8 ವರ್ಷಕ್ಕೆ ದುಪ್ಪಟ್ಟಾದ ಭಾರತೀಯರ ಆದಾಯ: ಪ್ರಧಾನಿ ಮೋದಿ ಆಡಳಿತದಲ್ಲಿ ಭರ್ಜರಿ ಆರ್ಥಿಕ ಪ್ರಗತಿ

By Kannadaprabha News  |  First Published Mar 6, 2023, 8:06 AM IST

8 ವರ್ಷಕ್ಕೆ ಭಾರತೀಯರ ತಲಾ ಆದಾಯ ಡಬಲ್‌ ಆಗಿದೆ. 86,647 ರೂ. ಇದ್ದ ಆದಾಯ ಈಗ 1,72,000 ರೂ. ಆಗಿದೆ. ಮೋದಿ ಆಡಳಿತದಲ್ಲಿ ಭರ್ಜರಿ ಆರ್ಥಿಕ ಪ್ರಗತಿಯುಂಟಾಗಿದೆ. 


ನವದೆಹಲಿ (ಮಾರ್ಚ್‌ 6, 2023): ನರೇಂದ್ರ ಮೋದಿ ಅವರು ಪ್ರಧಾನಿಯಾದ ವರ್ಷವಾದ 2014-15ಕ್ಕೆ ಹೋಲಿಸಿದರೆ ಭಾರತೀಯರ ಸರಾಸರಿ ತಲಾದಾಯ ಈಗ 1,72,000 ರೂ. ಗೆ ಏರಿಕೆಯಾಗಿದೆ. 2014-15ರಲ್ಲಿ ಭಾರತೀಯರ ತಲಾದಾಯ 86,647 ರೂ. ಇತ್ತು. ಅದರಲ್ಲೀಗ ಶೇ.99ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ ಅಂಕಿ-ಅಂಶಗಳು ತಿಳಿಸಿವೆ.

ಆದರೆ ಇದು ಪ್ರಸ್ತುತ ಬೆಲೆಯನ್ನು (Current Prices) ಆಧರಿಸಿದ ತಲಾದಾಯವಾಗಿದೆ (Per Capita Income). ನೈಜ (ಹಣದುಬ್ಬರ ಕಡಿತಗೊಳಿಸಿದ ಬಳಿಕ ಸಿಗುವ ಲೆಕ್ಕ) ತಲಾದಾಯ ಅಷ್ಟೊಂದು ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ. 2014-15ರಲ್ಲಿ 72,805 ರೂ. ಇದ್ದ ನೈಜ ತಲಾದಾಯ ಈಗ 98,118 ರೂ. ಗೆ ತಲುಪಿದೆ ಎಂದು ಪ್ರಸಿದ್ಧ ಅಭಿವೃದ್ಧಿಶೀಲ ಅರ್ಥಶಾಸ್ತ್ರಜ್ಞೆ ಜಯತಿ ಘೋಷ್‌ ತಿಳಿಸಿದ್ದಾರೆ. ಅಂದರೆ ಹಣದುಬ್ಬರವನ್ನು ಕಳೆದರೆ ಭಾರತೀಯರ ತಲಾದಾಯ ಈ ಅವಧಿಯಲ್ಲಿ ಶೇ. 35 ರಷ್ಟು ಏರಿಕೆಯಾಗಿದೆ.

Tap to resize

Latest Videos

ಇದನ್ನು ಓದಿ: ಉತ್ಪಾದನಾ ವಲಯದಲ್ಲಿ ಕುಸಿತ: 3ನೇ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಕೇವಲ ಶೇ. 4.4 ಏರಿಕೆ

ತಲಾದಾಯ ಹೆಚ್ಚಳ ಬಹುತೇಕ ಪ್ರಮಾಣದಲ್ಲಿ ಶೇ.10 ರಷ್ಟು ಜನಸಂಖ್ಯೆಗೆ ಮಾತ್ರ ಆಗಿದೆ. ಮಧ್ಯಮ ವರ್ಗದವರ ವೇತನಗಳು ಕುಸಿಯುತ್ತಿವೆ. ಅದು ನೈಜ ತಲಾದಾಯಕ್ಕಿಂತ ಕಡಿಮೆ ಇರಬಹುದು ಎಂದು ಅವರು ಹೇಳಿದ್ದಾರೆ. ಸಾಂಖ್ಯಿಕ ಸಂಸ್ಥೆಯ ದಾಖಲೆಗಳ ಪ್ರಕಾರ, ಕೋವಿಡ್‌ ಸಂದರ್ಭದಲ್ಲಿ ಪ್ರಸ್ತುತ ಹಾಗೂ ನೈಜ ತಲಾದಾಯ ಎರಡೂ ಕುಸಿತ ಕಂಡಿದ್ದವು. ನಂತರದ ವರ್ಷಗಳಲ್ಲಿ ಅವರೆಡರಲ್ಲೂ ಹೆಚ್ಚಳ ಕಂಡುಬಂದಿದೆ.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬಿಡುಗಡೆ ಮಾಡಿದ ಇಕೋರ‍್ಯಾಪ್‌ ವರದಿ ಪ್ರಕಾರ ಭಾರತೀಯರ ತಲಾ ಜಿಡಿಪಿ ಆದಾಯ 1,96,716 ರೂ.ಗೆ ಏರಿಕೆಯಾಗಿದೆ. ಇದು 2012ರಲ್ಲಿ 71,609 ರೂ. ಇತ್ತು. ಪ್ರತಿ ವರ್ಷ ಇದು ಸರಾಸರಿ ಶೇ.10.6 ರಷ್ಟು ಏರಿಕೆಯಾಗಿದೆ.

ಇದನ್ನೂ ಓದಿ: ಸತತ 6ನೇ ಬಾರಿಗೆ ಬಡ್ಡಿ ಏರಿಕೆ ಬರೆ: ರೆಪೋ ದರ ಶೇ. 6.5ಕ್ಕೆ ಹೆಚ್ಚಿಸಿದ ಆರ್‌ಬಿಐ

ಅಂತಾರಾಷ್ಟ್ರೀಯ ಹಣಕಾಸು ನಿಧಿ (International Monetary Fund) (ಐಎಂಎಫ್‌) (IMF) ಪ್ರಕಾರ ಭಾರತ (India) ಈಗಾಗಲೇ ಬ್ರಿಟನ್‌ (Britain) ಅನ್ನು ಹಿಂದಿಕ್ಕಿ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಈಗ ಜಗತ್ತಿನಲ್ಲಿ ಭಾರತಕ್ಕಿಂತ ಮುಂದೆ ಜರ್ಮನಿ, ಜಪಾನ್‌, ಚೀನಾ ಮತ್ತು ಅಮೆರಿಕ ಮಾತ್ರ ಇವೆ. ಒಂದು ದಶಕದ ಹಿಂದೆ ಭಾರತವು ಜಗತ್ತಿನ 11ನೇ ದೊಡ್ಡ ಆರ್ಥಿಕತೆಯಾಗಿತ್ತು. ಕೇವಲ ಹತ್ತು ವರ್ಷದಲ್ಲಿ ಆರು ಸ್ಥಾನ ಮೇಲಕ್ಕೆ ಜಿಗಿದಿದೆ.

ಹಣದುಬ್ಬರ ಕಳೆದರೆ ಶೇ. 35 ರಷ್ಟು ಏರಿಕೆ
ತಲಾದಾಯದ ನೈಜ ಏರಿಕೆಯನ್ನು ಕಂಡುಹಿಡಿಯಲು ಈ ಅವಧಿಯಲ್ಲಿ ಏರಿಕೆಯಾದ ಹಣದುಬ್ಬರದ ಪ್ರಮಾಣವನ್ನು ಅದರಲ್ಲಿ ಕಳೆಯಬೇಕಾಗುತ್ತದೆ. 2014-15ರಲ್ಲಿ 72,805 ರೂ ಇದ್ದ ನೈಜ ತಲಾದಾಯ ಈಗ 98,118 ರೂ.ಗೆ ತಲುಪಿದೆ. ಅಂದರೆ ಕಳೆದ ಎಂಟು ವರ್ಷದಲ್ಲಿ ಹಣದುಬ್ಬರವನ್ನು ಕಳೆದರೆ ಭಾರತೀಯರ ತಲಾದಾಯ ಶೇ.35 ರಷ್ಟು ಏರಿಕೆಯಾಗಿದೆ ಎಂದು ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಇದನ್ನೂ ಓದಿ: ಈ ಶತಮಾನ ಭಾರತಕ್ಕೆ ಸೇರಿದ್ದು: ವೆಂಚರ್ ಕ್ಯಾಪಿಟಲ್ ಜೀನಿಯಸ್ ಬ್ರೆಂಡನ್ ರೋಜರ್ಸ್ ಭವಿಷ್ಯ

ಬಡವರ ಆದಾಯ ಹೆಚ್ಚು ಏರಿಕೆಯಾಗಿಲ್ಲ
ಭಾರತೀಯರ ತಲಾದಾಯ ಏರಿಕೆಯಾಗುತ್ತಿದೆ. ಹಣದುಬ್ಬರವನ್ನು ಕಳೆದ ಮೇಲೂ ವಾಸ್ತವದಲ್ಲಿ ತಲಾದಾಯ ಏರಿಕೆಯಾಗುತ್ತಿದೆ. ಇದು ದೇಶವು ಶ್ರೀಮಂತವಾಗುತ್ತಿರುವುದರ ಸೂಚನೆ. ಆದರೆ ದೇಶದಲ್ಲಿ ಆದಾಯದಲ್ಲಿನ ಅಸಮಾನತೆ ಹೆಚ್ಚುತ್ತಿದೆ. ಹೀಗಾಗಿ ಬಡವರ ಆದಾಯ ಹೆಚ್ಚು ಏರಿಕೆಯಾಗುತ್ತಿಲ್ಲ.
- ನಾಗೇಶ್‌ ಕುಮಾರ್‌, ಖ್ಯಾತ ಅರ್ಥಶಾಸ್ತ್ರಜ್ಞ, ಇನ್‌ಸ್ಟಿಟ್ಯೂಟ್‌ ಆಫ್‌ ಸ್ಟಡೀಸ್‌ ಇನ್‌ ಇಂಡಸ್ಟ್ರಿಯಲ್‌ ಡೆವಲೆಪ್‌ಮೆಂಟ್‌ ನಿರ್ದೇಶಕ

click me!