ಭಾರತದ ಡಿಜಿಟಲ್ ಪೇಮೆಂಟ್‌ನಲ್ಲಿ ಕ್ರಾಂತಿಯನ್ನೇ ಮಾಡಿರುವ ಯುಪಿಐ ಸೇವೆಯನ್ನು ಫ್ರಾನ್ಸ್ ನಲ್ಲೂ ಆರಂಭಿಸುವ ಒಪ್ಪಂದ ಆಗಿದೆ
ನವದೆಹಲಿ: ಭಾರತದ ಡಿಜಿಟಲ್ ಪೇಮೆಂಟ್‌ನಲ್ಲಿ ಕ್ರಾಂತಿಯನ್ನೇ ಮಾಡಿರುವ ಯುಪಿಐ ಸೇವೆಯನ್ನು ಫ್ರಾನ್ಸ್ ನಲ್ಲೂ ಆರಂಭಿಸುವ ಒಪ್ಪಂದ ಆಗಿದೆ ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್ ಭೇಟಿ ವೇಳೆ ಈ ಘೋಷಣೆ ಹೊರಬಿದ್ದಿದೆ. ಈಗಾಗಲೇ ಭಾರತವು ಸಿಂಗಾಪುರದ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಾದ ‘ಪೇ ನೌ’ ಜತೆ ಒಪ್ಪಂದ ಮಾಡಿಕೊಂಡು ಯುಪಿಐ ಸೇವೆ ಆರಂಭಿಸಿತ್ತು. ಅಂದರೆ ಸಿಂಗಾಪುರದಲ್ಲಿನ ಜನರು ಭಾರತೀಯ ಖಾತೆಗಳಿಗೂ ಭಾರತೀಯರು ಅಲ್ಲಿನ ಖಾತೆಗಳಿಗೂ ಕೇವಲ ಫೋನ್ ನಂಬರ್ ಅಥವಾ ಯುಪಿಐ ಐಡಿ ಬಳಸಿ ಕ್ಷಣಾರ್ಧದಲ್ಲಿ ದುಡ್ಡು ಕಳಿಸಲು ಸಾಧ್ಯವಾಗುತ್ತಿದೆ. ಈಗ ಇದೇ ಮಾದರಿಯ ಒಪ್ಪಂದ ಫ್ರಾನ್ಸ್‌ನ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯಾದ ‘ಲ್ಯಾರಾ’ ನಡುವೆ ನಡೆದಿದೆ. ಜೊತೆಗೆ ಭಾರತೀಯರು ಹಾಗೂ ಫ್ರೆಂಚರ ನಡುವೆ ಕ್ಷಣಾರ್ಧದಲ್ಲಿ ಹಣ ವರ್ಗಾವಣೆ ಸಾಧ್ಯವಾಗಲಿದೆ. ಯುಪಿಐ ಸೇವೆ ಆರಂಭಿಸಿದ ಮೊದಲ ಯುರೋಪ್ ದೇಶ ಎಂಬ ಹೆಗ್ಗಳಿಕೆಗೆ ಫ್ರಾನ್ಸ್ ಪಾತ್ರವಾಗಿದೆ.
ಆ.15ರೊಳಗೆ ದೇಶದ ಎಲ್ಲಾ ಪಂಚಾಯತ್‌ಗಳಲ್ಲೂ ಯುಪಿಐ ಸೇವೆ!
ಈ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ದೇಶದಲ್ಲಿರುವ ಎಲ್ಲಾ ಪಂಚಾಯತ್‌ಗಳು ಅಭಿವೃದ್ಧಿ ಕಾರ್ಯಗಳಿಗೆ ಮತ್ತು ಆದಾಯ ಸಂಗ್ರಹಣೆಗೆ ಕಡ್ಡಾಯವಾಗಿ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಬೇಕು. ಎಲ್ಲಾ ಪಂಚಾಯತ್‌ಗಳು ಯುಪಿಐ ಸೇವೆ ಹೊಂದಿವೆ ಎಂದು ಘೋಷಿಸಬೇಕು ಎಂದು ಪಂಚಾಯತ್ ರಾಜ್ ಸಚಿವಾಲಯ ಸೂಚನೆ ನೀಡಿದೆ. ಮುಖ್ಯಮಂತ್ರಿ, ಶಾಸಕರು ಮತ್ತು ಸಂಸದರ ಸಮ್ಮುಖದಲ್ಲಿ ರಾಜ್ಯಗಳು ಯುಪಿಐ ಪಂಚಾಯತ್‌ಗಳನ್ನು ಘೋಷಿಸಬೇಕು ಎಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿ ಸುನೀಲ್ ಕುಮಾರ್ ಹೇಳಿದ್ದಾರೆ. ಅಲ್ಲದೇ ಈಗಾಗಲೇ ಶೇ.98ರಷ್ಟುಪಂಚಾಯಿತಿಗಳು ಯುಪಿಐ ಆಧಾರಿತ ಸೇವೆ ನೀಡುತ್ತಿವೆ. ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆಯ ಮೂಲಕ ಸುಮಾರು 1.5 ಲಕ್ಷ ಕೋಟಿ ರು. ಪೇಮೆಂಟ್ ಮಾಡಲಾಗುತ್ತಿದೆ. ಚೆಕ್ ಮತ್ತು ನಗದು ರೂಪದಲ್ಲಿ ಪೇಮೆಂಟ್ ಮಾಡುವುದನ್ನು ಈಗಾಗಲೇ ನಿಲ್ಲಿಸಲಾಗಿದೆ ಎಂದು ಅವರು ಹೇಳಿದರು.
ರುಪೇ ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಪಾವತಿ ಸೌಲಭ್ಯ ಪ್ರಾರಂಭಿಸಿದ ಕೆನರಾ ಬ್ಯಾಂಕ್
ಕ್ರೆಡಿಟ್ ಕಾರ್ಡ್ ಬಳಸಿ ಗೂಗಲ್ ಪೇ ಮೂಲಕ ಪಾವತಿ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ