IT Raid:ಹೀರೋ ಮೋಟೋಕಾರ್ಪ್ ಅಧ್ಯಕ್ಷರಿಗೂ ಐಟಿ ದಾಳಿ ಬಿಸಿ; ನಿವಾಸ,ಕಚೇರಿ ಸೇರಿ 25 ಸ್ಥಳಗಳಲ್ಲಿ ಶೋಧ

Suvarna News   | Asianet News
Published : Mar 23, 2022, 04:03 PM ISTUpdated : Mar 23, 2022, 04:04 PM IST
IT Raid:ಹೀರೋ ಮೋಟೋಕಾರ್ಪ್ ಅಧ್ಯಕ್ಷರಿಗೂ ಐಟಿ ದಾಳಿ ಬಿಸಿ; ನಿವಾಸ,ಕಚೇರಿ ಸೇರಿ  25 ಸ್ಥಳಗಳಲ್ಲಿ ಶೋಧ

ಸಾರಾಂಶ

*ತೆರಿಗೆ ವಂಚನೆ ಪತ್ತೆ ಕಾರ್ಯಾಚರಣೆ ಭಾಗವಾಗಿ ಈ ದಾಳಿ  *ಕಂಪೆನಿಯ  ಹಣಕಾಸು ದಾಖಲೆಗಳು ಹಾಗೂ ಇತರ ಕೆಲವು ವ್ಯಾಪಾರ ವಹಿವಾಟುಗಳ ಪರಿಶೀಲನೆ *ಐಟಿ ದಾಳಿ ಬೆನ್ನಲ್ಲೇ ಹೀರೋಮೋಟೋಕಾರ್ಪ್ ಷೇರು ಬೆಲೆ ಕುಸಿತ  

ನವದೆಹಲಿ (ಮಾ.23): ಹೀರೋ ಮೋಟೋಕಾರ್ಪ್ (Hero MotoCorp) ಅಧ್ಯಕ್ಷ  (chairman) ಹಾಗೂ ವ್ಯವಸ್ಥಾಪಕ ನಿರ್ದೇಶಕ ( MD) ಪವನ್ ಮಂಜಾಲ್  (Pawan Munjal)ನಿವಾಸ ಹಾಗೂ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ (Income Tax department) ದಾಳಿ ನಡೆಸಿದೆ. ಗುರ್ಗಾಂವ್ ನಲ್ಲಿರೋ (Gurgaon) ಮಂಜಾಲ್ ಅವರ ನಿವಾಸ ಹಾಗೂ ಕಚೇರಿಯಲ್ಲಿ ಬುಧವಾರ ಮುಂಜಾನೆಯಿಂದಲೂ ಐಟಿ (IT) ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಕಂಪೆನಿಯ ಉನ್ನತ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲೂ ಅಧಿಕಾರಿಗಳು ಶೋಧ (Search) ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಆದಾಯ ತೆರಿಗೆ ಅಧಿಕಾರಿಗಳು ನೀಡಿರೋ ಮಾಹಿತಿ ಪ್ರಕಾರ ತೆರಿಗೆ ವಂಚನೆ ಪತ್ತೆ  ಕಾರ್ಯಾಚರಣೆಯ ಭಾಗವಾಗಿ ಭಾರತದ ಅತೀದೊಡ್ಡ ದ್ವಿಚಕ್ರ ವಾಹನ ಉತ್ಪಾದಕರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಈ ದಾಳಿಯ ಭಾಗವಾಗಿ ಐಟಿ ಅಧಿಕಾರಿಗಳು ಗುರ್ಗಾಂವ್ (Gurgaon),ಹರಿಯಾಣ (Haryana), ದೆಹಲಿ (Delhi)ಹಾಗೂ ಇತರ ಕೆಲವು ನಗರಗಳಲ್ಲಿರೋ ಕಂಪೆನಿಗೆ ಸೇರಿದ ಒಟ್ಟು 25 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಅಧಿಕಾರಿಗಳು ಕಂಪೆನಿ ಹಾಗೂ ಅದರ ಪ್ರಮೋಟರ್ಸ್ ಗೆ ಸಂಬಂಧಿಸಿದ  ಹಣಕಾಸು ದಾಖಲೆಗಳು ಹಾಗೂ ಇತರ ಕೆಲವು ವ್ಯಾಪಾರ ವಹಿವಾಟುಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐ (PTI)ವರದಿ ಮಾಡಿದೆ.

Zomato Instant ಸೇವೆ ಪ್ರಕಟಿಸಿದ ಬೆನ್ನಲ್ಲೇ, ಟೀಕೆಗೊಳಗಾದ ಸಂಸ್ಥಾಪಕ ಗೋಯಲ್

ಪವನ್ ಮುಂಜಾಲ್ ನೇತೃತ್ವದ ಹೀರೋ ಮೋಟೋಕಾರ್ಪ್ ಕಂಪೆನಿ ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕ ಹಾಗೂ ಮಧ್ಯ ಅಮೆರಿಕದ 40 ರಾಷ್ಟ್ರಗಳಲ್ಲಿ ಕಚೇರಿಗಳನ್ನು ಹೊಂದಿದೆ. ಹೀರೋ ಮೋಟೋಕಾರ್ಪ್ ಜಾಗತಿಕವಾಗಿ 8 ಪ್ರಮುಖ ಉತ್ಪಾದನಾ ಘಟಕಗಳನ್ನು ಹೊಂದಿದ್ದು, 6 ಭಾರತದಲ್ಲಿ ಹಾಗೂ ತಲಾ ಒಂದು ಕೊಲಂಬಿಯಾ ಹಾಗೂ ಬಾಂಗ್ಲಾದೇಶದಲ್ಲಿವೆ. ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ  ಹೀರೋ ಮೋಟೋಕಾರ್ಪ್ ಪ್ರಮುಖ ಸ್ಥಾ ಹೊಂದಿದ್ದು, ದೇಶೀಯ ಮೋಟರ್ ಸೈಕಲ್ ಮಾರುಕಟ್ಟೆಯಲ್ಲಿ ಶೇ.50ರಷ್ಟು ಪಾಲು ಹೊಂದಿದೆ. ಆದಾಯ ತೆರಿಗೆ ಇಲಾಖೆ ದಾಳಿ ಬಗ್ಗೆ ಕಂಪೆನಿಯು ಈ ತನಕ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಷೇರು ಬೆಲೆ ಇಳಿಕೆ
ಹೀರೋ ಮೋಟೋಕಾರ್ಪ್ಗೆ ಸಂಬಂಧಿಸಿದ ಸ್ಥಳಗಳ ಮೇಲೆ ಐಟಿ ದಾಳಿ ನಡೆದಿದೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಕಂಪೆನಿಯ ಷೇರುಗಳ ಬೆಲೆಯಲ್ಲಿ ಬುಧವಾರ ಇಳಿಕೆ ಕಂಡುಬಂದಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ಹೀರೋ ಮೋಟೋಕಾರ್ಪ್ ಷೇರುಗಳು ಶೇ.4ರಷ್ಟು ಇಳಿಕೆ ಕಂಡಿವೆ. 

ರಿಯಲ್ ಎಸ್ಟೇಟ್ ಕಂಪೆನಿ ಮೇಲೂ ದಾಳಿ
ಮುಂಬೈ ಮೂಲದ ರಿಯಲ್ ಎಸ್ಟೇಟ್ ಕಂಪೆನಿ ಹೀರಾನಂದನಿ ಗ್ರೂಪ್ ಮೇಲೂ ಐಟಿ ಅಧಿಕಾರಿಗಳು ಮಾ.22ರಂದು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಸ್ಥೆಗೆ ಸಂಬಂಧಿಸಿ ಮುಂಬೈ, ಚೆನ್ನೈ ಹಾಗೂ ಬೆಂಗಳೂರಿನಲ್ಲಿರೋ 24 ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. 

Goods Export Target: ಭಾರತದ ಹೊಸ ಮೈಲಿಗಲ್ಲು; ನಿಗದಿತ ಅವಧಿಗೂ ಮುನ್ನ 400 ಬಿಲಿಯನ್ ಡಾಲರ್ ಗುರಿ ಸಾಧನೆ

ಯುನಿಕಾರ್ನ್ ಮೇಲೆ ದಾಳಿ
ಮಹಾರಾಷ್ಟ್ರದ (Maharashtra) ಪುಣೆ ಹಾಗೂ ಥಾಣೆ ಮೂಲದ ಯುನಿಕಾರ್ನ್ (unicorn)ಸ್ಟಾರ್ಟ್ ಅಪ್ (start-up) ಮೇಲೆ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ (Income Tax department) ದಾಳಿ ನಡೆಸಿದೆ. ಈ ದಾಳಿಯಲ್ಲಿ ಸುಮಾರು  224 ಕೋಟಿ ರೂ. ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ( CBDT) ಮಾಹಿತಿ ನೀಡಿದೆ.

ಈ ಸ್ಟಾರ್ಟ್ಅಪ್ (start-up) ನಿರ್ಮಾಣ ಸಾಮಗ್ರಿಗಳ ಸಗಟು (Wholesale) ಹಾಗೂ ಚಿಲ್ಲರೆ (Retail) ವ್ಯಾಪಾರದಲ್ಲಿ ನಿರತವಾಗಿದ್ದು, ವಾರ್ಷಿಕ ಟರ್ನ್ ಓವರ್ (Turnover) 6,000 ಕೋಟಿ ರೂ. ಮೀರಿದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶದ ವಿವಿಧ ಸ್ಥಳಗಳಲ್ಲಿರೋ ಸ್ಟಾರ್ಟ್ ಅಪ್ ಗೆ ಸಂಬಂಧಿಸಿದ 23 ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಮಾ.9ರಂದು ದಾಳಿ ನಡೆಸಿತ್ತು. ಮಾರಿಷಸ್ ಮಾರ್ಗದ ಮೂಲಕ ಈ ಸಂಸ್ಥೆ ಬೃಹತ್ ಪ್ರಮಾಣದ ವಿದೇಶಿ ಹಣ ಪಡೆದಿರೋದು ಈ ದಾಳಿ ವೇಳೆ ಪತ್ತೆಯಾಗಿದೆ.  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ