Paytm Payments Bank:ಷೆಡ್ಯೂಲ್ಡ್ ಪೇಮೆಂಟ್ಸ್ ಬ್ಯಾಂಕ್ ಸ್ಥಾನಮಾನ ಪಡೆದ ಪಿಪಿಬಿಎಲ್

By Suvarna News  |  First Published Dec 10, 2021, 1:44 PM IST

* RB ಕಾಯ್ದೆ 1934ರ ಎರಡನೇ ಅನುಸೂಚಿಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇರ್ಪಡೆ
*ಹಣಕಾಸು ಸೇವೆಗಳ ವಿಸ್ತರಣೆಗೆ ಅವಕಾಶ
*ಪ್ರಸ್ತುತ 33.3 ಕೋಟಿ ಪೇಟಿಎಂ ವ್ಯಾಲೆಟ್ಸ್ ನಿರ್ವಹಿಸುತ್ತಿರೋ ಬ್ಯಾಂಕ್


ಮುಂಬೈ (ಡಿ.10): ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ (PPBL) ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಸೂಚಿತ ಪಾವತಿಗಳ ಬ್ಯಾಂಕ್ (scheduled payments bank) ಸ್ಥಾನಮಾನವನ್ನು ನೀಡಿರೋದಾಗಿ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪೇಟಿಎಂನ (Paytm) ಅಂಗಸಂಸ್ಥೆಯಾಗಿದೆ. ಆರ್ ಬಿಐ ಕಾಯ್ದೆ 1934ರ ಎರಡನೇ ಅನುಸೂಚಿಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಬ್ಯಾಂಕಿಗೆ ಷೆಡ್ಯೂಲ್ಡ್ ಪೇಮೆಂಟ್ಸ್  ಬ್ಯಾಂಕ್ ಮಾನ್ಯತೆ ಸಿಕ್ಕಿದೆ ಎಂದು ಬ್ಯಾಂಕ್ ಹೇಳಿದೆ.ಇದ್ರಿಂದ ಇನ್ನು ಮುಂದೆ ಪಿಪಿಬಿಎಲ್ ಗೆ ತನ್ನ ಹಣಕಾಸು ಸೇವೆಗಳ ವಿಸ್ತರಣೆಗೆ ಅವಕಾಶ ಸಿಗಲಿದೆ. 

ಸರ್ಕಾರ ಹಾಗೂ ಇತರ ಬೃಹತ್ ನಿಗಮಗಳು ಬಿಡುಗಡೆ ಮಾಡೋ ಪ್ರಸ್ತಾವನೆ ಮನವಿಗಳಲ್ಲಿ (RFPs), ಆರ್ ಬಿಐ ನಡೆಸೋ ಪ್ರಾಥಮಿಕ ಹರಾಜುಗಳು, ಸ್ಥಿರ ಬಡ್ಡಿದರ ಹಾಗೂ ವ್ಯತ್ಯಾಸವಾಗೋ ರೆಪೋದರಗಳು, ರಿವರ್ಸ್ ರೆಪೋ ಹಾಗೂ ಮಾರ್ಜಿನಲ್ ಸ್ಟ್ಯಾಡಿಂಗ್ ಫೆಸಿಲಿಟಿಗಳಲ್ಲಿ  (MSF) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಇನ್ನು ಮುಂದೆ ಪಾಲ್ಗೊಳ್ಳಬಹುದು. ಸರ್ಕಾರದ ಹಣಕಾಸು ಸೇರ್ಪಡೆ ಯೋಜನೆಗಳಲ್ಲಿ (government-run financial inclusion schemes) ಪಾಲುದಾರನಾಗಲು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅರ್ಹತೆ ಗಿಟ್ಟಿಸಿಕೊಂಡಿದ್ದು, ಹೊಸ ಉದ್ಯಮ ಅವಕಾಶಗಳನ್ನು ಅನ್ವೇಷಿಸಲು ಇದ್ರಿಂದ ನೆರವಾಗಲಿದೆ. 'ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ನಾವು ಶೀಘ್ರವಾಗಿ ಅಳವಡಿಸಿಕೊಳ್ಳೋ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದೇವೆ. ಭಾರತದಲ್ಲಿ ಬ್ಯಾಂಕಿಂಗ್ ಸೇವೆಗಳ ಹೊಸ ಯುಗವನ್ನು ಬಳಕೆದಾರರು ಪ್ರಶಂಸಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕಿನ ಕಾಯ್ದೆ 1934ರ ಎರಡನೇ ಷೆಡ್ಯೂಲ್ ನಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇರ್ಪಡೆ ನಮಗೆ ಇನ್ನಷ್ಟು ಅನ್ವೇಷಣೆ ಮಾಡಲು ನೆರವಾಗಿದ್ದು, ಮುಂದಿನ ದಿನಗಳಲ್ಲಿ ಭಾರತದ ಸೇವಾವಂಚಿತ, ಕೆಳವರ್ಗದ ಜನರಿಗೆ ಹೆಚ್ಚಿನ ಆರ್ಥಿಕ ಸೇವೆಗಳು ಹಾಗೂ ಉತ್ಪನ್ನಗಳನ್ನು ಒದಗಿಸಲು ಸಹಕಾರಿಯಾಗಲಿದೆ' ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಎಂಡಿ ಹಾಗೂ ಸಿಇಒ ಸತೀಶ್ ಕುಮಾರ್ ಗುಪ್ತಾ ಹೇಳಿದ್ದಾರೆ.

Latest Videos

undefined

Fact Check About ₹500 Note ಯಾವುದು ಅಸಲಿ ಯಾವುದು ನಕಲಿ?

ಭಾರತೀಯ ಅಂಚೆ ಪಾವತಿ ಬ್ಯಾಂಕಿಗೂ ಸ್ಥಾನಮಾನ
ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೂ ಮುನ್ನ ಭಾರತೀಯ ಅಂಚೆ ಪಾವತಿಗಳ ಬ್ಯಾಂಕಿಗೆ  (India Post Payments Bank) ಆರ್ ಬಿಐ ಷೆಡ್ಯೂಲ್ಡ್ ಪೇಮೆಂಟ್ಸ್ ಬ್ಯಾಂಕ್ ಸ್ಥಾನಮಾನವನ್ನು ನೀಡಿತ್ತು. 2019ರಲ್ಲಿ ಭಾರತೀಯ ಪಾವತಿಗಳ ಬ್ಯಾಂಕಿಗೆ  ಈ ಸ್ಥಾನಮಾನ ಸಿಕ್ಕಿತ್ತು. ಇನ್ನು ಈ ವರ್ಷದ ಪ್ರಾರಂಭದಲ್ಲಿ ಫಿನೊ ಪಾವತಿಗಳ ಬ್ಯಾಂಕಿಗೆ  (Fino Payments Bank) ಭಾರತೀಯ ರಿಸರ್ವ್ ಬ್ಯಾಂಕ್  ಷೆಡ್ಯೂಲ್ಡ್ ಪೇಮೆಂಟ್ಸ್ ಬ್ಯಾಂಕ್ ಸ್ಥಾನಮಾನ ನೀಡಿತ್ತು. ಭಾರತದಲ್ಲಿ ಪೇಮೆಂಟ್ಸ್ ಬ್ಯಾಂಕುಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಈ ಬ್ಯಾಂಕುಗಳಲ್ಲಿ  ಒಂದು ಲಕ್ಷ ರೂ.ಗಿಂತ ಅಧಿಕ ಮೊತ್ತದ ಠೇವಣಿ (deposit) ಸ್ವೀಕರಿಸುವಂತಿಲ್ಲ. ಜೊತೆಗೆ ಸಾಲ ನೀಡಲು ಅಥವಾ ಕ್ರೆಡಿಟ್ ಕಾರ್ಡ್ ಸೌಲಭ್ಯಗಳನ್ನು ಕಲ್ಪಿಸಲು ಅವಕಾಶವಿಲ್ಲ. ಇನ್ನು ಠೇವಣಿ ಪಡೆದ ಹಣಗಳನ್ನು ಸರ್ಕಾರಿ ಸೆಕ್ಯುರಿಟಿಗಳಲ್ಲಿ ಹೂಡಿಕೆ ಮಾಡಬೇಕು. ಹೀಗಾಗಿ ಈ ಬ್ಯಾಂಕುಗಳಿಗೆ ತಮ್ಮ ವ್ಯವಹಾರವನ್ನು ವೃದ್ಧಿಸಿಕೊಳ್ಳೋದು ಕಠಿಣ ಕೆಲಸವಾಗಿದೆ ಎಂಬುದು ತಜ್ಞರ ಅಭಿಪ್ರಾಯ.  

Digital Payments ಇ-ವಹಿವಾಟುಗಳ ಮೇಲಿನ ಶುಲ್ಕ ಪರಿಷ್ಕರಣೆಗೆ RBI ಚಿಂತನೆ

33.3 ಕೋಟಿ ಪೇಟಿಎಂ ವ್ಯಾಲೆಟ್ಸ್
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಪೇಟಿಎಂ ವ್ಯಾಲೆಟ್(Paytm Wallet), ಪೇಟಿಎಂ ಫಾಸ್ಟ್ ಟ್ಯಾಗ್(Paytm FASTag), ನೆಟ್ ಬ್ಯಾಂಕಿಂಗ್(net banking) ಹಾಗೂ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI)ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. 33.3 ಕೋಟಿ ಪೇಟಿಎಂ ವ್ಯಾಲೆಟ್ಸ್ ನಿರ್ವಹಿಸುತ್ತಿರೋ ಬ್ಯಾಂಕ್,  87,000ಕ್ಕೂ ಹೆಚ್ಚು ಆನ್ಲೈನ್ ವ್ಯಾಪಾರಿಗಳಿಗೆ ಹಾಗೂ  2.11 ಕೋಟಿ ಅಂಗಡಿ ವ್ಯಾಪಾರಿಗಳಿಗೆ ಪಾವತಿಗಳನ್ನು ಮಾಡಲು ಗ್ರಾಹಕರಿಗೆ ಅವಕಾಶ ಕಲ್ಪಿಸಿದೆ.  15.5 ಕೋಟಿಗೂ ಹೆಚ್ಚು ಪೇಟಿಎಂ ಯುಪಿಐ ಹ್ಯಾಂಡಲ್‌ಗಳನ್ನುಸೃಷ್ಟಿಸಲಾಗಿದ್ದು, ಪಾವತಿಗಳನ್ನು ಮಾಡಲು ಹಾಗೂ ಸ್ವೀಕರಿಸಲು ಬಳಸಿಕೊಳ್ಳಲಾಗುತ್ತಿದೆ. 

click me!