* ಭೀಮ್ ಯುಪಿಐ ವಹಿವಾಟುಗಳಲ್ಲಿ ಸಾಧನೆ
*ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಡಿಜಿಧನ್ ಪ್ರಶಸ್ತಿ
*ಖಾಸಗಿ ವಲಯದ ಬ್ಯಾಂಕುಗಳ ವಿಭಾಗದಲ್ಲಿ ಪ್ರಶಸ್ತಿ
ಮಂಗಳೂರು(ಡಿ.10): ದೇಶದ ಅಗ್ರಗಣ್ಯ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿರುವ ಕರ್ಣಾಟಕ ಬ್ಯಾಂಕ್(Karnataka Bank), ಕೇಂದ್ರ ಸರ್ಕಾರದ (Central Government) ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ(Electronics and Information Technology) ಮಂತ್ರಾಲಯದಿಂದ (Ministry) ನೀಡಲಾಗುವ ‘ಡಿಜಿಧನ್’ (Digidhan) ಎಂಬ ಎರಡು ಪ್ರಶಸ್ತಿಗೆ ಭಾಜನವಾಗಿದೆ. 2019-20 ಹಾಗೂ 2020-21ರ ಸಾಲಿನಲ್ಲಿ ಬ್ಯಾಂಕಿನ ಭೀಮ್ ಯುಪಿಐ (BHIM-UPI) ವಹಿವಾಟುಗಳ(Transactions) ಗುರಿ ಮೀರಿದ ಸಾಧನೆ ಗುರುತಿಸಿ ಖಾಸಗಿ ವಲಯದ ಬ್ಯಾಂಕುಗಳ (Private Sector Banks)ವಿಭಾಗದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ‘ಡಿಜಿಟಲ್ ಪೇಮೆಂಟ್ ಉತ್ಸವ್’ಸಮಾರಂಭದಲ್ಲಿ ಕೇಂದ್ರ ರೈಲ್ವೆ, ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಇವರಿಂದ ಈ ಎರಡು ಪ್ರಶಸ್ತಿಗಳನ್ನು ಬ್ಯಾಂಕಿನ ಜನರಲ್ ಮೆನೇಜರ್ (GM)ರಾಜ ಬಿ.ಎಸ್. ಬ್ಯಾಂಕಿನ ಪರವಾಗಿ ಸ್ವೀಕರಿಸಿದರು. ಕೇಂದ್ರ ಐಟಿ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ವಿಭಾಗದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್, ಬ್ಯಾಂಕಿನ ದೆಹಲಿ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ, ಡೆಪ್ಯೂಟಿ ಜನರಲ್ ಮೆನೇಜರ್ ಜಗದೀಶ್ ಇದ್ದರು.
Paytm Payments Bank:ಷೆಡ್ಯೂಲ್ಡ್ ಪೇಮೆಂಟ್ಸ್ ಬ್ಯಾಂಕ್ ಸ್ಥಾನಮಾನ ಪಡೆದ ಪಿಪಿಬಿಎಲ್
ಬ್ಯಾಂಕಿಗೆ ಪ್ರಶಸ್ತಿ ಸಂದ ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿರುವ ಬ್ಯಾಂಕಿನ ಮೆನೇಜಿಂಗ್ ಡೈರೆಕ್ಟರ್ (MD) ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್(CEO) ಮಹಾಬಲೇಶ್ವರ ಎಂ.ಎಸ್., 'ಇದೊಂದು ನಮಗೆ ಹೆಮ್ಮೆಯ ಹಾಗೂ ಸಾರ್ಥಕ ಕ್ಷಣ. ನಗದುರಹಿತ ವ್ಯವಹಾರ ಹಾಗೂ ಡಿಜಿಟಲ್ ಪೇಮೆಂಟ್‌ಗಳ ನಿರ್ವಹಣೆಯಲ್ಲಿ ನಮ್ಮ ಅವಿಚ್ಛಿನ್ನ ಸೇವೆಯನ್ನು ಕೇಂದ್ರ ಸರ್ಕಾರ ಗುರುತಿಸಿ ಗೌರವಿಸಿದೆ. ನಾವು ಮುಂದೆಯೂ ಈ ಸೇವೆ ನೀಡುವಲ್ಲಿ ಕಟಿಬದ್ಧರಾಗಿದ್ದೇವೆ. ಈ ಪ್ರಶಸ್ತಿಗಳು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನದ ಮಂತ್ರಾಲಯದಿಂದ ಲಭ್ಯವಾಗಿರುವುದು ಬ್ಯಾಂಕಿನ ಕಿರೀಟಕ್ಕೆ ಮತ್ತೊಂದು ಹೊನ್ನಗರಿಯಾಗಿದೆ. ಡಿಜಿಟಲ್ ಕ್ರಾಂತಿಯ ಈ ಕಾಲಘಟ್ಟದಲ್ಲಿ ನಮ್ಮ ಪರಿಶ್ರಮ ಗುರುತಿಸಿ ಗೌರವಿಸಿದ ಕೇಂದ್ರ ಸರ್ಕಾರಕ್ಕೆ ಅಭಾರಿಯಾಗಿದ್ದೇನೆ' ಎಂದಿದ್ದಾರೆ.
'ನಮ್ಮ ಬ್ಯಾಂಕ್ ಗ್ರಾಹಕರ ಆಶೋತ್ತರಗಳಿಗೆ ಪೂರಕವಾಗಿ ಡಿಜಿಟಲೀಕರಣದಿಂದ(Digitalization) ಸಂಪನ್ನವಾಗಿರುವ ಎಲ್ಲ ಸೇವೆಗಳನ್ನು ಅರ್ಪಿಸುವಲ್ಲಿ ಮುಂಚೂಣಿಯಲ್ಲಿದೆ. ಉತ್ಕೃಷ್ಟವಾದ ಪೊ›ಡಕ್ಟ್ಗಳನ್ನು ಪರಿಚಯಿಸುವಲ್ಲಿ ನಾವು ಸರ್ವ ಪ್ರಥಮರಾಗಿದ್ದೇವೆ. ಅಂತೆಯೇ ಈ ಎರಡು ಪ್ರಶಸ್ತಿಗಳು ಲಭ್ಯವಾಗಿದೆ. ಈ ಎರಡು ಪ್ರಶಸ್ತಿಗಳಿಗೆ ಬ್ಯಾಂಕ್ ಭಾಜನವಾಗುವುದಕ್ಕೆ ಕಾರಣರಾದ ಭೀಮ್ ಕೆಬಿಎಲ್ ಯುಪಿಐ ಆ್ಯಪ್‌ನ್ನು ಮನ್ನಿಸಿ ಬಳಕೆ ಮಾಡಿದ ಬ್ಯಾಂಕಿನ ಗ್ರಾಹಕರಿಗೆ ಈ ಪ್ರಶಸ್ತಿಗಳನ್ನು ಸಮರ್ಪಿಸುತ್ತಿದ್ದೇನೆ ಎಂದು' ಮಹಾಬಲೇಶ್ವರ ಹೇಳಿದ್ದಾರೆ.
Fact Check About ₹500 Note ಯಾವುದು ಅಸಲಿ ಯಾವುದು ನಕಲಿ?
ಕರ್ಣಾಟಕ ಬ್ಯಾಂಕಿನ(Karnataka Bank) ನಿವ್ವಳ ಲಾಭ(Net Profit) ಪ್ರಸಕ್ತ ತ್ರೈಮಾಸಿಕ ಅಂತ್ಯಕ್ಕೆ (ಸೆಪ್ಟೆಂಬರ್ 2021) ಶೇ 5.17ರ ದರದಲ್ಲಿ ವೃದ್ಧಿ ಕಂಡಿದ್ದು, 125.61 ಕೋಟಿ ರೂ.ಗೆ ಏರಿಕೆಯಾಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ (ಸೆಪ್ಟೆಂಬರ್ 2020) 119.44 ಕೋಟಿ ರೂ. ಆಗಿತ್ತು.ಬ್ಯಾಂಕಿನ ನಿವ್ವಳ ಬಡ್ಡಿ ಆದಾಯ ಸೆಪ್ಟೆಂಬರ್ 2021ರ ತ್ರೈಮಾಸಿಕ(Quarterly) ಅಂತ್ಯಕ್ಕೆ ಶೇ. 10.83ರ ದರದಲ್ಲಿ ಹೆಚ್ಚಳಗೊಂಡು 637.10 ಕೋಟಿ ರೂ.ಗೆ ತಲುಪಿದೆ. ಇದೇ ಸಾಲಿನ ಜೂನ್ ತ್ರೈಮಾಸಿಕ ಅಂತ್ಯಕ್ಕೆ ಅದು 574.87 ಕೋಟಿ ರೂ.ಗಳಾಗಿತ್ತು. ಬ್ಯಾಂಕಿನ ಅನುತ್ಪಾದಕ ಸ್ವತ್ತುಗಳು ಗಮನಾರ್ಹ ರೀತಿಯಲ್ಲಿ ಇಳಿಕೆ ಕಂಡಿವೆ. ಬ್ಯಾಂಕಿನ ಸ್ಥೂಲ ಅನುತ್ಪಾದಕ ಸ್ವತ್ತುಗಳು ಶೇ. 4.50 ಕ್ಕೆ ಇಳಿಕೆಯಾಗಿದ್ದು, ಅವು ಈ ಹಿಂದಿನ ತ್ರೈಮಾಸಿಕದಲ್ಲಿ ಅಂದರೆ ಜೂನ್ 2021ರ ವೇಳೆಗೆ ಶೇ. 4.82 ಆಗಿದ್ದವು. ಅಂತೆಯೇ ನಿವ್ವಳ ಅನುತ್ಪಾದಕ ಸ್ವತ್ತುಗಳು ಕೂಡ ಉತ್ತಮತೆ ಸಾಧಿಸಿ, ಶೇ. 2.84 ಆಗಿದ್ದು, ಅವು ಈ ಮುಂಚೆ ಶೇ.3ಆಗಿತ್ತು.