ಕರ್ನಾಟಕ ಬಜೆಟ್ 2024ರಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ? ಪಂಚ ಗ್ಯಾರಂಟಿಗೆ 52,000 ಕೋಟಿ ರೂ. ಮೀಸಲು

By Sathish Kumar KH  |  First Published Feb 16, 2024, 5:18 PM IST

ಕರ್ನಾಟಕ ಬಜೆಟ್ 2024ರಲ್ಲಿ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಇಂಧನ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಿಂಹಪಾಲು ಅನುದಾನವನ್ನು ಹಂಚಿಕೆ ಮಾಡಲಾಗಿದೆ. 


ಬೆಂಗಳೂರು (ಫೆ.16): ರಾಜ್ಯದಲ್ಲಿ ಗ್ಯಾರಂಟಿಗಳನ್ನು ಘೋಷಣೆ ಮಾಡಿ 2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಮೊದಲ ಬಾರಿಗೆ ಪೂರ್ಣಕಾಲಿಕ ಬಜೆಟ್‌ (ಕರ್ನಾಟಕ ಬಜೆಟ್‌ 2024) ಅನ್ನು ಘೋಷಣೆ ಮಾಡಿದೆ. ಎಲ್ಲ ಇಲಾಖೆಗಳನ್ನು ಪರಿಗಣೆಗೆ ತೆಗೆದುಕೊಂಡು ಬಜೆಟ್ ಮಂಡಿಸಿದ್ದು, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಇಂಧನ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಹೆಚ್ಚಿನ ಅನುದಾನವನ್ನು ನೀಡಿದೆ.

ಇಲಾಖೆವಾರು ಅನುದಾನ ಹಂಚಿಕೆ ವಿವರ:

  • ಶಿಕ್ಷಣ - 44,422 ಕೋಟಿ ರೂ.
  • ಮಹಿಳಾ ಮಕ್ಕಳ - 34,406 ಕೋಟಿ ರೂ.
  • ಇಂಧನ ಇಲಾಖೆ - 23,159 ಕೋಟಿ ರೂ.
  • ಗ್ರಾಮೀಣಾಭಿವೃದ್ಧಿ - 21,160 ಕೋಟಿ ರೂ.
  • ಗೃಹ ಮತ್ತು ಸಾರಿಗೆ - 19,777 ಕೋಟಿ ರೂ.
  • ನೀರಾವರಿ -  19,179 ಕೋಟಿ ರೂ.
  • ನಗರಾಭಿವೃದ್ಧಿ - 18,155 ಕೋಟಿ ರೂ.
  • ಕಂದಾಯ - 16,170 ಕೋಟಿ ರೂ.
  • ಆರೋಗ್ಯ - 15,145 ಕೋಟಿ ರೂ.
  • ಸಮಾಜಕಲ್ಯಾಣ - 13,334 ಕೋಟಿ ರೂ.
  • ಲೋಕೋಪಯೋಗಿ - 10,424 ಕೋಟಿ ರೂ.
  • ಆಹಾರ ನಾಗರೀಕ - 9,963 ಕೋಟಿ ರೂ.
  • ಕೃಷಿ ಮತ್ತು ತೋಟಗಾರಿಕೆ - 6,688 ಕೋಟಿ ರೂ.
  • ಮೀನುಗಾರಿಕೆ ಮತ್ತು ಪಶು ಸಂಗೊಪನೆ - 3,307 ಕೋಟಿ ರೂ.
  • ಇತರ ಇಲಾಖೆಗಳಿಗೆ - 12,4593 ಕೋಟಿ ರೂ ಹಂಚಿಕೆ

Tap to resize

Latest Videos

undefined

ಮೈಸೂರಿಗೆ ಬಂಪರ್ ಕೊಡುಗೆ ಕೊಟ್ಟ ಸಿಎಂ ಸಿದ್ದರಾಮಯ್ಯ; ಆದ್ರೆ, ಬಾದಾಮಿ ಕ್ಷೇತ್ರವನ್ನೇ ಮರೆತುಬಿಟ್ರಾ?

ಇನ್ನು 2024-25ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಪ್ರಾಮುಖ್ಯತೆಯನ್ನು ನೀಡಲು 5,000 ಕೋಟಿ ರೂ.ಗಳ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ. 

ಇನ್ನು ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣವಾದ 5 ಗ್ಯಾರಂಟಿ ಯೋಜನೆಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಈ ಪಂಚ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ರೂ. ಹಣವನ್ನು 2024-2ನೇ ಸಾಲಿನ ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಗಳು ಯಾವುದೇ ಅಭಯವಿಲ್ಲದೇ ಮುಂದುವರೆಯುತ್ತವೆ ಎಂಬ ಭರವಸೆಯನ್ನು ನೀಡಿದೆ. 

ಗ್ಯಾರಂಟಿ ಯೋಜನೆಗಳು        2024 ಬಜೆಟ್ ಆಯವ್ಯಯ ಅಂದಾಜು
ಗೃಹಜ್ಯೋತಿ                              9,657 ಕೋಟಿ ರೂ.
ಅನ್ನ ಭಾಗ್ಯ                               8,079 ಕೋಟಿ ರೂ.
ಶಕ್ತಿ ಯೋಜನೆ                            5,015 ಕೋಟಿ ರೂ.
ಗೃಹ ಲಕ್ಷ್ಮಿ                                650 ಕೋಟಿ ರೂ.
ಯುವನಿಧಿ                                 28,608 ಕೋಟಿ ರೂ.
ಒಟ್ಟು                                         52,009 ಕೋಟಿ ರೂ. 

ರಾಜ್ಯದಲ್ಲಿ ಶಿಕ್ಷಕರು, ಉಪನ್ಯಾಸಕರ ನೇಮಕಾತಿಗೆ ಗ್ರೀನ್ ಸಿಗ್ನಲ್; ಆದರ್ಶ ವಿದ್ಯಾಲಯಗಳಲ್ಲಿ ಪಿಯು ಕಾಲೇಜು ಆರಂಭ

click me!