
ನವದೆಹಲಿ (ಆ.16) ಮಧ್ಯಮ ವರ್ಗದವರ ಅತೀ ದೊಡ್ಡ ಕನಸು ಕಾರು. ಆದರೆ ಸಾಲ ಮಾಡಿ, ನಿರ್ವಹಣೆ ಕಷ್ಟವಾಗಿದ್ದರೂ ಕಾರು ಖರೀದಿಸುವವರ ಸಂಖ್ಯೆ ಹೆಚ್ಚು. ಆದರೆ ಕಾರು ದಿನ ಕಳೆದಂತೆ ಮೌಲ್ಯ ಕಡಿಮೆಯಾಗಿ ಕೊನೆಗೆ ಗುಜುರಿಗೆ ಹಾಕಬೇಕು. ಅದೇ ಚಿನ್ನ ನಾಲ್ಕು ಪಟ್ಟು ಹೆಚ್ಚು ಆದಾಯ ನೀಡುತ್ತದೆ. ಎಲ್ಲಾ ಕಡೆ ಸಾಲ ಮಾಡಿ ಕಾರು ಖರೀದಿಸುವುದು ಉತ್ತಮ ನಿರ್ಧಾರವಲ್ಲ. ಇನ್ನು ಕಾರಿನ ಅವಶ್ಯಕತೆ, ನಿರ್ವಹಣಾ ವೆಚ್ಚ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವಂತಿದ್ದರೆ ಕಾರು ಉತ್ತಮ ಆಯ್ಕೆ. ಆದರೆ ಬಹುತೇಕರು ತಮ್ಮ ಕನಸು ನನಸು ಮಾಡಲು ಕಾರು ಖರೀದಿಸುತ್ತಾರೆ. ಸಂಕಷ್ಟ ಅನುಭವಿಸುತ್ತಾರೆ. ಇದರ ಬದಲು ಅದೇ ಮೊತ್ತವನ್ನು ಅಥವಾ ಅದಕ್ಕಿಂತ ಕಡಿಮೆ ಮೊತ್ತ ಹೂಡಿಕೆ ಮಾಡಿದರೆ ಕೆಲವೇ ವರ್ಷದಲ್ಲಿ ಯಾವುದೇ ಆತಂಕವಿಲ್ಲದೆ ಕಾರು ಖರೀದಿಸಲು ಸಾಧ್ಯವಿದೆ.
ಹೂಡಿಕೆ ವಿಚಾರದಲ್ಲಿ ಕಳೆದ 10 ರಿಂದ 15 ವರ್ಷದಲ್ಲಿ ಆಗಿರುವ ಬದಲಾವಣೆ ಸೂಕ್ಷ್ಮವಾಗಿ ಗಮನಿಸಿದರೆ ಹೂಡಿಕೆ ಹಾಗೂ ಖರ್ಚು ವೆಚ್ಚದಲ್ಲಿ ಶಿಸ್ತು ಜಾರಿಗೊಳಿಸಲು ಸಹಯವಾಗುತ್ತದೆ. ಇದು 2012ರ ಫ್ಲ್ಯಾಶ್‌ಬ್ಯಾಕ್ ಸ್ಟೋರಿ. ಕುಟುಂಬದ ತಂದೆ 7 ಲಕ್ಷ ರೂಪಾಯಿ ನೀಡಿ ಕಾರು ಖರೀದಿಸಿದ್ದರು. ಅದು ಅವರ ಕನಸಾಗಿತ್ತು. ಪ್ರತಿ ಬಾರಿ ಬಸ್, ಇತರ ಬಾಡಿಗೆ ವಾಹನದಲ್ಲಿ ಪ್ರಯಾಣಿಸುವುದು ಕಷ್ಟವಾಗುತ್ತಿತ್ತು. ಹೀಗಾಗಿ ತಮ್ಮದೇ ಒಂದು ಕಾರು ಇರಬೇಕು ಎಂದು ಯಜಮಾನ ಖರೀದಿಸಿದ್ದರು. ಇದೇ ವೇಳೆ ಪತ್ನಿ 7 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿದ್ದರು.
2012ರಲ್ಲಿ ಕಾರು ಹಾಗೂ ಚಿನ್ನ ಖರೀದಿಸಿದ ಬಳಿಕ ಜೀವನ ಸಾಗಿದೆ. ಕಾರು ಹಳೇಯದಾಗುತ್ತಾ ಬಂದಿದೆ. ಇತ್ತ ಚಿನ್ನ ಮಾತ್ರ ಪ್ರತಿ ದಿನ ಮೌಲ್ಯ ಹೆಚ್ಚಿಸುತ್ತಾ ಸಾಗಿದೆ. ಯಜಮಾನ ಖರೀದಿಸಿದ ಕಾರಿಗೆ ಪ್ರತಿ ವರ್ಷ ನಿರ್ವಹಣೆ ವೆಚ್ಚ, ವಿಮೆ ಸೇರಿದಂತೆ ಹಲವು ವೆಚ್ಚಗಳನ್ನು ಮಾಡಿದ್ದಾರೆ. ಆದರೆ ಪತ್ನಿ ಖರೀದಿಸಿದ ಚಿನ್ನಕ್ಕೆ ಯಾವುದೇ ನಿರ್ವಹಣೆ ಇಲ್ಲ. ಇದೀಗ 2025, ಅಂದರೆ 13 ವರ್ಷಗಳ ಬಳಿಕ ಎರಡೂ ಹೂಡಿಕೆಯ ಮೌಲ್ಯ ಏನಾಗಿದೆ?
ಕಾರಿನ ಸದ್ಯದ ಮಾರಾಟ ಬೆಲೆ ಗರಿಷ್ಠ 1.2 ಲಕ್ಷ ರೂಪಾಯಿಂದ 1.5 ಲಕ್ಷ ರೂಪಾಯಿ
ಅದೇ ಚಿನ್ನದ ಮೌಲ್ಯ 23 ರಿಂದ 25 ಲಕ್ಷ ರೂಪಾಯಿ
ಕಾರು: 2012ರಲ್ಲಿ 7 ಲಕ್ಷ ರೂಪಾಯಿ ಕಾರು ಇದೀಗ 1.5 ಲಕ್ಷ ರೂಪಾಯಿ ಗರಿಷ್ಠ, ಶೇಕಡಾ 80 ರಷ್ಟು ಮೌಲ್ಯ ಕುಸಿತ
ಚಿನ್ನ: 2012ರಲ್ಲಿ 7 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಇದೀಗ 24 ಲಕ್ಷ ರೂಪಾಯಿ, ಶೇಕಡಾ 240 ರಷ್ಟು ಮೌಲ್ಯ ಹೆಚ್ಚಳ
ಹೂಡಿಕೆ ಸೂಕ್ತವಾಗಿದ್ದರೆ ಚಿಂತೆ ಇರುವುದಿಲ್ಲ. ಈ ಕುರಿತು ಉದ್ಯಮಿ ಹರ್ಷಾ ಗೊಯೆಂಕಾ ಹಲವು ದಿನಗಳ ಮೊದಲು ಈ ಕುರಿತು ಹೇಳಿದ್ದರು. ದಶಕಗಳ ಹಿಂದೆ 8 ಲಕ್ಷ ರೂಪಾಯಿ ಕಾರು ಖರೀದಿಸಿದ್ದೆ. ಈಗ ನನ್ನ ಕಾರಿನ ಬೆಲೆ 1.5 ಲಕ್ಷ ರೂಪಾಯಿ. ಇದೇ ವೇಳೆ ಪತ್ನಿ ಕೆಲವರ್ಷಗಳಲ್ಲಿ ಒಂದೊಂದೆ ಚಿನ್ನ ಖರೀದಿಸಿದ್ದರು. ಕಾರು ಖರೀಸಿದ ಮರು ವರ್ಷದ ವೇಲೆಗೆ ಪತ್ನಿ 8 ಲಕ್ಷ ರೂಪಾಯಿ ಕಾರು ಖರೀದಿಸಿದ್ದರು. ಇದೀಗ ನನ್ನ ಕಾರಿನ ಬೆಲೆ 1.5 ಲಕ್ಷ ರೂಪಾಯಿ, ಪತ್ನಿ ಚಿನ್ನದ ಬೆಲೆ 32 ಲಕ್ಷ ರೂಪಾಯಿ ಎಂದು ಹರ್ಷಾ ಗೊಯೆಂಕಾ ಹೇಳಿದ್ದರು. ಇಷ್ಟೇ ಅಲ್ಲ ಕಾರು ಖರೀದಿಯಿಂದ ರಜಾ ದಿನ ಹಾಯಾಗಿ ಕಳೆಯಲು ಸಾಧ್ಯವಾಯಿತು ಎಂದಿದ್ದರು. ಇದಕ್ಕೆ ಗೊಯೆಂಕಾ ಪತ್ನಿ ರಜಾ ದಿನಗಳ ಮಜಾ ಕೇವಲ 5 ದಿನಕ್ಕೆ ಅಂತ್ಯಗೊಳ್ಳಲಿದೆ. ಆದರೆ ಚಿನ್ನ 5 ತಲೆಮಾರು ನೆರವಾಗಲಿದೆ ಎಂದಿದ್ದರು.
ಚಿನ್ನ ಅಡವಿಟ್ಟು ಅಥವಾ ಮಾರಾಟ ಮಾಡಿ ಮೊಬೈಲ್ ಖರೀದಿಸಿದವರೂ ಇದ್ದಾರೆ. ಉದಾಹರಣೆಗೆ 1 ಲಕ್ಷ ರೂಪಾಯಿ ಮೊಬೈಲ್ ಖರೀದಿಸಿದರೆ ಎರಡನೇ ವರ್ಷಕ್ಕೆ ಮೊಬೈಲ್ ಬೆಲೆ 10 ರಿಂ 50 ಸಾವಿರ ರೂಪಾಯಿ. ಆದೇ ಹಣ ಚಿನ್ನದ ಮೇಲೆ ಹೂಡಿಕೆ ಮಾಡಿದ್ದರೆ 2 ಲಕ್ಷ ರೂಪಾಯಿ ಆಗಲಿದೆ. ಹೂಡಿಕೆ ಮಾಡುವ ಮೊದಲು ಯೋಚಿಸಿ. ಅಗತ್ಯವಿದ್ದರೆ ಕಾರು ಅಥವಾ ಇನ್ಯಾವುದೇ ವಸ್ತುಗಳ ಮೇಲೆ ಹೂಡಿಕೆ ಮಾಡಿದೆ. ತಮಗೂ ಒಂದು ಕಾರು ಬೇಕು ಎಂದು ಹೂಡಿಕೆ ಮಾಡುವುದು ಉತ್ತಮ ನಿರ್ಧಾರವಲ್ಲ ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.