ಕಲಾನಿತಿ ಮಾರನ್ ಮತ್ತು ಅವರ ಪತ್ನಿ ಕಾವೇರಿ ಕಲಾನಿತಿ ಮಾರನ್ ಅವರು ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯಮಿ ದಂಪತಿಗಳಲ್ಲಿ ಒಬ್ಬರಾಗಿದ್ದಾರೆ.
ಕಲಾನಿತಿ ಮಾರನ್ ಮತ್ತು ಅವರ ಪತ್ನಿ ಕಾವೇರಿ ಕಲಾನಿತಿ ಮಾರನ್ ಅವರು ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಉದ್ಯಮಿ ದಂಪತಿಗಳಲ್ಲಿ ಒಬ್ಬರಾಗಿದ್ದಾರೆ. 2012 ಮತ್ತು 2021 ರ ನಡುವೆ ಇವರ ವೇತನ 1470 ಕೋಟಿ ರೂ. ಇದು ವೇತನ ಮತ್ತು ಇತರ ಭತ್ಯೆಗಳು ಎಲ್ಲವೂ ಒಳಗೊಂಡಿರುತ್ತದೆ ಎಂದು ಕಂಪನಿಯ ವಾರ್ಷಿಕ ವರದಿಯಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, 2022 ರಲ್ಲಿ ಮೊದಲು ಪ್ರಕಟಿಸಲಾಗಿದೆ. ಕಾವೇರಿ ಕಲಾನತಿ ಮಾರನ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳಾ ಉದ್ಯಮಿಯಾಗಿದ್ದಾರೆ.
ಹಣಕಾಸು ವರ್ಷ 2021 ರಲ್ಲಿ, ಕಲಾನಿತಿ ಮಾರನ್ ಅವರು 87.50 ಕೋಟಿ ರೂಪಾಯಿಗಳನ್ನು ಸಂಬಳವಾಗಿ ಪಡೆದರು. ಕಾವೇರಿ ಕಲಾನಿಧಿ ಅವರು ಕೂಡ ಸಮಾನ ಮೊತ್ತವನ್ನು ತೆಗೆದುಕೊಂಡರು. ಈ ಮಧ್ಯೆ, ಏಪ್ರಿಲ್ 1, 2019 ರಿಂದ ಜಾರಿಗೆ ಬರುವಂತೆ ನಿರ್ದೇಶಕಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡ ಅವರ ಪುತ್ರಿ ಕಾವ್ಯಾ ಕಲಾನಿತಿ ಮಾರನ್ ಅವರು 1.09 ಕೋಟಿ ರೂ. ವೇತನ ಪಡೆಯುತ್ತಿದ್ದಾರೆ.
ಗೂಗಲ್‌ನಿಂದ ದಾಖಲೆಯ ಉದ್ಯೋಗ ಆಫರ್ ಪಡೆದ MMMUT ಭಾರತೀಯ ವಿದ್ಯಾರ್ಥಿನಿ!
ಮಾರನ್ಸ್ ಅವರು 1993 ರ ದಶಕದ ಆರಂಭದಲ್ಲಿ SUN ಟಿವಿ ನೆಟ್ವರ್ಕ್ ಅನ್ನು ಸ್ಥಾಪಿಸಿದರು. ಕಲಾನಿತಿ ಮಾರನ್ ಕಾರ್ಯಾಧ್ಯಕ್ಷರು. ಅವರ ಪತ್ನಿ ಕಾವೇರಿ ಕಲಾನಿತಿ ಕಾರ್ಯನಿರ್ವಾಹಕ ನಿರ್ದೇಶಕಿಯಾದರು. ತಮಿಳು, ತೆಲುಗು, ಕನ್ನಡ, ಮಲಯಾಳಂ, ಬಾಂಗ್ಲಾ ಮತ್ತು ಮರಾಠಿಯಲ್ಲಿ ಉಪಗ್ರಹ ದೂರದರ್ಶನ ಚಾನೆಲ್‌ಗಳನ್ನು ನಿರ್ವಹಿಸುವ ಸನ್ ಟಿವಿಯಲ್ಲಿ ಮಾರನ್ ಕುಟುಂಬವು 75 ಪ್ರತಿಶತ ಪಾಲನ್ನು ಹೊಂದಿದೆ. ಇದರ ಜೊತೆಗೆ ಕಂಪೆನಿಯು FM ರೇಡಿಯೋ ಕೇಂದ್ರಗಳನ್ನು ಹೊಂದಿದೆ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನ ಸನ್‌ರೈಸರ್ಸ್ ಹೈದರಾಬಾದ್ ಕ್ರಿಕೆಟ್ ಫ್ರಾಂಚೈಸ್ ಮತ್ತು OTT ಪ್ಲಾಟ್‌ಫಾರ್ಮ್ ಸನ್ NXT ಅನ್ನು ಹೊಂದಿದೆ.
ಮಾರನ್‌ರ ವೇತನವು FY 12 ರಲ್ಲಿ ತಲಾ 57 ಕೋಟಿ ಮತ್ತು FY 2021 ರಲ್ಲಿ 87.50 ಕೋಟಿ ರೂ. ಕುಟುಂಬವು ತಮಿಳುನಾಡಿನಲ್ಲಿ ಪಬ್ಲಿಷಿಂಗ್ ಹೌಸ್ ಬಿಸಿನೆಸ್ ಆರಂಭಿಸಿತು. ಬಳಿಕ 1993 ರಲ್ಲಿ ಸನ್ ಟಿವಿ ನೆಟ್ವರ್ಕ್ ಅನ್ನು ಪ್ರಾರಂಭಿಸಿದರು. ನೆಟ್ವರ್ಕ್ 33 ಚಾನಲ್ಗಳನ್ನು ಹೊಂದಿದೆ. ಇದರ ಜೊತೆಗೆ ಇತರ ವ್ಯವಹಾರಗಳನ್ನು ಕೂಡ ಕುಟುಂಬ ಹೊಂದಿದೆ.
ಇತ್ತೀಚಿನ ಜೂನ್ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯಿಂದ ಸನ್ ಟಿವಿಯ ಆದಾಯವು ಶೇಕಡಾ 48.88 ರಷ್ಟು ಏರಿಕೆಯಾಗಿ 1,219.14 ಕೋಟಿ ರೂಪಾಯಿಗಳಿಗೆ ತಲುಪಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ 818.87 ಕೋಟಿ ರೂ. ಕಂಪೆನಿಯ ಒಟ್ಟು ವೆಚ್ಚವು ಸುಮಾರು ಶೇ.78ಕ್ಕೆ ಏರಿಕೆಯಾಗಿ 660.80 ಕೋಟಿ ರೂ ತಲುಪಿದೆ.
NITK Surathkal ಕ್ಯಾಂಪಸ್ ಸೆಲೆಕ್ಷನ್, ಅಮೆರಿಕಾ ಕಂಪೆನಿಯಲ್ಲಿ ವಿದ್ಯಾರ್ಥಿಗೆ 2.3 ಕೋಟಿ ರೂ
ಕಾವೇರಿ ಕಲಾನಿಧಿ ಹುಟ್ಟಿದ್ದು ಮಡಿಕೇರಿಯಲ್ಲಿ. ಅವರು ಚೆನ್ನೈನ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿಯನ್ನು ಪಡೆದಿದ್ದಾರೆ. ಅವರು ಚಾನೆಲ್‌ಗಳು ಮತ್ತು ಕಂಪನಿಯ ಕಾರ್ಯಚಟುವಟಿಕೆಯಲ್ಲಿ ಆಳವಾಗಿ ತೊಡಗಿಸಿಕೊಂಡಿದ್ದಾರೆ. ಇವರು ಜಮ್ಮಡ ಎ. ಬೆಳ್ಳಿಯಪ್ಪ (ಬೊಳ್ಳಿ) ಮತ್ತು ನೀನಾ ದಂಪತಿಯ ಪುತ್ರಿ. ಇವರು ಮಡಿಕೇರಿಯ ಕೈಕೇರಿಯವರು. ಇವರು 1991 ರಲ್ಲಿ ಕಲಾನಿತಿ ಮಾರನ್ ರನ್ನು ವಿವಾಹವಾದರು. ಕಲಾನಿತಿ ಮಾರನ್ ಮಾಜಿ ಕೇಂದ್ರ ವಾಣಿಜ್ಯ ಸಚಿವ ಮುರಸೋಳಿ ಅವರ ಪುತ್ರನಾಗಿದ್ದಾರೆ. ಮಾಜಿ ಸಿಎಂ ಕರುಣಾನಿಧಿ ಅವರ ಮೊಮ್ಮಗನಾಗಿದ್ದಾರೆ.