ಮತ್ತಷ್ಟು ರಾಜ್ಯಗಳಲ್ಲಿ ಡೀಸೆಲ್ 100 ರೂಪಾಯಿ!

By Suvarna NewsFirst Published Oct 2, 2021, 9:51 AM IST
Highlights

* ಪೆಟ್ರೋಲ್‌ ದರ ಸಾರ್ವಕಾಲಿಕ ಗರಿಷ್ಠಕ್ಕೆ

* ಹಲವು ರಾಜ್ಯಗಳಲ್ಲಿ 100ರ ಗಡಿ ದಾಟಿದ ಡೀಸೆಲ್‌ ದರ

* ಸತತ 2ನೇ ದಿನವೂ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ

ನವದೆಹಲಿ(ಅ.02): ತೈಲ ಕಂಪನಿಗಳು ಸತತ 2ನೇ ದಿನವಾದ ಶುಕ್ರವಾರ ಕೂಡಾ ಪೆಟ್ರೋಲ್‌ ಮತ್ತು ಡೀಸೆಲ್‌(Diesel) ಬೆಲೆಯನ್ನು ಲೀ.ಗೆ ಕ್ರಮವಾಗಿ 25 ಮತ್ತು 30 ಪೈಸೆಯಷ್ಟು ಹೆಚ್ಚಳ ಮಾಡಿವೆ. ಇದರೊಂದಿಗೆ ಪೆಟ್ರೋಲ್‌ ದರ ಮತ್ತೊಮ್ಮೆ ದೇಶಾದ್ಯಂತ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದೆ. ಇನ್ನು ಡೀಸೆಲ್‌ ದರ ಹಲವು ರಾಜ್ಯಗಳಲ್ಲಿ 100 ರು.ನ ಗಡಿ ದಾಟಿದೆ.

ಶುಕ್ರವಾರದ ಏರಿಕೆ ಬಳಿಕ ಪೆಟ್ರೋಲ್‌(Petrol) ದರ ಬೆಂಗಳೂರಿನಲ್ಲಿ 105.44 ರು.,ಮುಂಬೈನಲ್ಲಿ 107.95 ರು., ಕೋಲ್ಕತಾದಲ್ಲಿ 102.47 ರು.,ದೆಹಲಿಯಲ್ಲಿ9Delhi) 101.89 ರು. ಮತ್ತು ಚೆನ್ನೈನಲ್ಲಿ(Chennai) 99.58 ರು.ಗೆ ತಲುಪಿದೆ.

ಇನ್ನು ಕಳೆದ 8 ದಿನದಲ್ಲಿ 6 ಬಾರಿ ಏರಿಕೆಯಾದ ಪರಿಣಾಮ ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ನಗರಗಳಲ್ಲಿ ಡೀಸೆಲ್‌(Diesel) ದರ 100 ರು. ಗಡಿ ದಾಟಿದೆ. ಶುಕ್ರವಾರದ ಏರಿಕೆ ಬಳಿಕ ಡೀಸೆಲ್‌ ದರ ಬೆಂಗಳೂರಿನಲ್ಲಿ 95.70 ರು., ಮುಂಬೈನಲ್ಲಿ 97.84 ರು., ಕೋಲ್ಕತಾದಲ್ಲಿ 93.27 ರು. ಚೆನ್ನೈನಲ್ಲಿ 94.74 ರು. ಮತ್ತು ದೆಹಲಿಯಲ್ಲಿ 90.17 ರು.ಗೆ ತಲುಪಿದೆ.

ಸದ್ಯ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್‌ ದರ 113.73 ರು ಮತ್ತು ಡೀಸೆಲ್‌ ದರ 103.09 ರು.ನಷ್ಟಿದೆ. ಇಲ್ಲಿ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಮತ್ತು ಪ್ರದೇಶವು ದೇಶದ ಗಡಿ ಭಾಗದಲ್ಲಿರುವ ಕಾರಣ ಸಾಗಣೆ ವೆಚ್ಚವೂ ಹೆಚ್ಚಾಗಿ ತೈಲ ಬೆಲೆ ಗಗನಕ್ಕೇರಿದೆ.

ಕಳೆದ 3 ದಿನ ಏರಿಕೆ ಬಳಿಕ ಪೆಟ್ರೋಲ್‌ ದರದಲ್ಲಿ ಒಟ್ಟು 75 ಪೈಸೆ ಮತ್ತು 6 ಏರಿಕೆ ಮೂಲಕ ಡೀಸೆಲ್‌ ದರ 1.55 ರು.ನಷ್ಟುಹೆಚ್ಚಾಗಿದೆ.

click me!