Vehicle Insurance: ವಾಹನ ಕಳವಾಗಿದ್ರೂ, ಅನ್ಯ ವ್ಯಕ್ತಿ ಚಲಾಯಿಸಿದ್ರೂ ವಿಮಾ ಕಂಪನಿ ಪರಿಹಾರ ನೀಡಬೇಕು: ದೆಹಲಿ ಹೈಕೋರ್ಟ್

By Suvarna News  |  First Published Jan 20, 2022, 6:42 PM IST

*ಯುನೈಟೆಡ್ ಇಂಡಿಯಾ ಇನ್ಯುರೆನ್ಸ್ ಕೋ.ಲಿ. Vs ಶ್ರೀಮತಿ ಅನಿತಾ ದೇವಿ ಹಾಗೂ ಇತರರು ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಿದ ಹೈಕೋರ್ಟ್ 
*ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಸಚ್ ದೇವ್
*ನ್ಯಾಯಮಂಡಳಿ ತೀರ್ಪನ್ನು ಎತ್ತಿ ಹಿಡಿದ ದೆಹಲಿ ಹೈಕೋರ್ಟ್ 


ನವದೆಹಲಿ (ಜ.20): ಅಪಘಾತಕ್ಕೆ( Accident) ಕಾರಣವಾದ  ವಾಹನದ (Vehicle) ಕಳ್ಳತನ (stolen) ಅಥವಾ ಅನಧಿಕೃತವಾಗಿ (unauthorised) ಯಾರಾದ್ರೂ ಚಲಾಯಿಸಿಕೊಂಡು ಹೋಗಿದ್ದರೂ ಕೂಡ ಅದರಿಂದ ಮೃತಪಟ್ಟ (deceased) ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡೋದು ವಿಮಾ ಕಂಪನಿ (Insurance company) ಜವಾಬ್ದಾರಿಯಾಗಿದೆ ಎಂಬ ಅಂಶವನ್ನು ದೆಹಲಿ (Delhi) ಹೈಕೋರ್ಟ್ (Highcourt)ಎತ್ತಿ ಹಿಡಿದಿದೆ. ಯುನೈಟೆಡ್ ಇಂಡಿಯಾ ಇನ್ಯುರೆನ್ಸ್ ಕೋ.ಲಿ.(United India Insurance Co. Ltd) Vs ಶ್ರೀಮತಿ ಅನಿತಾ ದೇವಿ (Smt. Anita Devi) ಹಾಗೂ ಇತರರು ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ (Court) ಈ ಹೇಳಿಕೆ ನೀಡಿದೆ.  ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಸಚ್ ದೇವ್ ' ವಿಮೆ ಪಡೆದ ವ್ಯಕ್ತಿ ಉದ್ದೇಶಪೂರ್ವಕವಾಗಿ ಪಾಲಿಸಿಯ ನಿಯಮಗಳನ್ನು ಉಲ್ಲಘಿಸಿರೋದನ್ನು ಸಾಬೀತುಪಡಿಸಲು ಸಾಧ್ಯವಾದ ಸಂದರ್ಭದಲ್ಲಿ ಮಾತ್ರ ವಿಮಾ ಕಂಪನಿಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದು ನ್ಯಾಯಮೂರ್ತಿ ಸಂಜೀವ್ ಸಚ್ ದೇವ್  (Sanjeev Sachdeva) ಅಭಿಪ್ರಾಯಪಟ್ಟಿದ್ದಾರೆ. 

'ವಿಮಾ ಕಂಪನಿ  (Insurance Company) ಪ್ರಸ್ತಾವನೆಯನ್ನು ಒಪ್ಪಿಕೊಂಡ್ರೆ ಅಪಘಾತ ಸಂತ್ರಸ್ತರ  ಪ್ರಯೋಜನಕ್ಕಿರೋ ಕಾನೂನುಗಳ (Laws) ವಿರುದ್ಧ ಬಂಡಾಯ ಸಾಧಿಸಿದಂತಾಗುತ್ತದೆ.  ಅಲ್ಲದೆ, ಇಂಥ ಪ್ರಸ್ತಾವನೆಯನ್ನು ಒಪ್ಪಿಕೊಂಡ್ರೆ ಅಂಥ ಸಂದರ್ಭದಲ್ಲಿ ವಿಮೆ ಮಾಡಿಸಿದ ವಾಹನ ಕಳ್ಳತನವಾದಾಗ ಪರಿಹಾರ ಹಣ ನೀಡೋ ಜವಾಬ್ದಾರಿಯಿಂದ ವಿಮಾ ಕಂಪನಿಗಳು ತಪ್ಪಿಸಿಕೊಳ್ಳೋ ಜೊತೆ ಕಳ್ಳತನ ಹಾಗೂ ಅಪಘಾತದ ಸುರಕ್ಷತೆ ದೃಷ್ಟಿಯಿಂದ ವಾಹನಕ್ಕೆ ಪಾಲಿಸಿ ಮಾಡಿಸಿರೋ  ಅದರ ಮಾಲೀಕ ಕೂಡ ತನ್ನದಲ್ಲದ ತಪ್ಪಿಗೆ ಹಣ ಕಳೆದುಕೊಳ್ಳಬೇಕಾಗುತ್ತದೆ.  ಇದರ ಜೊತೆಗೆ ಅಪಘಾತ ಸಂತ್ರಸ್ತರಿಗೆ ಪರಿಹಾರ ಕೋರಲು ಯಾವುದೇ  ದಾರಿಯೂ ಇರೋದಿಲ್ಲ' ಎಂದು ಕೋರ್ಟ್ ಹೇಳಿದೆ.

Tap to resize

Latest Videos

Business Women : ಹಾಲು ಮಾರಿ ಕೋಟ್ಯಾಧೀಶೆಯಾದ ಗುಜರಾತಿನ ವೃದ್ಧೆ!

ನ್ಯಾಯಮಂಡಳಿ  ಆದೇಶವನ್ನು ಪ್ರಶ್ನಿಸಿ ಯುನೈಟೆಡ್ ಇನ್ಯುರೆನ್ಸ್ ಕಂಪನಿ ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ವೃತ್ತಿಪರ ಕಳ್ಳನೊಬ್ಬ ವಾಹನವನ್ನು ಕದ್ದು ಚಲಾಯಿಸಿಕೊಂಡು ಹೋಗಿದ್ದಾನೆ. ಹೀಗಾಗಿ  ಹಣ ಪಾವತಿಗೆ ವಿಮಾ ಕಂಪನಿ ಹೊಣೆಯಲ್ಲ ಎಂದು ಯುನೈಟೆಡ್ ಇನ್ಯುರೆನ್ಸ್ ಕಂಪನಿ ವಾದಿಸಿತ್ತು. ಆದ್ರೆ ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ನ್ಯಾಯಮಂಡಳಿಗೆ, ವಾಹನವನ್ನು ನೀರಜ್ ಅಲಿಯಾಸ್ ಮಿಕ ಎಂಬಾತ ಕದ್ದಿರೋದು ನಿಜ ಎಂಬುದು ತಿಳಿದು ಬಂದಿದೆ. ಆದ್ರೆ ವಾಹನ ಕಳವಾಗಿರೋ ಬಗ್ಗೆ ಆಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿರೋದು ಗಮನಕ್ಕೆ ಬಂದಿದೆ. ಹೀಗಾಗಿ ನ್ಯಾಯಮಂಡಳಿ  ಈ ಪ್ರಕರಣದಲ್ಲಿ ವಿಮಾ ಕಂಪನಿ ಹಣ ಪಾವತಿ ಮಾಡಬೇಕು ಎಂದು ಆದೇಶಿಸಿತ್ತು. 

ನ್ಯಾಯಮಂಡಳಿ ತೀರ್ಪನ್ನು ಮರುಪರಿಶೀಲಿಸಿದ ದೆಹಲಿ ಹೈಕೋರ್ಟ್ ಮುಂದೆ ವಾಹನ ಕಳವಾಗಿದ್ದು, ಬೇರೊಬ್ಬ ವ್ಯಕ್ತಿ ಅನಧಿಕೃತವಾಗಿ ಚಲಾಯಿಸಿಕೊಂಡು ಹೋಗಿರೋ ಸಂದರ್ಭದಲ್ಲಿ ವಿಮಾ ಕಂಪನಿ ಹಣ ಪಾವತಿಸಲು ಬದ್ಧವಾಗಿರಬೇಕೇ, ಬೇಡವೇ ಎಂಬ ಪ್ರಶ್ನೆ ನಿಂತಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಈ ಬಗ್ಗೆ ಮರುಪರಿಶೀಲನೆ ನಡೆಸಿ ನ್ಯಾಯಮಂಡಳಿ ತೀರ್ಪನ್ನು ಎತ್ತಿ ಹಿಡಿಯೋ ಮೂಲಕ ಯುನೈಟೆಡ್ ಇನ್ಯುರೆನ್ಸ್ ಕಂಪನಿ ಅರ್ಜಿಯನ್ನು ವಜಾಗೊಳಿಸಿದೆ. ಮೇಲ್ಮನವಿದಾರರ (appellant) ಪರವಾಗಿ ನ್ಯಾಯವಾದಿ ಶಂಕರ್ ಎನ್ ಸಿನ್ಹ ವಾದಿಸಿದ್ದರೆ, ಪ್ರತಿವಾದಿಗಳ respondents ಪರವಾಗಿ ನ್ಯಾಯವಾದಿ ಸೋಮನಾಥ್ ಪರಶರ್ ವಾದ ಮಂಡಿಸಿದ್ದರು. 

ಅಯ್ಯೋ, ಸಿಕ್ಕ ನೋಟು ಹರಿದಿದೆ ಅಂತ ತಲೆ ಬಿಸಿ ಬೇಡ, ಅದಕ್ಕಿಲ್ಲಿದೆ ಪರಿಹಾರ!

ವಿಮೆ ಸೌಲಭ್ಯ ಹೊಂದಿರೋ ವಾಹನದಿಂದ ಅಪಘಾತವಾದಲ್ಲಿ ಮೂರನೇ ವ್ಯಕ್ತಿ ಅಥವಾ ಆಸ್ತಿಗೆ ಆಗೋ ಹಾನಿಗೆ ವಿಮೆ ಪರಿಹಾರ ಪಡೆಯಲು ಅವಕಾಶವಿದೆ. ಇದಕ್ಕೆ ಥರ್ಡ್ ಪಾರ್ಟಿ ವಿಮೆ (Third Party Insurance) ಎನ್ನುತ್ತಾರೆ. ಇದರಡಿಯಲ್ಲಿ ವಿಮೆ ಹೊಂದಿರೋ ವ್ಯಕ್ತಿಯ ತಪ್ಪಿನಿಂದ ಆಕಸ್ಮಿಕ ಅಪಘಾತವಾದ ಸಂದರ್ಭದಲ್ಲಿ ಮೂರನೇ ವ್ಯಕ್ತಿ ಅಥವಾ ಆಸ್ತಿಗೆ ಹಾನಿಯಾದ್ರೆ ಅದಕ್ಕೆ ಕೂಡ ಪರಿಹಾರ ಒದಗಿಸಲು ಅವಕಾಶವಿದೆ. 
 

click me!