ಯಾವಾಗ್ಲೂ ಟ್ರೆಂಡಿಂಗ್‌ನಲ್ಲಿರೋ ಭಾರತದ ಪ್ರಮುಖ ಸ್ಮಾಲ್ ಬ್ಯುಸಿನೆಸ್ ಐಡಿಯಾ

Published : Aug 16, 2025, 02:47 PM IST
Business Idea

ಸಾರಾಂಶ

Small Business Idea: ಆಹಾರ, ಸೇವೆ, ಕರಕುಶಲ ವಸ್ತುಗಳು ಮತ್ತು ಇತರ ಕ್ಷೇತ್ರಗಳಲ್ಲಿ ಲಾಭದಾಯಕ ವ್ಯಾಪಾರಗಳನ್ನು ಪ್ರಾರಂಭಿಸಲು ಬಯಸುವವರಿಗೆ ಈ ಲೇಖನವು ಮಾರ್ಗದರ್ಶನ ನೀಡುತ್ತದೆ.

Business Ideas: ಯಾವುದೇ ಹೊಸ ವ್ಯವಹಾರ ಆರಂಭಿಸಬೇಕಾದರೂ ಆತಂಕವೊಂದು ಎಲ್ಲರಲ್ಲಿ ಮನೆ ಮಾಡುತ್ತದೆ. ಈ ಬ್ಯುಸಿನೆಸ್ ಎಷ್ಟು ದಿನಗಳವರೆಗೆ ನಡೆಯಬಹುದು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಮೊದಲು ಪ್ರಯತ್ನಿಸುತ್ತಾರೆ. ದಿನದಿಂದ ದಿನಕ್ಕೆ ಹೊಸತನದೊಂದಿಗೆ ಭಾರತದ ಮಾರುಕಟ್ಟೆ ಬೆಳವಣಿಗೆಯಾಗುತ್ತಿದೆ. ಆದ್ರೆ ಕೆಲವು ವ್ಯವಹಾರಗಳು ಎಂದಿಗೂ ತನ್ನ ಮಾರುಕಟ್ಟೆಯನ್ನು ಕಳೆದುಕೊಳ್ಳುವುದಿಲ್ಲ. ಅಂತಹ ಪ್ರಮುಖ ಬ್ಯುಸಿನೆಸ್ ಐಡಿಯಾಗಳ ಪಟ್ಟಿ ಇಲ್ಲಿದೆ.

ಆಹಾರಕ್ಕೆ ಸಂಬಂಧಿಸಿದ ಬ್ಯುಸಿನೆಸ್ ಐಡಿಯಾ

*ಕ್ಲೌಡ್ ಕಿಚನ್ (Cloud Kitchen): ನೀವು ವಾಸವಾಗಿರುವ ಮನೆಯಿಂದಲೇ Cloud Kitchen ಆರಂಭಿಸಬಹುದು, ಮನೆಯಲ್ಲಿ ಶುದ್ಧವಾದ ಆಹಾರ ತಯಾರಿಸಿ ಆನ್‌ಲೈನ್ ಮೂಲಕ ಮಾರಾಟ ಮಾಡಬಹುದಾಗಿದೆ. Zomato ಮತ್ತು Swiggy ಅಪ್ಲಿಕೇಶನ್ ಬಳಸಿ ನಿಮ್ಮ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಒಳ್ಳೆಯ ಆದಾಯ ನಿಮ್ಮದಾಗಿಸಿಕೊಳ್ಳಬಹುದು.

ಬೇಕರಿ (Bakery): ಇಂದು ಬೇಕರಿ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಇದೆ. ನಿಮ್ಮದೇ ಶೈಲಿಯಲ್ಲಿ ವಿಭಿನ್ನ ಮತ್ತು ವಿಶೇಷ ರುಚಿ ಹೊಂದಿರುವ ಬೇಕರಿ ಪ್ರೊಡಕ್ಟ್ ಬೆಲೆ ದುಬಾರಿಯಾದ್ರೂ ಜನರು ಖರೀದಿಸುತ್ತಾರೆ.

ಜ್ಯೂಸ್ ಕಾರ್ನರ್ (Juice Corner): ಇತ್ತೀಚೆಗೆ ಪ್ರತಿಯೊಬ್ಬರು ತಮ್ಮ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ತಮ್ಮ ಆಹಾರದಲ್ಲಿ ಫ್ರೆಶ್ ಜ್ಯೂಸ್ ಸೇರಿಸಿಕೊಂಡಿರುತ್ತಾರೆ. ಇಂತಹ ಆರೋಗ್ಯಸಕ್ತರು ಜ್ಯೂಸ್ ಅಂಗಡಿಗಳ ಮೇಲೆ ಅವಲಂಬನೆಯಾಗಿರುತ್ತಾರೆ.

ಕ್ಯಾಟರಿಂಗ್ ಬ್ಯುಸಿನೆಸ್ (Catering Business): ಮದುವೆ, ಪಾರ್ಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಆಹಾರ ಪೂರೈಸುವ ಕೆಲಸವನ್ನು ಸಹ ಮಾಡಬಹುದಾಗಿದೆ.

ಸೇವೆಯಾಧರಿತ ಬ್ಯುಸಿನೆಸ್ (Service-Based Businesses)

ಡಿಜಿಟಲ್ ಮಾರ್ಕೆಟಿಂಗ್ ಸರ್ವಿಸ್ (Digital Marketing Services): ಎಸ್‌ಇಓ, ಸೋಶಿಯಲ್ ಮೀಡಿಯಾ ಮ್ಯಾನೇಜ್ಮೆಂಟ್, ಕಂಟೆಂಟ್ ಕ್ರಿಯೇಷನ್ ಅಂತಹ ಸೇವೆಗಳನ್ನು ಮನೆಯಲ್ಲಿಯೇ ಕುಳಿತು ಆರಂಭಿಸಬಹುದಾಗಿದೆ.

ಪೆಟ್ ಕೇರ್ ಸರ್ವಿಸ್ (Pet Care Services): ಸಾಕು ಪ್ರಾಣಿಗಳಿಗೆ ಸಂಬಂಧಿಸಿದ ವ್ಯವಹಾರಗಳು ಟ್ರೆಂಡಿಂಗ್ ನಲ್ಲಿದೆ. ಸಾಕು ಪ್ರಾಣಿಗಳ ಆಹಾರ ಮಾರಾಟ, ಅವುಗಳ ಆರೈಕೆ ಸೇರಿದಂತೆ ವಿವಿಧ ಸೇವೆಗಳನ್ನು ನೀಡಿ ಅತ್ಯಧಿಕ ಹಣ ಸಂಪಾದಿಸಬಹುದಾಗಿದೆ.

ವೆಡ್ಡಿಂಗ್ ಪ್ಲಾನಿಂಗ್ (Wedding Planning): ಮದುವೆಗೆ ಸಂಬಂಧಿಸಿದ ಸೇವೆಗಳನ್ನು ನೀಡುವ ವ್ಯವಹಾರ ಸಹ ಲಾಭದಾಯಕವಾಗಿದೆ. ಮದುವೆ ಮಂಟಪ, ಶಾಪಿಂಗ್, ಊಟದಂತಹ ಜವಾಬ್ದಾರಿ ತೆಗೆದುಕೊಂಡು ಹಣ ಗಳಿಸಬಹುದು.

ಆನ್‌ಲೈನ್ ಕ್ಲಾಸ್ (Online Class): ಆನ್‌ಲೈನ್ ಕ್ಲಾಸ್ ಇಂದು ಬ್ಯುಸಿನೆಸ್ ಆಗಿ ಬದಲಾಗಿದೆ. ಗಂಟೆಗೆ ಇಂತಿಷ್ಟು ಲೆಕ್ಕದಲ್ಲಿ ಹಣ ಸಂಪಾದಿಸಬಹುದು. ಕೋಚಿಂಗ್ ಕ್ಲಾಸ್ ಆರಂಭಿಸುವ ಬ್ಯುಸಿನೆಸ್ ಸದಾ ಟ್ರೆಂಡಿಂಗ್ ನಲ್ಲಿರುತ್ತದೆ.

ಕರಕುಶಲ ವ್ಯವಹಾರ (Creative Ventures)

ಹೋಮ್‌ಮೇಡ್ ಪ್ರೊಡಕ್ಟ್ (Handmade Products): ಚಾಕೊಲೇಟ್‌ಗಳು, ಸೋಪ್‌ಗಳು ಅಥವಾ ಕರಕುಶಲ ವಸ್ತುಗಳಂತಹ ಕುಶಲಕರ್ಮಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ಹೋಮ್ ಮೇಡ್ ಉತ್ಪನ್ನಗಳು ಹೆಚ್ಚಿನ ಬೇಡಿಕೆಯನ್ನು ಹೊಂದಿರುತ್ತವೆ.

ಕಲಾ ಬ್ಯುಸಿನೆಸ್ (Resin Art Business): ಕಲಾತ್ಮಕ ಮತ್ತು ಆಧುನಿಕ ಅಲಂಕಾರವನ್ನು ಹುಡುಕುತ್ತಿರುವ ಗ್ರಾಹಕರನ್ನು ಆಕರ್ಷಿಸುವ ಕೋಸ್ಟರ್‌ಗಳು, ವಾಲ್ ಆರ್ಟ್ ಅಥವಾ ಆಭರಣಗಳಂತಹ ರೆಸಿನ್-ಆಧಾರಿತ ಉತ್ಪನ್ನಗಳನ್ನು ರಚಿಸಿ ಮತ್ತು ಮಾರಾಟ ಮಾಡಿ.

ಗಿಫ್ಟ್ ಸ್ಟೋರ್ (Personalized Gifts Store): ವಿಶೇಷ ಸಂದರ್ಭಗಳಲ್ಲಿ ಫೋಟೋ ಮಗ್‌ಗಳು, ಮುದ್ರಿತ ಟೀ ಶರ್ಟ್‌ಗಳು ಅಥವಾ ಕೆತ್ತಿದ ಆಭರಣಗಳಂತಹ ಕಸ್ಟಮೈಸ್ ಮಾಡಿದ ಉಡುಗೊರೆಗಳನ್ನು ಮಾರಾಟ ಮಾಡುವ ಬ್ಯುಸಿನೆಸ್ ಆರಂಭಿಸಬಹುದು.

ಇತರೆ ವ್ಯವಹಾರ (Other Lucrative Options)

ಆನ್‌ಲೈನ್ ಕಿರಾಣಿ ಮಾರಾಟ (Online Grocery Business): ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ಪೂರೈಸುವ ಬ್ಯುಸಿನೆಸ್ ಆರಂಭಿಸಬಹುದು.

ಫಿಟ್‌ನೆಸ್/ಯೋಗ ತರಬೇತಿ (Fitness/Yoga Instructor): ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಉತ್ತೇಜಿಸುವ ಫಿಟ್‌ನೆಸ್ ತರಗತಿಗಳು, ಯೋಗ ಅವಧಿಗಳು ಅಥವಾ ವೈಯಕ್ತಿಕ ತರಬೇತಿ ಸೇವೆಗಳನ್ನು ನೀಡಿ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!