Karnataka Budget 2022: ಮೀನುಗಾರಿಕೆ ಕ್ಷೇತ್ರಕ್ಕೆ "ಮತ್ಸ್ಯ ಸಿರಿ" ಎಂಬ ವಿ‍ಶೇಷ ಯೋಜನೆ  ಘೋಷಿಸಿದ ಬೊಮ್ಮಾಯಿ

By Suvarna NewsFirst Published Mar 4, 2022, 4:16 PM IST
Highlights

ಕರ್ನಾಟಕ ಬಜೆಟ್ 2022-23 ಘೋಷಣೆ ಮಾಡಿದ್ದು, ಮೀನುಗಾರಿಕಾ ಕ್ಷೇತ್ರಕ್ಕೆ 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯೊಂದಿಗೆ ಸಂಯೋಜಿಸಿ “ಮತ್ಸ್ಯ ಸಿರಿ” ಎಂಬ ವಿಶೇಷ ಯೋಜನೆ  ರೂಪಿಸಲಾಗಿದೆ. 

ಬೆಂಗಳೂರು(ಮಾ.4): ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ   (CM Basavaraj Bommai)  ಅವರು ಕರ್ನಾಟಕ ಬಜೆಟ್ 2022-23 ಘೋಷಣೆ ಮಾಡಿದ್ದು,   ಮೀನುಗಾರಿಕಾ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.  100 ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯೊಂದಿಗೆ ಸಂಯೋಜಿಸಿ “ಮತ್ಸ್ಯ ಸಿರಿ” (mathsya siri) ಎಂಬ ವಿಶೇಷ ಯೋಜನೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ರೂಪಿಸಲಾಗುವುದು ಎಂದು  ಇದೇ ವೇಳೆ ಹೇಳಿದ್ದಾರೆ.

ಮೀನುಗಾರಿಕಾ (fisheries) ಕ್ಷೇತ್ರಕ್ಕೆ ವಿವಿಧ ಯೋಜನೆಗಳನ್ನು ಘೋಷಿಸಿರುವ ಬಸವರಾಜ್ ಬೊಮ್ಮಾಯಿ , 300 ಕಿ.ಮೀ.ಗೂ ಹೆಚ್ಚು ಉದ್ದದ ಕರಾವಳಿ ತೀರವನ್ನು ಹೊಂದಿರುವ ಕರ್ನಾಟಕದಲ್ಲಿ ಪ್ರಸ್ತುತ ಬಹುತೇಕ ಮೀನು ಉತ್ಪಾದನೆಯು ತೀರ ಸಮೀಪದ ನೀರಿನಲ್ಲಿಯೇ ಆಗುತ್ತಿದ್ದು, ಆಳಸಮುದ್ರ ಮೀನುಗಾರಿಕೆಯಲ್ಲಿ ಸಾಮರ್ಥ್ಯ ವೃದ್ಧಿಗೆ ವಿಫುಲ ಅವಕಾಶಗಳಿವೆ. ಈ ನಿಟ್ಟಿನಲ್ಲಿ ಆಳಸಮುದ್ರ ಮೀನುಗಾರಿಕೆಯನ್ನು ಇನ್ನಷ್ಟು ಪ್ರಚುರ ಪಡಿಸಿ, ವಿಶಿಷ್ಟ ತಳಿಗಳ ಮೀನು ಮತ್ತು ಚಿಪ್ಪು ಮೀನುಗಳ ಉತ್ಪಾದನೆಯ ಮೂಲಕ ಮೀನುಗಾರರ ಆದಾಯವನ್ನು ಹೆಚ್ಚಿಸಲು ನಮ್ಮ ಸರ್ಕಾರ ಮುಂದಾಗಿದೆ.  ಈ     ಹಿನ್ನೆಲೆಯಲ್ಲಿ 100  ಆಳ ಸಮುದ್ರ ಮೀನುಗಾರಿಕಾ ದೋಣಿಗಳಿಗೆ (Deep Sea Fishing Boat) ಪ್ರಧಾನಮಂತ್ರಿ ಮತ್ಸ್ಯ ಸಂಪದ  ಯೋಜನೆಯೊಂದಿಗೆ ಸಂಯೋಜಿಸಿ  “ಮತ್ಸ್ಯ ಸಿರಿ” ಎಂಬ ವಿಶೇಷ     ಯೋಜನೆ ರಾಜ್ಯದಲ್ಲಿ      ಮೊಟ್ಟ       ಮೊದಲ       ಬಾರಿಗೆ ರೂಪಿಸಲಾಗುವುದು ಎಂದಿದ್ದಾರೆ.

Karnataka Budget 2022-23: ನಿರೀಕ್ಷೆಯಂತೆಯೇ ಬಜೆಟ್‌ನಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಗುಡ್ ನ್ಯೂಸ್

ಪ್ರಸಕ್ತ ಸಾಲಿನಲ್ಲಿ 5,000 ವಸತಿ ರಹಿತ  ಮೀನುಗಾರರಿಗೆ ರಾಜೀವ್ ಗಾಂಧಿ  ವಸತಿ ನಿಗಮದ ಮೂಲಕ ಆದ್ಯತೆ ಮೇರೆಗೆ ಮನೆಗಳನ್ನು ನಿರ್ಮಿಸಲಾಗುವುದು. 

ರಾಜ್ಯದ 8 ಮೀನುಗಾರಿಕೆ ಬಂದರುಗಳಲ್ಲಿ ಮೀನುಗಾರಿಕಾ ದೋಣಿಗಳು ಸುಗಮವಾಗಿ ಮತ್ತು ವೇಗವಾಗಿ ಚಲಿಸಲು ಅನುಕೂಲವಾಗಿಸಲು ನ್ಯಾವಿಗೇಷನ್  ಚಾನಲ್‌ಗಳಲ್ಲಿ     ಹಂತ ಹಂತವಾಗಿ ಹೂಳು ಎತ್ತಲಾಗುವುದು (Dredging) ಎಂದು ಈ ಬಾರಿಯ ಬಜೆಟ್ ನಲ್ಲಿ ರಾಜ್ಯ ಸರಕಾರ ಘೋಷಿಸಿದೆ.

ರಾಜ್ಯದ ಆಯ್ದ ಗ್ರಾಮ ಪಂಚಾಯಿತಿ ಕೆರೆಗಳಲ್ಲಿ ಪ್ರತಿ ಕೆರೆಯ ಜಲವಿಸ್ತೀರ್ಣಕ್ಕನುಗುಣವಾಗಿ ಮೀನು   ಮರಿಗಳನ್ನು ಉಚಿತವಾಗಿ ದಾಸ್ತಾನು ಮಾಡಿ  ಮೀನು   ಕೃಷಿಯನ್ನು ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ.  

ಗ್ರಾಮೀಣ     ಪ್ರದೇಶದಲ್ಲಿ ಜಾನುವಾರುಗಳ ಆರೋಗ್ಯ ರಕ್ಷಣೆಯು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ            ಪಶು  ಚಿಕಿತ್ಸಾಲಯಗಳನ್ನು ಬಲಪಡಿಸುವುದರೊಂದಿಗೆ  ನೂತನ 100 ಪಶುಚಿಕಿತ್ಸಾಲಯಗಳನ್ನು ಹಂತ   ಹಂತವಾಗಿ ಪ್ರಾರಂಭಿಸಲಾಗುವುದು.  ಖಾಲಿಯಿರುವ 400 ಪಶು ವೈದ್ಯಾಧಿಕಾರಿ    ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಕ್ರಮವಹಿಸಲಾಗಿದೆ.

KARNATAKA EDUCATION BUDGET 2022: ಶೈಕ್ಷಣಿಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಸರಕಾರಿ ಶಾಲೆಗಳ ಅಭಿವೃದ್ದಿಗೆ 500 ಕೋ.

ರೈತರ ಜೀವನಾಡಿ ನೀರಾವರಿಗೆ ಬೊಮ್ಮಾಯಿ ಬಂಪರ್ ಕೊಡುಗೆ: ರೈತರ ಜೀವನಾಡಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಜಲ ಸಂಪನ್ಮೂಲ ಇಲಾಖೆಗೆ ಒಟ್ಟು 20,601 ಕೋಟಿ ರೂ ಘೋಷಣೆ ಮಾಡಿದ್ದಾರೆ.

ಮೇಕೆದಾಟು ಯೋಜನೆಗೆ 1,000 ಕೋಟಿ ರೂ., ಎತ್ತಿನಹೊಳೆ ಯೋಜನೆಗೆ 3 ಸಾವಿರ ಕೋಟಿ ರೂ., ಕೃಷ್ಣ ಮೇಲ್ದಂಡೆ 3ನೇ ಹಂತಕ್ಕೆ 5 ಸಾವಿರ ಕೋಟಿ ರೂ. ಹಾಗೂ ಕಳಸಾ ಬಂಡೂರಿ ಯೋಜನೆಗೆ ಸಾವಿರ ಕೋಟಿ ರೂ. ನಿಯೋಜನೆ ಮಾಡುವುದಾಗಿ ಸಿಎಂ ಬೊಮ್ಮಾಯಿ (CM Bommai) ಘೋಷಿಸಿದ್ದಾರೆ.

ಮೇಕೆದಾಟು ಯೋಜನೆಗೆ ಸಾವಿರ ಕೋಟಿ ರೂ. ಅನುದಾನ ಮೀಸಲಿಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಾಯತ್ರೆಗೆ ಟಕ್ಕರ್‌ ನೀಡಿದ್ದಾರೆ.

* ಕಳಸಾ ಬಂಡೂರಿ ಯೋಜನೆಗೆ 1000 ಕೋಟಿ ರು ಅನುದಾನ 
* ಮೇಕೇದಾಟು ಯೋಜನೆ ಅನುಷ್ಠಾನಕ್ಕೆ 1000 ಕೋಟಿ ರು ಅನುದಾನ
 * ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ 3000 ಕೋಟಿ ರು ಮಂಜೂರು 
* ಭದ್ರಾ ಮೇಲ್ದಂಡೆ ಯೋಜನೆಗೆ 3000 ಕೋಟಿ ರು ಮಂಜೂರು 
* ಎತ್ತಿನ ಹೊಳೆ ಯೋಜನೆಗೆ 3000 ಕೋಟಿ ರು ಮಂಜೂರು 
* 2 ವರ್ಷದಲ್ಲಿ 25 ಲಕ್ಷ ಮನೆಗಳಿಗೆ ನೀರು ಸಂಪರ್ಕ ಒದಗಿಸಲಾಗುವುದು, ನಲ್ಲಿಗಳ ಮೂಲಕ ನೀರು ಸಂಪರ್ಕ ಒದಗಿಸಲಾಗುವುದು. * * ಕುಡಿಯುವ ನೀರು ಸಂಪರ್ಕಕ್ಕೆ 2022-23ರಲ್ಲಿ 7,000 ಕೋಟಿ ರೂ. ವೆಚ್ಚದಲ್ಲಿ ನಲ್ಲಿ ನೀರು ನೀಡಲಾಗುವುದು.
 * ಗಂಗಾಕಲ್ಯಾಣ ಯೋಜನೆಗೆ 1115 ಸಾವಿರ ಕೋಟಿ ರೂಪಾಯಿ.

* ತುಂಗಭದ್ರಾ ಜಲಾಶಯದ ನೀರು ಸಂಗ್ರಹಣೆ ಕೊರತೆ ಸರಿದೂಗಿಸಲು ನವಲೆ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ 1,000 ಕೋಟಿ ರೂ. ಅನುದಾನವನ್ನು ಬಸವರಾಜ ಬೊಮ್ಮಾಯಿ ನೀಡಿದ್ದಾರೆ.

* ಕೇಂದ್ರ ಸರ್ಕಾರವು PMKSY-AIBP ಅಡಿಯಲ್ಲಿ ಸನ್ನತಿ ಏತ ನೀರಾವರಿ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-1 ಮತ್ತು 2ರಲ್ಲಿನ ಬೂದಿಹಾಳ, ಪೀರಾಪುರ, ನಂದವಾಡಗಿ, ನಾರಾಯಣಪುರ ಬಲದಂಡೆ (9ಎ) ಕಾಲುವೆ ಯೋಜನೆ ಅನುಷ್ಠಾನಕ್ಕೆ ಕ್ರಮ.

* ಪ್ರಗತಿಯಲ್ಲಿರುವ 14 ನೀರಾವತಿ ಯೋಜನೆ ಪೂರ್ಣಗೊಳಿಸಿ 35,319 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ.

* 2021-22ನೇ ಸಾಲಿನಲ್ಲಿ ಅನುಮೋದಿಸಿದ 8,774 ಕೋಟಿ ರೂ.ಗಳ ಹೊಸ ನೀರಾವರಿ ಯೋಜನೆಗಳಿಗೆ ರೂಪುರೇಷ ಸಿದ್ಧಪಡಿಸಲು ಕ್ರಮ.

* ನದಿಗಳಿಗೆ ಹಿಮ್ಮುಖವಾಗಿ ನುಗ್ಗುವ ಉಪ್ಪು ನೀರು ತಡೆಗಟ್ಟಲು ಖಾರ್‌ಲ್ಯಾಂಡ್ ಯೋಜನೆ ಅನುಷ್ಠಾನ. ಪ್ರಸ್ತುತ ಉತ್ತರ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿದ್ದು, ದಕ್ಷಿಣ ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ಅನುಷ್ಠಾನ.

* ರಾಜ್ಯದ ಕೆರೆಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ಕ್ರಿಯಾ ಯೋಜನೆ, ಇದರಲ್ಲಿ ಪ್ರವಾಹದಿಂದ ಹಾನಿಯಾದ ಕೆರೆಗಳ ದುರಸ್ತಿಗೆ 200 ರೂ. ಅನುದಾನ.

* ಕಾಳಿ ನದಿಯಿಂದ ನೀರನ್ನು ಬಳಸಿಕೊಂಡು ಉತ್ತರ ಕರ್ನಾಟಕದ 5 ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಲು ಕ್ರಮ. 

 

click me!