
ನವದೆಹಲಿ (ಆ.15): ಟಾಟಾ ಸ್ಟೀಲ್ ಕಂಪನಿಯು ತನ್ನ ಒಡೆತನದಲ್ಲಿದ್ದ ಜಮ್ಶೆಡ್‌ಪುರ ಎಫ್‌ಸಿ ತಂಡದ ಸಂಪೂರ್ಣ ಪಾಲನ್ನು ಗೋವಾದ ಚರ್ಚಿಲ್ ಬ್ರದರ್ಸ್ ಕ್ಲಬ್‌ಗೆ ಕೇವಲ 100 ರು.ಗೆ ಮಾರಾಟ ಮಾಡಿದೆ. ಈ ಮೂಲಕ ಸೆ.4ರಿಂದ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಂದಿದೆ.
ಜಮ್ಶೆಡ್‌ಪುರ ಫುಟ್ಬಾಲ್ ಆ್ಯಂಡ್ ಸ್ಪೋರ್ಟಿಂಗ್ ಪ್ರೈವೇಟ್ ಲಿಮಿಟೆಡ್ (ಜೆಎಫ್ಎಸ್‌ಪಿಎಲ್) ಕ್ಲಬ್‌ನಲ್ಲಿ ಟಾಟಾ ಸ್ಟೀಲ್ 4.08 ಕೋಟಿ ಷೇರುಗಳನ್ನು ಹೊಂದಿತ್ತು. ಈಗ ಅದೆಲ್ಲವನ್ನೂ ಕೇವಲ ₹100ಗೆ ಚರ್ಚಿಲ್ ಬ್ರದರ್ಸ್‌ಗೆ ವರ್ಗಾವಣೆ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಒಪ್ಪಂದಕ್ಕೂ ಸಹಿ ಹಾಕಿದೆ. 2026ರ ಆರ್ಥಿಕ ವರ್ಷದಲ್ಲಿ ಕ್ಲಬ್ ₹32.23 ಕೋಟಿ ವಹಿವಾಟು ನಡೆಸಿತ್ತು. ಆದರೂ ಮಾರ್ಚ್ 2026ರ ವೇಳೆಗೆ ಅದರ ನಿವ್ವಳ ಮೌಲ್ಯವು ಋಣಾತ್ಮಕ 5.8 ಕೋಟಿ ರುಪಾಯಿಗಳಷ್ಟಿತ್ತು. ಜನಪ್ರಿಯ ಕ್ಲಬ್ ಆದರೂ ಲಾಭದ ಹಾದಿಯಲ್ಲಿರಲಿಲ್ಲ. ಹಾಗಾಗಿ 100 ರು. ಅನ್ನು ಮೌಲ್ಯ ಎಂದು ಪರಿಗಣಿಸದೆ ಒಂದು ಸಾಂಕೇತಿಕ ವರ್ಗಾವಣೆ ರೀತಿಯಲ್ಲಿ ಟಾಟಾ ಸ್ಟೀಲ್ ಮಾಡಿದೆ.
ಈ ಮೂಲಕ ಸೆ.1ರಿಂದ ಜಮ್ಶೆಡ್‌ಪುರ ಕ್ಲಬ್‌ನ ಎಲ್ಲಾ 12 ಆಟಗಾರರು ಮತ್ತು ಇಬ್ಬರು ಕೋಚ್‌ಗಳ ಹೊಣೆಯನ್ನು ಚರ್ಚಿಲ್ ಕ್ಲಬ್ ವಹಿಸಿಕೊಳ್ಳಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.