Karnataka Budget 2022: ಸೆಮಿಕಂಡಕ್ಟರ್‌ ಉದ್ಯಮಕ್ಕೆ ಪ್ರೋತ್ಸಾಹ: ರಾಜ್ಯದಲ್ಲಿ 7 ಕರ್ನಾಟಕ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ!

By Suvarna News  |  First Published Mar 4, 2022, 2:51 PM IST

*ಬೊಮ್ಮಾಯಿ ಬಜೆಟ್‌ನಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಕ್ಕೆ ಸಿಕಿದ್ದೇನು?
*ರಾಜ್ಯದಲ್ಲಿ 7 ಕರ್ನಾಟಕ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ  
*ಸೆಮಿಕಂಡಕ್ಟರ್ ಹೂಡಿಕೆದಾರರಿಗೆ ಸರ್ಕಾರದ ವತಿಯಿಂದ ವಿಶೇಷ ಪ್ರೋತ್ಸಾಹ


ಬೆಂಗಳೂರು (ಮಾ. 04): ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿ ನಿಂತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ  ರಾಜ್ಯ ಆಯವ್ಯಯವನ್ನು ಶುಕ್ರವಾರ ಮಧ್ಯಾಹ್ನ ಮಂಡಿಸಿದ್ದಾರೆ. ಬೊಮ್ಮಾಯಿ ಬಜೆಟ್‌ನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಅಭಿವೃದ್ಧಿಗೆ ರಾಜ್ಯದ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು Karnataka Institue of Technology ಗಳನ್ನಾಗಿ ಉನ್ನತೀಕರಿಸುವುದು, ಸೆಮಿಕಂಡಕ್ಟರ್‌ಉದ್ಯಮಕ್ಕೆ ಪ್ರೋತ್ಸಾಹ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. 

"ಏಪ್ರಿಲ್ - ಡಿಸೆಂಬರ್ 2021ರ ಅವಧಿಯಲ್ಲಿ ಭಾರತದ ಒಟ್ಟು ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಹರಿವಿನ ಪ್ರಮಾಣದಲ್ಲಿ ಕರ್ನಾಟಕವು ಶೇ.40ರಷ್ಟನ್ನು (1.27 ಲಕ್ಷ ಕೋಟಿ ರೂ.) ಆಕರ್ಷಿಸಿದ್ದು, ರಾಷ್ಟ್ರದಲ್ಲಿಯೇ ಅಗ್ರಸ್ಥಾನದಲ್ಲಿದೆ.  ಅಲ್ಲದೇ  ಬೆಂಗಳೂರು ಮೂಲದ 34 ನವೋದ್ಯಮಗಳು ಬಿಲಿಯನ್ ಡಾಲರ್ ಅಥವಾ ಹೆಚ್ಚಿನ ಮೌಲ್ಯವನ್ನು ಹೊಂದಿವೆ ಎಂಬುದು ರಾಜ್ಯದ ಸ್ಪಾರ್ಟ್‌ಅಪ್ ಉತ್ತೇಜಕ ವಾತಾವರಣಕ್ಕೆ ಸಾಕ್ಷಿಯಾಗಿದೆ" ಎಂದು ಬೊಮ್ಮಾಯಿ ತಿಳಿಸಿದ್ದಾರೆ. ಬೊಮ್ಮಾಯಿ ಬಜೆಟ್‌ನಲ್ಲಿ ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರಕ್ಕೆ ಸಿಕ್ಕ ಯೋಜನೆಗಳ ಹೈಲೈಟ್ಸ್‌ ಇಲ್ಲಿದೆ. 

Latest Videos

undefined

ಸೆಮಿಕಂಡಕ್ಟರ್‌ ಕ್ಷೇತ್ರಕ್ಕೆ ಪ್ರೋತ್ಸಾಹ: ಕರ್ನಾಟಕವು ವಿದ್ಯುನ್ಮಾನ, ಸೆಮಿ ಕಂಡಕ್ಟರ್‌ (Semi-Conductor)  ವಿನ್ಯಾಸ ಮತ್ತು ತಯಾರಿಕಾ (ESDM) ವಲಯದಲ್ಲಿ ದೇಶದಲ್ಲಿ 4ನೇ ಸ್ಥಾನ ಪಡೆದಿದೆ. ಕರ್ನಾಟಕವು 300ಕ್ಕೂ ಹೆಚ್ಚು ತಯಾರಿಕಾ ಘಟಕಗಳನ್ನು ಹೊಂದಿದ್ದು, ವಿದ್ಯುನ್ಮಾನ ಉತ್ಪನ್ನ/ ಸೇವೆಗಳ ವಲಯದಲ್ಲಿ ದೇಶದ ಒಟ್ಟಾರೆ ಉತ್ಪನ್ನದ ಶೇ.10 ರಷ್ಟು ಕೊಡುಗೆ ನೀಡುತ್ತಿದೆ. ESDM ರನಲ್ಲಿ ರಾಜ್ಯದ ಪಾಲು ಶೇ. 64 ರಷ್ಟು ಪಾಲನ್ನು ಹೊಂದಿದ್ದು, ರಾಜ್ಯದ ಶೇ. 17 ರಷ್ಟು ಕೊಡುಗೆ ನೀಡುತ್ತಿದೆ. 

ಭಾರತ ಸರ್ಕಾರದ 76 ಸಾವಿರ ಕೋಟಿ ರೂ. ವೆಚ್ಚದ ಸೆಮಿಕಂಡಕ್ಟರ್‌ ಭಾರತ್ ಅಭಿಯಾನದ ಗರಿಷ್ಠ ಲಾಭ ಪಡೆದುಕೊಂಡು ರಾಜ್ಯದಲ್ಲಿ ಸೆಮಿಕಂಡಕ್ಟರ್ ತಯಾರಿಕೆಗೆ ಹೂಡಿಕೆದಾರರನ್ನು ಆಕರ್ಷಿಸಲು ರಾಜ್ಯ ಸರ್ಕಾರದ ವತಿಯಿಂದ ವಿಶೇಷ ಪ್ರೋತ್ಸಾಹಕಗಳನ್ನು ನೀಡಲು ಉದ್ದೇಶಿಸಿದೆ.

ನವೋದ್ಯಮಗಳಿಗೆ ಸಹಕಾರ:  ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB)ಯ ಸಹಯೋಗದೊಂದಿಗೆ ನಾವೀನ್ಯತೆಯುಳ್ಳ Kalyan Karnataka ಭಾಗದ ನವೋದ್ಯಮಗಳನ್ನು ಆಯ್ಕೆ 25 Elevate - Kalyan Karnataka ವನ್ನು ಹಮ್ಮಿಕೊಳ್ಳಲಾಗುವುದು.

ಇದನ್ನೂ ಓದಿ: Karnataka Budget 2022: ಕರ್ನಾಟಕದ ಅಭಿವೃದ್ಧಿಗಾಗಿ ಯಾವ ಇಲಾಖೆಗೆ ಎಷ್ಟು ಅನುದಾನ?

ಬೆಂಗಳೂರಿನಾಚೆ ಸ್ಪಾರ್ಟ್‌ಅಪ್‌ಗಳನ್ನು ಉತ್ತೇಜಿಸಲು ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್ ನಿಂದ ನಿರ್ವಹಿಸಲಾಗುವ ಕ್ಲಸ್ಟರ್‌ಗೆ 20 ಕೋಟಿ ರೂ.ಗಳಂತೆ Beyond Bengaluru Cluster Seed Fund for Startups ಸ್ಥಾಪಿಸಲಾಗುವುದು. ಈ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 12 ಕೋಟಿ ರೂ. ಅನುದಾನವನ್ನು ಒದಗಿಸಲಾಗುವುದು. 

ಮೈಸೂರಿನ ರಾಜ್ಯ ಮುಕ್ತ ವಿಶ್ವವಿದ್ಯಾಲಯ [KSOU]ದಲ್ಲಿ ಸುಮಾರು 30 ಕೋಟಿ ರೂ. ಯೋಜನಾ  Mysuru The Global Technology Center Plug & Play ಸೌಲಭ್ಯವನ್ನು 2 ವರ್ಷಗಳ ಅವಧಿಯಲ್ಲಿ ಸ್ಥಾಪಿಸಲಾಗುವುದು. ಈ ಉದ್ದೇಶಕ್ಕಾಗಿ 2022-23ರಲ್ಲಿ  10 ಕೋಟಿ ರೂ. ಒದಗಿಸಲಾಗಿದೆ.

ಕರ್ನಾಟಕ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ:  ಅತ್ಯುನ್ನತ ಗುಣಮಟ್ಟದ ತಾಂತ್ರಿಕ ಬೋಧನೆ-ಕಲಿಕೆಗಳಿಗೆ ಹಾಗೂ ಸಂಶೋಧನೆಯನ್ನು ಉತ್ತೇಜಿಸಲು ರಾಜ್ಯದ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು Karnataka Institute of Technology ಗಳನ್ನಾಗಿ ಉನ್ನತೀಕರಿಸಿ, ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು

ಬೆಳಗಾವಿಯಲ್ಲಿ ಡಿಸೈನ್‌ ಸೆಂಟರ್:  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ದೃಷ್ಟಿಕೋನದನ್ವಯ ಇಂಜಿನಿಯರಿಂಗ್ ಸಂಶೋಧನೆ ಮತ್ತು ಅಭಿವೃದ್ಧಿಗೆ ನೆಲೆಯಾಗಿ ಕರ್ನಾಟಕದ ಸ್ಪರ್ಧಾತ್ಮಕತೆಯನ್ನು ವೃದ್ಧಿಸಲು ಉದ್ಯಮದವರ ಪಾಲುದಾರಿಕೆಯೊಂದಿಗೆ 150 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬೆಳಗಾವಿಯಲ್ಲಿ Global Emerging Technology Design Centre ಸ್ಥಾಪಿಸಲಾಗುವುದು.

ಪ್ರವಾಸಿ ತಾಣಗಳ AR/VR ತುಣುಕು: ರಾಜ್ಯದ 15 ಪ್ರವಾಸಿ ತಾಣಗಳ AR/VR (Virtual reality and Augmented reality) ತುಣುಕುಗಳನ್ನು 15 ಕೋಟಿ ವೆಚ್ಚದಲ್ಲಿ ಸೃಜಿಸಲು ಉದ್ದೇಶಿಸಿದ್ದು, ಮೊದಲಿಗೆ ಪ್ರಾಯೋಗಿಕವಾಗಿ ಮೈಸೂರು ಅರಮನೆಯ ತುಣುಕುಗಳನ್ನು ಸೃಜಿಸಲಾಗುವುದು.

ಇದನ್ನೂ ಓದಿ: Karnataka Education budget 2022: ಶೈಕ್ಷಣಿಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸರಕಾರಿ ಶಾಲೆಗಳ ಅಭಿವೃದ್ದಿಗೆ 500 ಕೋಟಿ ಘೋಷಣೆ

ಕೇಂದ್ರ ಸರ್ಕಾರದ ಹಾಗೂ ಉದ್ಯಮಿಗಳ ಸಹಭಾಗಿತ್ವದಲ್ಲಿ ಒಟ್ಟು 50 ಕೋಟಿ ಯೋಜನಾ ವೆಚ್ಚದಲ್ಲಿ Karnataka Acceleration - network ಸ್ಥಾಪಿಸಲು ಉದ್ದೇಶಿಸಲಾಗಿದ್ದು, ರಾಜ್ಯ ಸರ್ಕಾರದ ವತಿಯಿಂದ 20 ಕೋಟಿ ರೂ. ನೀಡಲಾಗುವುದು 

286, ವಿದ್ಯಾರ್ಥಿಗಳು 'ನೋಡಿ ಕಲಿ ಮಾಡಿ ತಿಳಿ' ಪರಿಕಲ್ಪನೆಯಡಿ ವಿಜ್ಞಾನ ತತ್ವಗಳನ್ನು ಅರ್ಥೈಸಿಕೊಳ್ಳಲು ಅನುವಾಗುವಂತೆ, ರಾಜ್ಯದ 169 ಸರ್ಕಾರಿ ಬಾಲಕಿಯರ ಪ್ರೌಢಶಾಲೆಗಳಿಗೆ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ತಯಾರಿಸಲಾದ ಲ್ಯಾಬ್-ಇನ್-ಎ-ಕಿಟ್‌ಗಳನ್ನು ವಿತರಿಸಲಾಗುವುದು.

ಕೃಷಿಯಲ್ಲಿ ತಂತ್ರಜ್ಞಾನ: ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಹಾಗೂಯಂತ್ರೋಪಕರಣಗಳನ್ನು ಅಳವಡಿಸಲು 25 ಕೋಟಿ ರೂ. ಅನುದಾನ ನೀಡಲಾಗುವುದು. ಅಲ್ಲದೇ ರೇಷ್ಮೆ ಬೆಳೆಗಾರರಿಗೆ ಪಾರದರ್ಶಕ ಮತ್ತು ನ್ಯಾಯಯುತ ಬೆಲೆ ಒದಗಿಸಲು ಎಲ್ಲಾ ರೇಷ್ಮೆ ಗೂಡು ಮಾರುಕಟ್ಟೆಗಳಲ್ಲಿ e-Weighment ಹಾಗೂ e-paymet ಅನುಷ್ಠಾನಗೊಳಿಸಲಾಗುವುದು.

ಡಿಜಿಟಲ್ ಗ್ರಂಥಾಲಯ ಸ್ಥಾಪನೆ:  ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ರಾಜ್ಯಾದ್ಯಂತ ಡಿಜಿಟಲ್ ಗ್ರಂಥಾಲಯಗಳನ್ನು ಸ್ಥಾಪಿಸಲಾಗುವುದು  ಹಾಗೂ ಎಲ್ಲಾ ಇಲಾಖೆಗಳ ವತಿಯಿಂದ ಈಗಾಗಲೇ ಸ್ಥಾಪಿಸಿರುವ ಡಿಜಿಟಲ್ ಗ್ರಂಥಾಲಯಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯೊಂದಿಗೆ ಸಂಯೋಜಿಸಲಾಗುವುದು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್‌ ಕೋಚಿಂಗ್:  ಕೆ.ಪಿ.ಎಸ್.ಸಿ., ಯು.ಪಿ.ಎಸ್.ಸಿ., ಎಸ್.ಎಸ್.ಸಿ., ಬ್ಯಾಂಕಿಂಗ್, ರೈಲ್ವೆ, ಸಿ.ಡಿ.ಎಸ್., ಓಇಇಖಿ, ಎಇಇ ಮುಂತಾದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ "ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ" ಎಂಬ ಹೊಸ ಯೋಜನೆಯಡಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ವೇದಿಕೆಯ ಮೂಲಕ ಉಚಿತ ಕೋಚಿಂಗ್ ಸೌಲಭ್ಯವನ್ನು ನೀಡಲಾಗುವುದು.

.ಐಟಿಐಗಳ ಅಭಿವೃದ್ಧಿ: 2021-22 ರ ಅವಧಿಯಲ್ಲಿ 150 ಸರ್ಕಾರಿ ITI ಗಳನ್ನು ಟಾಟಾ ಟೆಕ್ನಾಲಜಿ ಸಹಯೋಗದೊಂದಿಗೆ ಮೇಲ್ದರ್ಜೆಗೇರಿಸಲಾಗಿದೆ. 2022-23 ರ ಅವಧಿಯಲ್ಲಿ ಇನ್ನು 30 ಸರ್ಕಾರಿ ಐಟಿಐಗಳು ಹಾಗೂ ಆಯ್ದ ಪಾಲಿಟೆಕ್ನಿಕ್‌ಗಳನ್ನು ಪಿ.ಪಿ.ಪಿ ಮಾದರಿಯಲ್ಲಿ ಮೇಲ್ದರ್ಜೆಗೇರಿಸಲಾಗುವುದು.

ದೇವನಹಳ್ಳಿ, ಶಿಗ್ಗಾಂವ್ ಮತ್ತು ಮಾಗಡಿ ತಾಲ್ಲೂಕಿನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (GTTC) ಗಳಲ್ಲಿ Aerospace, Precision Engineering, Mechetronics, Electronics ಮತ್ತು Industrial Automation ಕ್ಷೇತ್ರಗಳಲ್ಲಿ ತರಬೇತಿದಾರರಿಗೆ ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗುವುದು.

ಬೀದರ್‌ನಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ 90 ಕೋಟಿ ರೂ.ಗಳ ವೆಚ್ಚದಲ್ಲಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಹಾಗೂ ಟೆಕ್ನಾಲಜಿ (CIPET) ಕೇಂದ್ರವನ್ನು ಆರಂಭಿಸಲಾಗುವುದು

 

 

click me!