ಈ ಅಕೌಂಟ್'ನಲ್ಲಿದೆ 1 ಲಕ್ಷ ಕೋಟಿ: ಹಣ ಸೇರಿದೆ ಮೋದಿ ನಿರೀಕ್ಷೆ ದಾಟಿ!

By Web Desk  |  First Published Jul 10, 2019, 3:47 PM IST

ಪ್ರಧಾನಿ ಮೋದಿ ನಿರೀಕ್ಷೆ ಮೀರಿ ಸೇರಿದ ಹಣ| 1 ಲಕ್ಷ ಕೋಟಿ ರೂ. ಕಂಡು ದಿಗ್ಬ್ರಾಂತರಾದ ಪ್ರಧಾನಿ ಮೋದಿ| ಎಲ್ಲರ ನಿರೀಕ್ಷೆಗೂ ಮೀರಿ ಹಣ ಸಂದಾಯ| ಪ್ರಧಾನಮಂತ್ರಿ ಜನ್ ಧನ್ ಯೋಜನೆ ನಿರೀಕ್ಷೆಗೂ ಮೀರಿ ಯಶಸ್ವಿ| ಜನ್ ಧನ್ ಖಾತೆಯಲ್ಲಿ 1 ಲಕ್ಷ ಕೋಟಿಗೂ ಅಧಿಕ ಹಣ ಜಮಾವಣೆ|

Jan Dhan Accounts Deposits  Cross  Rs 1 Lakh Crore

ನವದೆಹಲಿ(ಜು.10): ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಜನ್ ಧನ್ ಅಕೌಂಟ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಎಲ್ಲರಿಗೂ ಬ್ಯಾಂಕ್ ಅಕೌಂಟ್ ಎಂಬ ಸದುದ್ದೇಶದಿಂದ ಆರಂಭವಾದ ಈ ಯೋಜನೆ ಇದೀಗ ಬರೋಬ್ಬರಿ 1 ಲಕ್ಷ ಕೋಟಿ ರೂ. ಮೌಲ್ಯ ತೂಗುತ್ತಿದೆ.

ಹೌದು, ಜನ್ ಧನ್ ಅಕೌಂಟ್ ಅಟಡಿ ತೆರಯಲಾದ ಖಾತೆಗಳಲ್ಲಿ ಇದೀಗ ಬರೋಬ್ಬರಿ 1 ಲಕ್ಷ ಕೋಟಿ ರೂ. ಜಮಾವಣೆಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

Tap to resize

Latest Videos

ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ಒಟ್ಟು 36.06 ಕೋಟಿ ಅಕೌಂಟ್ ತೆರೆಯಲಾಗಿದ್ದು, 1,00,495.94 ರೂ. ಜಮಾವಣೆಗೊಂಡಿದೆ ಎಂದು ಹಣಕಾಸು ಇಲಾಖೆ ಮಾಹಿತಿ ನೀಡಿದೆ.

ಎಲ್ಲರಿಗೂ ಬ್ಯಾಂಕ್ ಅಕೌಂಟ್ ಎಂಬ ಸದುದ್ದೇಶದಿಂದ ಮೋದಿ 1.0 ಸರ್ಕಾರದ ಅವಧಿಯಲ್ಲಿ, ಕಳೆದ ಆಗಸ್ಟ್ 28, 2014ರಲ್ಲಿ ಪ್ರಧಾನಮಂತ್ರಿ ಜನ್ ಧನ್ ಯೋಜನೆಯನ್ನು ಪ್ರಾರಂಭಿಸಲಾಗಿತ್ತು.

ಇನ್ನು 2018ರ ಮಾರ್ಚ್‌ನಲ್ಲಿ 5,10 ಕೋಟಿ(ಶೇ.16.22)ರಷ್ಟು ಅಕೌಂಟ್'ಗಳು ಶೂನ್ಯ ಬ್ಯಾಲೆನ್ಸ್ ಹೊಂದಿದ್ದು, 2019ರ ಮಾರ್ಚ್‌ನಲ್ಲಿ 5.07 ಕೋಟಿ(ಶೇ.14.37)ರಷ್ಟು ಅಕೌಂಟ್'ಳು ಜಿರೋ ಬ್ಯಾಲೆನ್ಸ್ ಹೊಂದಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

vuukle one pixel image
click me!
vuukle one pixel image vuukle one pixel image