
ಮೈಸೂರು (ಮೇ.25): ಕುಶಾಲನಗರದಲ್ಲಿ ನೂತನವಾಗಿ ಆರಂಭವಾಗಿರುವ ಮರದ ಗಾಣದ ಅಡುಗೆ ಎಣ್ಣೆ ಘಟಕವನ್ನು ಕನ್ನಡ ಪ್ರಭ ಕಾರ್ಯನಿರ್ವಾಹಕ ಸಂಪಾದಕರಾದ ಅಂಶಿ ಪ್ರಸನ್ನ ಕುಮಾರ್ ಅವರು ಇಂದು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ನೈಸರ್ಗಿಕವಾಗಿ, ಸಾಂಪ್ರದಾಯಿಕವಾಗಿ ಮರದ ಗಾಣದಿಂದ ಎಣ್ಣೆಯನ್ನು ತೆಗೆದು ಗ್ರಾಹಕರಿಗೆ ತಲುಪಿಸುವುದು ಕೆಲಸವನ್ನು ಈ ಕಲ್ಪತರು ನ್ಯಾಚುರಲ್ ಆಯಿಲ್ ಮೂಲಕ ರಮೇಶ್ ಅವರು ಮಾಡುತ್ತಿದ್ದಾರೆ. ಜನರು ಸ್ವತಃ ಎಣ್ಣೆ ತೆಗೆಯುವುದನ್ನು ಕಣ್ಣಾರೆ ನೋಡಿ, ಎಣ್ಣೆ ತೆಗೆದುಕೊಳ್ಳಬಹುದು. ಗಾಣದ ಎಣ್ಣೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು ಎಂದು ಹೇಳಿದರು.
ವಿಜಯವಾಣಿ ಮೈಸೂರು ಬ್ಯುರೋ ಮುಖ್ಯಸ್ಥರಾದ ಎಂ ಆರ್ ಸತ್ಯನಾರಾಯಣ ಅವರು ಮಾತನಾಡಿ, ಇಂದಿನ ದಿನಗಳಲ್ಲಿ ಕ್ಷಣಿಕ ತೃಪ್ತಿ, ಕ್ಷಣಿಕ ಆಸೆಗಾಗಿ ರಾಸಾಯನಿಕ ಮಿಶ್ರಿತ ಆಹಾರದ ಮೊರೆ ಹೋಗುತ್ತಿರುವುದು ಹೆಚ್ಚಾಗಿದೆ. ಈ ವೇಳೆ ನೈಸರ್ಗಿಕವಾದ ಆಹಾರ ಪದಾರ್ಥಗಳು ಜನತೆಗೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಗೆಳೆಯ ರಮೇಶ್ ಹಂಡ್ರಂಗಿ ಅವರು ನೈಸರ್ಗಿಕವಾದ ಪರಿಶುದ್ಧವಾದ ಅಡುಗೆ ಎಣ್ಣೆ ಘಟಕ ಆರಂಭಿಸಿದ್ದಾರೆ. ಮೂಲತಃ ಪತ್ರಕರ್ತರಾಗಿರುವ ರಮೇಶ್ ಅವರ ಈ ಕೆಲಸಕ್ಕೆ ಶುಭವಾಗಲಿ. ಆರೋಗ್ಯದ ದೃಷ್ಟಿಯಿಂದ ಗಾಣದ ಎಣ್ಣೆ ತುಂಬಾ ಉಪಕಾರಿ ಎಂದು ಅವರು ಹೇಳಿದರು.
ದೇಶದಲ್ಲೇ ಮೊದಲು: ಮೈಸೂರಲ್ಲಿ ಜನ್ಮತಾಳಿದ ರೋಬೋ ಟೀಚರ್..!
ಮಾಲೀಕರಾದ ರಮೇಶ್ ಹಂಡ್ರಂಗಿ, ಎಚ್ ಎನ್ ರಾಕೇಶ್, ಬಿಜೆಪಿ ರಾಜ್ಯ ಕಾನೂನು ಪ್ರಕೋಷ್ಠಕದ ಸದಸ್ಯರಾದ ಎಂ ಎಸ್ ಶರತ್ ಅವರು ಹಾಜರಿದ್ದರು. ಕಲ್ಪತರು ನ್ಯಾಚುರಲ್ ಆಯಿಲ್ ಸಂಪೂರ್ಣವಾಗಿ ಮರದ ಗಾಣದಿಂದ ಪರಿಶುದ್ಧ ಅಡುಗೆ ಎಣ್ಣೆಯಾಗಿದೆ. ಇಲ್ಲಿ ಕಡಲೆಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಹಾಗೂ ಕೊಪ್ಪರಿ ಎಣ್ಣೆ ದೊರೆಯುತ್ತದೆ.
ಸಂಪರ್ಕ ಸಂಖ್ಯೆ: 6363718870, 8088593251
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.