Karnataka Budget 2023-24: ಬೆಂಗಳೂರಿಗೆ 9,698 ಕೋಟಿ ರೂ. ಬಂಪರ್- 110 ಹಳ್ಳಿಗಳಿಗೆ ಕಾವೇರಿ ನೀರು ಲಭ್ಯ

By Sathish Kumar KH  |  First Published Feb 17, 2023, 12:08 PM IST

ರಾಜ್ಯ ಬಜೆಟ್‌ನಲ್ಲಿ ಬೆಂಗಳೂರಿಗೆ ಬರೋಬ್ಬರಿ 9,698 ಕೋಟಿ ರೂ. ಅನುದಾನ ನೀಡಲಾಗಿದೆ. ಹವಾಮಾನ ಬದಲಾವಣೆಯ ಪರಿಣಾಮ ತಗ್ಗಿಸಲು ಮತ್ತು ಪ್ರವಾಹವನ್ನು ನಿಯಂತ್ರಿಸಲು 3,000 ಕೋಟಿ ರೂ. ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಈ ವರ್ಷ ಕಾವೇರಿ ಕುಡಿಯುವ ನೀರು ಎಲ್ಲರುಗೂ ಲಭ್ಯವಾಗಲಿದೆ.


ಬೆಂಗಳೂರು (ಫೆ.17): ರಾಜ್ಯ ಬಜೆಟ್‌ನಲ್ಲಿ ಸಿಎಂ ಬವವರಾಜ ಬೊಮ್ಮಾಯಿ ಬೆಂಗಳೂರಿಗೆ ಬರೋಬ್ಬರಿ 9,698 ಕೋಟಿ ರೂ. ಅನುದಾನ ನೀಡಿದ್ದಾರೆ. ಇದರಲ್ಲಿ ಹವಾಮಾನ ಬದಲಾವಣೆಯ ಪರಿಣಾಮವನ್ನು ಕಡಿಮೆ ಮಾಡಲು ಮತ್ತು ಬೆಂಗಳೂರಿನಲ್ಲಿ ಪ್ರವಾಹವನ್ನು ನಿಯಂತ್ರಿಸಲು 3,000 ಕೋಟಿ ರೂ. ಗಳ ಯೋಜನೆಯನ್ನು ವಿಶ್ವಬ್ಯಾಂಕ್‌ನ ನೆರವಿನೊಂದಿಗೆ ಅನುಷ್ಠಾನ ಮಾಡಲಾಗುತ್ತದೆ.

ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು, ಮಹಾನಗರದ ಸಾರಿಗೆ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಹಲವಾರು ಸಂಸ್ಥೆಗಳ ಕಾರ್ಯಾಚರಣೆಯನ್ನು ಸಮನ್ವಯಿಸಲು ಉನ್ನತಾಧಿಕಾರದ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರವನ್ನು ರಚಿಸಲಾಗಿದೆ. ವಿಶ್ವಬ್ಯಾಂಕ್‌ ನೆರವು ಅಡಿಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸಲು ಎಲ್ಲಾ ಸ್ಲೂಯೀಸ್‌ ಗೇಟ್‌ (Sluice Gate)ಗಳನ್ನು ಅಳವಡಿಸಲಾಗುವುದು. ಇದರಿಂದ ನೀರಿನ ಹರಿವಿನ ವೇಗ ಮತ್ತು ಪ್ರಮಾಣವನ್ನು ನಿಯಂತ್ರಿಸಲು ಅನುಕೂಲವಾಗುವುದು.  

Tap to resize

Latest Videos

undefined

ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತದ ಕಾಮಗಾರಿಗಳನ್ನು 5,550 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಜೈಕಾ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ತೆಗೆದುಕೊಂಡಿದ್ದು, ಎಲ್ಲಾ ಕಾಮಗಾರಿಗಳು 2023-24ನೇ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು. 775 ಎಂ.ಎಲ್.ಡಿ ಸಾಮರ್ಥ್ಯ ಹೊಂದಿರುವ ಈ ಯೋಜನೆಯನ್ನು ಪೂರ್ಣಗೊಳಿಸುವುದರಿಂದ ನಗರದ 50 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ನೆರವಾಗಲಿದೆ. ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಒದಗಿಸಲು 200 ಕೋಟಿ ರೂ. ಹೆಚ್ಚುವರಿ ಅನುದಾನ ಮೀಸಲಿಡಲಾಗುತ್ತಿದೆ. 

Women in Karnataka Budget 2023-24 : ಮಹಿಳೆಯರಿಗೆ ಬಂಪರ್‌ ಗಿಫ್ಟ್: ಮಹಿಳೆ- ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ಪಾಸ್

ಭುವನೇಶ್ವರಿ ಥೀಂ ಪಾರ್ಕ್‌ ನಿರ್ಮಾಣ:  ಬೆಂಗಳೂರು ನಗರದಲ್ಲಿ ಶ್ರೀ ಭುವನೇಶ್ವರಿ ಥೀಂ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. ಈ ಮೂಲಕ ಕರ್ನಾಟಕ ಮಾತೆ ಎಂದು ಪೂಜಿಸಲಾಗುತ್ತಿರುವ ಭುವನೇಶ್ವರಿ ದೇವಿಗೆ ಗೌರವ ಅರ್ಪಣೆ ಮಾಡಲಾಗುತ್ತಿದೆ. ಈಗಾಗಲೇ ಹಲವು ಉದ್ಯಾನಗಳು ಹಾಗೂ ಮ್ಯೂಸಿಯಂಗಳು ಪ್ರವಾಸಿ ತಾಣಗಳಾಗಿದ್ದು, ಮತ್ತೊಂದು ಥೀಂ ಪಾರ್ಕ್‌ ಸಿದ್ಧಪಡಿಸಲಾಗುತ್ತಿದೆ. ಇದು ರಾಜ್ಯದ ಎಲ್ಲ ಜನರಿಗೂ ಪ್ರವಾಸಿ ತಾಣವೂ ಆಗಬಹುದು. 

ಬೆಂಗಳೂರು ಮಹಿಳೆಯರಿಗೆ 250  ಶಿ ಟಾಯ್ಲೆಟ್‌ ನಿರ್ಮಾಣ: ಬೆಂಗಳೂರು ನಗರದಲ್ಲಿ ಮಾರುಕಟ್ಟೆಗಳು, ಉದ್ಯಮಗಳು ಹಾಗೂ ಮಹಿಳೆಯರು ಕೆಲಸ ಮಾಡುವಂತಹ ಸ್ಥಳಗಳಲ್ಲಿ 250  ಶಿ ಟಾಯ್ಲೆಟ್ ನಿರ್ಮಾಣಕ್ಕೆ 50 ಕೋಟಿ ಅನುದಾನ ಮೀಸಲಿಡಲಾಗಿದೆ. ಈ ಶಿ ಟಾಯ್ಲೆಟ್‌ನ ರೂಂನಲ್ಲಿ ಬಾಣಂತಿ ಮಹಿಳೆಯರಿಗೆ ಮಕ್ಕಳನ್ನು ಹೊಂದಿರುವವರಿಗೆ ಫೀಡಿಂಗ್‌  (ಹಾಲುಣಿಸುವ ಕೋಣೆ), ಮೊಬೈಲ್ ಚಾರ್ಜಿಂಗ್, ತುರ್ತು ಸೇವೆ, ಎಸ್ಒಸಿ ಸೌಲಭ್ಯಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲಿ ಮಹಿಳೆಯರು ವಿಶ್ರಾಂತಿ ಪಡೆದು ಚೇತರಿಕೆ ಆಗಲು ಅಗತ್ಯವಿರುವ ವ್ಯವಸ್ಥೆ ಮಾಡಲಾಗುತ್ತದೆ. ನಿರ್ಭಯ ಯೋಜನೆ ಅಡಿಯಲ್ಲಿ The Safe city Project ಅಡಿ 1,640 ಸ್ಥಳಗಳಲ್ಲಿ ಅಳವಡಿಸಲಾದ 4,100 ಸಿಸಿ ಕ್ಯಾಮರಾಗಳನ್ನು ಐಸಿಸಿಸಿಗೆ ಸಂಪರ್ಕ ಮಾಡಲು 261ಕೋಟಿ ರೂ. ಅನುದಾನ ನೀಡಲಾಗಿದೆ. 

ಬೆಂಗಳೂರು ಆರೋಗ್ಯಕ್ಕೆ ಭರ್ಜರಿ ಕೊಡುಗೆ: ಬೆಂಗಳೂರಿಗೆ 243 ವಾರ್ಡ್ಗಳಲ್ಲಿ ನಮ್ಮ ಕ್ಲಿನಿಕ್ ಸ್ಥಾಪನೆ ಮಾಡಲಾಗುತ್ತದೆ. ಈಗಾಗಲೇ 110ಕ್ಕೂ ಅಧಿಕ ನಮ್ಮ ಕ್ಲಿನಿಕ್‌ಗಳನ್ನು ಆರಂಭ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮ ಕ್ಲಿನಿಕ್‌ಗಳನ್ನು ಎಲ್ಲ ವಾರ್ಡ್‌ಗಳಿಗೂ ವಿಸ್ತರಣೆ ಮಾಡಲಾಗುತ್ತದೆ. ಈ ಪೈಕಿ 27 ಸ್ಮಾರ್ಟ್ ವರ್ಚುವಲ್ ಕ್ಲಿನಿಕ್ ಸ್ಥಾಪಿಸಲಾಗುವುದು. 50 ಡಯಾಲಿಸಿಸ್ ಹಾಸಿಗೆ ಹಾಗೂ 300 ಹಾಸಿಗೆಗಳ ಆಸ್ಪತ್ರೆ (ಸ್ಪೆಷಾಲಿಟಿ) ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. 

Karnataka Budget 2023-24: ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಒತ್ತು; ಭೂ ಸಿರಿ ನೂತನ ಯೋಜನೆ ಘೋಷಣೆ

ಬಿಬಿಎಂಪಿ ಶಾಲೆ ಅಭಿವೃದ್ಧಿಗೆ ಕೊಡುಗೆ:  ಬೆಂಗಳೂರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 180 ಕೋಟಿ ರೂ. ಮೀಸಲಿಡಲಾಗುತ್ತದೆ. ಕಳೆದ 2022-23ನೇ ಸಾಲಿನಲ್ಲಿ ಘೋಷಣೆ ಮಾಡಲಾಗಿದ್ದ 20 ಪಬ್ಲಿಕ್‌ ಶಾಲೆಗಳನ್ನಿ ಈವರ್ಷ ಕಾರ್ಯಗತಗೊಳಿಸಲಾಗುವುದು. ಅಮೃತ ನಗರೋತ್ಥಾನ ಯೋಜನೆ ಅಡಿಯಲ್ಲಿ ಬಿಬಿಎಂಪಿ ಶಾಲೆಗಳ ಅಭಿವೃದ್ಧಿಗೆ 180 ಕೋಟಿ ರೂ. ಅನುದಾನ ನೀಡಲಾಗುತ್ತದೆ. ಈ ಯೋಜನೆಗಳನ್ನು ಈ ಆಆರ್ಥಿಕ ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಸಲಾಗುತ್ತಿದ್ದ 10 ಲಕ್ಷ ಸಸಿ ನೆಡುವ ಗುರಿಯನ್ನು 15 ಲಕ್ಷಕ್ಕೆ ಏರಿಕೆ ಮಾಡಲಾಗುವುದು. ಅರಣ್ಯ ಇಲಾಖೆ ನೆರವಿನೊಂದಿಗೆ 3 ಹೈಟೆಕ್‌ ನರ್ಸರಿಗಳನ್ನು ಸ್ಥಾಪಿಸಲಾಗುತ್ತದೆ. 

click me!