ಕರ್ನಾಟಕ ಬಜೆಟ್ 2020 : ಪ್ರತೀ ಇಲಾಖೆಗೆ ಸಿಕ್ಕ ಅನುದಾನದ ಸಂಪೂರ್ಣ ಮಾಹಿತಿ

By Suvarna News  |  First Published Mar 5, 2020, 3:01 PM IST

ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು (ಗುರುವಾರ) ಒಟ್ಟು 2,37,893 ಕೋಟಿ ರೂ. ಗಾತ್ರದ ರಾಜ್ಯ ಬಜೆಟ್ ಮಂಡಿಸಿದರು. ಇನ್ನು ಯಾವ ಇಲಾಖೆಗೆ ಎಷ್ಟೇಷ್ಟು ಅನುದಾನ ಸಿಕ್ಕಿದೆ ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.


ಬೆಂಗಳೂರು, (ಮಾ.05):  1 ಗಂಟೆ 40 ನಿಮಿಷದಲ್ಲಿ ರಾಜ್ಯದ ಆಯವ್ಯಯ ಮಂಡಿಸುವ ಮೂಲಕ ಯಡಿಯೂರಪ್ಪ ಅವರು ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ಬಜೆಟ್ ಓದಿದ ಸಿಎಂ ಎನ್ನುವ ದಾಖಲೆ ಬರೆದರು. 

"

Tap to resize

Latest Videos

ನೆರೆ, ಬರದಿಂದ 30 ಸಾವಿರ ಕೋಟಿ ನಷ್ಟ. ಕೇಂದ್ರದಿಂದ ಬರಬೇಕಿರುವ GST ಬಾಕಿ  ಇರುವ 6500 ಕೋಟಿ ರೂ.ಗೆ ಖೋತಾ, ತೆರಿಗೆ ರೂಪದಲ್ಲಿ ಕೇಂದ್ರದಿಂದ 10 ಸಾವಿರ ಕೋಟಿಗೆ ಕೊಕ್,  ರಾಜ್ಯದ ತೆರಿಗೆ ಸಂಗ್ರಹದಲ್ಲಿ 7 ಸಾವಿರ ಕೋಟಿ ಇಳಿಕೆ. ಈ ಸವಾಲುಗಳ ಮಧ್ಯೆ ಸಿಎಂ ಯಡಿಯೂರಪ್ಪ ಸಮಾಧಾನಕರ ಬಜೆಟ್ ಮಂಡಿಸಿದರು.

Karnataka Budget 2020 Live | ಕೃಷಿಕರಿಗೆ ಖುಷಿ, ಮದ್ಯಪ್ರಿಯರಿಗೆ ಶಾಕ್..!

 ಕುಮಾರಸ್ವಾಮಿ ಅವರು 2019-20ನೇ‌ ಸಾಲಿಗೆ 2 ಲಕ್ಷದ 34 ಸಾವಿರದ 154 ಕೋಟಿ ರೂ ಬಜೆಟ್ ಮಂಡಿಸಿದ್ದರು. ಇದೀಗ ಯಡಿಯೂರಪ್ಪ ಹೊಸ ಯೋಜನೆಗಳ ಘೋಷಣೆ ಮಾಡದೇ, ಹಳೆ ಭಾಗ್ಯ ಯೋಜನೆಗಳ ಕಡಿತ ಮಾಡದೇ 2 ಲಕ್ಷ 37 ಸಾವಿರ 893 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದರು.

ಕರ್ನಾಟಕ ಬಜೆಟ್ 2020: ಯಾವುದು ಏರಿಕೆ? ಯಾವುದು ಇಳಿಕೆ?

ಯಾವ ಇಲಾಖೆಗೆ ಎಷ್ಟು ಅನುದಾನ..?
1.ಶಿಕ್ಷಣ ಇಲಾಖೆ- 29,768 ಕೋಟಿ ರೂ. 
2.ನಗರಾಭಿವೃದ್ಧಿ ಇಲಾಖೆ- 27,952 ಕೋಟಿ ರೂ.
3.ಜಲಸಂಪನ್ಮೂಲ ಇಲಾಖೆ- 21,308 ಕೋಟಿ ರೂ.
4.ಇಂಧನ ಇಲಾಖೆ- 17, 290 ಕೋಟಿ ರೂ.
5.ಗ್ರಾಮೀಣಾಭಿವೃದ್ಧಿ ಇಲಾಖೆ- 15.595 ಕೋಟಿ ರೂ.
6.ಕಂದಾಯ ಇಲಾಖೆ- 11, 860 ಕೋಟಿ ರೂ.
7.ಲೋಕೋಪಯೋಗಿ ಇಲಾಖೆ- 11, 463 ಕೋಟಿ  ರೂ
8.ಆರೋಗ್ಯ ಇಲಾಖೆ- 10, 122 ಕೋಟಿ ರೂ.
9.ಸಾರಿಗೆ, ಒಳಾಡಳಿತ ಇಲಾಖೆ- 10, 108 ಕೋಟಿ ರೂ.
10.ಸಮಾಜ ಕಲ್ಯಾಣ ಇಲಾಖೆ- 9,444 ಕೋಟಿ ರೂ.
11.ಕೃಷಿ & ತೋಟಗಾರಿಕೆ ಇಲಾಖೆ- 7,889 ಕೋಟಿ ರೂ.
12.ಮಹಿಳೆ & ಮಕ್ಕಳ ಕಲ್ಯಾಣ ಇಲಾಖೆ- 4,650 ಕೋಟಿ ರೂ
13.ವಸತಿ ಇಲಾಖೆ- 2,971 ಕೋಟಿ ರೂ.
14.ಆಹಾರ ಇಲಾಖೆ- 2,668 ಕೋಟಿ ರೂ.
15.ಇತರೆ ಇಲಾಖೆ- 84,023 ಕೋಟಿ ರೂ.

ಮಾರ್ಚ್ 4ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!