ಜೆಟ್ ಏರ್ ವೇಸ್ ಸಂಪೂರ್ಣ ದಿವಾಳಿ

Published : Jun 21, 2019, 10:07 AM IST
ಜೆಟ್ ಏರ್ ವೇಸ್ ಸಂಪೂರ್ಣ ದಿವಾಳಿ

ಸಾರಾಂಶ

ಸಾಲದಲ್ಲಿರುವ ಜೆಟ್‌ ಏರ್‌ವೇಸ್‌ ಅನ್ನು ದಿವಾಳಿ ಪ್ರಕ್ರಿಯೆಗೆ ಗುರಿಪಡಿಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ ಸಮ್ಮತಿ ನೀಡಿದೆ. 

ಮುಂಬೈ  [ಜೂ.21]: ಸಾವಿರಾರು ಕೋಟಿ ರು. ಸಾಲದಲ್ಲಿರುವ ಜೆಟ್‌ ಏರ್‌ವೇಸ್‌ ಅನ್ನು ದಿವಾಳಿ ಪ್ರಕ್ರಿಯೆಗೆ ಗುರಿಪಡಿಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ ಗುರುವಾರ ಸಮ್ಮತಿ ನೀಡಿದೆ. 

ಈ ಕುರಿತು ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಮಾಡಿದ್ದ ಮನವಿಯನ್ನು ಪುರಸ್ಕರಿಸಿದೆ. ಅಲ್ಲದೆ ಇದನ್ನು ರಾಷ್ಟ್ರೀಯ ಮಹತ್ವದ ಪ್ರಕರಣ ಎಂದು ಪರಿಗಣಿಸಿರುವ ಎನ್‌ಸಿಎಲ್‌ಟಿ, ದಿವಾಳಿ ಪ್ರಕ್ರಿಯೆ ಪೂರ್ಣಕ್ಕೆ 90 ದಿನಗಳ ಗಡುವು ನೀಡಿದೆ.

 ಜೆಟ್‌ ಷೇರು ಖರೀದಿಗೆ ಯಾವುದೇ ಕಂಪನಿಗಳ ಮುಂದೆ ಬರದ ಹಿನ್ನೆಲೆಯಲ್ಲಿ ತಾವು ಹೊಂದಿರುವ 8000 ಕೋಟಿ ರು. ಸಾಲ ವಸೂಲಿಗೆ ಬ್ಯಾಂಕ್‌ಗಳು ಈ ಕ್ರಮ ಕೈಗೊಂಡಿವೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಬೆಂಗಳೂರಿನಲ್ಲಿ ಊಬರ್‌ ಕ್ರಾಂತಿಯ ಹೆಜ್ಜೆ, B2B ಲಾಜಿಸ್ಟಿಕ್ಸ್, ಮೆಟ್ರೋ ಟಿಕೆಟ್‌ ಕೂಡ ಲಭ್ಯ!
Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..