Karnataka Budget 2022: ರೈತರ ಜೀವನಾಡಿ ನೀರಾವರಿಗೆ ಬೊಮ್ಮಾಯಿ ಬಂಪರ್ ಕೊಡುಗೆ

Published : Mar 04, 2022, 02:38 PM ISTUpdated : Mar 04, 2022, 02:40 PM IST
Karnataka Budget 2022: ರೈತರ ಜೀವನಾಡಿ ನೀರಾವರಿಗೆ ಬೊಮ್ಮಾಯಿ ಬಂಪರ್ ಕೊಡುಗೆ

ಸಾರಾಂಶ

* ಕರ್ನಾಟಕ ಬಜೆಟ್ 2022-23 * ರೈತರ ಜೀವನಾಡಿ ನೀರಾವರಿಗೆ ಬೊಮ್ಮಾಯಿ ಕೊಡುಗೆ * ಜಲ ಸಂಪನ್ಮೂಲ ಇಲಾಖೆಗೆ ಒಟ್ಟು 20,601 ಕೋಟಿ ರೂ ಘೋಷಣೆ ಮಾಡಿದ ಬೊಮ್ಮಾಯಿ

ಬೆಂಗಳೂರು, (ಮಾ. 04): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದು, ರೈತರ ಜೀವನಾಡಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಜಲ ಸಂಪನ್ಮೂಲ ಇಲಾಖೆಗೆ ಒಟ್ಟು 20,601 ಕೋಟಿ ರೂ ಘೋಷಣೆ ಮಾಡಿದ್ದಾರೆ.

ಅದರಲ್ಲೂ ಪ್ರಮುಖವಾಗಿ ಪ್ರಸ್ತುತ ರಾಜ್ಯಾದ್ಯಂತ  ಸಂಚಲನ ಮೂಡಿಸಿದ ಮೇಕೆದಾಟು ಯೋಜನೆಗೆ (Mekedatu) ಕರ್ನಾಟಕ ಸರ್ಕಾರ 2022ನೇ ಸಾಲಿನಲ್ಲಿ ಭಾರೀ ಮೊತ್ತದ ಅನುದಾನ ಘೋಷಣೆ ಮಾಡಿದೆ. ಅಲ್ಲದೇ ಎತ್ತಿನಹೊಳೆ ಯೋಜನೆ, ಕೃಷ್ಣ ಮೇಲ್ದಂಡೆ ಹಾಗೂ ಳಸಾ ಬಂಡೂರಿ ಯೋಜನೆಗೆ ಅನುದಾನ ನೀಡಿದ್ದಾರೆ. ಹಾಗಾದ್ರೆ, ಯಾವುದಕ್ಕೆ ಎಷ್ಟು ನೀಡಿದ್ದಾರೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.

Karnataka Budget 2022 Live: ತೆರಿಗೆ ಬರೆ ಇಲ್ಲ, ವಾಣಿಜ್ಯ ತೆರಿಗೆ ಹೆಚ್ಚಳ ಪ್ರಸ್ತಾಪವೂ ಇಲ್ಲ!

ಮೇಕೆದಾಟು ಯೋಜನೆಗೆ 1,000 ಕೋಟಿ ರೂ., ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ ರೂ., ಕೃಷ್ಣ ಮೇಲ್ದಂಡೆ 3ನೇ ಹಂತಕ್ಕೆ 5 ಸಾವಿರ ಕೋಟಿ ರೂ. ಹಾಗೂ ಕಳಸಾ ಬಂಡೂರಿ ಯೋಜನೆಗೆ ಸಾವಿರ ಕೋಟಿ ರೂ. ನಿಯೋಜನೆ ಮಾಡುವುದಾಗಿ ಸಿಎಂ ಬೊಮ್ಮಾಯಿ (CM Bommai) ಘೋಷಿಸಿದ್ದಾರೆ.

ಮೇಕೆದಾಟು ಯೋಜನೆಗೆ ಸಾವಿರ ಕೋಟಿ ರೂ. ಅನುದಾನ ಮೀಸಲಿಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಾಯತ್ರೆಗೆ ಟಕ್ಕರ್‌ ನೀಡಿದ್ದಾರೆ.

* ಕಳಸಾ ಬಂಡೂರಿ ಯೋಜನೆಗೆ 1000 ಕೋಟಿ ರು ಅನುದಾನ 
* ಮೇಕೇದಾಟು ಯೋಜನೆ ಅನುಷ್ಠಾನಕ್ಕೆ 1000 ಕೋಟಿ ರು ಅನುದಾನ
 * ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ 3000 ಕೋಟಿ ರು ಮಂಜೂರು 
* ಭದ್ರಾ ಮೇಲ್ದಂಡೆ ಯೋಜನೆಗೆ 3000 ಕೋಟಿ ರು ಮಂಜೂರು 
* ಎತ್ತಿನ ಹೊಳೆ ಯೋಜನೆಗೆ 3000 ಕೋಟಿ ರು ಮಂಜೂರು 
* 2 ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನೀರು ಸಂಪರ್ಕ ಒದಗಿಸಲಾಗುವುದು, ನಲ್ಲಿಗಳ ಮೂಲಕ ನೀರು ಸಂಪರ್ಕ ಒದಗಿಸಲಾಗುವುದು. * * ಕುಡಿಯುವ ನೀರು ಸಂಪರ್ಕಕ್ಕೆ 2022-23ರಲ್ಲಿ 7,000 ಕೋಟಿ ರೂ. ವೆಚ್ಚದಲ್ಲಿ ನಲ್ಲಿ ನೀರು ನೀಡಲಾಗುವುದು.
 * ಗಂಗಾಕಲ್ಯಾಣ ಯೋಜನೆಗೆ 1115 ಸಾವಿರ ಕೋಟಿ ರೂಪಾಯಿ.

* ತುಂಗಭದ್ರಾ ಜಲಾಶಯದ ನೀರು ಸಂಗ್ರಹಣೆ ಕೊರತೆ ಸರಿದೂಗಿಸಲು ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ 1,000 ಕೋಟಿ ರೂ. ಅನುದಾನವನ್ನು ಬಸವರಾಜ ಬೊಮ್ಮಾಯಿ ನೀಡಿದ್ದಾರೆ.

* ಕೇಂದ್ರ ಸರ್ಕಾರವು PMKSY-AIBP ಅಡಿಯಲ್ಲಿ ಸನ್ನತಿ ಏತ ನೀರಾವರಿ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1 ಮತ್ತು 2ರಲ್ಲಿನ ಬೂದಿಹಾಳ, ಪೀರಾಪುರ, ನಂದವಾಡಗಿ, ನಾರಾಯಣಪುರ ಬಲದಂಡೆ (9ಎ) ಕಾಲುವೆ ಯೋಜನೆ ಅನುಷ್ಠಾನಕ್ಕೆ ಕ್ರಮ.

* ಪ್ರಗತಿಯಲ್ಲಿರುವ 14 ನೀರಾವತಿ ಯೋಜನೆ ಪೂರ್ಣಗೊಳಿಸಿ 35,319 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ.

* 2021-22ನೇ ಸಾಲಿನಲ್ಲಿ ಅನುಮೋದಿಸಿದ 8,774 ಕೋಟಿ ರೂ.ಗಳ ಹೊಸ ನೀರಾವರಿ ಯೋಜನೆಗಳಿಗೆ ರೂಪುರೇಷ ಸಿದ್ಧಪಡಿಸಲು ಕ್ರಮ.

* ನದಿಗಳಿಗೆ ಹಿಮ್ಮುಖವಾಗಿ ನುಗ್ಗುವ ಉಪ್ಪು ನೀರು ತಡೆಗಟ್ಟಲು ಖಾರ್‌ಲ್ಯಾಂಡ್ ಯೋಜನೆ ಅನುಷ್ಠಾನ. ಪ್ರಸ್ತುತ ಉತ್ತರ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದ್ದು, ದಕ್ಷಿಣ ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ಅನುಷ್ಠಾನ.

* ರಾಜ್ಯದ ಕೆರೆಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ಕ್ರಿಯಾ ಯೋಜನೆ, ಇದರಲ್ಲಿ ಪ್ರವಾಹದಿಂದ ಹಾನಿಯಾದ ಕೆರೆಗಳ ದುರಸ್ತಿಗೆ 200 ರೂ. ಅನುದಾನ.

* ಕಾಳಿ ನದಿಯಿಂದ ನೀರನ್ನು ಬಳಸಿಕೊಂಡು ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಲು ಕ್ರಮ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ