ಕೇವಲ 1 ರೂ.ಗೆ ಜೆಟ್‌ ಏರ್‌ವೇಸ್ ಮಾರಾಟ: ಖರೀದಿಸ್ತೀರಾ?

Published : Feb 20, 2019, 12:39 PM IST
ಕೇವಲ 1 ರೂ.ಗೆ ಜೆಟ್‌ ಏರ್‌ವೇಸ್ ಮಾರಾಟ: ಖರೀದಿಸ್ತೀರಾ?

ಸಾರಾಂಶ

ಕೇವಲ 1 ರೂ.ಗೆ ಜೆಟ್‌ ಏರ್‌ವೇಸ್ ಷೇರು ಮಾರಾಟ| ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್‌ವೇಸ್ ಕಂಪನಿ| ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಬಹುಪಾಲು ಷೇರುಗಳ ಮಾರಾಟ|  ಜೆಟ್ ಏರ್‌ವೇಸ್‌ನ ಶೇ.50.01 ರಷ್ಟು ಷೇರುಗಳನ್ನು ಕೊಳ್ಳಲಿವೆ ಬ್ಯಾಂಕ್‌ಗಳು| 114 ಮಿಲಿಯನ್ ಹೊಸ ಷೇರುಗಳನ್ನು ಪರಿಚಯಿಸಲು ಸಂಸ್ಥೆ ಮುಂದಾದ ಸಂಸ್ಥೆ|

ನವದೆಹಲಿ(ಫೆ.20): ಆರ್ಥಿಕ ಬಾಧ್ಯತೆ, ಸಾಲದ ಹೊರೆಯನ್ನು ಇಳಿಸಿಕೊಳ್ಳುವ ನಿಟ್ಟಿನಲ್ಲಿ ಜೆಟ್ ಏರ್‌ವೇಸ್ ವಿಮಾನ ಸಂಸ್ಥೆ ತನ್ನ ಬಹುಪಾಲು ಷೇರುಗಳನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಕೇವಲ 1 ರೂಪಾಯಿಗೆ ಮಾರಾಟ ಮಾಡಲಿದೆ. ಫೆ.21 ರಂದು ಈ ಕುರಿತು ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ. 

ಕಳೆದ 10 ವರ್ಷಗಳಿಂದ ಜೆಟ್ ಏರ್‌ವೇಸ್ ದೇಶದ ಟಾಪ್ 3 ವಿಮಾನ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಈಗ ಸಾಲದ ಸುಳಿಯಲ್ಲಿ ಸಿಲುಕಿರುವ ಜೆಟ್ ಏರ್‌ವೇಸ್‌ನ್ನು ಮೇಲೆತ್ತಲು ಎಸ್‌ಬಿಐ ಸೇರಿದಂತೆ ಇತರ ಲೆಂಡರ್‌ಗಳು ಜೆಟ್ ಏರ್‌ವೇಸ್‌ನ ಶೇ.50.01 ರಷ್ಟು ಷೇರುಗಳನ್ನು ಕೇವಲ 1 ರೂ.ಗೆ ಖರೀದಿಸಲಿವೆ.

ಇದರಿಂದ 114 ಮಿಲಿಯನ್ ಹೊಸ ಷೇರುಗಳನ್ನು ಪರಿಚಯಿಸಲು ಸಂಸ್ಥೆ ಮುಂದಾಗಿವೆ. ನೆಗೆಟಿವ್ ನೆಟ್ ವರ್ತ್ ಇರುವ ಸಂಸ್ಥೆಗಳು ಚೇತರಿಸಿಕೊಳ್ಳುವುದಕ್ಕೆ ಈ ರೀತಿಯ ಪ್ರಕ್ರಿಯೆ ಸಹಕಾರಿಯಾಗಲಿದ್ದು, ಇದನ್ನು ಬ್ಯಾಲ್-ಲೆಡ್ ಪ್ರಾವಿಷನಲ್ ರೆಸಲ್ಯೂಶನ್ ಪ್ಲಾನ್ ಅಥವಾ ಬಿಎಲ್‌ಪಿಆರ್‌ಪಿ ಎನ್ನಲಾಗುತ್ತದೆ. ಈ ಮೂಲಕ ಜೆಟ್‌ ಏರ್‌ವೇಸ್‌ಗೆ ಹೂಡಿಕೆದಾರರಿಂದ ಇಕ್ವಿಟಿ ಲಭ್ಯವಾಗಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಕೇವಲ ಆಧಾರ್ ಸಂಖ್ಯೆ ಬಳಸಿ ನಿಮ್ಮ ಬ್ಯಾಂಕ್ ಹಣ ಲಪಟಾಯಿಸಲು ಸಾಧ್ಯವೇ? ಈ ಬಗ್ಗೆ UIDAI ನೀಡಿದ ಮಹತ್ವದ ಮಾಹಿತಿ ಇಲ್ಲಿದೆ!
Techie Career Change: 2 ಕೋಟಿ ಸಂಬಳದ ಕೆಲಸ ಬಿಟ್ಟು ಕೆಫೆ ತೆರೆದ 29ರ ಯುವತಿ! ಟೆಕ್ಕಿಯ ಕಥೆನೇ ರೋಚಕ