Jet fuel price ವಿಮಾನ ಇಂಧನ ಬೆಲೆ ಸಾರ್ವಕಾಲಿಕ ಗರಿಷ್ಠ, ಫ್ಲೈಟ್ ಪ್ರಯಾಣ ಮತ್ತಷ್ಟು ದುಬಾರಿ!

Published : May 01, 2022, 07:48 PM IST
Jet fuel price ವಿಮಾನ ಇಂಧನ ಬೆಲೆ ಸಾರ್ವಕಾಲಿಕ ಗರಿಷ್ಠ, ಫ್ಲೈಟ್ ಪ್ರಯಾಣ ಮತ್ತಷ್ಟು ದುಬಾರಿ!

ಸಾರಾಂಶ

ವಿಮಾನ ಇಂಧನ ದರ ಶೇಕಡಾ 3.22 ರಷ್ಟು ಹೆಚ್ಚಳ ಪ್ರತಿ ಕಿಲೋಲೀಟರ್‌ಗೆ ರೂ 3,649.13 ಏರಿಕೆ ವಿಮಾನ ಟಿಕೆಟ್ ದರ ಏರಿಕೆ ಬಿಸಿ, ಪ್ರಯಾಣ ದುಬಾರಿ

ನವದೆಹಲಿ(ಮೇ.01): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದರ ಏರಿಕೆಗೆ ಅನುಗುಣವಾಗಿ ಇಂದು(ಮೇ.01) ವೈಮಾನಿಕ ಇಂಧನ ದರ ಶೇಕಡಾ 3.22 ರಷ್ಟುಏರಿಕೆಯಾಗಿದೆ. ಇದು ಸಾರ್ವಕಾಲಿಕ ಗರಿಷ್ಠ ಏರಿಕೆಯಾಗಿದೆ. ಈ ವರ್ಷದಲ್ಲಿ 9 ಬಾರಿ ವಿಮಾನ ಇಂಧನ ದರವನ್ನು ಏರಿಕೆ ಮಾಡಲಾಗಿದ್ದು, ಇದೀಗ ವಿಮಾನ ಪ್ರಯಾಣ ದುಬಾರಿಯಾಗಲಿದೆ.

ಏವಿಯೇಷನ್ ​​ಟರ್ಬೈನ್ ಇಂಧನ (ATF) ಜೆಟ್ ಇಂಧನ ದರ ಇದೀಗ ಪ್ರತಿ ಕಿಲೋಲೀಟರ್‌ಗೆ ರೂ 3,649.13 ಏರಿಕೆಯಾಗಿದೆ. ಮುಂಬೈನಲ್ಲಿ ಎATF ಈಗ ಪ್ರತಿ ಕಿಲೋ ಲೀಟರ್‌ಗೆ ರೂ 1,15,617.24, ಕೋಲ್ಕತ್ತಾದಲ್ಲಿ ರೂ 1,21,430.48 ಮತ್ತು ಚೆನ್ನೈನಲ್ಲಿ ರೂ 1,20,728.03 ಆಗಿದೆ.

2 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ವಿಮಾನ ಸಂಚಾರ ಶುರು!

ಕೊರೋನಾ ಕಾರಣ ವಿಮಾನಯಾನ ಸಂಸ್ಥೆಗಳು ತೀವ್ರ ಹೊಡೆತ ಅನುಭವಿಸಿದೆ. ಅಂತಾರಾಷ್ಟ್ರೀಯ ವಿಮಾನಗಳ ನಿರ್ಬಂಧ ಸೇರಿದಂತೆ ಹಲವು ಕಾರಣಗಳಿಂದ ವಿಮಾನಯಾನ ಸಂಸ್ಥೆಗಳು ಈಗಷ್ಟೇ ಚೇತಿರಿಸಿಕೊಳ್ಳುತ್ತಿದೆ. ಇದರ ನಡುವೆ ಇಂಧನ ದರ ಏರಿಕೆ ಮತ್ತೊಂದು ಆಘಾತ ನೀಡಿದೆ.

ವಿಮಾನ ಇಂಧನ ಬೆಲೆ 1 ಲಕ್ಷ ರು.ಗೆ ಏರಿಕೆ
ಮಾರ್ಚ್ ತಿಂಗಳಲ್ಲಿ ವಿಮಾನ ಇಂಧನ ಬೆಲೆ ಏರಿಕೆ ಮಾಡಲಾಗಿತ್ತು. ವಿಮಾನ ಇಂಧನ ದರವನ್ನು ಪ್ರತಿ ಕಿಲೋ ಲೀಟರ್‌ಗೆ 17,135.63 ರು. ಹೆಚ್ಚಳ ಮಾಡಲಾಗಿದ್ದು, ಈ ಮೂಲಕ ದೆಹಲಿಯಲ್ಲಿ 1 ಕಿಲೋ ಲೀಟರ್‌ ಇಂಧನದ ಬೆಲೆ 1.1 ಲಕ್ಷ ರು.ಗೆ ಏರಿಕೆಯಾಗಿದೆ. ಮುಂಬೈನಲ್ಲಿ 1.09 ಲಕ್ಷಕ್ಕೆ, ಕೋಲ್ಕತಾದಲ್ಲಿ 1.14 ಲಕ್ಷಕ್ಕೆ ಮತ್ತು ಚೆನ್ನೈನಲ್ಲಿ 1.14 ಲಕ್ಷಕ್ಕೆ ಏರಿಕೆಯಾಗಿದೆ. ವಿಮಾನ ಇಂಧನ ಬೆಲೆಯನ್ನು ಪ್ರತಿ ತಿಂಗಳ 1 ಮತ್ತು 16ನೇ ತಾರೀಖಿನಂದು ಅಂತಾರಾಷ್ಟ್ರೀಯ ತೈಲ ಬೆಲೆಯನ್ನು ಆಧರಿಸಿ ಪರಿಷ್ಕರಣೆ ಮಾಡಲಾಗುತ್ತದೆ.

ವಿಮಾನದಲ್ಲಿ ಏಕಾಂಗಿಯಾಗಿ ಸಂಚರಿಸಿದ 7 ವರ್ಷದ ಬಾಲಕಿ

ವಾಣಿಜ್ಯ ಸಿಲಿಂಡರ್‌ ದುಬಾರಿ
ಬೆಲೆ ಏರಿಕೆ ಹಿನ್ನೆಲೆಯಲ್ಲಿ ತಿಂಡಿ-ತಿನಿಸು ದರ ಏರಿಕೆಗೆ ಹೋಟೆಲ್‌ ಉದ್ಯಮ ಸಜ್ಜಾಗಿರುವಾಗಲೇ, ಕೇಂದ್ರ ಸರ್ಕಾರಿ ತೈಲ ಕಂಪನಿಗಳು ಮತ್ತೊಂದು ಹೊಡೆತ ನೀಡಿವೆ. ಹೋಟೆಲ್‌- ರೆಸ್ಟೋರೆಂಟ್‌ನಂತಹ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುವ ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಒಮ್ಮೆಲೆ 249.50 ರು.ನಷ್ಟುಹೆಚ್ಚಳ ಮಾಡಿವೆ. ಹೀಗಾಗಿ 19 ಕೆ.ಜಿ. ತೂಕದ ವಾಣಿಜ್ಯ ಸಿಲಿಂಡರ್‌ಗೆ ಇನ್ನು 2253 ರು. ಅನ್ನು ತೆರಬೇಕಾಗಿದೆ.

ಮತ್ತೊಂದೆಡೆ, ವಿಮಾನಗಳಿಗೆ ಬಳಸುವ ಏವಿಯೇಷನ್‌ ಟರ್ಬೈನ್‌ ಫ್ಯುಯೆಲ್‌ (ಎಟಿಎಫ್‌) ದರವನ್ನು ಕಿಲೋ ಲೀಟರ್‌ಗೆ 2258.54 ರು.ನಷ್ಟುಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಒಂದು ಕಿಲೋಲೀಟರ್‌ ಎಟಿಎಫ್‌ಗೆ ವಿಮಾನ ಕಂಪನಿಗಳು 1,12,924 (ಲೀಟರ್‌ಗೆ 112.92) ರು. ಪಾವತಿಸಬೇಕಾಗಿದೆ. ಎಟಿಎಫ್‌ ಈ ಮಟ್ಟಕ್ಕೆ ಏರಿಕೆಯಾಗಿರುವುದು ಸಾರ್ವಕಾಲಿಕ ದಾಖಲೆಯಾಗಿದೆ.

10 ದಿನಗಳ ಪೈಕಿ 9 ದಿನ ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು 6.40 ರು.ನಷ್ಟುಹೆಚ್ಚಳ ಮಾಡಿದ್ದ ತೈಲ ಕಂಪನಿಗಳು ಶುಕ್ರವಾರ ಬೆಲೆ ಪರಿಷ್ಕರಣೆ ಮಾಡಿಲ್ಲ. ಮನೆಗಳ ಬಳಕೆಗೆ ಉಪಯೋಗಿಸುವ ಅಡುಗೆ ಅನಿಲ ಸಿಲಿಂಡರ್‌ ಬೆಲೆಯಲ್ಲೂ ಏರಿಳಿಕೆ ಆಗಿಲ್ಲ. 14.2 ಕೆಜಿ ತೂಕದ ಈ ಸಿಲಿಂಡರ್‌ ದರವನ್ನು ಮಾ.22ರಂದು 50 ರು.ನಷ್ಟಹೆಚ್ಚಳ ಮಾಡಲಾಗಿತ್ತು.

ಅಂತಾರಾಷ್ಟ್ರೀಯ ದರಗಳನ್ನು ಆಧರಿಸಿ ಪೆಟ್ರೋಲ್‌, ಡೀಸೆಲ್‌ ದರ ನಿತ್ಯ, ಅಡುಗೆ ಅನಿಲ ಮಾಸಿಕ ಹಾಗೂ ಜೆಟ್‌ ಇಂಧನ ಬೆಲೆಯನ್ನು ಪ್ರತಿ ತಿಂಗಳ 1 ಮತ್ತು 16ನೇ ತಾರೀಖಿನಿಂದು ಪರಿಷ್ಕರಿಸಲಾಗುತ್ತದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!