ಪಾಕಿಸ್ತಾನದಲ್ಲಿ ಐಫೋನ್ 15 ಬೆಲೆ ಕೇಳಿದ್ರೆ ದಂಗಾಗ್ತೀರಾ! ಇಷ್ಟು ಬೆಲೆ ಇರೋದು ಹೌದಾ?

By Suvarna News  |  First Published Sep 23, 2023, 4:12 PM IST

ಐಫೋನ್ ಖರೀದಿ ಮಾಡ್ಬೇಕು ಎನ್ನುವುದು ಬಹುತೇಕ ಎಲ್ಲರ ಕನಸು. ಆದ್ರೆ ಅಷ್ಟೊಂದು ಹಣ ಹೊಂದಿಸೋದು ಕಷ್ಟ. ಭಾರತದಲ್ಲೇ ಐಫೋನ್ ದುಬಾರಿ ಎನ್ನುವ ನಾವು ಪಾಕಿಸ್ತಾನದಲ್ಲಿ ಅದ್ರ ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೇವೆ.
 


ಐಫೋನ್ ಹೊಂದಿರುವ ವ್ಯಕ್ತಿ ಅಂದ್ರೆ ಆತ ಶ್ರೀಮಂತ ಎನ್ನುವ ಮಾತಿತ್ತು. ಈಗಿನ ದಿನಗಳಲ್ಲಿ ಭಾರತದಲ್ಲಿ ಬಹುತೇಕರ ಕೈನಲ್ಲಿ ಐಫೋನ್ ನೋಡಬಹುದು. ಐ ಫೋನ್ ಕೈನಲ್ಲಿದ್ರೆ ಅದ್ರ ಗತ್ತೇ ಬೇರೆ. ಐಫೋನ್ ಖರೀದಿಗೆ ಬಂಗಾರ ಮಾರಾಟ ಮಾಡಿದ, ಮಗುವನ್ನೇ ಮಾರಾಟ ಮಾಡಿದ ಅನೇಕ ಘಟನೆಗಳು ನಡೆದಿವೆ. ಐಫೋನ್ ಗೆ ಸಂಬಂಧಿಸಿದಂತೆ ಅನೇಕ ಜೋಕ್ ಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡ್ಬಹುದು. ಕಿಡ್ನಿ ಮಾರಾಟ ಮಾಡಿಯಾದ್ರೂ ಐ ಫೋನ್ ಖರೀದಿ ಮಾಡ್ತೇನೆ ಎನ್ನುವವರಿದ್ದಾರೆ. ಭಾರತದಲ್ಲಿ ಐಫೋನ್ ಖರೀದಿ ಮಾಡೋದು ಹೇಳಿದಷ್ಟು ಕಷ್ಟವೇನಲ್ಲ. ಆದ್ರೆ ಪಾಕಿಸ್ತಾನದಲ್ಲಿ ಐಫೋನ್ ಖರೀದಿ ಮಾಡೋದು ಸುಲಭ ಅಲ್ಲವೇ ಅಲ್ಲ. ಪಾಕಿಸ್ತಾನದಲ್ಲಿ ಐಫೋನ್ ಬೆಲೆ ಕೇಳಿದ್ರೆ ನೀವು ದಂಗಾಗ್ತೀರಾ. 

ಐಫೋನ್ (iPhone) 15 ರ ಹೊಸ ಸಿರೀಸ್ ಸೆಪ್ಟೆಂಬರ್ 22 ರಿಂದ ಮಾರಾಟವಾಗ್ತಿದೆ. 48 MP ಲೆನ್ಸ್, A16 ವಿಯೋನಿಕ್ ಚಿಪ್ ಮತ್ತು iOS 17 ನೊಂದಿಗೆ ಬಂದಿರುವ iPhone 15 ನ 128GB ಮಾದರಿಯ ಬೆಲೆ ಭಾರತದಲ್ಲಿ 79,900 ರೂಪಾಯಿಗೆ ಸಿಗ್ತಿದೆ. ಆದರೆ iPhone 15 Plus 128GB ಮಾದರಿಯ ಬೆಲೆ 89,900 ರೂಪಾಯಿಗೆ ಮಾರಾಟವಾಗ್ತಿದೆ.  ಆದರೆ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಈ ಫೋನ್‌ಗಳ ಬೆಲೆ ಕೇಳಿದ್ರೆ ಬೆವರಿಳಿಯುತ್ತೆ. ಇನ್ನು ಖರೀದಿ ದೂರದ ಮಾತು.  ಪಾಕಿಸ್ತಾನದಲ್ಲಿ ಐಫೋನ್ 15 ಬೆಲೆ ಎಷ್ಟು ಎಂಬುದನ್ನು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದನ್ನು ಓದಿದ ಜನರು ನಾನಾ ರೀತಿಯ ಕಮೆಂಟ್ ಮಾಡ್ತಿದ್ದಾರೆ.

Latest Videos

undefined

ಲಾಭ ಗಳಿಸುವ GOVERNMENT ಷೇರುಗಳಿವು, ಡಿವಿಡೆಂಡ್‌ಗೂ ಬೆಸ್ಟ್‌, ಗ್ರೋತ್‌ಗೂ ಬೆಸ್ಟ್‌!

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ : @pallavipandeyy ಎಂಬ ಬಳಕೆದಾರರು ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಐಫೋನ್ 15 ಬೆಲೆ ಪಾಕಿಸ್ತಾನ (Pakistan) ದಲ್ಲಿ ಎಷ್ಟಿದೆ ಎಂಬುದನ್ನು ಬರೆದಿದ್ದಾರೆ. ಇದು ಸ್ವಲ್ಪ ಹೆಚ್ಚಾದ್ರೂ ನಿಜ. ಪಾಕಿಸ್ತಾನದಲ್ಲಿ Apple iPhone 15 pro max ಬೆಲೆ 7.5 ಲಕ್ಷ ರೂಪಾಯಿ ಎಂದು ಶೀರ್ಷಿಕೆ ಹಾಕಿದ್ದಾನೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯವಾಗಿದೆ. ಇದುವರೆಗೆ 3 ಲಕ್ಷ 63 ಸಾವಿರಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಲೈಕ್‌ ಸಿಕ್ಕಿದೆ.  

ಅಷ್ಟಕ್ಕೂ ಪಾಕಿಸ್ತಾನದಲ್ಲಿ ಐಫೋನ್ 15 ಬೆಲೆ ಎಷ್ಟು ಗೊತ್ತಾ? :   ಪಾಕಿಸ್ತಾನದಲ್ಲಿ iPhone 15 ಬೆಲೆ 3,66,708 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಅತ್ಯಂತ ದುಬಾರಿ iPhone 15 Pro Max 512 GB ಇದರ ಬೆಲೆ 5,99,593 ರೂಪಾಯಿಗೆ ಮಾರಾಟವಾಗ್ತಿದೆ. ಇದರ ಬೆಲೆ ಭಾರತದಲ್ಲಿ 1,79,900 ರೂಪಾಯಿ.

ಸಾಮಾನ್ಯ ಗೃಹಿಣಿಯಾಗಿದ್ದ ಪಾಕಪ್ರವೀಣೆ ಇಂದು ಫೇಮಸ್‌ ಯೂಟ್ಯೂಬರ್‌, ವಾರ್ಷಿಕ 6 ಕೋಟಿ ದುಡಿಮೆ!

ಬಳಕೆದಾರರ ಕಮೆಂಟ್ ಏನು? : ಪಾಕಿಸ್ತಾನದಲ್ಲಿ ಐ ಪೋನ್ ಬೆಲೆ ಕೇಳಿದ ಜನರು ತಮ್ಮದೇ ಶೈಲಿಯಲ್ಲಿ ಕಮೆಂಟ್ ಮಾಡ್ತಿದ್ದಾರೆ. ಕಿಡ್ನಿ ಮಾರಾಟ ಮಾಡಿದ ನಂತರವೂ ಐಫೋನ್ ಸಿಗೋದು ಕಷ್ಟವೆಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಭಾರತದಲ್ಲಿ ಖರೀದಿ ಮಾಡಿ ಪಾಕಿಸ್ತಾನದಲ್ಲಿ ಮಾರಾಟ ಮಾಡಿ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಈ ಬೆಲೆಯಲ್ಲಿ ಯುಪಿಯಲ್ಲಿ ಫ್ಲಾಟ್ ಖರೀದಿ ಮಾಡ್ಬಹುದು ಎಂದು ಇನ್ನೊಬ್ಬರು ಬರೆದಿದ್ದಾರೆ. 

ವಾಸ್ತವ ಏನು ಗೊತ್ತಾ? : ಪಾಕಿಸ್ತಾನದ ಕರೆನ್ಸಿ ಭಾರತೀಯ ಕರೆನ್ಸಿಗಿಂತ ಭಿನ್ನವಾಗಿದೆ.  ಪಾಕಿಸ್ತಾನಿ ಒಂದು ರೂಪಾಯಿ ಭಾರತದ 0.29  ರೂಪಾಯಿಗೆ ಸಮ. ಅರ್ಥಾತ್ ಪಾಕಿಸ್ತಾನದಲ್ಲಿ 5,99,593 ರೂಪಾಯಿ ಅಂದ್ರೆ ಭಾರತದಲ್ಲಿ  ಅದ್ರ ಬೆಲೆ 1,72,177 ರೂಪಾಯಿ ಆಗುತ್ತದೆ. ಅಂದ್ರೆ  ಭಾರತ ಮತ್ತು ಪಾಕಿಸ್ತಾನದಲ್ಲಿ ಐಫೋನ್ 15 ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ ಎಂದು ಸ್ಪಷ್ಟಪಡಿಸುತ್ತದೆ.
 

Insane but also true that Apple iphone 15 pro max costs 7.5 lakhs in Pakistan 💀

— Pallavi Pandey (@pallavipandeyy)
click me!