Latest Videos

Business : ತನ್ನ ಉದ್ಯೋಗಿಗಳನ್ನು ಕೋಟ್ಯಾಧಿಪತಿ ಮಾಡ್ತಿದೆ ಈ ಕಂಪನಿ

By Roopa HegdeFirst Published Jul 1, 2024, 11:51 AM IST
Highlights

ಕೆಲಸಕ್ಕೆ ತಕ್ಕಂತೆ ಸಂಬಳ ಸಿಕ್ಕಾಗ ಕೆಲಸ ಮಾಡಲು ಉತ್ಸಾಹವಿರುತ್ತೆ. ಕೆಲ ಕಂಪನಿ, ಉದ್ಯೋಗಿಗಳನ್ನು ಕತ್ತೆಯಂತೆ ದುಡಿಸಿಕೊಂಡ್ರೂ ಸರಿಯಾಗಿ ಸಂಬಳ ನೀಡೋದಿಲ್ಲ. ಮತ್ತೆ ಕೆಲ ಕಂಪನಿಗಳಿಗೆ ಕೈಚೆಲ್ಲಿ ಸಂಬಳ ನೀಡುವ ಜೊತೆಗೆ ಉದ್ಯೋಗಿಗಳಿಂದ ಉತ್ತಮ ಕೆಲಸ ತೆಗೆದುಕೊಳ್ಳುತ್ತವೆ. 
 

ಭಾರತದಲ್ಲಿರುವ ಕಂಪನಿಗಳು ಉದ್ಯೋಗಿಗಳಿಗೆ ಒಳ್ಳೆ ಸಂಬಳ ನೀಡುವುದಿಲ್ಲ ಎನ್ನುವ ಆರೋಪವಿದೆ. ಇದೇ ಕಾರಣಕ್ಕೆ ವಿದೇಶಕ್ಕೆ ಹೋಗುವ ಭಾರತೀಯ ವಿದ್ಯಾವಂತರ ಸಂಖ್ಯೆ ಹೆಚ್ಚಿದೆ. ಆದ್ರೆ ಭಾರತದಲ್ಲೂ ಲಕ್ಷದಲ್ಲಿ ಅಲ್ಲ ಕೋಟಿ ಲೆಕ್ಕದಲ್ಲಿ ಸಂಬಳ ನೀಡುವ ಕಂಪನಿ ಇದೆ. ಈಗ ನಾವು ಹೇಳ್ತಿರುವ ಕಂಪನಿ ತನ್ನ ಉದ್ಯೋಗಿಗಳನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿದೆ. ಈ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ವರ್ಷಕ್ಕೆ ಕೋಟಿ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದಾರೆ.

ಹೌದು, ಉದ್ಯೋಗಿ (Employee) ಗಳನ್ನು ಕೋಟ್ಯಾಧಿಪತಿ (Billionaire) ಗಳನ್ನಾಗಿ ಮಾಡ್ತಿರುವ ಕಂಪನಿ ಮತ್ತ್ಯಾವುದೂ ಅಲ್ಲ ಐಟಿಸಿ. 2023-24ರ ವಾರ್ಷಿಕ ವರದಿ ಪ್ರಕಾರ, ಈ ಅವಧಿಯಲ್ಲಿ ಕಂಪನಿ (Company) ಯಲ್ಲಿರುವ 1 ಕೋಟಿಗಿಂತ ಹೆಚ್ಚು ಆದಾಯ ಹೊಂದಿರುವವರ ಪಟ್ಟಿಗೆ 68 ಜನರು ಸೇರಿದ್ದಾರೆ. ಐಟಿಸಿ ಕಂಪನಿಯ 350 ಉದ್ಯೋಗಿಗಳ ವೇತನ 1 ಕೋಟಿ ರೂಪಾಯಿಗಿಂತ ಹೆಚ್ಚಿದೆ. ಅಂದರೆ ತಿಂಗಳಿಗೆ ಈ ಉದ್ಯೋಗಿಗಳು 8.5 ಲಕ್ಷಕ್ಕೂ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. 

17ನೇ ವಯಸ್ಸಿಗೆ ಮದುವೆ, ಮನೆಯಿಂದಲೇ ಐಸ್ ಕ್ರೀಮ್ ಮಾರಾಟ ಮಾಡಿ 6,000 ಕೋಟಿ ರೂ. ಕಂಪೆನಿ ಕಟ್ಟಿದ ಮಹಿಳೆ!

ಕಂಪನಿ ಪ್ರಕಾರ, 2023ರಲ್ಲಿ 282 ಉದ್ಯೋಗಿಗಳು ಒಂದು ಕೋಟಿ ರೂಪಾಯಿ ಸಂಬಳ ಪಡೆದಿದ್ದಾರೆ. ಹಿಂದಿನ ವರ್ಷ ಕಂಪನಿಯಲ್ಲಿ ಉದ್ಯೋಗಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಉದ್ಯೋಗಿಗಳ ಸಂಖ್ಯೆ ಹಿಂದಿನ ವರ್ಷ ಶೇಕಡಾ 3.5ರಷ್ಟು ಹೆಚ್ಚಾಗಿದ್ದು ಈಗ ಕಂಪನಿಯಲ್ಲಿ 24,567 ಜನರಿದ್ದಾರೆ. ಐಟಿಸಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ವೇತನ ಶೇಕಡಾ 5ರಷ್ಟು ಹೆಚ್ಚಾಗಿದೆ. ಇನ್ನು ಉನ್ನತ ಹುದ್ದೆಯಲ್ಲಿರುವ ಹಾಗೂ ಸಿಇಒ ಹಾಗೂ ಎಂಡಿ ವೇತನ ಶೇಕಡಾ 50ರಿಂದ 60ರಷ್ಟು ಏರಿಕೆ ಕಂಡಿದೆ.

ಸರಾಸರಿ ಸಂಬಳ : ಐಟಿಸಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸರಾಸರಿ ವೇತನ ಲೆಕ್ಕ ಹಾಕಿದ್ರೆ, ಪುರುಷರ ವೇತನ 1.11 ಕೋಟಿ ರೂಪಾಯಿ ಇದೆ. ಇನ್ನು ಮಹಿಳಾ ಸಿಬ್ಬಂದಿ ವೇತನ 1.07 ಕೋಟಿ ರೂಪಾಯಿ ಇದೆ. ಇದು ವಾರ್ಷಿಕ ಸಂಬಳವಾಗಿದ್ದು, ಪುರುಷ ಸಿಬ್ಬಂದಿ ತಿಂಗಳಿಗೆ 7.14 ಲಕ್ಷ ಸಂಬಳ ಪಡೆಯುತ್ತಿದ್ದಾರೆ. ಮಹಿಳಾ ಸಿಬ್ಬಂದಿ 7.03 ಲಕ್ಷ ಸರಾಸರಿ ವೇತನ ಪಡೆಯುತ್ತಿದ್ದಾರೆಂದು ವರದಿಯಲ್ಲಿ ಹೇಳಲಾಗಿದೆ. ಕಂಪನಿ ತನ್ನ ಒಟ್ಟೂ ಸಂಬಳದಲ್ಲಿ ಶೇಕಡಾ 10ರಷ್ಟನ್ನು ಮಹಿಳಾ ಸಿಬ್ಬಂದಿಗೆ ನೀಡ್ತಿದೆ.

ಉನ್ನತ ಅಧಿಕಾರಿಗಳ ಸಂಬಳ ಎಷ್ಟು ಗೊತ್ತಾ? : ಐಟಿಸಿಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವವರ ಸಂಬಳ ಎರಡು ಸಂಖ್ಯೆ ಮೀರಿದೆ. ಅಂದ್ರೆ 10 ಕೋಟಿಗಿಂತ ಹೆಚ್ಚು ಸಂಬಳವನ್ನು ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಪಡೆಯುತ್ತಿದ್ದಾರೆ. ಐಟಿಸಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಪುರಿ ಎಫ್‌ವೈ 28.62 ಕೋಟಿ ವೇತನ ಪಡೆದಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಅವರ ವೇತನ ಶೇಕಡಾ 49.6ರಷ್ಟು ಹೆಚ್ಚಾಗಿದೆ. ಇನ್ನು ಕಾರ್ಯನಿರ್ವಾಹಕ ನಿರ್ದೇಶಕರ ಸಂಬಳ ಶೇಕಡಾ 52.4ರಷ್ಟು ಹೆಚ್ಚಾಗಿದೆ. ಕಾರ್ಯನಿರ್ವಾಹಕ ನಿರ್ದೇಶಕ ಬಿ. ಸುಮಂತ್ 13.6 ಕೋಟಿ ವೇತನ ಪಡೆಯುತ್ತಿದ್ದಾರೆ. 

ದತ್ತಿಸಂಸ್ಥೆಗಳಿಗೆ ₹44000 ಕೋಟಿ ದಾನ: ದಾಖಲೆಯ ದೇಣಿಗೆ ನೀಡಿದ ವಾರನ್‌ ಬಫೆಟ್‌

ಐಟಿಸಿ ಕಂಪನಿ : 1910 ರಲ್ಲಿ ಸ್ಥಾಪಿತವಾದ ಕಂಪನಿ ಐಟಿಸಿ ಲಿಮಿಟೆಡ್. ಹೆಚ್ಚಿನ ಭಾರತೀಯರು ತಮ್ಮ ದೈನಂದಿನ ಜೀವನದಲ್ಲಿ ಒಂದಲ್ಲ ಒಂದು ಸಮಯದಲ್ಲಿ ಐಟಿಸಿಯ ಉತ್ಪನ್ನವನ್ನು ಬಳಸಿರುತ್ತಾರೆ. ಐಟಿಸಿ ಕಂಪನಿ ವಿಸ್ತಾರವಾಗಿದೆ. ಆಹಾರ, ವೈಯಕ್ತಿಕ ಆರೈಕೆ, ಸಿಗರೇಟ್ ಮತ್ತು ಸಿಗಾರ್‌, ಶಿಕ್ಷಣ ಮತ್ತು ಸ್ಟೇಷನರಿ ಉತ್ಪನ್ನ, ಅಗರಬತ್ತಿ, ಹೋಟೆಲ್‌ಗಳು, ಪೇಪರ್‌ಬೋರ್ಡ್ ಮತ್ತು ಪ್ಯಾಕೇಜಿಂಗ್, ಕೃಷಿ ವ್ಯಾಪಾರ ಮತ್ತು ಮಾಹಿತಿ ತಂತ್ರಜ್ಞಾನದಂತಹ ಅನೇಕ ಉತ್ಪನ್ನಗಳು ಇದ್ರ ಅಡಿಯಲ್ಲಿ ಬರುತ್ತವೆ. ಪ್ರಸಿದ್ಧ ಆಶೀರ್ವಾದ್ ಅಟ್ಟಾ, ಸನ್‌ಫೀಸ್ಟ್, ಯಿಪ್ಪೀ ನೂಡಲ್ಸ್, ಬಿಂಗೊ ಚಿಪ್ಸ್, ಟೇಡ್-ಟೆಕ್ ಆಲೂ ಭುಜಿಯಾ, ಕ್ಯಾಂಡಿಮ್ಯಾನ್ ಮತ್ತು ಫಾರ್ಮ್‌ಲ್ಯಾಂಡ್ ಸೇರಿದೆ.

click me!