ಇನ್ಫೋಸಿಸ್ ಉದ್ಯೋಗಿಗಳಿಗೆ ಗುಡ್ ನ್ಯೂಸ್, ತಿಂಗಳ ಸ್ಯಾಲರಿ ಹೆಚ್ಚಿಸಿ ಐಟಿ ಕಂಪನಿ ದಾಖಲೆ

Published : Feb 06, 2025, 10:55 PM IST
ಇನ್ಫೋಸಿಸ್ ಉದ್ಯೋಗಿಗಳಿಗೆ ಗುಡ್ ನ್ಯೂಸ್, ತಿಂಗಳ ಸ್ಯಾಲರಿ ಹೆಚ್ಚಿಸಿ ಐಟಿ ಕಂಪನಿ ದಾಖಲೆ

ಸಾರಾಂಶ

ಇನ್ಫೋಸಿಸ್ ಉದ್ಯೋಗಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಇನ್ನು ಮಾರ್ಚ್ ತಿಂಗಳು ಬಂದಿಲ್ಲ. ಆದರೆ ಇನ್ಫೋಸಿಸ್ ಎಲ್ಲರಿಗಿಂತ ಮೊದಲು ಉದ್ಯೋಗಿಗಳ ವೇತನ ಹೆಚ್ಚಳ ಪತ್ರ ಹೊರಡಿಸಿದೆ. 

ಬೆಂಗಳೂರು(ಫೆ.06) ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ 70 ಗಂಟೆ ಕೆಲಸದ ಹೇಳಿಕೆಯಿಂದ ಆತಂಕದಲ್ಲಿದ್ದ ಇನ್ಫೋಸಿಸ್ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಭಾರತದ ಎರಡನೇ ಅತೀ ದೊಡ್ಡ ಐಟಿ ಸರ್ವೀಸ್ ಕಂಪನಿ ಇನ್ಫೋಸಿಸ್ ಇದೀಗ ತನ್ನ ಉದ್ಯೋಗಿಗಳ ವೇತನ ಹೆಚ್ಚಳ ಘೋಷಿಸಿದೆ. ಹೊಸ ಆರ್ಥಿಕ ವರ್ಷ ಆರಂಭಗೊಂಡಿಲ್ಲ. ಆದರೆ ಇನ್ಫೋಸಿಸ್ ಫೆಬ್ರವರಿ ಆರಂಭದಲ್ಲೇ ಇನ್ಫೋಸಿಸ್ ಉದ್ಯೋಗಿಗಳ ಸ್ಯಾಲರಿ ಹೆಚ್ಚಳ ಘೋಷಿಸಿದೆ. ಈ ಕುರಿತ ವೇತನ ಹೆಚ್ಚಳ ಪತ್ರವನ್ನು ಇನ್ಫೋಸಿಸ್ ಹೊರಡಿಸಿದೆ. ಈ ಮೂಲಕ ಇತರ ಎಲ್ಲಾ ಕಂಪನಿಗಳಿಗಿಂತ ಮೊದಲು ಉದ್ಯೋಗಿಗಳ ವೇತನ ಹೆಚ್ಚಿಸಿದ ಕಂಪನಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.

ಯಾರಿಗೆಲ್ಲಾ ವೇತನ ಹೆಚ್ಚಳ
ನೌಕರರಿಗೆ ವಾರ್ಷಿಕ ಸ್ಯಾಲರಿ ಪರಿಷ್ಕರಣೆ ಪತ್ರಗಳನ್ನು ಇನ್ಫೋಸಿಸ್ ನೀಡಿದೆ. ಪ್ರಮುಖವಾಗಿ ಹಂತ ಹಂತದಲ್ಲಿ ಇನ್ಫೋಸಿಸ್ ಉದ್ಯೋಗಿಗಳ ವೇತನ ಹೆಚ್ಚಳವಾಗುತ್ತಿದೆ.  ಉದ್ಯೋಗ ಲೆವಲ್ 5 ಹಾಗೂ ಅದಕ್ಕಿಂತ ಕಡಿಮೆ ಲೆವಲ್‌ನಲ್ಲಿರುವ ಎಉದ್ಯೋಗಿಗಳ ತಿಂಗಳ ವೇತನ ಹೆಚ್ಚಳ 2024ರ ಆರಂಭದಿಂದಲೇ ಆಗಲಿದೆ. . ಇದರಲ್ಲಿ ಸಾಪ್ಟ್‌ವೇರ್ ಎಂಜಿನೀಯರ್, ಸೀನಿಯರ್ ಎಂಜಿನೀಯರ್, ಸಿಸ್ಟಮ್ ಎಂಜಿನೀಯರ್, ಕನ್ಸಲ್ಟೆಂಟ್ಸ್ ನೌಕರರಿಗೆ ವೇತನ ಹೆಚ್ಚಳವಾಗಲಿದ. ಜನವರಿ 1, 2024ರಿಂದ ಅನ್ವಯವಾಗುವಂತೆ ಉದ್ಯೋಗಿಗಳ ವೇತನ ಹೆಚ್ಚಳವಾಗಲಿದೆ. ವಿಶೇಷ ಅಂದರೆ ಇದೀಗ ಉದ್ಯೋಗಿಗಳಿಗೆ ಬರೋಬ್ಬರಿ 1 ವರ್ಷದ ಹೆಚ್ಚಳ ವೇತನ ಕೈಸೇರಲಿದೆ. 

70 ಗಂಟೆ ಕೆಲಸ ವಿವಾದ ಕುರಿತು ಹೊಸ ವಿಚಾರ ಮುಂದಿಟ್ಟ ನಾರಾಯಣ ಮೂರ್ತಿ!

ಜಾಬ್ ಲೆವೆಲ್ 6 ಹಾಗೂ ಅದಕ್ಕಿಂತ ಮೇಲ್ಪಟ್ಟ ಉದ್ಯೋಗಿಗಳ ವೇತನ ಹೆಚ್ಚಳ ಆದೇಶ ಎಪ್ರಿಲ್ 1, 2024ರಿಂದ ಅನ್ವಯವಾಗಲಿದೆ. ಇದರಲ್ಲಿ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಡೆಲಿವರಿ ಮ್ಯಾನೇಜರ್, ಸೀನಿಯರ್ ಡೆಲಿವರಿ ಮ್ಯಾನೇಜರ್ ಸೇರಿದ್ದಾರೆ.  ಇನ್ಫೋಸಿಸ್ ಪ್ರತಿ ವರ್ಷ ಎರಡು ಹಂತದಲ್ಲಿ ಉದ್ಯೋಗಿಗಳ ವೇತನ ಹೆಚ್ಚಳ ಮಾಡಲಿದೆ.  ಈ ಹಿಂದೆ 2023ರಲ್ಲಿ ಇನ್ಫೋಸಿಸ್ ವೇತನ ಹೆಚ್ಚಳ ಮಾಡಿತ್ತು. ಈ ಬಾರಿ ಉತ್ತಮ ಪರ್ಸೆಂಟೇಜ್ ವೇತನ ಹೆಚ್ಚಳವಾಗಲಿದೆ ಎಂದು ಇನ್ಫೋಸಿಸ್ ಮೂಲಗಳು ಹೇಳುತ್ತಿದೆ. 

ಫ್ರೆಶರ್ಸ್‌ಗೆ ವೇತನ ಹೆಚ್ಚಳ
ದೊಡ್ಡ ಐಟಿ ಕಂಪನಿ ಇನ್ಫೋಸಿಸ್, ಆಯ್ದ ಕಾಲೇಜುಗಳಲ್ಲಿ ಹೊಸ ಟ್ರೈನಿಂಗ್ ಪ್ರೋಗ್ರಾಮ್ ಶುರು ಮಾಡಿದೆ. 'ಪವರ್ ಪ್ರೋಗ್ರಾಮ್' ಅಂತ ಇರೋ ಈ ಪ್ರೋಗ್ರಾಮ್‌ನಲ್ಲಿ ಫ್ರೆಷರ್ಸ್‌ಗೆ ವರ್ಷಕ್ಕೆ 9 ಲಕ್ಷ ರೂಪಾಯಿ ಸಂಬಳ ನೀಡಲು ಮುಂದಾಗಿದೆ. ಸಾಮಾನ್ಯವಾಗಿ ಇನ್ಫೋಸಿಸ್ ಫ್ರೆಷರ್ಸ್‌ಗೆ ವರ್ಷಕ್ಕೆ 4 ಲಕ್ಷ ರೂಪಾಯಿ ಸಂಬಳ ಕೊಡ್ತಿತ್ತು. ಈಗ ತುಂಬ ಜನ ಕೆಲಸ ಬಿಟ್ಟು ಹೋಗುತ್ತಿರುವ ಕಾರಣ ವೇತನ ಹೆಚ್ಚಳಕ್ಕೆ ಮುಂದಾಗಿದ್ದಾರೆ. 

ಕೆಲವು ಕಾಲೇಜುಗಳಲ್ಲಿ ಮಾತ್ರ ಈ ಟ್ರೈನಿಂಗ್ ಪ್ರೋಗ್ರಾಮ್ ಇದೆ. ಇದರಲ್ಲಿ ಸೇರಿಕೊಳ್ಳುವ ಫ್ರೆಷರ್ಸ್‌ಗೆ ವರ್ಷಕ್ಕೆ 9 ಲಕ್ಷ ರೂಪಾಯಿವರೆಗೆ ಸಂಬಳ ಕೊಡುವ ಯೋಜನೆಗೆ ಇನ್ಫೋಸಿಸ್ ಬದ್ಧವಾಗಿದೆ. ಟ್ರೈನಿಂಗ್ ಮುಗಿದ ವಿದ್ಯಾರ್ಥಿಗಳನ್ನ ಕೆಲಸಕ್ಕೆ ತೆಗೆದುಕೊಳ್ಳುವಾಗ, ಬರೀ ಪರೀಕ್ಷೆ, ಇಂಟರ್ವ್ಯೂ ಮಾತ್ರ ಅಲ್ಲ, ಸಾಫ್ಟ್‌ವೇರ್ ಚಾಲೆಂಜ್‌ಗಳು, ಪ್ರೋಗ್ರಾಮಿಂಗ್ ಟೆಸ್ಟ್‌ಗಳನ್ನೂ ಮಾಡಲಿದೆ. ದೊಡ್ಡ ಐಟಿ ಕಂಪನಿಗಳು ಫ್ರೆಷರ್ಸ್‌ಗೆ ವರ್ಷಕ್ಕೆ 3 ರಿಂದ 4 ಲಕ್ಷ ರೂಪಾಯಿವರೆಗೆ ಸಂಬಳ ನೀಡುತ್ತದೆ. ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಸೆಕ್ಯುರಿಟಿ ತರಹದ ಫೀಲ್ಡ್‌ಗಳಲ್ಲಿ ಎಕ್ಸ್‌ಪರ್ಟ್ಸ್ ಇರೋ ಫ್ರೆಷರ್ಸ್‌ಗೆ ಜಾಸ್ತಿ ಸಂಬಳ ಸಿಗಲಿದೆ. 

ಬಹಳ ದಿನಗಳ ನಂತರ ಐಟಿ ಫೀಲ್ಡ್‌ನಲ್ಲಿ ಮತ್ತೆ ವೇತನ ಹೆಚ್ಚಾಗುತ್ತಿದೆ. ಉದ್ಯೋಗವಕಾಶಗಳು ಹೆಚ್ಚಾಗುತ್ತಿದೆ. ಇನ್ಫೋಸಿಸ್ 2024-25ರಲ್ಲಿ 15,000 ರಿಂದ 20,000 ಪದವೀಧರರನ್ನ ಕೆಲಸಕ್ಕೆ ತೆಗೆದುಕೊಳ್ಳೋ ಪ್ಲಾನ್ ಮಾಡಿದೆ. ಟಿಸಿಎಸ್ ಕೂಡ ಕಳೆದ ವರ್ಷದ ರೀತಿಯಲ್ಲಿ ಈ ವರ್ಷ 40,000 ಫ್ರೆಷರ್ಸ್‌ಗಳನ್ನ ಕೆಲಸಕ್ಕೆ ತೆಗೆದುಕೊಳ್ಳೋ ಪ್ಲಾನ್ ಮಾಡಿದೆ.  

LT 90 ಗಂಟೆ, ಇನ್ಫೋಸಿಸ್ 70 ಗಂಟೆ, ಆದ್ರೆ ಚಿರತೆಯಿಂದ ಸಿಕ್ತು ಮನೆಯಿಂದ ಕೆಲಸ, ಮೀಮ್ಸ್ ವೈರಲ್
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಮಂಡ್ಯದಲ್ಲಿ ಅಮೆರಿಕದ ಸೆಮಿಕಂಡಕ್ಟರ್ ಘಟಕಕ್ಕೆ 100 ಎಕರೆ ಭೂಮಿ ಗುರುತು: ಕೆಐಎಡಿಬಿಗೆ ಸೂಚನೆ
ಒಂದೇ ವರ್ಷದಲ್ಲಿ ಎಂಆರ್‌ಪಿಎಲ್‌ ಆದಾಯ 4,119 ಕೋಟಿ ಏರಿಕೆ: ದಾಖಲಿಸಿದ ಒಟ್ಟು ಹಣ ಎಷ್ಟು?