
ಆ್ಯಪಲ್ ಐಫೋನ್ 17, 17 ಪ್ರೊ ಮತ್ತು 17 ಪ್ರೊ ಮ್ಯಾಕ್ಸ್ಗಾಗಿ ಬಿಡುಗಡೆಯಾಗಿ ಹಲವರು ಕಾತರದಿಂದ ಕಾಯುತ್ತಿದ್ದಾರೆ. ಅವರಿಗೆಲ್ಲಾ ಗುಡ್ ನ್ಯೂಸ್ ಇಲ್ಲಿದೆ. ಇದರ ಬಿಡುಗಡೆಯ ಬಗ್ಗೆ ಮಾತ್ರವಲ್ಲದೇ, ಇದರ ರೇಟ್ ಹಾಗೂ ಇತರ ವಿಶೇಷತೆಗಳ ಬಗ್ಗೆಯೂ ರಿವೀಲ್ ಆಗಿದೆ. ಈ ಹೊಸ ಐಫೋನ್‌ಗಳ ಬಿಡುಗಡೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹೊಸ ಮೊಬೈಲ್ ಫೋನ್‌ಗಳು ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಆ್ಯಪಲ್ನ ಪ್ರಮುಖ ಉತ್ಪನ್ನದ ಮುಂದಿನ ಸರಣಿ, ಹೊಸ ವೈಶಿಷ್ಟ್ಯಗಳು ಮತ್ತು ಹಾರ್ಡ್‌ವೇರ್ ವಿನ್ಯಾಸದ ಬಗ್ಗೆ ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸುದ್ದಿಗಳು ಹರಿದಾಡುತ್ತಿದೆ. ಆದರೆ ಇವುಗಳ ವಿಶೇಷತೆ ಏನು ಎನ್ನುವ ಬಗ್ಗೆ ಇಲ್ಲಿ ಡಿಟೇಲ್ಸ್ ನೀಡಲಾಗಿದೆ. ಐಫೋನ್ 17, ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಮಾದರಿಗಳಲ್ಲಿನ ಕ್ಯಾಮೆರಾಗಳಲ್ಲಿ ಗಮನಾರ್ಹ ಸುಧಾರಣೆಗಳು ಮೊದಲ ಹೈಲೈಟ್ ಆಗಿದೆ.
ಸೆಪ್ಟೆಂಬರ್ ಎರಡನೇ ಅಥವಾ ಮೂರನೇ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಮುಂಗಡ-ಆದೇಶಗಳು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಒಂದು ಅಥವಾ ಎರಡು ವಾರಗಳಲ್ಲಿ ಪ್ರಾರಂಭದ ನಿರೀಕ್ಷೆ ಇದೆ. ಫೋರ್ಬ್ಸ್ ಪ್ರಕಾರ, ಆ್ಯಪಲ್ ಐಫೋನ್ 17 ಪ್ರೊ ಸುಧಾರಿತ ಕ್ಯಾಮೆರಾವನ್ನು ಒಳಗೊಂಡಿರುವ ನಿರೀಕ್ಷೆಯಿದೆ, ಕಡಿಮೆ-ಬೆಳಕು ಮತ್ತು ಜೂಮ್ ಕಾರ್ಯಗಳನ್ನು ಇದು ಒಳಗೊಂಡಿದೆ. ಈಗ ಬಂದಿರುವ ವರದಿಯ ಪ್ರಕಾರ, ಕ್ಯಾಮೆರಾ ಪ್ಯಾನಲ್ ಫೋನ್‌ನ ಹಿಂಭಾಗದಂತೆಯೇ ಇರಬಹುದು, ಇದು ಇನ್ನಷ್ಟು ಆಕರ್ಷಕ ಮಾಡಲಾಗಿದೆ. ಐಫೋನ್ 16 ಸರಣಿಯು ಅಸ್ತಿತ್ವದಲ್ಲಿರುವ 12-ಮೆಗಾಪಿಕ್ಸೆಲ್ ಸಂವೇದಕದ ಬದಲಿಗೆ 48-ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿದೆ ಎನ್ನಲಾಗಿದೆ. ಐಫೋನ್ 14 ಪ್ರೊ ಮತ್ತು ಪ್ರೊ ಮ್ಯಾಕ್ಸ್ ನಂತರ ಆ್ಯಪಲ್ ವಸ್ತುಗಳನ್ನು ಮರುಜೋಡಿಸುತ್ತಿರುವುದು ಇದೇ ಮೊದಲು. ಫ್ಲ್ಯಾಶ್, ಲಿಡಾರ್ ಸೆನ್ಸರ್ ಮತ್ತು ಮೈಕ್ರೊಫೋನ್‌ಗಳನ್ನು ಅಗಲವಾದ ಪ್ಯಾನೆಲ್‌ನ ತೀವ್ರ ಬಲಭಾಗದಲ್ಲಿ ಒಂದೇ ಸ್ಥಳದಲ್ಲಿ ಇರಿಸಲಾಗುತ್ತದೆ.
ಷೇರುಪೇಟೆಯಲ್ಲಿ ಅಬ್ಬರಿಸಿದ ಗೂಳಿ: ಸೆನ್ಸೆಕ್ಸ್- ನಿಫ್ಟಿ ದಾಖಲೆ
ಇನ್ನು ಇದರ ಹಾರ್ಡ್‌ವೇರ್ ಕುರಿತು ಹೇಳುವುದಾದರೆ, ಮುಂಬರುವ ಕೆಲವು ತಿಂಗಳುಗಳಲ್ಲಿ, ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಮಾದರಿಗಳು ಆ್ಯಪಲ್ ನ ಮುಂದಿನ ಸರಣಿಯ A19 ಪ್ರೊ ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಳ್ಳುವ ನಿರೀಕ್ಷೆಯಿದೆ, ಇದನ್ನು ಸುಧಾರಿತ 3nm ಪ್ರಕ್ರಿಯೆಯನ್ನು ಬಳಸಿಕೊಂಡು ತಯಾರಿಸುವ ನಿರೀಕ್ಷೆಯಿದೆ. ಭಾರತದಲ್ಲಿ ಐಫೋನ್ 17 ಸರಣಿಯ ಆರಂಭಿಕ ಬೆಲೆ 79,900 ರೂ.ಗಳಾಗಿರಬಹುದು, ಆದರೆ ಯುಎಸ್ ಟ್ರಂಪ್ ಆಡಳಿತವು ವಿಧಿಸಿರುವ ಸುಂಕಗಳಿಂದಾಗಿ ಬೇಸ್ ಮತ್ತು ಪ್ರೊ ಮಾದರಿಗಳ ಬೆಲೆಗಳು ಹೆಚ್ಚಾಗಬಹುದು. ಚೀನಾ ಮತ್ತು ಅಮೆರಿಕದ ನಡುವೆ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಚೀನಾದಲ್ಲಿ ಫೋನ್‌ಗಳ ತಯಾರಿಕೆ ದುಬಾರಿಯಾಗಬಹುದು.
ಇನ್ನು ಐಫೋನ್ 17 ಎಲ್ಲಿ ತಯಾರಾಗುತ್ತದೆ ಎನ್ನುವುದಾದರೆ,, ಐಫೋನ್ 17 ಅನ್ನು ಅಮೆರಿಕದ ಕಂಪೆನಿಯಾದ ಆ್ಯಪಲ್ ಇಂಕ್ ವಿನ್ಯಾಸಗೊಳಿಸಿದ್ದು, ಅದರ ಪ್ರಧಾನ ಕಛೇರಿ ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೊದಲ್ಲಿದೆ. ಪ್ರಧಾನ ಕಚೇರಿಯನ್ನು ಹೊಂದಿದ್ದರೂ, ಐಫೋನ್ 17 ರ ಉತ್ಪಾದನೆಯು ಭಾರತದಲ್ಲಿ ನಡೆಯುತ್ತಿದೆ, ಇದು ಅವರ ಪೂರೈಕೆ ಸರಪಳಿಯನ್ನು ವೈವಿಧ್ಯಗೊಳಿಸಲು ಮತ್ತು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಯೋಜನೆಯ ಭಾಗವಾಗಿದೆ. ಐಫೋನ್ 17 ಮೂಲ ಮಾದರಿಯ ಆರಂಭಿಕ ಉತ್ಪಾದನಾ ಪ್ರಕ್ರಿಯೆಯು ಭಾರತದಲ್ಲಿ, ನಿರ್ದಿಷ್ಟವಾಗಿ ಬೆಂಗಳೂರಿನಲ್ಲಿರುವ ಫಾಕ್ಸ್‌ಕಾನ್‌ನ ಸ್ಥಾವರದಲ್ಲಿ ನಡೆಯುತ್ತಿದೆ. ಕಳೆದ ವರ್ಷ ಅಂದರೆ 2024ರಿಂದ ಐಫೋನ್ 17 ರ ಆರಂಭಿಕ ಉತ್ಪಾದನೆಯನ್ನು ಪ್ರಾರಂಭಿಸಿದೆ.
ಗೃಹ, ವಾಹನ ಸಾಲ ಬಯಸಿದವರಿಗೆ ಬಂಪರ್: FD ಇಡುವವರಿಗೆ ಬ್ಯಾಡ್ ನ್ಯೂಸ್: ಇಲ್ಲಿದೆ ಡಿಟೇಲ್ಸ್...
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.