ಉತ್ತರ ಪ್ರದೇಶಕ್ಕೆ ಕೊಡಿ, ಆದರೆ ನಮ್ಮನ್ನು ಹಸಿವಿನಲ್ಲಿ ಇಡಬೇಡಿ: ಕೇಂದ್ರಕ್ಕೆ ತಿವಿದ ಸಿಎಂ ಸಿದ್ದರಾಮಯ್ಯ

By Santosh Naik  |  First Published Feb 16, 2024, 4:52 PM IST

ಬಿಜೆಪಿಗರ ತಲೆಯಲ್ಲಿ ರಾಜಕೀಯ ನಂಜಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಲ್ಲಿ ಬರಬೇಕಾದ ಕೇಂದ್ರದ ಹಣವನ್ನು ಕೇಳಿದರೆ, ಅವರಿಗೆ ಉರಿ. ಅದಕ್ಕೆ ಅವರಿಗೆ ವಿಧಾನಸಭೆಯಲ್ಲಿ ಕುಳಿತುಕೊಳ್ಳಲೂ ಸಾಧ್ಯವಾಗದೇ ಎದ್ದು ಹೋಗಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.


ಬೆಂಗಳೂರು (ಫೆ16): ರಾಜ್ಯ ಬಜೆಟ್ ಮಂಡನೆ ಮಾಡಿದ ಬಳಿಕ ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯಗಳಿಗೆ ಹಣ ಕೊಡಬೇಡಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಆದರೆ, ನಮ್ಮನ್ನು ಹಸಿದ ಹೊಟ್ಟೆಯಲ್ಲಿ ಇಡಬೇಡಿ ಅಷ್ಟೇ. ಚಿನ್ನದ ಕೋಳಿಯನ್ನು ಕೊಯ್ದರೆ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿರುವ ಕಾರಣದಿಂದಲೇ ಕನ್ನಡಿಗರಿಗೆ ದ್ರೋಹವಾಗಿದೆ. ಕೇಂದ್ರದ ತಾರತಮ್ಯದ ಬಗ್ಗೆ ಪ್ರಶ್ನೆ ಮಾಡಿದದರೆ  ಇವರಿಗೆ ಊರಿ ಹೊತ್ತಿಕೊಳ್ಳುತ್ತದೆ. ನಮ್ಮ ರಾಜ್ಯಕ್ಕೆ ಅನ್ಯಾಯ ಆಗಬಾರದು ಎನ್ನುವುದಷ್ಟೇ ನನ್ನ ಉದ್ದೇಶ ಎಂದರು. ಕಳೆದ 6 ವರ್ಷಗಳಲ್ಲಿ 62 ಸಾವಿರ ಕೋಟಿ ನಷ್ಟವಾಗಿದೆ. ಕೇಂದ್ರದಿಂದ ಎಲ್ಲಾ ಹಣ ಬಂದಿದ್ದರೆ, ಇಂದು ಯುರೋಪ್‌ ರೀತಿ ಇರುತ್ತಿತ್ತು. ನಾವು ದಿವಾಳಿಯಾಗಿಲ್ಲ. ಆರ್ಥಿಕ ದಿವಾಳಿಯೂ ಆಗಿಲ್ಲ. ಗ್ಯಾರಂಟಿ ಯೋಜನೆಯಿಂದ 4-5 ಸಾವಿರ ಹಣ ತಿಂಗಳಿಗೆ ಸಿಗುತ್ತಿದೆ. ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ಹಣ ಮೀಸಲಿಡಲಾಗಿದೆ. ಇನ್ನೂ ಹೆಚ್ಚು ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಸಿಎಂ ಸುದ್ದಿಗೊಷ್ಠಿಯಲ್ಲಿ ಹಾಜರಿದ್ದರು. ಈ ವೇಳೆ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ, ಡಿಸಿಎಂ ಡಿಕೆ ಶಿವಕುಮಾರ್‌ ಕೂಡ ಹಾಜರಿದ್ದರು. 2024 - 25 ನೇ ಸಾಲಿನ ಬಜೆಟ್ ಮಂಡಿಸಿದ್ದೇನೆ. ಈ ಬಜೆಟ್ ನಲ್ಲಿ ರಾಜ್ಯದ ಬಡ ಜನರು ಮಹಿಳೆಯರು ರೈತರು ಯುವಕರು ಪರಿಶಿಷ್ಟ ಪರಿಶಿಷ್ಟ ಪಂಗಡದ ವರಿಗೆ ಹಾಗೂ ಅಲ್ಪಸಂಖ್ಯಾತರಿಗೆ ಕೊಂಡು ಕೊಳ್ಳುವ ಶಕ್ತಿ ಕೊಟ್ಟಿದ್ದೇನೆ ಎಂದು ಸಿಎಂ ಹೇಳಿದರು. ಸರ್ವಾಂಗಣ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ. ಬಡವರ ಏಳಿಗೆಗಾಗಿ ಗ್ಯಾರಂಟಿ ಯೋಜನೆ ತಂದಿದ್ದೇವೆ. ನಾವು ಅಧಿಕಾರಕ್ಕೆ ಬಂದು 9 ತಿಂಗಳಾಗಿಲ್ಲ. ಆದರೆ ನಾವು ವಾಗ್ದಾನ ಕೊಟ್ಟ ಎಲ್ಲಾ ಗ್ಯಾರಂಟಿ ಯೋಜನೆಯನ್ನ ಜಾರಿ ಮಾಡಿದ್ದೇವೆ‌. ಕೃಷಿ ಬರ  ನೀರಾವರಿ ಸಮರ್ಥವಾಗಿ ನಿಭಾಯಿಸಿದ್ದೇವೆ‌ ಎಂದರು.

ಕಳೆದ ಬಜೆಟ್‌ಗಿಂತ 46,636 ಕೋಟಿ ಹೆಚ್ಚಳ:  ಈ ಬಾರಿ 3,71,383 ಕೋಟಿ ರೂಪಾಯಿ  ಗಾತ್ರದ ಬಜೆಟ್ ಮಂಡಿಸಿದ್ದೇನೆ. ಜುಲೈ ನಲ್ಲಿ ನಾನು ಮಂಡಿಸಿದ್ದ ಬಜೆಟ್‌ ಗಾತ್ರ 3,27,747 ಕೋಟಿ. ಕಳೆದ ಬಜೆಟ್‌ಗಿಂತ 46,636 ಹೆಚ್ಚಳವಾಗಿದೆ. ಕಳೆದ ಬಜೆಟ್ ಗಿಂತ 13% ಬೆಳವಣಿಗೆ ಆಗಿದೆ. ಆರ್ಥಿಕವಾಗಿ ದಿವಾಳಿಯಾಗಿದೆ ಗ್ಯಾರಂಟಿ ಆಗಿದೆ ಎಂದೆಲ್ಲ ವಿಪಕ್ಷಗಳು ಹೇಳುತ್ತಿದ್ದವು. ಬಿಟ್ಟಿ ಗ್ಯಾರಂಟಿ ಎಂದೆಲ್ಲ ಕರೆದರು. ಗ್ಯಾರಂಟಿ ಯೋಜನೆಗೆ ಹಣ ಮೀಸಲಿಟ್ಟರು ಅಭಿವೃದ್ಧಿಗೂ ಹಣ ಕೊಟ್ಟಿದ್ದೇವೆ. ಈ ವರ್ಷ ಬರಗಾಲ ಬೇರೆ ಇದೆ. 35 ಸಾವಿರ ಕೋಟಿ ನಷ್ಟವಾಗಿದೆ ಎಂದಿದ್ದಾರೆ.

ಬಜೆಟ್ ನಲ್ಲಿ ಜಲಸಂಪನ್ಮೂಲ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ; ಬಾಕಿ ನೀರಾವರಿ ಯೋಜನೆಗಳ ಪೂರ್ಣಕ್ಕೆ ಆದ್ಯತೆ

ಕೇಂದ್ರದ ಮೇಲೆ ಹರಿಹಾಯ್ದ ಸಿಎಂ: ಈಗಾಗಲೇ ಎನ್‌ಡಿಆರ್‌ಎಫ್‌ ಬಳಿ ಹಣ ಕೇಳಿದ್ದೇವೆ. 18,171 ಕೋಟಿ ಕೇಳಿದ್ದೇವೆ. 5 ತಿಂಗಳಾಯ್ತು ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಒಂದು ಮೀಟಿಂಗ್ ಸಹ ಈವರೆಗೂ ಮಾಡಿಲ್ಲ. ಹಾಗಿದ್ದರೂ ಬಿಜೆಪಿಯವರು ಬಾಯಿಗೆ ಬಂದ ಹಾಗೇ ಮಾತನಾಡ್ತಾರೆ ಎಂದರು.

Latest Videos

undefined

ಪ್ರತಿ ಜಿಲ್ಲೆಗಳಲ್ಲೂ ಡೇ-ಕೇರ್‌ ಕಿಮೋಥೆರಪಿ ಕೇಂದ್ರ, 7 ತಾಲೂಕುಗಳಲ್ಲಿ ಹೊಸ ಆಸ್ಪತ್ರೆ!

ಬಜೆಟ್‌ ಮಂಡಿಸುವಾಗ ಬಿಜೆಪಿ ನಾಯಕರು ವಾಕ್‌ಔಟ್‌ ಮಾಡಿದ ಬಗ್ಗೆ ಮಾತನಾಡಿದ ಸಿಎಂ, ಹಿಂದೆಂದೂ ಈ ರೀತಿ ಆದ ನಿದರ್ಶನವಿಲ್ಲ. ನಾನು ಬಜೆಟ್‌ ಓದುವಾಗಲೇ ಶಾಸಕ ಸುನೀಲ್‌ ಏನಿಲ್ಲ, ಏನಿಲ್ಲ ಎಂದರು. ಆದರೆ, ಅವರ ತಲೆಯಲ್ಲೇ ಏನೂ ಇಲ್ಲ ಅನ್ನೋದು ಗೊತ್ತಾಗುತ್ತಿದೆ. ಬಿಜೆಪಿಯವರಿಗೆ ರಾಜಕೀಯ ಮಂಜಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಮಾಡಲಿ ಆದರೆ, ಆರೋಗ್ಯಕರವಾಗಿರಲಿ. ಬಿಜೆಪಿಯವರು ಇಂದು ಪ್ಲ್ಯಾನ್‌ ಮಾಡಿಕೊಂಡು ಬಂದಿದ್ದು, ಪ್ಲಕಾರ್ಡ್‌ ತೆಗೆದುಕೊಂಡು ಬಂದಿದ್ದರು. ನಾನಿನ್ನೂ ಬಜೆಟ್‌ ಭಾಷಣ ಆರಂಭಿಸುವಾಗಲೇ ಏನಿಲ್ಲ.. ಏನಿಲ್ಲ ಅನ್ನೋಕೆ ಆರಂಭಿಸಿದ್ರು. ಇದಿದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದರು ಎಂಬ ಗಾದೆಯಂತೆ ಬಿಜೆಪಿ ವರ್ತಿಸುತ್ತಿದೆ. ಕೇಂದ್ರ ಅನ್ಯಾಯಾಗಿದೆ ಎಂದು ಹೇಳೋದು ನನ್ನ ಜವಬ್ದಾರಿ. ಬಿಜೆಯವರು ಕೊಲೆ ಬಸವನ ತರಹ ತಲೆ ಅಲ್ಲಾಡಿಸೋದು ಅಷ್ಟೇ ಗೊತ್ತು. ಕೋಲಾರ ಸಂಸದ ಮುನಿಸ್ವಾಮಿ ಒಂದೇ ಒಂದು ಪ್ರಶ್ನೆ ಕೇಳಿದ್ರಾ‌.? ಕೇಳಲಿಲ್ಲ. 11495 ಕೋಟಿ ಕೇಳಿದ್ರೆ ಇವರಿಗೆ ಯಾಕೆ ಕೋಪ..? ಇದನ್ನೂ ಕೇಳಬಾರದಾ? ಕನ್ನಡಿಗರಿಗೆ ಅನ್ಯಾಯವಾದ್ರು ಕೇಳಬಾರದಾ‌..? ಎಂದು ಸಿಎಂ ಪ್ರಶ್ನಿಸಿದ್ದಾರೆ.

ಭದ್ರಾಮೇಲ್ದಡೆಗೆ ಇವರೇ ಹಣ ಕೊಡ್ತೀನಿ ಅಂದಿದ್ದರು. ಅದಕ್ಕೆ ಬೊಮ್ಮಾಯಿ ದೀರ್ಘ ದಂಡ ನಮಸ್ಕಾರ ಹಾಕಿದ್ದವರೂ ಇವರೇ, ಇದನ್ನ ನಾವು ಕೇಳಿದರೆ ಇವರಿಗೆ ಕೋಪ. ನಿರ್ಮಲಾ ಸೀತಾರಾಮನ್  ಬಜೆಟ್ ನಲ್ಲಿ ಹೇಳಿಲ್ವಾ..? ಬೊಮ್ಮಾಯಿ ಬಜೆಟ್ ನಲ್ಲಿ ಇವರು ಹೇಳಿರಲಿಲ್ಲವಾ...? ಇದು ಕನ್ನಡಿಗರಿಗೆ ಮಾಡಿದ ದ್ರೋಹ ಅಲ್ಬಾ..? ಎಂದ ಸಿಎಂ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಹೇಳಿರುವ ಅಂಶ ಒದಿ ಹೇಳಿದರು. ನಾನು ಏನು ಬೇರೆ ಹೇಳಿಲ್ಲ.. Why they are angry. ವಾಕ್ ಔಟ್ ಮಾಡ್ತೀರಾ? ಪ್ಲಕಾರ್ಡ್‌ ಇಟ್ಟುಕೊಂಡು ಬರ್ತಿರಾ? ಇದು ಪ್ರಜಾಪ್ರಭುತ್ವ ವಿರೋಧ ನಡೆ ಅಲ್ವಾ. ಅವರ ತಲೆಯಲ್ಲಿ ಇರೋದು ರಾಜಕೀಯ ನಂಜಷ್ಟೇ. ನಾನು ಅಭಿವೃದ್ಧಿ ಗೆ ಹಣ ಕೊಟ್ಟಿಲ್ಲ ಎಂದು ಪ್ರೂ ಮಾಡಲಿ. ಗ್ಯಾರಂಟಿ ಹಣಕ್ಕೆ ಕೊಟ್ಟಿಲ್ಲೆ ಎಂದು ಪ್ರೂ ಮಾಡಲಿ. ಸಾಲ ಮಾಡಿದ್ದಾರೆ ಎಂದು ಬೊಮ್ಮಾಯಿ ಸುಳ್ಳು ಹೇಳಿದ್ದಾರೆ. ನಾನು ಅವರಷ್ಟು ಸಾಲ ಮಾಡಿಲ್ಲ. ಅವರು 80 ಸಾವಿರ ಕೋಟಿ ಸಾಲ ಮಾಡಿದ್ದರು ಎಂದ ಸಿಎಂ, ಬೊಮ್ಮಾಯಿ ಮಂಡಿಸಿದ ಬಜೆಟ್ ಪ್ರತಿಯನ್ನೂ ಸಹ ಓದಿದರು.

ತಮ್ಮ ಬಜೆಟ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಭದ್ರಾ ಮೇಲ್ದಂಡೆಗೆ ಅನುದಾನ ನೀಡಿದ್ದಾರೆ ಅಂತ ಧನ್ಯವಾದ ಹೇಳಿದ್ದರು. ಆದರೆ, ಇದುವರೆಗೂ ಒಂದು ರೂಪಾಯಿ ಕೊಟ್ಟಿಲ್ಲ ಅಂತ ನಾನು ಹೇಳಿದ್ದು. ಇದನ್ನ ನಾವು ಹೇಳಬೇಕೋ ಬೇಡ್ವೋ..? ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ. ಮ್ಯಾಚಿಂಗ್ ಗ್ರ್ಯಾಂಟ್ ಕೊಡಬೇಕು ಎಂದಿದ್ದಾರೆ. ಇದುವರೆಗೂ ಒಂದು ರೂಪಾಯಿ ಕೊಟ್ಟಿಲ್ಲ. Its a fact its a true ಇದನ್ನ ಹೇಳಿದ್ರೆ  ಅವರಿಗೆ ಊರಿ. ಅದಕ್ಕೆ ಅವರಿಗೆ ಕುತಿಕೊಳ್ಳಲು ಆಗದೆ ಎದ್ದು ಹೋಗಿದ್ದಾರೆ ‌. ಅವರಿಗೆ ಉರಿ ತೆಡೆದುಕೊಳ್ಳಲು ಆಗಿಲ್ಲ ಎಂದು ಹೇಳಿದ್ದಾರೆ.

ಸರ್ ಪ್ಲೆಸ್ ಬಜೆಟ್ ಆಗಿಲ್ಲ ಅದು ಮುಂದಿನ ವರ್ಷ ಆಗಲಿದೆ ಎಂದ ಸಿಎಂ, ಬೇರೆ ಬೇರೆ ರಾಜ್ಯಗಳ  ಬಜೆಟ್ ಅಂಕಿ ಅಂಶಗಳ ಬಗ್ಗೆ ವಿವರಿಸಿದರು. ನಾವು ಆರ್ಥಿಕ ಶಿಸ್ತಿನ ನಿಯಮದ ಪ್ರಕಾರ ನಾವು ಬಜೆಟ್ ಮಂಡಿಸಿರೋದು. ಸರ್ ಪ್ಲೆಸ್ ಬಜೆಟ್ ಆಗಿಲ್ಲ ಆದು ಮುಂದಿನ ವರ್ಷ ಆಗಲಿದೆ ಎಂದು ಹೇಳಿದರು.
 

click me!