'ಒಂದು ಪೈಸೆ ತೆರಿಗೆ ಹಾಕಿಲ್ಲ, ಇದೊಂದು ಸರ್ವವ್ಯಾಪಿ ಬಜೆಟ್'

By Suvarna News  |  First Published Mar 8, 2021, 3:55 PM IST

ಬಜೆಟ್  ಮಂಡಿಸಿದ ಸಿಎಂ ಬಿಎಸ್ ಯಡಿಯೂರಪ್ಪ/ ಕೃಷಿ ಕ್ಷೇತ್ರಕ್ಕೆ ಭರಪೂರ ಕೊಡುಗೆ/ ಸಮತೋಲಿತ ಬಜೆಟ್ ಎಂದ ಸಿಎಂ/ ಸವಾಲುಗಳ ನಡುವೆ ಎಲ್ಲ ಕ್ಷೇತ್ರಕ್ಕೂ ಅನುನಾದ ನೀಡಿದ್ದೇವೆ/ ಜಿಲ್ಲಾವಾರು ವಿಶೇಷ ಯೋಜನೆ ನೀಡಿದ್ದು ಸಮತೋಲನೆ ಕಾಯ್ದುಕೊಳ್ಳಲಾಗಿದೆ


ಬೆಂಗಳೂರು(ಮಾ.  08)  ಬಜೆಟ್ ಮಂಡಿಸಿದ ಯಡಿಯೂರಪ್ಪ ಸುದ್ದಿಗೋಷ್ಠಿ ನಡೆಸಿದ್ದಾರೆ. ಅತ್ಯಂತ ಸಂಕಷ್ಟದ ಸಂದರ್ಭದಲ್ಲಿ ಮಂಡನೆಯಾದ ಬಜೆಟ್ ಇದು. ನೈಸರ್ಕಿಗ ವಿಕೋಪ, ಕೊರೋನಾ ಕಾರಣಕ್ಕೆ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದವು. ಲಾಕ್ ಡೌನ್ ಮತ್ತಿತರ ಕಾರಣಕ್ಕೆ ಆರ್ಥಿಕ ಚಟುವಟಿಕೆ ನಡೆಯದೆ ರಾಜಸ್ವ ಸಂಗ್ರಹಕ್ಕೆ ಪೆಟ್ಟು ಬಿದ್ದಿದೆ. ಆದರೆ ಧ್ರತಿಗೆಡದೆ ಸಂಬಳ ಇತ್ಯಾದಿ ಸಕಾಲದಲ್ಲಿ ಪಾವತಿಸಿ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ.

ಈ ಬಾರಿಯ ಆರ್ಥಿಕ ಸಾಧನೆ ಮಾರ್ಚ್ ಕೊನೆಗೆ ಶೇ.  94  ರಷ್ಟು ಸಾಧನೆಯಾಗಲಿದೆ. ಈ ಸಂಕಷ್ಟದ ಸಮಯದಲ್ಲಿಯೂ ಇದು ಆಶಾಭಾವನೆ ಮೂಡಿಸಿದೆ. ಅಭಿವೃದ್ಧಿ ಮತ್ತು ಜನಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಕೊರತೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.

Latest Videos

undefined

ಕರ್ನಾಟಕ ಬಜೆಟ್ ಸಮಗ್ರ ಮಾಹಿತಿ; ಯಾವ ಕ್ಷೇತ್ರಕ್ಕೆ ಎಷ್ಟು? 

ಇದು ಸಂಕಷ್ಟದ ಸವಾಲುಗಳಿಗೆ ಪರಿಹಾರವಾಗಬಲ್ಲ ಸಮತೋಲಿತ ಬಜೆಟ್. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸಹ ಸರ್ವವ್ಯಾಪಿ, ಸರ್ವಸ್ಪರ್ಶಿ ಬಜೆಟ್ ಮಂಡನೆ ಪ್ರಯತ್ನ ಮಾಡಿದ್ದೇನೆ. ಕಳೆದ ಬಾರಿಗಿಂತ ಎಂಟು ಸಾವಿರ ಕೋಟಿ ಹೆಚ್ಚುವರಿ ಗಾತ್ರದ ಬಜೆಟ್ ಇದಾಗಿದೆ.  ಬಜೆಟ್ ಗಾತ್ರ ಶೇ.  3.5 ಹೆಚ್ಚಳವಾಗಿದೆ. ಯಾವುದರ ಮೇಲೂ ಒಂದು ಪೈಸೆ ತೆರಿಗೆ ಹಾಕಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಇದೊಂದು ದಾಖಲೆ. ಹೆಚ್ಚುವರಿ ತೆರಿಗೆ ಹಾಕದೆ ಬಜೆಟ್ ಮಂಡನೆ ಮಾಡಿದ್ದೇನೆ ಎಂದರು.

ಆಯವ್ಯಯದಲ್ಲಿ ಎಲ್ಲ ವಲಯ, ಎಲ್ಲ ಜಿಲ್ಲೆಗಳಿಗೆ ಒಂದೆರಡು ವಿಶೇಷ ಕಾರ್ಯಕ್ರಮ ನೀಡಿ ಸಮತೋಲನೆ ಕಾಯ್ದುಕೊಳ್ಳುವ ಯತ್ನ ಮಾಡಲಾಗಿದೆ. ಮಹಿಳೆಯರ ಸ್ವಾವಲಂಬನೆ, ಸುರಕ್ಷತೆ ಮತ್ತು ಅಭ್ಯುದಯಕ್ಕೆ ಈ ಬಜೆಟ್ ಪೂರಕವಾಗಿದೆ. ಉದ್ಯೋಗಸ್ಥ ಮಹಿಳೆಯರಿಗೆ ಆದ್ಯತೆ ನೀಡಲಾಗಿದ್ದು ಅವರನ್ನು ದೇಶಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಲಾಗಿದೆ. ಸಂಜೀವಿನಿ ವ್ಯಾಪ್ತಿಯಲ್ಲಿ ಗ್ರಾಮೀಣ ಮಹಿಳೆಯರಿಗೆ ನೆರವು ನೀಡಲಾಗಿದೆ ಎಂದು ತಿಳಿಸಿದರು. 

ನಗರ ಪ್ರದೇಶದ ಅಂಗನವಾಡಿ ಕೇಂದ್ರಗಳನ್ನು ಶಿಶುಪಾಲನಾ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಬಸ್ ಬಾಸ್ ನೀಡಲಾಗುತ್ತಿದೆ ಎಂದು ಪುರುಚ್ಚಾರ ಮಾಡಿದರು.

ಈ ಬಜೆಟ್ ನಲ್ಲಿ  ಶಿಕ್ಷಣ ಇಲಾಖೆ - 29,688 ಕೋಟಿ,  ನಗರಾಭಿವೃದ್ಧಿ ಇಲಾಖೆ - 27,386 ಕೋಟಿ ,  ಜಲಸಂಪನ್ಮೂಲ ಇಲಾಖೆ - 21,181 ಕೋಟಿ,  ಇಂಧನ ಇಲಾಖೆ - 16,516 ಕೋಟಿ ರೂ., - ಗ್ರಾಮೀಣಾಭಿವೃದ್ಧಿ ಇಲಾಖೆ - 16,036 ಕೋಟಿ, - ಕಂದಾಯ ಇಲಾಖೆ - 12,384 ಕೋಟಿ ರೂ, ಆರೋಗ್ಯ ಇಲಾಖೆ - 11,908 ಕೋಟಿ ರೂ,  ಒಳಾಡಳಿತ ಮತ್ತು ಸಾರಿಗೆ - 10,330 ಕೋಟಿ ರೂ, - ಲೋಕೋಪಯೋಗಿ ಇಲಾಖೆ - 10,256 ಕೋಟಿ ರೂ,  ಸಮಾಜ ಕಲ್ಯಾಣ ಇಲಾಖೆ - 8,864 ಕೋಟಿ ರೂ,  ಕೃಷಿ/ತೋಟಗಾರಿಕೆ ಇಲಾಖೆ - 7,297 ಕೋಟಿ ರೂ.  ಮಹಿಳಾ  ಮತ್ತು ಮಕ್ಕಳ ಕಲ್ಯಾಣ ಇಲಾಖೆ - 4,531 ಕೋಟಿ ರೂ.  ವಸತಿ ಇಲಾಖೆ - 2,290 ಕೋಟಿ ರೂ.,  ಆಹಾರ ಇಲಾಖೆ - 2,374 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.

ಕೃಷ್ಣಾ ಮೇಲ್ದಂಡೆ, ಎತ್ತಿನಹೊಳೆ, ಮಹಾದಾಯಿ, ಮೇಕೆದಾಟು,  ಭದ್ರಾ ಮೇಲ್ದಂಡೆ ಯೋಜನೆ ತ್ವರಿತ ಅನುಷ್ಠಾನಕ್ಕೆ ಆದ್ಯತೆ. ಕೊಪ್ಪಳದ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಪಶ್ಚಿಮ ವಾಹಿನಿಗೂ ಹಣ ಮೀಸಲಿಡಲಾಗಿದೆ ಎಂದು ತಿಳಿಸಿದರು. 

ಹಿಂದುಳಿದ ವರ್ಗ ಕಲ್ಯಾಣ ಮತ್ತು ಅಲ್ಪಸಂಖ್ಯಾತರಿಗೆ ಅನುದಾನ ಮೀಸಲಿಡಲಾಗಿದೆ. ಮನೆಗಳ ನಿರ್ಮಾಣಕ್ಕೆ ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ  1.5 ಸಾವಿರ ಕೋಟಿ ಅನುದಾನ ನೀಡಿದ್ದೇವೆ ಎಂದು ತಿಳಿಸಿದರು.

"

click me!