ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಬ್ರೇಕ್‌?

Published : Apr 22, 2020, 02:11 PM ISTUpdated : Apr 22, 2020, 02:12 PM IST
ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಬ್ರೇಕ್‌?

ಸಾರಾಂಶ

ಕೇಂದ್ರ ನೌಕರರ ತುಟ್ಟಿಭತ್ಯೆ ಹೆಚ್ಚಳಕ್ಕೆ ಬ್ರೇಕ್‌?| ಈ ವರ್ಷವಿಡೀ ಏರಿಕೆಯ ಸಾಧ್ಯತೆ ಇಲ್ಲವೇ ಇಲ್ಲ| ಇಂದಿನ ಸಂಪುಟ ಸಭೆಯಲ್ಲಿ ನಿರ್ಧಾರ ಸಾಧ್ಯತೆ

ನವದೆಹಲಿ(ಏ.22): ಕೇಂದ್ರ ಸರ್ಕಾರಿ ನೌಕರರು ಮತ್ತು ನಿವೃತ್ತ ಸಿಬ್ಬಂದಿಗಳಿಗೆ ಬುಧವಾರ ಕೇಂದ್ರ ಸರ್ಕಾರದಿಂದ ಕಹಿ ಸುದ್ದಿ ರವಾನೆಯಾಗುವ ನಿರೀಕ್ಷೆ ಇದೆ. ಮೂಲಗಳ ಪ್ರಕಾರ, ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಕಳೆದು ತಿಂಗಳು ಘೋಷಿಸಿದ್ದ ಶೇ.4ರಷ್ಟುತುಟ್ಟಿಭತ್ಯೆ ಏರಿಕೆಯನ್ನು ಸರ್ಕಾರ ತಡೆ ಹಿಡಿಯುವ ಸಾಧ್ಯತೆ ಇದೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಅದರಲ್ಲಿ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು ಕೇಂದ್ರ ಸರ್ಕಾರ ತುಟ್ಟಿಭತ್ಯೆಯನ್ನು ಶೇ.17ರಿಂದ ಶೇ.21ಕ್ಕೆ ಹೆಚ್ಚಿಸಿತ್ತು.

ಜಗತ್ತಿನಲ್ಲಿ ತೈಲ ಬೆಲೆ ಕುಸಿತ; ಭಾರತಕ್ಕೆ ಲಾಭವಿದೆಯೇ?

ಆದರೆ ಕೊರೋನಾದಿಂದ ಆರ್ಥಿಕತೆಗೆ ಭಾರೀ ಹೊಡೆತ ಬಿದ್ದಿರುವ ಹಿನ್ನೆಲೆಯಲ್ಲಿ ಈ ತುಟ್ಟಿಭತ್ಯೆ ಏರಿಕೆಯನ್ನು ತಕ್ಷಣಕ್ಕೆ ತಡೆಹಿಡಿಯಲಾಗುವುದು. ಜೊತೆಗೆ ಇದೇ ನೀತಿಯನ್ನು ವರ್ಷಾಂತ್ಯದವರೆಗೂ ವಿಸ್ತರಿಸಲಾಗುವುದು. ಒಂದು ವೇಳೆ ಮುಂದಿನ ವರ್ಷ ಪರಿಸ್ಥಿತಿ ಸುಧಾರಿಸಿದರೆ, ಮುಂದಿನ ವರ್ಷದ ಪ್ರಸಕ್ತ ವರ್ಷದ ಹೆಚ್ಚಳವನ್ನೂ ಸೇರಿಸಿ ನೀಡುವ ಬಗ್ಗೆ ಸರ್ಕಾರ ನಿರ್ಧಾರ ಪ್ರಕಟಿಸಲಿದೆ ಎನ್ನಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ನೌಕರರಿಗೆ 8ನೇ ವೇತನ ಆಯೋಗ ಬಂಪರ್, ಜ.1ರಿಂದ ಪಿಯೋನ್‌ಗೆ 45000, ಸೆಕ್ರೆಟರಿಗೆ 5 ಲಕ್ಷ ರೂ ಸ್ಯಾಲರಿ
2026ರಲ್ಲಿ ಚಿನ್ನದ ಬೆಲೆ ಎಷ್ಟಾಗುತ್ತೆ? ಹೊಸವರ್ಷದಂದು ಚಿನ್ನದಲ್ಲಿಚಿನ್ನದಲ್ಲಿ 3 ಲಕ್ಷ ರೂ. ಹೂಡಿಕೆ ಮಾಡಿದ್ರೆ ಮುಂದಿನ ವರ್ಷ ನಿಮ್ಮ ಕೈ ಸೇರುವ ಹಣವೆಷ್ಟು?