ಸ್ಯಾಲರಿ ಹೈಕ್ ಮರುದಿನ ಇನ್ಫೋಸಿಸ್‌ನಲ್ಲಿ ಉದ್ಯೋಗ ಕಡಿತ, ಮೈಸೂರು ಕ್ಯಾಂಪಸ್‌ನಲ್ಲಿ ನಡೆದಿದ್ದೇನು?

Published : Feb 07, 2025, 04:11 PM ISTUpdated : Feb 07, 2025, 04:55 PM IST
ಸ್ಯಾಲರಿ ಹೈಕ್ ಮರುದಿನ ಇನ್ಫೋಸಿಸ್‌ನಲ್ಲಿ ಉದ್ಯೋಗ ಕಡಿತ, ಮೈಸೂರು ಕ್ಯಾಂಪಸ್‌ನಲ್ಲಿ ನಡೆದಿದ್ದೇನು?

ಸಾರಾಂಶ

ಇನ್ಫೋಸಿಸ್ ವಾರ್ಷಿಕ ವೇತನ ಹೆಚ್ಚಳ ಘೋಷಣೆ ಮಾಡಿದ ಮರುದಿನ ಮೈಸೂರು ಕ್ಯಾಂಪಸ್‌ನಲ್ಲಿ ಹೈಡ್ರಾಮ ನಡೆದಿದೆ. ಬರೋಬ್ಬರಿ 350 ನೌಕರರ ಉದ್ಯೋಗ ಕಡಿತಗೊಳಿಸಿದೆ. ಈ ವೇಳೆ ಹೈಡ್ರಾಮ ಸೃಷ್ಟಿಯಾಗಿರುವುದಾಗಿ ವರದಿಯಾಗಿದೆ. 

ಮೈಸೂರು(ಫೆ.07) ಇನ್ಫೋಸಿಸ್ ಐಟಿ ಕಂಪನಿ ಕಳೆ ಹಲವು ತಿಂಗಳಿನಿಂದ ಚರ್ಚೆಗೆ ಗ್ರಾಸವಾಗಿದೆ. ಸಹ ಸಂಸ್ಥಾಪಕ ನಾರಾಯಣ ಮೂರ್ತಿ 70 ಗಂಟೆ ಕೆಲಸದ ಹೇಳಿಕೆ, ಮೈಸೂರು ಕ್ಯಾಂಪಸ್‌ನಲ್ಲಿ ಚಿರತೆ ಪ್ರತ್ಯಕ್ಷ ಸೇರಿದಂತೆ ಹಲವು ಕಾರಣಗಳಿಂದ ಇನ್ಫೋಸಿಸ್ ಮೀಮ್ಸ್ ಹರಿದಾಡುತ್ತಿತ್ತು. ಇದರ ನಡುವೆ ಫೆಬ್ರವರಿ 6 ರಂದು ಇನ್ಪೋಸಿಸ್ ವಾರ್ಷಿಕ ವೇತನ ಹೆಚ್ಚಳ ಘೋಷಣೆ ಮಾಡಿ ಐತಿಹಾಸಿಕ ದಾಖಲೆ ಬರೆದಿತ್ತು. ಈ ಮೂಲಕ ಉದ್ಯೋಗಿಗಳು ನಿಟ್ಟಿಸುರುಬಿಡುವಂತೆ ಮಾಡಿತ್ತು. ಆದರೆ ಈ ಘೋಷಣೆ ಮರುದಿನವೇ ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಉದ್ಯೋಗ ಕಡಿತ ಮಾಡಲಾಗಿದೆ ಎಂದು ವರದಿಯಾಗಿದೆ. ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಿಂದ  ಬರೋಬ್ಬರಿ 350 ಮಂದಿ ಉದ್ಯೋಗ ಕಳೆದೆುಕೊಂಡಿದ್ದಾರೆ. ಆದರೆ ಉದ್ಯೋಗ ಕಳೆದುಕೊಂಡವರನ್ನು ಕ್ಯಾಂಪಸ್‌ನಿಂದ ಹೊರದಬ್ಬಲು ಬೌನ್ಸರ್ಸ್ ಹಾಗೂ ಸೆಕ್ಯೂರಿಟಿ ಗಾರ್ಡ್ ಬಳಕೆ ಮಾಡಲಾಗಿದೆ ಅನ್ನೋ ಆರೋಪವೂ ಕೇಳಿಬಂದಿದೆ. ಈ ಕುರಿತು ಇನ್ಫೋಸಿಸ್ ಸ್ಪಷ್ಟನೆ ನೀಡಿದೆ. ಕಂಪನಿ ನಿಯಮದ ಪ್ರಕಾರ ಕ್ಯಾಂಪಸ್ ಮೂಲಕ ಆಯ್ಕೆಯಾದ ಅಭ್ಯರ್ಥಿಗಳು ಉದ್ಯೋಗಿಯಾಗಿ ಮುಂದುವರಿಯಲು ಅರ್ಹತಾ ಪರೀಕ್ಷೆ ಪಾಸ್ ಆಗಬೇಕು. ಆದರೆ 350 ಮಂದಿ ಈ ಪರೀಕ್ಷೆಯಲ್ಲಿ ಪಾಸ್ ಆಗಿಲ್ಲ. ಈ ಉದ್ಯೋಗಿಗಳನ್ನು ಕಂಪನಿ ನಿಯಮ ಹಾಗೂ ಅಭ್ಯರ್ಥಿಗಳ ಜೊತೆ ಮಾಡಿಕೊಂಡಿರುವ ಒಪ್ಪದಂತೆ ಮುಂದುವರಿಸಲಾಗುವುದಿಲ್ಲ ಎಂದು ಇನ್ಫೋಸಿಸ್ ಸ್ಪಷ್ಟನೆ ನೀಡಿದೆ. 

ಅಕ್ಟೋಬರ್ 2024ರಲ್ಲಿ ಇನ್ಫೋಸಿಸ್ ಕೆಲಸಕ್ಕೆ ಸೇರಿದ 350 ಮಂದಿಯನ್ನು ತೆಗೆದು ಹಾಕಲಾಗಿದೆ. ಒತ್ತಾಯಪೂರ್ವಕವಾಗಿ ಈ ಉದ್ಯೋಗ ಕಡಿತ ಮಾಡಿ ನೌಕರರನ್ನು ಕ್ಯಾಂಪಸ್‌ನಿಂದ ಹೊರದಬ್ಬಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಆದರೆ ಈ ಕುರಿತ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಇನ್ಫೋಸಿಸ್ ಸ್ಪಷ್ಟಪಡಿಸಿದೆ. 

ಇನ್ಫೋಸಿಸ್ ಉದ್ಯೋಗಿಗಳಿಗೆ ಗುಡ್ ನ್ಯೂಸ್, ತಿಂಗಳ ಸ್ಯಾಲರಿ ಹೆಚ್ಚಿಸಿ ಐಟಿ ಕಂಪನಿ ದಾಖಲೆ

ಇನ್ಫೋಸಿಸ್ ಹೇಳುತ್ತಿರುವುದೇನು?
ಕಳೆದ ಅಕ್ಟೋಬರ್‌ನಲ್ಲಿ ಟ್ರೈನಿಯಾಗಿ ಇನ್ಫೋಸಿಸ್ ಸೇರಿಕೊಂಡಿದ್ದ ಅಭ್ಯರ್ಥಿಗಳು ಇನ್ಫೋಸಿಸ್ ಎಲಿಜಿಬಲ್ ಪರೀಕ್ಷೆ ಪಾಸ್ ಆಗಲು ವಿಫಲರಾಗಿದ್ದಾರೆ. ಈ ಅಭ್ಯರ್ಥಿಗಳಿಗೆ 3 ಅವಕಾಶ ನೀಡಲಾಗಿತ್ತು. ಆದರೆ ಮೂರು ಅವಕಾಶದಲ್ಲಿ ಈ ಅಭ್ಯರ್ಥಿಗಳು ತೇರ್ಗಡೆಯಾಗಿಲ್ಲ. ಹೀಗಾಗಿ ಈ ಅಭ್ಯರ್ಥಿಗಳನ್ನು ಕಂಪನಿಯಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಕೆಲಸ ಮಾಡಲು ಕನಿಷ್ಠ ಅರ್ಹತೆ, ಪ್ರತಿಭೆ ಇರಲೇಬೇಕು. ಇದು ಪ್ರತಿಭಗಳ ಆಗರವಾಗಿದೆ. ಇಷ್ಟಾದರೂ 3 ಅವಕಾಶ ನೀಡಲಾಗಿತ್ತು. ಕಂಪನಿ ನಿಯಮದ ಪ್ರಕಾರ ಪಾಸ್ ಆದ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಇನ್ಫೋಸಿಸ್ ಹೇಳಿದೆ. 

ಇತ್ತ ಕಂಪನಿಯಿಂದ ಹೊರಬಿದ್ದಿರುವ ಅಭ್ಯರ್ಥಿಗಳು ಇನ್ಫೋಸಿಸ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಅಂತಿಮ ಕ್ಷಣದಲ್ಲಿ ಇನ್ಫೋಸಿಸ್ ಸಿಲೆಬಸ್ ಬದಲಾಯಿಸಿದೆ. ಪರೀಕ್ಷೆಯಲ್ಲಿ ಕೆಲ ಬದಲಾವಣೆ ಮಾಡಿದೆ. ಇದು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಉದ್ಯೋಗ ಕಡಿತಗೊಂಡವರನ್ನು ಕ್ಯಾಂಪಸ್‌ನಿಂದ ಒತ್ತಾಯಪೂರ್ವಕವಾಗಿ ಹೊರದಬ್ಬಲಾಗಿದೆ. ಇದಕ್ಕಾಗಿ ಇನ್ಪೋಸಿಸ್ ಬೌನ್ಸರ್ಸ್ ಹಾಗೂ ಸೆಕ್ಯೂರಿಟಿ ಗಾರ್ಡ್ ಬಳಸಿದ್ದಾರೆ ಅನ್ನೋ ಕೂಗು ಕೇಳಿಬಂದಿದೆ.

ಮೈಸೂರು ಕ್ಯಾಂಪಸ್‌ನಲ್ಲೇ ಕಾಣಿಸಿಕೊಂಡಿತ್ತು ಚಿರತೆ
ಇದೀಗ ಉದ್ಯೋಗ ಕಡಿತದಿಂದ ಸುದ್ದಿಯಾಗಿರುವ ಮೈಸೂರು ಇನ್ಫೋಸಿಸ್ ಕ್ಯಾಂಪಸ್ ಇತ್ತೀಚೆಗೆ ಚಿರತೆ ಕಾಣಿಸಿಕೊಂಡು ಸದ್ದು ಮಾಡಿತ್ತು. ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಚಿರತೆ ಕಾಣಿಸಿಕೊಂಡ ನಂತರ, ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿತ್ತು. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಕಂಪನಿಯ ಭದ್ರತಾ ಸಿಬ್ಬಂದಿಗೆ ಭೂಗರ್ಭ ಪಾರ್ಕಿಂಗ್ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು 

ಇನ್ಫೋಸಿಸ್ ತನ್ನ ತರಬೇತಿ ಪಡೆಯುವವರಿಗೆ ಫುಡ್ ಕೋರ್ಟ್‌ಗಳು, GEC೨ (ಹೊಸ ತರಬೇತಿ ಕೇಂದ್ರ) ಮತ್ತು ECC (ತರಬೇತಿ ನಿವಾಸಿ ಕಟ್ಟಡಗಳು) ನಡುವೆ ಓಡಾಡುವಾಗ ನಿರ್ದಿಷ್ಟ ಮಾರ್ಗವನ್ನು ಅನುಸರಿಸಲು ಸೂಚಿಸಿತ್ತು. ECC ಮತ್ತು ಫುಡ್ ಕೋರ್ಟ್‌ಗಳ ನಡುವಿನ ಮಾರ್ಗಗಳನ್ನು ತೋರಿಸುವ ನಕ್ಷೆಯನ್ನು ತರಬೇತಿ ಪಡೆಯುವವರಿಗೆ ನೀಡಲಾಗಿದೆ.  

ತಮ್ಮ ಸುರಕ್ಷತೆಯನ್ನು ಮತ್ತಷ್ಟು ರಕ್ಷಿಸಲು, ವಿದ್ಯಾರ್ಥಿಗಳು ಬೆಂಚುಗಳು ಅಥವಾ ಪಾದಚಾರಿ ಮಾರ್ಗಗಳಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಲು ಮತ್ತು ಕನಿಷ್ಠ ಐದು ಜನರ ಗುಂಪುಗಳಲ್ಲಿ ಚಲಿಸಲು ಹೇಳಲಾಗಿತ್ತು. ಇನ್ಫೋಸಿಸ್ ತನ್ನ ಸಿಬ್ಬಂದಿಗೆ "ದಯವಿಟ್ಟು ಕ್ಯಾಂಪಸ್‌ನಲ್ಲಿ ಅಲೆದಾಡುವುದನ್ನು ತಪ್ಪಿಸಿ ಮತ್ತು ಅಗತ್ಯವಿದ್ದಾಗ ಮಾತ್ರ ನಿಮ್ಮ ECC ಯಿಂದ ಹೊರಬನ್ನಿ" ಎಂದು ಆಂತರಿಕ ಪತ್ರದಲ್ಲಿ ವಿನಂತಿಸಿತ್ತು.  

ನೌಕರರಿಗೆ ವೀಕೆಂಡ್‌ನಲ್ಲಿ ಕೆಲಸ, ಬಾಸ್‌ಗೆ ಮಾತ್ರ ಟಿ20 ಕಿಕ್, ಮತ್ತೆ ನಾರಾಯಣ ಮೂರ್ತಿ ಟ್ರೋಲ್
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!