹೊಸ ತಂತ್ರಕ್ಕೆ ಮೊರೆ ಹೋಗಿವೆ.

ಮೂಲಸೌಕರ್ಯ ಮತ್ತು ಇತ್ತೀಚೆಗೆ ಕರ್ನಾಟಕದಲ್ಲಿ(Karnataka) ಆರಂಭವಾಗಿರುವ ಹಿಜಾಬ್‌(Hijab), ಹಲಾಲ್‌(Halal) ಮತ್ತಿತರ ಧರ್ಮಾಧಾರಿತ ಬಹಿಷ್ಕಾರ ವಿವಾದಗಳ ಹಿನ್ನೆಲೆಯಲ್ಲಿ ಉದ್ಯಾನನಗರಿ ಬೆಂಗಳೂರಿನಲ್ಲಿರುವ(Bengaluru) ಬಂಡವಾಳ ಹೂಡಿಕೆದಾರರಿಗೆ ತಮ್ಮ ರಾಜ್ಯಕ್ಕೆ ಬರುವಂತೆ ಉಭಯ ರಾಜ್ಯಗಳು ಕರೆಕೊಟ್ಟಿವೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!