ಹಾಲು ಭಾರತೀಯರ ಮುಖ್ಯ ಆಹಾರದಲ್ಲಿ ಒಂದು. ವಿಶೇಷ ಸಮಯದಲ್ಲಿ ಹಾಲಿನ ಬೇಡಿಕೆ ಹೆಚ್ಚಾಗುತ್ತದೆ. ಬೇಡಿಕೆ ಹೆಚ್ಚಿದ್ರೂ ಹಾಲಿನ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ಕಾಣಸಿಗೋದಿಲ್ಲ. ಈ ಮಾತಿಗೆ ಜೋದ್ಫುರ ಮಾರುಕಟ್ಟೆ ಅಪವಾದ.
ಭಾರತ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ. ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ ಮುಂದಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಭಾರತದಲ್ಲಿ ಎಲ್ಲರೂ ಹಾಲು ಕುಡಿಯುತ್ತಾರೆ. ಬರೀ ಹಾಲು ಮಾತ್ರವಲ್ಲ ಹಾಲಿನ ಉತ್ಪನ್ನಗಳ ಬಳಕೆಯೂ ಭಾರತದಲ್ಲಿ ಹೆಚ್ಚಿದೆ. ಮದುವೆ, ಹಬ್ಬಗಳ ಋತುವಿನಲ್ಲಿ ಹಾಲಿಗೆ ಬೇಡಿಕೆ ಹೆಚ್ಚಿರುತ್ತದೆ. ಸಾಮಾನ್ಯ ದಿನಕ್ಕಿಂತ ವಾರಾಂತ್ಯದಲ್ಲಿ ನಿಮಗೆ ಹಾಲು ಸಿಗೋದು ಕಷ್ಟ. ಕರ್ನಾಟಕದಲ್ಲಿ ನಂದಿನಿ ಹಾಲಿನ ಬಳಕೆ ಹೆಚ್ಚಿದೆ. ಪಟ್ಟಣ ಪ್ರದೇಶದಲ್ಲಿ ಜನರು ಪ್ಯಾಕೆಟ್ ಹಾಲನ್ನು ಹೆಚ್ಚು ನೆಚ್ಚಿಕೊಂಡಿದ್ದಾರೆ. ಇನ್ನು ಹಳ್ಳಿಗಳಲ್ಲಿ ಸ್ಥಳೀಯ ಹಾಲು ಉತ್ಪಾದಕರಿಂದ ಜನರು ಅಗತ್ಯವಿರುವ ಹಾಲಿನ ಖರೀದಿ ಮಾಡುತ್ತಾರೆ. ಹೈನುಗಾರಿಕೆ (Dairy Farming) ಈಗಿನ ದಿನಗಳಲ್ಲಿ ಕಷ್ಟವಾಗ್ತಿದೆ. ಇದಕ್ಕೆ ಕಾರಣ ಹಸುಗಳ ಆಹಾರದ ಬೆಲೆಯಲ್ಲಿ ಆಗಿರುವ ಹೆಚ್ಚಳ. ಹಸುಗಳ ಆರೈಕೆ, ಅವುಗಳ ಆಹಾರದಲ್ಲಿ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗಳಿಂದ ಹಳ್ಳಿಯ ಜನರು ಹಸುಸಾಕಣೆಯನ್ನು ಕಡಿಮೆ ಮಾಡ್ತಿದ್ದಾರೆ. ಇದ್ರಿಂದಾಗಿ ಹಾಲಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆಯಲ್ಲೂ ಏರಿಕೆ ಕಂಡು ಬರ್ತಿದೆ. ಈ ಮಧ್ಯೆ ಜೋಧ್ಪುರ ಹಾಲಿನ ಮಾರುಕಟ್ಟೆ ಗಮನ ಸೆಳೆಯುತ್ತಿದೆ.
ಷೇರು (Shares) ಮಾರುಕಟ್ಟೆಯಂತೆ ಏರಿಳಿತ : ಷೇರು ಮಾರುಕಟ್ಟೆಯಲ್ಲಿ ಪ್ರತಿ ದಿನ, ಪ್ರತಿ ಕ್ಷಣಕ್ಕೆ ಷೇರಿನ ಬೆಲೆಯಲ್ಲಿ ಏರಿಳಿತಗಳು ಆಗ್ತಿರುತ್ತವೆ. ಜೋದ್ಪುರ (Jodhpur) ಹಾಲು (Milk) ಮಾರುಕಟ್ಟೆ ಕೂಡ ಇದೇ ರೀತಿ ಬದಲಾಗ್ತಿದೆ. ಜೋದ್ಪುರದಲ್ಲಿ ಹಾಲಿನ ಬೆಲೆ ದಿನಕ್ಕೆ ಮೂರ್ನಾಲ್ಕು ಬಾರಿ ಬದಲಾಗುತ್ತಿದೆ. ಬೆಳಿಗ್ಗೆ ಹಾಲಿನ ಬೆಲೆ ಐವತ್ತು ರೂಪಾಯಿ ಇದ್ರೆ ಮಧ್ಯಾಹ್ನ ಐವತ್ತೈದು ತಲುಪಿ ಸಂಜೆ ವೇಳೆಗೆ ಇದ್ರ ಬೆಲೆ ಅರವತ್ತು ರೂಪಾಯಿ ತಲುಪುತ್ತದೆ. ಇದನ್ನು ನೋಡಿದ ಗ್ರಾಹಕರು ಅಚ್ಚರಿಗೊಳಗಾಗುತ್ತಿದ್ದಾರೆ. ಈಗ ಮದುವೆ ಋತು ಶುರುವಾಗಿರುವ ಕಾರಣ ಹಾಲಿನ ಬೆಲೆ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಹಾಲಿನ ಬೆಲೆ ಸದಾ ಏರುತ್ತೆ ಎಂದಲ್ಲ ಅನೇಕ ಬಾರಿ ಹಾಲಿನ ಬೆಲೆ ಇಳಿದಿದ್ದೂ ಇದೆ. ದಿನದಲ್ಲಿ ನಾಲ್ಕೈದು ಬಾರಿ ಈ ಏರಿಳಿತ ನೋಡ್ಬಹುದು ಎನ್ನುತ್ತಾರೆ ಮಾರಾಟಗಾರರು.
undefined
SBI ELECTORAL BONDS: ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಕಂಪನಿ ಇದು…!
ಹಾಲಿನ ಪುಡಿಯಿಂದ ಹಾಲು ತಯಾರಿಕೆ : ಜೋದ್ಪುರ ಹಾಲಿನ ಮಾರುಕಟ್ಟೆಯಲ್ಲಿ ಬರೀ ಹಸು, ಎಮ್ಮೆ ಹಾಲು ಮಾತ್ರವಲ್ಲ ಹಾಲಿನ ಪುಡಿ ಹಾಲು ಕೂಡ ಸಿಗ್ತಿದೆ. ಇದು ಹಾಲು ಮಾರಾಟಗಾರರಲ್ಲಿ ಭಯ ಹುಟ್ಟಿಸಿದೆ. ಹಾಲಿನ ಪುಡಿ ಮೂಲಕ ಹಾಲು ಮಾರಾಟ ಮಾಡುವ ಜನರು 2 ಕೆಜಿ ಹಾಲಿನ ಪುಡಿಯಿಂದ 40 ಲೀಟರ್ ಹಾಲು ತಯಾರಿಸುತ್ತಿದ್ದಾರೆ. 600 ರೂಪಾಯಿ ಖರ್ಚು ಮಾಡಿ 1600 ರೂಪಾಯಿ ಗಳಿಸುತ್ತಿದ್ದಾರೆ. ಅದೇ ಹಸುವಿನ ಹಾಲು 47 ರಿಂದ 50, 55 ರೂಪಾಯಿಗೆ ಮಾರಾಟವಾಗುತ್ತಿದೆ. ಜನರು ಗಟ್ಟಿ ಹಾಲಿನ ಭ್ರಮೆಯಲ್ಲಿ ಹಾಲಿನ ಪುಡಿಯಿಂದ ಮಾಡಿದ ಹಾಲನ್ನು ಖರೀದಿ ಮಾಡುತ್ತಿದ್ದಾರೆ. ಇದಲ್ಲದೆ ಇಲ್ಲಿನ ಸ್ಥಳೀಯ ಹಾಲು ಉದ್ಯಮಿಗಳಿಗೆ ಅಮೂಲ್ ಮತ್ತು ಸಾರಸ್ ನಿಂದಲೂ ಸಾಕಷ್ಟು ನಷ್ಟವಾಗ್ತಿದೆ.
4 ವರ್ಷ ಅನುಭವಕ್ಕೆ 45 ಲಕ್ಷ ರೂ. ಸಂಬಳ ಕೇಳಿದ ಉದ್ಯೋಗಿ; ಸಾಲ ಮಾಡಬೇಕಾಗುತ್ತೆ ಎಂದ ಎಚ್‌ಆರ್!
ಜೋಧಪುರ ನಗರದಲ್ಲಿ ನಿತ್ಯ 30ರಿಂದ 35 ಸಾವಿರ ಲೀಟರ್ ಹಾಲು ಬಳಕೆಯಾಗುತ್ತದೆ. ಹಿಂದೆ ಇದ್ರ ಪ್ರಮಾಣ 40 ರಿಂದ 50 ಸಾವಿರ ಲೀಟರ್ ಇತ್ತು. ಜೋಧ್ಪುರ ನಿವಾಸಿಗಳು ಒಂದು ತಿಂಗಳಲ್ಲಿ 5 ಕೋಟಿ ರೂಪಾಯಿ ಮೌಲ್ಯದ ಹಾಲು ಕುಡಿಯುತ್ತಾರೆ. ದಿನದಲ್ಲಿ 12 ರಿಂದ 15 ಲಕ್ಷ ರೂಪಾಯಿ ಮೌಲ್ಯದ ಹಾಲು ಮಾರಾಟವಾಗುತ್ತದೆ. ಹಾಲಿನ ವ್ಯವಹಾರ ಇಲ್ಲಿ ದೊಡ್ಡ ಮಟ್ಟದಲ್ಲಿದ್ದರೂ ಹೈನುಗಾರಿಗೆ ಮಾಡುವ ಜನರಿಗೆ ನಷ್ಟವಾಗ್ತಿದೆ.