
ನವದೆಹಲಿ(ಅ.05): ಹಣ ಹೂಡಿಕೆ ಪ್ರತಿಯೊಬ್ಬರ ಜೀವನದಲ್ಲಿ ಅತೀ ಅಗತ್ಯ. ಅದರಲ್ಲೂ ಕಿರಿಯ ವಯಸ್ಸಿನಲ್ಲೇ ಹೂಡಿಕೆ(Investment) ಆರಂಭಿಸಿದರೆ, ಹಣದ ಚಿಂತೆ ಮಾಡಬೇಕಿಲ್ಲ. ಸದ್ಯ ಹಣ ಹೂಡಿಕೆಗೆ ಸಾಕಷ್ಟು ಆಯ್ಕೆಗಳಿವೆ. ಇದರಲ್ಲಿ ಯಾವುದು ಉತ್ತಮ? ಯಾವುದು ಸುರಕ್ಷಿತ ಅನ್ನೋ ಕುರಿತು ಮಾಹಿತಿಯನ್ನು ಪಡೆದಿರಲೇಬೇಕು. ಪಬ್ಲಿಕ್ ಪ್ರೊವಿಡೆಂಟ್ ಫಂಡ್ (PPF) ಸ್ಕೀಮ್ ಅತ್ಯುತ್ತಮ ಹಣ ಹೂಡಿಕೆ ಆಯ್ಕೆಯಾಗಿದೆ.
10 ಕೋಟಿ ಉಳಿತಾಯದೊಂದಿಗೆ ನಿವೃತ್ತಿಯಾದ 35ರ ಮಹಿಳೆ! ಇದು ಹೇಗೆ ಸಾಧ್ಯ?
ಸಾರ್ವಜನಿಕ ಭವಿಷ್ಯ ನಿಧಿ(PPF) ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣ ಸುರಕ್ಷಿತ. ಜೊತೆಗೆ ಅಧಿಕ ಲಾಭ ಕೂಡ ಪಡೆಯಲಿದ್ದೀರಿ. PPF ಯೋಜನೆ 1968ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಯಿತು. ರಾಷ್ಟ್ರೀಯ ಉಳಿತಾಯ ಸಂಸ್ಥೆ(National Savings Organization) ಈ ಯೋಜನೆ ಘೋಷಿಸಿತು. ಇದರು ಮುಖ್ಯ ಉದ್ದೇಶ ಸಣ್ಣ ಉಳಿತಾಯವನ್ನು ಲಾಭದಾಯಕವಾಗಿ ಪರಿವರ್ತಿಸುವುದಾಗಿದೆ.
PPF ಯೋಜನೆಯಲ್ಲಿ 1,000 ರೂಪಾಯಿ ಪ್ರತಿ ತಿಂಗಳು ಉಳಿತಾಯ ಮಾಡಿದರೆ ಲಕ್ಷ ಲಕ್ಷ ರೂಪಾಯಿ ಗಳಿಸಲು ಸಾಧ್ಯವಿದೆ. ಸದ್ಯ PPF ಯೋಜನೆಯು ಶೇಕಡಾ 7.1 ರಷ್ಟು ಬಡ್ಡಿ ದರ(Interest rate) ನೀಡುತ್ತಿದೆ. PPFನಲ್ಲಿ ಹೂಡಿಕೆ ಮಾಡಲು ಕನಿಷ್ಠ 5,00 ರೂಪಾಯಿ ಹಾಗೂ ಗರಿಷ್ಠ 1,5000 ಲಕ್ಷ ರೂಪಾಯಿ ವರೆಗೆ ಹೂಡಿಕೆ ಮಾಡಬಹುದು.
ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡೋದು ಎಷ್ಟು ಸುರಕ್ಷಿತ?
PPF ಉಳಿತಾಯ(Public Provident Fund) 15 ವರ್ಷಕ್ಕೆ ಮೆಚ್ಯುರ್ ಆಗಲಿದೆ. 15 ವರ್ಷದ ಬಳಿಕ ಹಣವನ್ನು ಹಿಂತೆಗೆದುಕೊಳ್ಳಬಹುದು ಅಥವಾ 5 ವರ್ಷಕ್ಕೆ ವಿಸ್ತರಿಸಬಹುದು. ಹಾಗಾದರೆ 1,000 ರೂಪಾಯಿ ಉಳಿತಾಯ ಮಾಡಿ 26 ಲಕ್ಷ ರೂಪಾಯಿ ಗಳಿಸುವುದು ಹೇಗೆ? ಇಲ್ಲಿದೆ ವಿವರ:
ಹಂತ 1: 15 ವರ್ಷದ ಹೂಡಿಕೆ:
ಪ್ರತಿ ತಿಂಗಳು 1,000 ರೂಪಾಯಿಯಂತೆ 15 ವರ್ಷ ಹೂಡಿಕೆ ಮಾಡಿದರೆ ನಿಮ್ಮ ಮೊತ್ತ 15 ವರ್ಷದ ಬಳಿಕ 1.80 ಲಕ್ಷ ರೂಪಾಯಿ. 7.1 ಶೇಕಡಾ ಬಡ್ಡಿದರಲ್ಲಿ 1.45 ಲಕ್ಷ ರೂಪಾಯಿ ಬಡ್ಡಿ ಪಡೆಯಲಿದ್ದೀರಿ. ಹೀಗಾಗಿ ಓಟ್ಟು ಮೊತ್ತ 3.25 ಲಕ್ಷ ರೂಪಾಯಿ ಪಡೆಯಲಿದ್ದೀರಿ.
ಅಂಚೆ ಇಲಾಖೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗಲಿದೆ ದುಪ್ಪಟ್ಟು ಹಣ!
ಹಂತ 2: ಮತ್ತೆ 5 ವರ್ಷಕ್ಕೆ ವಿಸ್ತರಣೆ
15 ವರ್ಷದ ಹೂಡಿಕೆ ಬಳಿಕ ಹಣ ಹಿಂಪಡೆಯದೆ ಮತ್ತೆ 5 ವರ್ಷಕ್ಕೆ ವಿಸ್ತರಿಸಲು ಸಾಧ್ಯವಿದೆ.ಮತ್ತೆ 5 ವರ್ಷ ಪ್ರತಿ ತಿಂಗಳು 1,000 ರೂಪಾಯಿ ಹೂಡಿಕೆ ಮಾಡಿದರೆ, 3.25 ಲಕ್ಷ ರೂಪಾಯಿ ಹಣ ಬಡ್ಡಿ ಸಹಿತ 5.32 ಲಕ್ಷ ರೂಪಾಯಿ ಆಗಲಿದೆ.
ಹಂತ 3: 2ನೇ ಬಾರಿಗೆ ಮತ್ತೆ 5 ವರ್ಷಕ್ಕೆ ವಿಸ್ತರಣೆ
ಮೊದಲ 5 ವರ್ಷ ವಿಸ್ತರಣೆ ಹಾಗೂ ಹೂಡಿಕೆ ಬಳಿಕ ಮತ್ತೆ 5 ವರ್ಷಕ್ಕೆ PPF ಹೂಡಿಕೆ ಮುಂದುವರಿಸುವ ಅವಕಾಶವಿದೆ. ಮತ್ತೆ 5 ವರ್ಷ ಪ್ರತಿ ತಿಂಗಳು 1,000 ರೂಪಾಯಿ ಉಳಿತಾಯ ಮಾಡಿದರೆ ನಿಮ್ಮ ಒಟ್ಟು ಮೊತ್ತ 8.24 ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ.
ಹಂತ 3: 3ನೇ ಬಾರಿಗೆ ಮತ್ತೆ 5 ವರ್ಷಕ್ಕೆ ವಿಸ್ತರಣೆ
ಮೊದಲ ಮತ್ತು ಎರಡನೇ ವಿಸ್ತರಣೆ ರೀತಿಯಲ್ಲೇ ಮೂರನೇ ಬಾರಿಗೆ 5 ವರ್ಷ ವಿಸ್ತರಿಸಿ ಪ್ರತಿ ತಿಂಗಳು 1,000 ರೂಪಾಯಿ ಹೂಡಿಕೆ ಮಾಡಬೇಕು. ಈ 5 ವರ್ಷಗಳ ಬಳಿಕ ಒಟ್ಟು ಮೊತ್ತ 12.36 ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ.
ಹಂತ 3: 4ನೇ ಬಾರಿಗೆ ಮತ್ತೆ 5 ವರ್ಷಕ್ಕೆ ವಿಸ್ತರಣೆ
4ನೇ ಬಾರಿಗೆ PPF ಸ್ಕೀಮ್ ವಿಸ್ತರಣೆ ಮಾಡಿ ಪ್ರತಿ ತಿಂಗಳು 1,000 ರೂಪಾಯಿ ಹೂಡಿಕೆ ಮಾಡಿದಲ್ಲಿ, ಒಟ್ಟು ಮೊತ್ತ 18.15 ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ.
ಹಂತ 3: 5ನೇ ಬಾರಿಗೆ ಮತ್ತೆ 5 ವರ್ಷಕ್ಕೆ ವಿಸ್ತರಣೆ
PPF ಸ್ಕೀಮ್ 5ನೇ ಹಾಗೂ ಕೊನೆಯ ಬಾರಿಗೆ ವಿಸ್ತರಣೆ ಮಾಡಲು ಅವಕಾಶವಿದೆ. ಈ ವಿಸ್ತರಣೆಯಲ್ಲಿ ನಿಮ್ಮ PPF ಮೊತ್ತ 26.32 ಲಕ್ಷ ರೂಪಾಯಿ ಆಗಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.