Silicon City: ಬೆಂಗಳೂರನ್ನು ನಂ.1 ಸಿಲಿಕಾನ್‌ ಸಿಟಿ ಮಾಡಲು ಮೂಲ ಸೌಕರ್ಯ: ಸಿಎಂ

By Girish Goudar  |  First Published Apr 26, 2022, 4:54 AM IST

*   ಸ್ಯಾನ್‌ಫ್ರಾನ್ಸಿಸ್ಕೋ ಮೀರಿಸಲು ಕ್ರಮ
*  ಕೈಗಾರಿಕೋದ್ಯಮಿಗಳಿಗೆ ಬೊಮ್ಮಾಯಿ ಭರವಸೆ
*  ಉದ್ಯಮಿಗಳ ಸಲಹೆ ಅನುಷ್ಠಾನ 
 


ಬೆಂಗಳೂರು(ಏ.26):  ರಾಜಧಾನಿ ಬೆಂಗಳೂರನ್ನು(Bengaluru) ವಿಶ್ವದಲ್ಲಿಯೇ ನಂ.1 ಸಿಲಿಕಾನ್‌ ಸಿಟಿಯನ್ನಾಗಿ(Silicon City) ಮಾಡುವ ನಿಟ್ಟಿನಲ್ಲಿ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಭರವಸೆ ನಿಡಿದರು.

ನಗರದಲ್ಲಿ ವಿವಿಧ ವಲಯಗಳ ಕೈಗಾರಿಕೋದ್ಯಮಿಗಳೊಂದಿಗೆ(Industrialists) ಸೋಮವಾರ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಲಿಕಾನ್‌ ಸಿಟಿ ಸ್ಥಾನದಲ್ಲಿ ವಿಶ್ವದಲ್ಲಿಯೇ(World) ಅಮೆರಿಕದ(America) ಸ್ಯಾನ್‌ಫ್ರಾನ್ಸಿಸ್ಕೋ(San Francisco) ನಂ.1 ಸ್ಥಾನದಲ್ಲಿದೆ. ಬೆಂಗಳೂರು 2ನೇ ಸ್ಥಾನದಲ್ಲಿದ್ದು, ಮೊದಲನೇ ಸ್ಥಾನಕ್ಕೆ ಏರುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಲಿದೆ ಎಂದು ಹೇಳಿದರು.

Tap to resize

Latest Videos

Twitter ಟ್ವಿಟರ್‌ಗೆ ಎಲಾನ್ ಮಸ್ಕ್ ಮಾಲೀಕ, 3.25 ಲಕ್ಷ ಕೋಟಿ ರೂಗೆ ಸಾಮಾಜಿಕ ಜಾಲತಾಣ ಖರೀದಿ!

ಎಲ್ಲ ವಲಯಗಳಿಗೂ ಸರ್ಕಾರ ಆದ್ಯತೆ ನೀಡಲಿದೆ. ಉದ್ಯಮಿಗಳಿಗೂ ಅಗತ್ಯ ಸಹಕಾರ ನೀಡಲಾಗುವುದು. ಮಾಹಿತಿ ತಂತ್ರಜ್ಞಾನದ ಕಂಪನಿಗಳು ಹೆಚ್ಚಾಗಿ ಇರುವ ಪ್ರದೇಶಗಳಿಗೆ ಮೂಲ ಸೌಕರ್ಯ(Infrastructure) ಕಲ್ಪಿಸಲು ವಿಶೇಷ ಆದ್ಯತೆ ನೀಡಲಾಗುವುದು. ಬೆಂಗಳೂರನ್ನು ಹೊರತುಪಡಿಸಿ ಎರಡು, ಮೂರನೇ ಹಂತದ ನಗರಗಳ ಅಭಿವೃದ್ಧಿಗೂ ಒತ್ತು ನೀಡಲಾಗುವುದು ಎಂದು ವಿವರಿಸಿದರು.

ಉದ್ಯಮಿಗಳ ಸಲಹೆ ಅನುಷ್ಠಾನ:

ಕೈಗಾರಿಕೆಗಳಿಗೆ ಪೂರಕವಾದ ನೀತಿಗಳು, ಪರಿಸರ, ತಾಂತ್ರಿಕತೆ, ಮೂಲಸೌಕರ್ಯ ಮತ್ತಿತರ ವಿಷಯಗಳ ಬಗ್ಗೆ ಕೈಗಾರಿಕೋದ್ಯಮಿಗಳು ನೀಡಿರುವ ಸಲಹೆಗಳನ್ನು ಅನುಷ್ಠಾನಗೊಳಿಸಲಾಗುವುದು. ಬೆಂಗಳೂರಿನ ಹೊರ ವಲಯದಲ್ಲೂ ಮೂಲಸೌಕರ್ಯ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿರುವ ಬಗ್ಗೆ ಉದ್ಯಮಿಗಳೊಂದಿಗೆ ಹಂಚಿಕೊಳ್ಳಲಾಯಿತು ಎಂದು ತಿಳಿಸಿದರು.

Agriculture Export:ಕೃಷಿ ರಫ್ತಿನಲ್ಲಿ ದಾಖಲೆಯ ಗುರಿ ಸಾಧಿಸಿದ ಭಾರತ; ಇದು ಹೇಗೆ ಸಾಧ್ಯವಾಯಿತು? ಇಲ್ಲಿದೆ ಮಾಹಿತಿ

ಕೊರೋನಾ: ನಾಳೆ ಮೋದಿ ಜತೆ ಸಭೆ

ಕೊರೋನಾ(Coronavirus) ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಅವರು ಏ.27ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ. ರಾಜ್ಯದಲ್ಲಿ(Karnataka) ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬಗ್ಗೆ ತಜ್ಞರ ಅಭಿಪ್ರಾಯ ಪಡೆಯಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಉತ್ತರಿಸಿದರು.
 

click me!