
ಬೆಂಗಳೂರು (ಡಿ.10): ಹಾವು -ಏಣಿ ಆಟವಾಡುತ್ತಿದ್ದ ಚಿನ್ನದ(Gold)ದರ (Rate)ಕೆಲವು ದಿನಗಳಿಂದ ಸ್ಥಿರತೆ ಪ್ರದರ್ಶಿಸುತ್ತಿದ್ರೆ,ಅತ್ತ ಬೆಳ್ಳಿ (Silver)ಬೆಲೆಯಲ್ಲಿಇಳಿಕೆ ಕಂಡುಬಂದಿದೆ. ಮತ್ತೊಮ್ಮೆ ಕೊರೋನಾ (Corona)ಇನ್ನೊಂದು ರೂಪದಲ್ಲಿ ಹಾಹಾಕರ ಎಬ್ಬಿಸೋ ಮುನ್ನ ಚಿನ್ನ ಹಾಗೂ ಬೆಳ್ಳಿ ಖರೀದಿಸಿ ಬಿಡಬೇಕು ಎಂದು ಕೆಲವರು ಯೋಚಿಸುತ್ತಿರಬಹುದು. ಆದ್ರೆ ಕೆಲವು ದಿನಗಳಿಂದ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಗಮನಿಸುತ್ತಿರೋ ಇವರಿಗೆ ಈಗ ಚಿನ್ನ, ಬೆಳ್ಳಿ ಖರೀದಿಸೋದೋ, ಬೇಡವೋ ಎಂಬ ಗೊಂದಲ ಏರ್ಪಟ್ಟಿದ್ದರೆ ಆಶ್ಚರ್ಯವಿಲ್ಲ. ಇಂಥ ಗೊಂದಲ ನಿಮ್ಮಲ್ಲೂ ಇದ್ರೆ ಸ್ವಲ್ಪ ದಿನ ಕಾದು ನೋಡೋದು ಉತ್ತಮ. ಏಕೆಂದ್ರೆ ಚಿನ್ನ ಹಾಗೂ ಬೆಳ್ಳಿ ಮೇಲೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡೋ ಕಾರಣ ಗಡಿಬಿಡಿ ಮಾಡೋದಕ್ಕಿಂತ ಮಾರುಕಟ್ಟೆ ಬೆಳವಣಿಗೆಗಳನ್ನು ಸರಿಯಾಗಿ ಗಮನಿಸಿ ಸೂಕ್ತ ನಿರ್ಧಾರ ಕೈಗೊಳ್ಳೋದು ಜಾಣತನ. ಈಗ ಚಿನ್ನ ಖರೀದಿಸಿ ಒಂದೆರಡು ದಿನಗಳಲ್ಲಿ ದರದಲ್ಲಿ ಇಂದಿಗಿಂತ ಇಳಿಕೆ ಕಂಡುಬಂದ್ರೆ ಆಮೇಲೆ ಬೇಸರಪಟ್ಟುಕೊಳ್ಳೋದಕ್ಕಿಂತ ಸ್ವಲ್ಪ ಕಾದು ನೋಡಬಹುದು. ಇನ್ನು ಬೆಳ್ಳಿ ವಿಷಯಕ್ಕೆ ಬಂದ್ರೆ ಇಂದು ಗಮನಾರ್ಹ ಇಳಿಕೆ ಕಂಡುಬಂದಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರದಲ್ಲಿ 900ರೂ. ಇಳಿಕೆ ಕಂಡುಬಂದಿದೆ. ಹಾಗಾದ್ರೆ ದೇಶದ ಪ್ರಮುಖ ನಗರಗಳಲ್ಲಿ ಇಂದು (ಡಿ.10) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ದರ ಎಷ್ಟಿದೆ?
ಬೆಂಗಳೂರಿನಲ್ಲಿ ಇಂದು ಕೂಡ ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ನಿನ್ನೆ 44,950ರೂ. ಇದ್ದು,ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,040ರೂ. ಇದ್ದು,ಇಂದು ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ ಇಳಿಕೆ ದಾಖಲಿಸಿದ್ದ ಬೆಳ್ಳಿ ಇಂದು ಕೂಡ 900ರೂ. ಇಳಿಕೆಯಾಗಿದೆ. ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 61,600ರೂ. ಇತ್ತು.ಆದ್ರೆ ಇಂದು 60,700ರೂ.ಗೆ ಇಳಿಕೆಯಾಗಿದೆ.
Petrol Diesel Rate: ತಿಂಗಳಿಂದ ಸ್ಥಿರತೆ ಕಾಯ್ದುಕೊಂಡಿರೋ ಇಂಧನ ದರ; ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?
ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ ಚಿನ್ನದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ನಿನ್ನೆ ಕೂಡ ಚಿನ್ನದ ಬೆಲೆ ಸ್ಥಿರವಾಗಿತ್ತು. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಇಂದು 47,100ರೂ.ಆಗಿದ್ದು,ನಿನ್ನೆ ಕೂಡ ಅಷ್ಟೇ ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ಯಾವುದೇ ಬದಲಾವಣೆಯಾಗಿಲ್ಲ. 51,390 ರೂ. ಇದೆ. ಬೆಳ್ಳಿ ದರದಲ್ಲಿ ಮಾತ್ರ ಇಂದು 900ರೂ. ಇಳಿಕೆಯಾಗಿದೆ. ನಿನ್ನೆಒಂದು ಕೆ.ಜಿ.ಬೆಳ್ಳಿಗೆ 61,600ರೂ. ಇತ್ತು.ಆದ್ರೆ ಇಂದು 60,700ರೂ. ಆಗಿದೆ.
ಮುಂಬೈನಲ್ಲಿಎಷ್ಟಿದೆ ದರ?
ಮುಂಬೈನಲ್ಲಿ ಚಿನ್ನದ ದರದಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 46,840ರೂ.ಇದ್ದು,ಇಂದು ಕೂಡ ಅಷ್ಟೇ ಇದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ47,840ರೂ.ಇತ್ತು, ಇಂದು ಕೂಡ ಯಾವುದೇ ಬದಲಾವಣೆಯಾಗಿಲ್ಲ. ಬೆಳ್ಳಿ ದರದಲ್ಲಿ ಮಾತ್ರ ಇಂದು 900ರೂ.ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ 61,600ರೂ.ಇತ್ತು.ಆದ್ರೆ ಇಂದು 60,700ರೂ. ಆಗಿದೆ.
Fact Check About ₹500 Note ಯಾವುದು ಅಸಲಿ ಯಾವುದು ನಕಲಿ?
ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು 45,140ರೂ.ಇದೆ. ನಿನ್ನೆ ಕೂಡ ಅಷ್ಟೇ ಇತ್ತು. 24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಮಾತ್ರ ನಿನ್ನೆಗಿಂತ ಇಂದು 210ರೂ. ಇಳಿಕೆಯಾಗಿದೆ. ನಿನ್ನೆ 49,250ರೂ. ಇತ್ತು. ಆದ್ರೆ ಇಂದು 49, 040ರೂ. ಆಗಿದೆ. ಬೆಳ್ಳಿ ದರದಲ್ಲಿ 700ರೂ. ಇಳಿಕೆಯಾಗಿದೆ. ನಿನ್ನೆ 65,500 ರೂ.ಇತ್ತು, ಇಂದು 64,800ರೂ.ಇದೆ.
"
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.