
ಚಂಡೀಗಢ[ಜು.28]: ಕೇವಲ 2 ಬಾಳೆಹಣ್ಣಿಗೆ ಬರೋಬ್ಬರಿ 442 ರುಪಾಯಿ ದರ ವಿಧಿಸಿ ಸುದ್ದಿಯಾಗಿದ್ದ ಇಲ್ಲಿನ ಐಶಾರಾಮಿ ಹೋಟೆಲ್‌ಗೆ ತೆರಿಗೆ ಇಲಾಖೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದು, 25 ಸಾವಿರ ರು. ದಂಡ ವಿಧಿಸಿದ್ದಾರೆ.
ಬಾಳೆಹಣ್ಣಿಗಲ್ಲ, ಪ್ಲೇಟಿಗೆ ತೆರಿಗೆ: ರಾಹುಲ್ ಬನಾನಾ ಸ್ಟೋರಿಗೆ ಟ್ವಿಸ್ಟ್!
ನಟ ರಾಹುಲ್ ಬೋಸ್ ಅವರು ಹೋಟೆಲ್‌ನಲ್ಲಿ 2 ಬಾಳೆಹಣ್ಣಿಗೆ 442 ರು. ದರ ವಿಧಿಸಿದ್ದನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿ, ಬಾಳೆಹಣ್ಣು ಮತ್ತು ಬಿಲ್ ಸಮೇತ ವಿಡಿಯೋ ಮಾಡಿ ಟ್ವಿಟ್ಟರಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಭಾರೀ ವೈರಲ್ ಆಗಿತ್ತು.
ಇದರಿಂದ ತೆರಿಗೆ ಇಲಾಖೆ ಅಧಿಕಾರಿಗಳು ಹೋಟೆಲ್‌ಗೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದ ನಂತರ ನಿಯಮ ಉಲ್ಲಂಘನೆ ಆರೋಪದ ಮೇಲೆ ಹೋಟೆಲ್ ಆಡಳಿತಕ್ಕೆ 25 ಸಾವಿರ ರು. ದಂಡ ವಿಧಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.