SBI Electoral Bonds: ರಾಜಕೀಯ ಪಕ್ಷಗಳಿಗೆ ಅತಿ ಹೆಚ್ಚು ದೇಣಿಗೆ ನೀಡಿದ ಕಂಪನಿ ಇದು…!

By Suvarna News  |  First Published Mar 15, 2024, 12:14 PM IST

ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ನಿಷೇಧಿಸಿದೆ. ಈವರೆಗೆ ರಾಜಕೀಯ ಪಕ್ಷಕ್ಕೆ ಬರ್ತಿದ್ದ ಹಣ ಇನ್ಮುಂದೆ ಬಾಂಡ್ ಮೂಲಕ ಸಿಗೋದಿಲ್ಲ. ಕಳೆದ ಆರು ವರ್ಷಗಳಲ್ಲಿ ಯಾವೆಲ್ಲ ಕಂಪನಿ, ವ್ಯಕ್ತಿಗಳು ದೇಣಿಗೆ ನೀಡಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದ. 
 


ಭಾರತೀಯ ಚುನಾವಣಾ ಆಯೋಗವು, ಚುನಾವಣಾ ಬಾಂಡ್‌ಗಳ ನಿಷೇಧದ ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸ್ವೀಕರಿಸಿದ ಡೇಟಾವನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ 763 ಪುಟಗಳ ಎರಡು ಲೀಸ್ಟ್ ಪೋಸ್ಟ್ ಮಾಡಲಾಗಿದೆ. ಮೊದಲ ಪಟ್ಟಿಯಲ್ಲಿ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದವರ ವಿವರ ಇದೆ. ಎರಡನೇ ಪಟ್ಟಿಯಲ್ಲಿ ರಾಜಕೀಯ ಪಕ್ಷಗಳು ಪಡೆದ ಬಾಂಡ್‌ಗಳ ವಿವರಗಳಿವೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಎಲ್ಲಾ ಮಾಹಿತಿಯು 3 ಮುಖಬೆಲೆಯ ಬಾಂಡ್‌ಗಳ ಖರೀದಿಗೆ ಸಂಬಂಧಿಸಿದೆ. ಎಲೆಕ್ಟೋರಲ್ ಬಾಂಡ್ ಗಳನ್ನು 1 ಲಕ್ಷ, 10 ಲಕ್ಷ ಹಾಗೂ 1 ಕೋಟಿ ರೂಪಾಯಿಗೆ ಖರೀದಿಸಲಾಗಿದೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್‌ಗೆ ದೇಣಿಗೆಗಳನ್ನು ಸ್ವೀಕರಿಸಲಾಗಿದೆ. ಆದರೆ  ಯಾವ ಕಂಪನಿ ಯಾವ ಪಕ್ಷಕ್ಕೆ ದೇಣಿಗೆ ನೀಡಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ.

ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ಮಾರ್ಚ್ 13 ರಂದು ಎಸ್‌ಬಿಐ (SBI) ಈ ಡೇಟಾವನ್ನು ಚುನಾವಣಾ (Election) ಆಯೋಗಕ್ಕೆ ಸಲ್ಲಿಸಿತ್ತು. ಇದಾದ ನಂತರ ಚುನಾವಣಾ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಈ ಡೇಟಾವನ್ನು ಅಪ್‌ಲೋಡ್ ಮಾಡಿದೆ.

Tap to resize

Latest Videos

ಚುನಾವಣಾ ಬಾಂಡ್‌ಗೆ ಗರಿಷ್ಠ ದೇಣಿಗೆ ನೀಡಿದ Future Gaming and Hotel Services ಬಗ್ಗೆ ಇಲ್ಲಿದೆ ಮಾಹಿತಿ!

ಯಾವ ಕಂಪನಿ ಎಷ್ಟು ಖರೀದಿ? : ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ, ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸೇವೆಗಳು 1,368 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಖರೀದಿ ಮಾಡಿವೆ. ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ 966 ಕೋಟಿ  ರೂಪಾಯಿ ಬಾಂಡ್ ಖರೀದಿ ಮಾಡಿದೆ. ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ 410 ಕೋಟಿ ಹಾಗೂ ವೇದಾಂತ ಲಿಮಿಟೆಡ್ 400 ಕೋಟಿ ಬಾಂಡ್ ಖರೀದಿ ಮಾಡಿವೆ. ಈ ಪಟ್ಟಿಯಲ್ಲಿ ಹಲ್ಡಿಯಾ ಎನರ್ಜಿ ಲಿಮಿಟೆಡ್,ಭಾರ್ತಿ ಗ್ರೂಪ್, ಎಸ್ಸೆಲ್ ಮೈನಿಂಗ್, ಇಂಡಸ್ಟ್ರೀಸ್ ಲಿಮಿಟೆಡ್, ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್, ಅಪೊಲೊ ಟೈರ್ಸ್, ಲಕ್ಷ್ಮಿ ಮಿತ್ತಲ್, ಎಡೆಲ್‌ವೀಸ್, ಪಿವಿಆರ್, ಕೆವೆಂಟರ್ ಸೇರಿದಂತೆ ಅನೇಕ ಹೆಸರುಗಳನ್ನು ನೀವು ನೋಡ್ಬಹುದು. 

ಚುನಾವಣಾ ಬಾಂಡ್ ಎಂದರೇನು? : ಚುನಾವಣಾ ಬಾಂಡ್‌ಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಆರ್ಥಿಕ ಸಾಧನವಾಗಿದೆ. ಇದು ಪ್ರಾಮಿಸರಿ ನೋಟ್‌ನಂತಿದ್ದು, ಭಾರತದ ಯಾವುದೇ ನಾಗರಿಕ ಅಥವಾ ಕಂಪನಿಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆಯ್ದ ಶಾಖೆಗಳಿಂದ ಖರೀದಿಸಬಹುದು ಮತ್ತು ತಮ್ಮ ಆಯ್ಕೆಯ ಯಾವುದೇ ರಾಜಕೀಯ ಪಕ್ಷಕ್ಕೆ ಅನಾಮಧೇಯವಾಗಿ ದೇಣಿಗೆ ನೀಡಬಹುದು. ಭಾರತ ಸರ್ಕಾರವು 2017 ರಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯನ್ನು ಸರ್ಕಾರವು 29 ಜನವರಿ 2018 ರಂದು ಕಾನೂನುಬದ್ಧವಾಗಿ ಜಾರಿಗೊಳಿಸಿತ್ತು. ಕೆವೈಸಿ ವಿವರಗಳು ಲಭ್ಯವಿರುವ ಬ್ಯಾಂಕ್ ಖಾತೆಯನ್ನು ಹೊಂದಿರುವ ಯಾವುದೇ ದಾನಿ ಇವುಗಳನ್ನು ಖರೀದಿಸಬಹುದು. ಚುನಾವಣಾ ಬಾಂಡ್‌ನಲ್ಲಿ ಪಾವತಿಸುವವರ ಹೆಸರಿರುವುದಿಲ್ಲ. ಯೋಜನೆಯಡಿಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿರ್ದಿಷ್ಟ ಶಾಖೆಗಳಿಂದ 1,000 ರೂಪಾಯಿ, 10,000, ರೂಪಾಯಿ, 1 ಲಕ್ಷದಿಂದ 1 ಕೋಟಿಯ ಯಾವುದೇ ಮುಖಬೆಲೆಯ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಬಹುದಾಗಿತ್ತು. 

Breaking: ಚುನಾವಣಾ ಬಾಂಡ್‌ಗಳ ನಂಬರ್‌ ಕೂಡ ಎಸ್‌ಬಿಐ ನೀಡಬೇಕು: ಸುಪ್ರೀಂ ಕೋರ್ಟ್‌

ಈ ಬಾಂಡ್‌ಗಳ ಮೇಲಿನ ಪಾರದರ್ಶಕತೆಗೆ ಸಂಬಂಧಿಸಿದಂತೆ ಹಲವು ಪ್ರಶ್ನೆಗಳನ್ನು ಎತ್ತಲಾಗಿತ್ತು.  ಈ ಯೋಜನೆಯನ್ನು ಮನಿ ಲಾಂಡರಿಂಗ್ ಅಥವಾ ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸಲು ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಚುನಾವಣಾ ಬಾಂಡ್‌ಗಳ ಸಿಂಧುತ್ವವನ್ನು ಪ್ರಶ್ನಿಸಿ, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್,   ಕಾಮನ್ ಕಾಸ್ ಮತ್ತು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಾರ್ಟಿ ಸೇರಿದಂತೆ ಐವರು ಅರ್ಜಿದಾರರು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು. ಚುನಾವಣಾ ಬಾಂಡ್ ನಿಷೇಧ : ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ 5 ನ್ಯಾಯಾಧೀಶರ ಸಂವಿಧಾನ ಪೀಠವು ಫೆಬ್ರವರಿ 15 ರಂದು ಚುನಾವಣಾ ಬಾಂಡ್‌ಗಳ ಮಾರಾಟವನ್ನು ನಿಷೇಧಿಸಿದೆ. 

click me!