ಅದಾನಿ ಬದುಕಿನ ರೋಚಕ ಕತೆ: ಸ್ಕೂಟರ್ ಬಳಸ್ತಿದ್ದ, ಕಿಡ್ನಾಪ್ ಆಗಿದ್ದ ಉದ್ಯಮಿ

Published : Jan 09, 2023, 07:11 PM ISTUpdated : Jan 09, 2023, 10:33 PM IST
 ಅದಾನಿ ಬದುಕಿನ ರೋಚಕ ಕತೆ: ಸ್ಕೂಟರ್ ಬಳಸ್ತಿದ್ದ,  ಕಿಡ್ನಾಪ್ ಆಗಿದ್ದ ಉದ್ಯಮಿ

ಸಾರಾಂಶ

ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಅದಾನಿ ಗ್ರೂಪ್‌ನ ಮಾಲೀಕ ಗೌತಮ್ ಅದಾನಿ ಇತ್ತೀಚೆಗೆ ಇಂಡಿಯಾ ಟಿವಿ ನಡೆಸಿಕೊಡುವ ಅಪ್ ಕಾ ಅದಾಲತ್ ಎಂಬ ವಿಶೇಷ ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದಲ್ಲಿ ಅದ ಹಲವು ಅಪರೂಪದ ರೋಚಕ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. 

ನವದೆಹಲಿ: ಶ್ರೀಮಂತಿಕೆ, ವ್ಯವಹಾರಿಕ ಜ್ಞಾನ, ಉದ್ಯಮಕೋಟೆ ಹಾಗೂ ಬುದ್ಧಿವಂತಿಕೆಯಿಂದ ನಿರ್ಧಾರ ಕೈಗೊಳ್ಳುವ ವಿಚಾರಕ್ಕೆ ಸುದ್ದಿಯಲ್ಲಿರುವ ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಅದಾನಿ ಗ್ರೂಪ್‌ನ ಮಾಲೀಕ ಗೌತಮ್ ಅದಾನಿ ಇತ್ತೀಚೆಗೆ ತಮ್ಮ ಹೇಳಿಕೆಗಳಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ  ಟ್ರೆಂಡಿಂಗ್‌ನಲ್ಲಿದ್ದಾರೆ.  ಇವರೊಂದಿಗೆ ಇತ್ತೀಚೆಗೆ ಖಾಸಗಿ ಸುದ್ದಿವಾಹಿನಿಯೊಂದು ಸಂದರ್ಶನ ನಡೆಸಿದ್ದು ತಮ್ಮ ಜೀವನದ ಹಲವು ರೋಚಕ ಕ್ಷಣಗಳ ಬಗ್ಗೆ ಅದಾನಿ ಈ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. 
ಇಂಡಿಯಾ ಟಿವಿ ನಡೆಸಿಕೊಡುವ ಅಪ್ ಕಾ ಅದಾಲತ್ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಗೌತಮ್ ಅದಾನಿ ಭಾಗವಹಿಸಿದ್ದು,  ತಮ್ಮ ವೈಯಕ್ತಿಕ ಜೀವನದಲ್ಲಿ ಅದ ಹಲವು ಅಪರೂಪದ ರೋಚಕ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. 

ಬಾಲ್ಯದಲ್ಲಿನ ತಮ್ಮ ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ  ಶಿಕ್ಷಣವನ್ನು ಮೊಟಕುಗೊಳಿಸಿ ಉದ್ಯೋಗವರಸಿ ಮುಂಬೈಗೆ ಬಂದಲ್ಲಿದ್ದ ಆರಂಭಿಸಿ , ಅಪಹರಣಕಾರರಿಂದ ಕಿಡ್ನಾಪ್ ಆದಂತಹ ಕ್ಷಣ, ಕಣ್ಣೆದುರೇ ಮುಂಬೈ ಮೇಲೆ ಉಗ್ರ ದಾಳಿ ನಡೆದ ಸಂದರ್ಭಸೇರಿದಂತೆ ಹಲವು ವಿವರಗಳನ್ನು ಅವರು ಹೇಳಿಕೊಂಡಿದ್ದಾರೆ. ಕಲಿಕೆಯಲ್ಲಿ ಉತ್ತಮವಾಗಿದ್ದರು ಶಿಕ್ಷಣ ಮೊಟಕುಗೊಳಿಸಿ ವ್ಯವಹಾರ ಮಾಡಲು ಆರಂಭಿಸಿದ್ದ ಅದಾನಿ  ಇಂಜಿನಿಯರಿಂಗ್‌ನಲ್ಲಿ ತಾಂತ್ರಿಕ ವಿಚಾರ ಆಯ್ಕೆ ಮಾಡಿಕೊಂಡಿದರಂತೆ. ಗಣಿತದಲ್ಲಿ ಹುಷಾರಿದ್ದೆ. ಆದರೆ ಅನಿವಾರ್ಯವಾಗಿ ಶಿಕ್ಷಣ ಮೊಟಕುಗೊಳಿಸಿ ವ್ಯವಹಾರಕ್ಕೆ ಇಳಿದೆ ಎಂದು ಹೇಳಿಕೊಂಡಿದ್ದಾರೆ. 

ದೇಶದ ನಂ. 1 ಶ್ರೀಮಂತ ಗೌತಮ್‌ ಅದಾನಿ ಪತ್ನಿಯ ಲೈಫ್‌ಸ್ಟೈಲ್ ಹೇಗಿದೆ?

ಶಿಕ್ಷಣ ತುಂಬಾ ಅಗತ್ಯ, ಶಿಕ್ಷಣ (Education) ಮನುಷ್ಯನಿಗೆ ಜ್ಞಾನ ನೀಡುತ್ತದೆ. ಆದರೆ ಆ ಮಾರ್ಗದಲ್ಲಿ ನನಗೆ ಹೋಗಲಾಗಲಿಲ್ಲ. ಅದು ನನ್ನ ದುರಾದೃಷ್ಟ,  ಹಾಗಾಗಿ ನಾನು ಕಠಿಣ ಪರಿಶ್ರಮ ಹಾಗೂ ಅನುಭವದ ಹಾದಿ ಹಿಡಿದೆ.  ಕಠಿಣಶ್ರಮ ಹಾಗೂ ಅನುಭವ ನನಗೆ ಜ್ಞಾನ (wisdom) ನೀಡಿದೆ ಎಂದು ಅದಾನಿ ಹೇಳಿಕೊಂಡಿದ್ದಾರೆ.  ಒಂದು ವೇಳೆ ಜೊತೆ ಜೊತೆಗೆ ಶಿಕ್ಷಣವನ್ನು ಕೂಡ ಪಡೆದಿದ್ದರೆ, ನಾನು ಇಂದಿಗಿಂತಲೂ ಹೆಚ್ಚು ಶ್ರೀಮಂತ ಆಗಿರುವ ಗೌತಮ್ ಅದಾನಿ ಆಗಿರುತ್ತಿದ್ದೆ ಎಂದು ಅದಾನಿ ಹೇಳಿಕೊಂಡಿದ್ದಾರೆ. 

ಒಂದು ಕಾಲದಲ್ಲಿ ಸ್ಕೂಟರ್ ಬಳಸುತ್ತಿದ್ದ ಅದಾನಿ

ಇಂದು ಅದಾನಿ ಬಹಳ ಶ್ರೀಮಂತ ವ್ಯಕ್ತಿ. ಇಂದು ಬೇಕಾದಂತಹ ಕಾರುಗಳು ಅವರ ಬಳಿ ಇವೆ. ಐಷಾರಾಮಿ ಜೀವನವಿದೆ. ಆದರೆ ಒಂದು ಕಾಲದಲ್ಲಿ ಅದಾನಿ ಓಡಾಡಲು ಸ್ಕೂಟರ್ (scooter) ಬಳಸುತ್ತಿದ್ದರಂತೆ.  ಹೀಗಾಗಿ ಅವರಿಗೆ ಸ್ಕೂಟರ್ ಆಗಲಿ, ಬಸ್, ರಿಕ್ಷಾವೇ (rickshaw) ಆಗಲಿ ಅಥವಾ ಖಾಸಗಿ ಜೆಟ್ಟೇ ಆಗಲಿ ಸಾಮಾನ್ಯ ಮನಸ್ಥಿತಿ ಇದೆ ಅಂತೆ. ನಾನು ಜೆಟ್‌ನಲ್ಲಿ (jet) ಪ್ರಯಾಣಿಸುವ ಕಾರಣಕ್ಕೆ ನನ್ನ ಕಾಲು ನೆಲದಲ್ಲಿ ನಿಲ್ಲಲ್ಲ ಎಂಬ ಅರ್ಥವಲ್ಲ. ನನಗೆ ಎಲ್ಲಾ ವಾಹನಗಳಲ್ಲೂ ಪ್ರಯಾಣಿಸುವ ಅಭ್ಯಾಸವಿದೆ. ಸಾಮಾನ್ಯನಂತೆ ಬದುಕಿ ಗೊತ್ತು ಎಂದು ತಿಳಿಸಿದ್ದಾರೆ ಅದಾನಿ. 

ಕಿಡ್ನಾಪ್ ಆಗಿದ್ದ ಅದಾನಿ

ಹಿಂದೊಮ್ಮೆ ಕಿಡ್ನಾಪ್ (kidnap) ಆಗಿದ್ದ ಅದಾನಿ ಆ ಅನುಭವನ್ನು ಹೇಳಿಕೊಂಡಿದ್ದಾರೆ.  ಯಾವತ್ತೂ ತಮ್ಮ ತಾಳ್ಮೆ ಸಮಚಿತ್ತವನ್ನು ಕಳೆದುಕೊಂಡಿಲ್ಲ ಎಂದ ಅದಾನಿ, ಒಮ್ಮೆ ತನ್ನನ್ನು ಅಪಹರಣಕಾರರು ಕಿಡ್ನಾಪ್ ಮಾಡಿದ್ದಾಗ,  ಭಯಗೊಳ್ಳುವ ಬದಲು ಗಟ್ಟಿಯಾಗಿ ನಿದ್ದೆಗೆ ಜಾರಿದ್ದೆ ಎಂದು ಹೇಳಿಕೊಂಡಿದ್ದಾರೆ.  ನಮ್ಮ ನಿಯಂತ್ರಣದಲ್ಲಿ ಇಲ್ಲದಿರುವುದರ ಬಗ್ಗೆ ನಾವು ಚಿಂತೆ ಮಾಡಿ ಅಥವಾ ತಾಳ್ಮೆ ಕಳೆದುಕೊಂಡು ಯಾವುದೇ ಪ್ರಯೋಜನವಿಲ್ಲ. ನನ್ನನ್ನು ಕಿಡ್ನಾಪ್ ಮಾಡಿದ ಮರುದಿನವೇ ನನ್ನನ್ನು ಬಿಡುಗಡೆ ಮಾಡಿದರು. ಆ ದಿನ ರಾತ್ರಿಯೂ ನಾನು ಹಾಯಾಗಿ ನಿದ್ದೆ ಮಾಡಿದೆ. ನಾನು ಯಾವತ್ತೂ ಒತ್ತಡವನ್ನು (pressure) ಅನುಭವಿಸಿಲ್ಲ ಎಂದು ಅದಾನಿ ಹೇಳಿಕೊಂಡಿದ್ದಾರೆ. 

ಅಂಬಾನಿ ಬಳಿಕ ಅದಾನಿಯೂ ವಿದೇಶದಲ್ಲಿ ನೆಲೆಸಲು ಸಿದ್ಧತೆ?

ಕಳೆದ ವರ್ಷ ಕೋಟ್ಯಾಧಿಪತಿ,  ದೇಶದ ಮತ್ತೊಬ್ಬ ಶ್ರೀಮಂತ ಕೈಗಾರಿಕೋದ್ಯಮಿ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿಯನ್ನು ಹಿಂದಿಕ್ಕಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು.  ನಂತರ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಸ್ಥಾನವನ್ನು ಪಡೆದ ಅವರು ಕೆಲ ದಿನಗಳ ಹಿಂದೆ ಜಾಗತಿಕವಾಗಿ ಎರಡನೇ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.  ಕೆಲ ದಶಕಗಳಲ್ಲಿ ಅದಾನಿ ಅವರು ನವೀಕರಿಸಬಹುದಾದ, ವಿದ್ಯುತ್ ಉತ್ಪಾದನೆಯಿಂದ ವಿದ್ಯುತ್ ವಿತರಣೆಯವರೆಗೆ ಹಲವು ಕ್ಷೇತ್ರಗಳಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದು,  ಉದ್ಯಮ ರಂಗದ ಹೊರತಾಗಿ ಅವರ ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ.  

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?