ಪ್ರತಿ ಬಾರಿಯೂ ನೋಟುಗಳನ್ನು ಪರಿಶೀಲಿಸಿ ತೆಗೆದುಕೊಳ್ಳಲಾಗುವುದಿಲ್ಲ. ನೋಟು ಹರಿದಿದೆ ಸರ್ ಅಂತಾ ಅಂಗಡಿಯವನು ವಾಪಸ್ ಕೊಡ್ತಾನೆ. ಇದನ್ನೇನು ಮಾಡೋದು ಎಂಬುದು ಗೊತ್ತಾಗದೆ ಮನೆಯಲ್ಲಿ ತಂದಿಡ್ತೀರಿ. ಹರಿದ ನೋಟನ್ನು ಏನು ಮಾಡ್ಬೇಕು ಎಂದು ನಾವು ಹೇಳುತ್ತೇವೆ.
ಹರಿದ ನೋಟು (Damaged Notes)ಗಳು ಕಣ್ಣು ತಪ್ಪಿಸಿ ನಮ್ಮ ಪರ್ಸ್ (Purse) ಸೇರಿರುತ್ತವೆ. ಅನೇಕ ದಿನಗಳಿಂದ ಪರ್ಸ್ ಮೂಲೆಯಲ್ಲಿದ್ದ ನೋಟುಗಳು ವಿರೂಪಗೊಂಡಿರುತ್ತವೆ. ಕೆಲವು ಬಾರಿ ಎಟಿಎಂಗಳಿಂದಲೂ ಹರಿದ ನೋಟುಗಳು ಬರುತ್ತವೆ. ಮಳೆಗೆ ತೋಯ್ದು ನೋಟು ಹಾಳಾಗಿರುತ್ತದೆ. ಈ ನೋಟುಗಳನ್ನು ವ್ಯಾಪಾರಸ್ಥರು ಯೂರ ಮುಟ್ಟೋಲ್ಲ. ಬೇರೆ ನೋಟು ಕೊಡಿ ಸಾಮಿ, ಎಂದು ಬಿಡತ್ತಾರೆ. ಕೈನಲ್ಲಿ ನೋಟುಗಳಿದ್ದರೂ ಪ್ರಯೋಜನವಿಲ್ಲ ಎನ್ನುವಂತಾಗಿತ್ತದೆ. ಹರಿದ ನೋಟುಗಳು ಕೈಗೆ ಬಂದಾಗ ಅನೇಕರು ಟೆನ್ಷನ್‌ಗೊಳಗಾಗ್ತಾರೆ. ಈ ನೋಟುಗಳನ್ನು ಏನು ಮಾಡುವುದು ಎಂಬ ಚಿಂತೆಗೊಳಗಾಗ್ತಾರೆ. ಆದ್ರೆ ಚಿಂತಿಸುವ ಅಗತ್ಯವಿಲ್ಲ. ಈ ನೋಟುಗಳನ್ನು ನೀವು ಬ್ಯಾಂಕ್ ನಲ್ಲಿ ಸುಲಭವಾಗಿ ಬದಲಿಸಿಕೊಳ್ಳಬಹುದು. ಇಂದು ಹರಿದ ನೋಟುಗಳನ್ನು ಬ್ಯಾಂಕಿಗೆ ನೀಡಿದ್ರೆ, ಬ್ಯಾಂಕ್ ನಿಮಗೆ ಎಷ್ಟು ಮೌಲ್ಯ ನೀಡುತ್ತದೆ ಎಂಬುದನ್ನು ಹೇಳ್ತೆವೆ.
ರಿಸರ್ವ್ ಬ್ಯಾಂಕ್ ನಿಯಮವೇನು? : ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿದ ಮಾರ್ಗಸೂಚಿ (Guidelines)ಗಳ ಪ್ರಕಾರ, ನಿಮ್ಮ ಬಳಿ ಹರಿದ, ವಿರೂಪಗೊಂಡ ಅಥವಾ ಹಾನಿಗೊಳಗಾದ ಕರೆನ್ಸಿ ನೋಟು ಇದ್ದರೆ ಅದನ್ನು ನೀವು ಬ್ಯಾಂಕ್‌ಗೆ ನೀಡಬೇಕು. ಹರಿದ ಪ್ರಮಾಣದ ಮೇಲೆ ಬ್ಯಾಂಕ್ ಮೌಲ್ಯವನ್ನು ನಿರ್ಧರಿಸುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ನಿಯಮ 2009ರಡಿ ಈ ವಿನಿಮಯ ನಡೆಯುತ್ತದೆ.
ATM Safety Tips : ಎಟಿಎಂ ಬಳಸುವ ಮುನ್ನ ಹಸಿರು ಲೈಟ್ ಬಗ್ಗೆ ಗಮನವಿರಲಿ!
ಎಲ್ಲಿ ನಿಮ್ಮ ನೋಟ್ ಬದಲಿಸಬೇಕು? : ನಿಮ್ಮ ಸಮೀಪದ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡುವ ಮೂಲಕ ನೀವು ಈ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು. ಬ್ಯಾಂಕ್ ಉದ್ಯೋಗಿಗಳು ನಿಮ್ಮ ನೋಟು ವಿನಿಮಯವನ್ನು ನಿರಾಕರಿಸುವಂತಿಲ್ಲ. ವಿಕೃತ ನೋಟುಗಳನ್ನು ಬದಲಾಯಿಸಿಕೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಲ್ಲಾ ಬ್ಯಾಂಕ್‌ಗಳಿಗೆ ಸ್ಪಷ್ಟವಾಗಿ ಸೂಚನೆ ನೀಡಿದೆ. ಹಾಗಾಗಿ ಬ್ಯಾಂಕ್ ಗಳು ತಮ್ಮ ಶಾಖೆಯಲ್ಲಿ ಇದ್ರ ಬಗ್ಗೆ ಮಾಹಿತಿ ಬೋರ್ಡ್ ಹಾಕಿರುತ್ತವೆ. ಕೆಲ ಬ್ಯಾಂಕ್ ಗಳಲ್ಲಿ ಈ ಸೌಲಭ್ಯವಿಲ್ಲ.
ಸಣ್ಣ ಮೌಲ್ಯದ ನೋಟು : ನಿಮ್ಮ ಬಳಿಯಿರುವ ಐದು ರೂಪಾಯಿ, ಹತ್ತು ರೂಪಾಯಿ, ಇಪ್ಪತ್ತು ರೂಪಾಯಿ ಮತ್ತು ಐವತ್ತು ರೂಪಾಯಿ ನೋಟುಗಳು ಹರಿದಿದ್ದರೆ, ನೀವು ಅದನ್ನು ಬ್ಯಾಂಕ್ ಶಾಖೆಗೆ ನೀಡಬೇಕು. ಈ ನೋಟುಗಳು ಶೇಕಡಾ 50ರಷ್ಟು ಹರಿದಿದ್ದರೆ ಅಥವಾ ಹಾಳಾಗಿದ್ದರೆ ಆಗ ನಿಮಗೆ ನೋಟಿನ ಸಂಪೂರ್ಣ ಮೌಲ್ಯ ಸಿಗಲಿದೆ.
LIC Policy: ವಾರಸುದಾರರ ಕೈತಪ್ಪುವ ವಿಮೆ, ಠೇವಣಿ ಹಣ, ಏನು ಮಾಡಬೇಕು.?
ಹರಿದ ಎರಡು ಸಾವಿರ ನೋಟುಗೆ ಎಷ್ಟು ಮೌಲ್ಯ? : ಆರ್‌ಬಿಐ ನಿಯಮಗಳ ಪ್ರಕಾರ, ಎರಡು ಸಾವಿರ ರೂಪಾಯಿ ನೋಟು ಎಷ್ಟು ಹರಿದಿದೆ ಎಂಬುದರ ಮೇಲೆ ಅದರ ಮೌಲ್ಯ ನಿರ್ಧಾರವಾಗುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 2000 ರೂಪಾಯಿ ನೋಟು 88 ಚದರ ಸೆಂಟಿ ಮೀಟರ್ (ಸಿಎಂ) ಆಗಿದ್ದರೆ ಪೂರ್ಣ ಹಣ ಸಿಗಲಿದೆ. 44 ಚದರ ಸೆಂಟಿಮೀಟರ್‌ಗೆ ಅರ್ಧದಷ್ಟು ಹಣ ಮಾತ್ರ ಸಿಗುತ್ತದೆ.
ಭದ್ರತಾ ಚಿಹ್ನೆ : ನೋಟು ಬದಲಾವಣೆಗೆ ಪ್ರಮುಖ ನಿಯಮವೆಂದರೆ ಸೀರಿಯಲ್ ನಂಬರ್ (Serial Number), ಗಾಂಧೀಜಿ ವಾಟರ್‌ಮಾರ್ಕ್ (Gandhiji Water Mark), ಗೌವರ್ನರ್ ಸಹಿ (Governor's Sign) ಮುಂತಾದ ಭದ್ರತಾ ಚಿಹ್ನೆಗಳು ಗೋಚರಿಸಬೇಕು. ಇವು ನೋಟಿನಲ್ಲಿದ್ದರೆ ಬ್ಯಾಂಕ್, ನೋಟು ಸ್ವೀಕರಿಸಲು ನಿರಾಕರಿಸುವಂತಿಲ್ಲ.
ಚಿಂದಿ ನೋಟುಗಳ ವಿನಿಮಯ ಎಲ್ಲಿ? : ನಿಮ್ಮ ಬಳಿ ಇರುವ ನೋಟುಗಳು ತುಂಬಾ ಹರಿದಿದ್ದು, ಹಲವು ತುಂಡುಗಳಾಗಿದ್ದರೆ, ನೀವು ಈ ನೋಟುಗಳನ್ನು ಆರ್‌ಬಿಐ ಶಾಖೆಯಲ್ಲಿ ಬದಲಿಸಬೇಕಾಗುತ್ತದೆ. ಈ ನೋಟುಗಳನ್ನು ನೀವು ಅಂಚೆ ಮೂಲಕ ಕಳುಹಿಸಬೇಕಾಗುತ್ತದೆ. ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್, ನೋಟು ಎಷ್ಟು ಮೌಲ್ಯಯದ್ದು ಎಂಬ ಮಾಹಿತಿಯನ್ನು ಬ್ಯಾಂಕ್ ಗೆ ನೀಡಬೇಕಾಗುತ್ತದೆ.
ಬ್ಯಾಂಕ್ ಶುಲ್ಕ : ಹರಿದ ನೋಟು ಬದಲಾಯಿಸಿಕೊಳ್ಳಲು ಬ್ಯಾಂಕ್ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ. ಈ ಸೇವೆಯನ್ನು ಬ್ಯಾಂಕ್ ಉಚಿತವಾಗಿ ಒದಗಿಸುತ್ತದೆ. ಉದ್ದೇಶಪೂರ್ವಕವಾಗಿ ನೋಟುಗಳನ್ನು ವಿರೂಪಗೊಳಿಸಲಾಗಿದೆ ಎಂದು ಬ್ಯಾಂಕ್‌ಗೆ ಅನುಮಾನ ಬಂದರೆ, ಅವುಗಳನ್ನು ಬದಲಿಸಲು ಒಪ್ಪುವುದಿಲ್ಲ.
ಹರಿದ ನೋಟುಗಳನ್ನು ಏನು ಮಾಡಲಾಗುತ್ತೆ? : ಹರಿದ ನೋಟುಗಳನ್ನು RBI ಬಳಕೆಯಿಂದ ತೆಗೆಯುತ್ತದೆ.ಹೊಸ ನೋಟುಗಳ ಮುದ್ರಣಕ್ಕೆ ಮುಂದಾಗುತ್ತದೆ. ಹರಿದ ನೋಟುಗಳನ್ನು ಸಣ್ಣ ತುಂಡುಗಳನ್ನಾಗಿ ಮಾಡಿ,ಮರುಬಳಕೆ ಮಾಡುತ್ತದೆ.