Most Expensive Stock of India: ಪ್ರತಿ ಷೇರಿಗೆ 1 ಲಕ್ಷ ರೂಪಾಯಿ ಗಡಿ ಮುಟ್ಟಿದ ಎಂಆರ್‌ಎಫ್‌!

Published : May 08, 2023, 09:04 PM IST
Most Expensive Stock of India: ಪ್ರತಿ ಷೇರಿಗೆ 1 ಲಕ್ಷ ರೂಪಾಯಿ ಗಡಿ ಮುಟ್ಟಿದ ಎಂಆರ್‌ಎಫ್‌!

ಸಾರಾಂಶ

ಭಾರತದ ಅತ್ಯಂತ ದುಬಾರಿ ಷೇರು ಸೋಮವಾರ ಫ್ಯೂಚರ್ಸ್‌ನಲ್ಲಿ 1 ಲಕ್ಷ ರೂಪಾಯಿಯ ಗಡಿ ಮಟ್ಟಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 41,458.83 ಕೋಟಿ ರೂಪಾಯಿ ಆಗಿದ್ದು, ಸೋಮವಾರ ಎನ್‌ಎಸ್‌ಇಯಲ್ಲಿ ಎಂಆರ್‌ಎಫ್ ಷೇರುಗಳು 97,750 ರೂಪಾಯಿಯೊಂದಿಗೆ ವ್ಯವಹಾರ ಮುಗಿಸಿದೆ. ಎನ್‌ಎಸ್‌ಇಯಲ್ಲಿ ಹಸಿರು ಬಣ್ಣದಲ್ಲಿ ವ್ಯವಹಾರ ಆರಂಭಿಸಿದ ಎಫ್‌ಆರ್‌ಎಫ್‌, ಸಾರ್ವಕಾಲಿಕ ಗರಿಷ್ಠ 99,933.50 ರೂಪಾಯಿ ತಲುಪಿತ್ತು.

ಮುಂಬೈ (ಮೇ. 8): ಇದೇ ಮೊಟ್ಟಮೊದಲ ಬಾರಿಗೆ ಸೋಮವಾರ ಟೈರ್‌ ಉತ್ಪಾದಕ ಕಂಪನಿಯಾದ ಎಂಆರ್‌ಎಫ್‌ ಕಂಪನಿಯ ಷೇರುಗಳು ಹೊಸ ಮೈಲಿಗಲ್ಲನ್ನು ನೆಟ್ಟಿವೆ. ಫ್ಯೂಚರ್ಸ್‌ನಲ್ಲಿ ಈ ಕಂಪನಿಯ ಪ್ರತಿ ಷೇರುಗಳು 1 ಲಕ್ಷ ರೂಪಾಯಿಯ ಗಡಿಯನ್ನು ಇದೇ ಮೊದಲ ಬಾರಿಗೆ ದಾಟಿವೆ. ಇದು ಭಾರತದ ಕಂಪನಿಗಳು ಹಾಗೂ ಷೇರು ಮಾರುಕಟ್ಟೆಯ ವಿಚಾರದಲ್ಲಿ ಅತೀದೊಡ್ಡ ಸಾಧನೆ. ಈ ಮಹಾನ್‌ ಸಾಧನೆಯೊಂದಿಗೆ ಮದ್ರಾಸ್ ರಬ್ಬರ್ ಫ್ಯಾಕ್ಟರಿ (MRF) ಷೇರು, 6 ಅಂಕಿಗಳ ಗಡಿ ದಾಟಿದ ದೇಶದ ಮೊಟ್ಟಮೊದಲ ಷೇರು ಎನಿಸಿಕೊಂಡಿದೆ. ಆದರೆ, ಎನ್‌ಎಸ್‌ಇ ಹಾಗೂ ಬಿಎಸ್‌ಇ ನಗದು ಮಾರುಕಟ್ಟೆಯಲ್ಲಿ ಈ ಕಂಪನಿಯ ಷೇರುಗಳು 1 ಲಕ್ಷ ರೂಪಾಯಿ ಗಡಿ ದಾಟುವ ತೀರಾ ಸನಿಹದಲ್ಲಿದ್ದು, ಮಂಗಳವಾರ ಈ ಸಾಧನೆಯನ್ನು ಮಾಡಲಿದೆ. ಎನ್‌ಎಸ್ಇಯಲ್ಲಿ ಪ್ರತಿ ಷೇರಿಗೆ 97,750 ರೂಪಾಯಿಯೊಂದಿಗೆ ಎಂಆರ್‌ಎಫ್‌ ತನ್ನ ವ್ಯವಹಾರವನ್ನು ಮುಗಿಸಿದೆ. ಹಸಿರು ಬಣ್ಣದೊಂದಿಗೆ ದಿನದ ವ್ಯವಹಾರ ಆರಂಭ ಮಾಡಿದ್ದ ಎಂಆರ್‌ಎಫ್‌ ಷೇರು, ಕೆಲವೇ ಕ್ಷಣದಲ್ಲಿ ತನ್ ಸಾರ್ವಕಾಲಿಕ ಗರಿಷ್ಠ 99,933.50 ರೂಪಾಯಿಗೆ ತಲುಪಿತ್ತು. ಆ ಬಳಿಕ ಷೇರು ಬೆಲೆಯಲ್ಲಿ ಕುಸಿತ ಕಂಡಿತ್ತು. ಭಾರತದ ಅತ್ಯಂತ ದುಬಾರಿ ಷೇರು ಇದಾಗಿದ್ದು, ಎಂಆರ್‌ಎಫ್‌ನ ನಂತರದ ಸ್ಥಾನದಲ್ಲಿ ಪೇಜ್‌ ಇಂಡಸ್ಟ್ರೀಸ್‌, ಹನಿವೆಲ್‌ ಅಟೋಮೇಷನ್‌ ಕಂಪನಿಯ ಷೇರುಗಳಿವೆ.

ಭಾರತದ ಅತ್ಯಂತ ದುಬಾರಿ ಷೇರುಗಳು

1. ಎಂಆರ್‌ಎಫ್‌: ಭಾರತದ ಅತ್ಯಂತ ದುಬಾರಿ ಷೇರು ಆಗಿರುವ ಎಂಆರ್‌ಎಫ್‌ ಸೋಮವಾರ ಫ್ಯೂಚರ್ಸ್‌ನಲ್ಲಿ ಪ್ರತಿ ಷೇರಿಗೆ 1 ಲಕ್ಷ ರೂಪಾಯಿಯ ಗಡಿ ದಾಟಿದೆ. ಕಂಪನಿಯ ಮಾರುಕಟ್ಟೆ ಮೌಲ್ಯ 41,458.83 ಕೋಟಿ ರೂಪಾಯಿ ಆಗಿದೆ.

2. ಪೇಜ್‌ ಇಂಡಸ್ಟ್ರೀಸ್‌: ಎಂಆರ್‌ಎಫ್‌ ಬಳಿ ದೇಶದ 2ನೇ ಅತ್ಯಂತ ದುಬಾರಿ ಷೇರು ಪೇಜ್‌ ಇಂಡಸ್ಟ್ರೀಸ್‌. ಸೋಮವಾರ ಈ ಕಂಪನಿಯ ಷೇರುಗಳು 41,117 ರೂಪಾಯಿಗೆ ಬಿಕರಿಯಾಗಿದ್ದವು. ಕಂಪನಿಯು ಒಳ ಉಡುಪು, ಲಾಂಜ್‌ವೇರ್ ಮತ್ತು ಸಾಕ್ಸ್‌ಗಳ ತಯಾರಕ ಮತ್ತು ಚಿಲ್ಲರೆ ವ್ಯಾಪಾರಿಯಾಗಿದೆ. ಬೆಂಗಳೂರಿನಲ್ಲಿ ಪ್ರಧಾನ ಕಛೇರಿ ಹೊಂದಿರುವ ಪೇಜ್ ಇಂಡಸ್ಟ್ರೀಸ್ ಭಾರತದಲ್ಲಿ ಜಾಕಿ ಇಂಟರ್‌ನ್ಯಾಶನಲ್‌ನ ವಿಶೇಷ ಪರವಾನಗಿ ಹೊಂದಿದೆ.

3. ಹನಿವೆಲ್‌ ಅಟೋಮೇಷನ್‌: ಸೋಮವಾರದ ಮಾರುಕಟ್ಟೆ ಅಂತ್ಯದ ವೇಳೆಗೆ, ಹನಿವೆಲ್ ಆಟೋಮೇಷನ್ ಭಾರತದ ಮೂರನೇ ಅತ್ಯಂತ ದುಬಾರಿ ಷೇರು ಎನಿಸಿಕೊಂಡಿದೆ. ಇದರ ಪ್ರತಿ ಷೇರಿನ ಬೆಲೆ 36, 499 ರೂಪಾಯಿ ಆಗಿದೆ. ಹನಿವೆಲ್ ಆಟೊಮೇಷನ್ ಇಂಟಿಗ್ರೇಟೆಡ್ ಆಟೊಮೇಷನ್ ಮತ್ತು ಸಾಫ್ಟ್‌ವೇರ್ ಪರಿಹಾರಗಳ ಪ್ರಮುಖ ಪೂರೈಕೆದಾರ ಕಂಪನಿ ಎನಿಸಿದೆ.

4. ಶ್ರೀ ಸಿಮೆಂಟ್: ಸೋಮವಾರ ಎನ್‌ಎಸ್‌ಇಯಲ್ಲಿ ಶ್ರೀ ಸಿಮೆಂಟ್‌ನ ಪ್ರತಿ ಷೇರುಗಳು 24,572.45 ರೂಪಾಯಿಗೆ ಬಿಕರಿಯಾದವು. ಇದು ದೇಶದ ಅತಿದೊಡ್ಡ ಸಿಮೆಂಟ್ ತಯಾರಕರಲ್ಲಿ ಒಂದಾಗಿದೆ ಮತ್ತು ಇದನ್ನು 1979 ರಲ್ಲಿ ರಾಜಸ್ಥಾನದ ಬೇವಾರ್‌ನಲ್ಲಿ ಸ್ಥಾಪನೆ ಮಾಡಲಾಗಿತ್ತು.

5. 3ಎಂ ಇಂಡಿಯಾ: ಭಾರತದ ಐದನೇ ಅತ್ಯಂತ ದುಬಾರಿ ಷೇರು ಆಗಿರುವ 3ಎಂ ಇಂಡಿಯಾದ ಷೇರುಗಳು ಸೋಮವಾರ 23,570.75 ರೂಪಾಯಿಗೆ ಬಿಕರಿಯಾದವು. ಪ್ರಖ್ಯಾತ ಅಂಟು ತಯಾರಿಕಾ ಕಂಪನಿ ಇದಾಗಿದೆ.

6. ಅಬಾಟ್ ಇಂಡಿಯಾ: ಫಾರ್ಮಾ ಕಂಪನಿಯ ಸ್ಟಾಕ್ ಈಗ ಭಾರತದಲ್ಲಿ ದೇಶದ ಆರನೇ ಅತ್ಯಂತ ದುಬಾರಿ ಸ್ಟಾಕ್ ಆಗಿದೆ ಮತ್ತು ಸೋಮವಾರ ಎನ್‌ಎಸ್‌ಇ ನಲ್ಲಿ 22,422.10 ರೂಪಾಯಿಗೆ ಮಾರಾಟವಾದವು. ಅಬಾಟ್ ಇಂಡಿಯಾ ಔಷಧೀಯ ಕಂಪನಿಯಾಗಿದೆ ಮತ್ತು ಇಲ್ಲಿ ಅಬಾಟ್‌ನ ಜಾಗತಿಕ ಔಷಧೀಯ ವ್ಯವಹಾರದ ಭಾಗವಾಗಿದೆ.

ಟಯರ್ ಆಯ್ಕೆಯಲ್ಲಿ ನಿರ್ಲಕ್ಷ್ಯ ಬೇಡ- ಇಲ್ಲಿದೆ ಭಾರತದ ಟಾಪ್ 5 ಟಯರ್

7. ನೆಸ್ಲೆ ಇಂಡಿಯಾ: ತ್ವರಿತ ವ್ಯವಹಾರದ ಗ್ರಾಹಕ ಉತ್ಪನ್ನಗಳ (ಎಫ್‌ಎಂಸಿಜಿ) ಪ್ರಮುಖ ಕಂಪನಿಯಾಗಿರುವ ನೆಸ್ಲೆ ಇಂಡಿಯಾ ಇಂದು ಪ್ರತಿ ಮನೆಮನೆಯ ಹೆಸರಾಗಿದೆ. ಮ್ಯಾಗಿ, ಕಿಟ್‌ಕ್ಯಾಟ್‌ನೊಂದಿಗೆ ಪ್ರತಿ ಜನರನ್ನೂ ತಲುಪಿರುವ ನೆಸ್ಲೆ ಇಂಡಿಯಾದ ಭಾರತದ 7ನೇ ಅತ್ಯಂತ ದುಬಾರಿ ಷೇರು ಆಗಿದ್ದು, ಸೋಮವಾರ ಕಂಪನಿಯ ಪ್ರತಿ ಷೇರುಗಳು 21,980 ರೂಪಾಯಿಗೆ ಮಾರಾಟವಾಗಿದೆ.

ಗೂಗಲ್‌ ಮ್ಯಾಪ್‌ನಲ್ಲಿ ಸಣ್ಣ ಸೆಟ್ಟಿಂಗ್‌ ಮಿಸ್ ಮಾಡಿದ್ದಕ್ಕೆ ಜೈಲು ಪಾಲಾದ ಯುವಕ? ಏನಿದು ಕಥೆ!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!