ರಾಜ್ಯದಲ್ಲಿ ಮೈತ್ರಿ ಸರಕಾರದ ಪತನದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಗುರುವಾರ (ಮಾ.5) ಮೊದಲ ಬಜೆಟ್‌ನ್ನು ಯಡಿಯೂರಪ್ಪ ಮಂಡಿಸಿದರು. 2020-21ರ ಸಾಲಿನ ರಾಜ್ಯ ಬಜೆಟ್‌ನಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಲವು ಯೋಜನೆಗಳನ್ನ ನೀಡಿದ್ದಾರೆ.
ಬೆಂಗಳೂರು, (ಮಾ.05): ಸಿಎಂ ಬಿಎಸ್ ಯಡಿಯೂರಪ್ಪ ಅವರು ಗುರುವಾರ ಒಟ್ಟು 2,37,893 ಕೋಟಿ ರೂ. ಗಾತ್ರದ ರಾಜ್ಯ ಬಜೆಟ್ ಮಂಡಿಸಿದರು.
1 ಗಂಟೆ 40 ನಿಮಿಷದಲ್ಲಿ ರಾಜ್ಯದ ಆಯವ್ಯಯ ಮಂಡಿಸುವ ಮೂಲಕ ಯಡಿಯೂರಪ್ಪ ಅವರು ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ಬಜೆಟ್ ಓದಿದ ಸಿಎಂ ಎನ್ನುವ ದಾಖಲೆ ಬರೆದರು.
undefined
Karnataka Budget 2020 Live | ಅಡಿಕೆ ಬೆಳಗಾರರಿಗೆ ಬಡ್ಡಿ ಬಂಪರ್! .
ಇನ್ನು ರಾಜ್ಯ ಬಜೆಟ್‌ನಲ್ಲಿ ಯಡಿಯೂರಪ್ಪ ಅವರು ಮಹಿಳಾ ಮತ್ತು ಮಕ್ಕಳಿಗಾಗಿ ವಿಶೇಷ ಕೊಡುಗೆಗಳನ್ನ ಘೋಷಿಸಿದ್ದಾರೆ. ಅವುಗಳು ಈ ಕೆಳಗಿನಂತಿವೆ.
* ಬೆಂಗಳೂರಿನಲ್ಲಿ ಸೀಮಿತ್ತವಾಗಿದ್ದ ಸುರಕ್ಷಾ ಆ್ಯಪ್ ರಾಜ್ಯಾದ್ಯಂತ ವಿಸ್ತರಣೆ
* ಮಹಿಳಾ ಸುರಕ್ಷತೆಗಾಗಿ ಪಿಂಕ್ ಹೊಯ್ಸಳ
* ಹೊಸದಾಗಿ 75 ಹೊಯ್ಸಳ ವಾಹನ ಖರೀದಿ
* ರಿಯಾಯಿತಿ ದರದಲ್ಲಿ ಮಹಿಳೆಯರಿಗೆ ಸ್ವಯಂ ರಕ್ಷಣಾ ತರಬೇತಿ
* ಪೊಲೀಸ್ ತರಬೇತಿ ಕೇಂದ್ರ, ಸಿಎಆರ್, ಡಿಎಆರ್ ಕೇಂದ್ರದಲ್ಲಿ ತರಬೇತಿ
* ಮೀನಮ್ಮನಿಗೆ ಬೈಕ್(1000 ಮಹಿಳಾ ಮೀನುಗಾರರಿಗೆ ಬೈಕ್ ಸ್ಕೀಮ್)
* ಗಾರ್ಮೆಂಟ್ಸ್ ಮಹಿಳೆಯರಿಗೆ BMTC ಉಚಿತ ಬಸ್ ಪಾಸ್ (1 ಲಕ್ಷ ಮಹಿಳೆಯರಿಗೆ ಮಾಸಿಕ ಬಸ್ ಪಾಸ್ ಉಚಿತ)
* ಅಂಧ ತಾಯಂದಿರಿಗೆ ಮಾಸಿಕ 2000 ರೂ. ಶಿಶುಪಾಲನಾ ಭತ್ಯೆ (ಮಗುವಿನ ಐದು ವರ್ಷ ಪೂರೈಸುವವರೆಗೆ ಭತ್ಯೆ)
ಮಕ್ಕಳ ಬಜೆಟ್..!
* ಭಾಗ್ಯಲಕ್ಷ್ಮೀ ಯೋಜನೆ ಮುಂದುವರಿಕೆ
* ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮುಂದುವರಿಕೆ
* ಮಕ್ಕಳ ಬ್ಯಾಗ್ ಹೊರೆ ತಪ್ಪಿಸಲು ಕ್ರಮ (ಪ್ರತಿ ತಿಂಗಳ 2 ಶನಿವಾರ ಬ್ಯಾಗ್ ರಹಿತ ದಿನ)
* 500 ಅಂಧ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ಕಿಟ್( ತಲಾ 25,000 ರೂ.ಗಳ ಮೊತ್ತದ ಟಾಕಿಂಗ್ ಮೊಬೈಲ್, ಬ್ರೈಲ್ ವಾಚ್, ವಾಕಿಂಗ್ ಸ್ಟಿಕ್ ಒಳಗೊಂಡ ಕಿಟ್ ವಿತರಣೆ)
* ವಸತಿ ಶಿಕ್ಷಣ ಸಂಸ್ಥೆ ನಡೆಸುವ ವಸತಿ ಶಾಲೆಗಳಲ್ಲಿ ಸೀಟು ಹಂಚಿಕೆ (ಆಯಾ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಕನಿಷ್ಠ ಶೇ. 25 ರಷ್ಟು ಸೀಟು)