Twitter Blue Tick: ಬ್ಲೂ ಟಿಕ್‌ಗೆ ಭಾರತೀಯರು ಹಣ ನೀಡ್ತಾರಾ? ತಜ್ಞರ ಅಭಿಪ್ರಾಯ ಹೀಗಿದೆ ನೋಡಿ

By Suvarna NewsFirst Published Nov 14, 2022, 6:50 PM IST
Highlights

Elon Musk Twitter blue tick subscription: 719ರೂ. ಪಾವತಿಸಿ  ಬ್ಲೂ ಟಿಕ್‌ ಪಡೆದು ಟ್ವಿಟ್ಟರ್ ದೃಢೀಕೃತ ಚಂದಾದಾರರಾಗಲು ಭಾರತೀಯ ಬಳಕೆದಾರರು ಮನಸ್ಸು ಮಾಡೋದು ಕಷ್ಟ ಎಂಬುದು ಸಾಮಾಜಿಕ ಮಾಧ್ಯಮ ತಜ್ಞರ ಅಭಿಪ್ರಾಯ. ಹೀಗಿರುವಾಗ ಭಾರತದಲ್ಲಿ ಮುಂದಿನ ದಿನಗಳಲ್ಲಿ ಟ್ವಿಟ್ಟರ್ ಗೆ ಹಿನ್ನಡೆಯಾಗುವ ಸಾಧ್ಯತೆ ಇದೆಯಾ?

ನವದೆಹಲಿ (ನ.14): ಮಾಸಿಕ 719ರೂ. ಪಾವತಿಸಿ  ಬ್ಲೂ ಟಿಕ್‌ ಪಡೆದು ಟ್ವಿಟ್ಟರ್ ದೃಢೀಕೃತ ಚಂದಾದಾರರಾಗಲು ಭಾರತೀಯ ಬಳಕೆದಾರರು ಮನಸ್ಸು ಮಾಡೋದು ಕಷ್ಟ ಎಂದು ಸಾಮಾಜಿಕ ಮಾಧ್ಯಮ ತಜ್ಞರು ಹಾಗೂ ಬ್ರ್ಯಾಂಡ್ ತಂತ್ರಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತವು ವಿವಿಧ ವಲಯಗಳಲ್ಲಿ ಬೆಲೆ ಕೇಂದ್ರೀಕೃತ ಮಾರುಕಟ್ಟೆ ವ್ಯವಸ್ಥೆ ಹೊಂದಿದ್ದು, ವ್ಯಯಿಸಿದ ಪ್ರತಿ ರೂಪಾಯಿ ಬಗ್ಗೆ ಎಚ್ಚರಿಕೆ ವಹಿಸಿರುತ್ತದೆ ಎಂದು ತಿಳಿಸಿದ್ದಾರೆ. 'ಟ್ವಿಟ್ಟರ್ ಖಾತೆಯನ್ನು ನಿರ್ವಹಿಸೋದು ಹಾಗೂ ಪ್ರತಿ ತಿಂಗಳು ಅದಕ್ಕೆ ಹಣ ಪಾವತಿಸೋದು ಭಾರತೀಯರಿಗೆ ಉತ್ತೇಜನ ಮೂಡಿಸುವ ಆಯ್ಕೆಯಂತೂ ಖಂಡಿತಾ ಅಲ್ಲ' ಎಂದು ಬ್ಯುಸಿನೆಸ್ ಹಾಗೂ ಬ್ರ್ಯಾಂಡ್ ವಿಶ್ಲೇಷಣಾ ತಜ್ಞ ಹರೀಶ್ ಬೀಜೂರ್ ಅಭಿಪ್ರಾಯ ಪಟ್ಟಿದ್ದಾರೆ. ಸಮಯ ಕಳೆದಂತೆ ಜನರು ಮೂಲ ದೃಢೀಕೃತ ಸ್ಟೇಟಸ್ ಹೊಂದಿರುವ ಹ್ಯಾಂಡಲ್ಸ್ ಗುರುತಿಸಲು ಕಲಿಯುತ್ತಾರೆ ಎಂದು ಅವರು ಹೇಳಿದ್ದಾರೆ. ಟ್ವಿಟ್ಟರ್ ಬ್ಯುಸಿನೆಸ್ ಖಾತೆಗಳಿಗೆ ಶೀಘ್ರದಲ್ಲೇ ಶುಲ್ಕ ಪಾವತಿಸಬೇಕಿದೆ. ಆದರೆ, ವೈಯಕ್ತಿಕ ಬಳಕೆ ಖಾತೆಗಳಿಗೆ ಯಾವುದೇ ಶುಲ್ಕವಿಲ್ಲ ಎಂದು ಹರೀಶ್ ಬೀಜೂರ್ ತಿಳಿಸಿದ್ದಾರೆ. ಇನ್ನು ಬ್ಲೂ ಟಿಕ್‌ ಖಾತೆದಾರರಿಗೆ ಮಾಸಿಕ 719ರೂ. ಶುಲ್ಕ ವಿಧಿಸುವ ಟ್ವಿಟ್ಟರ್ ಪ್ರಸ್ತಾವನೆಯಿಂದ ನಕಲಿ ಖಾತೆಗಳ ಸಂಖ್ಯೆ ಹೆಚ್ಚುವ ಸಂಭವವಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್ ದೃಢೀಕೃತ ಚಂದಾದಾರರಾಗಲು ಬ್ಲೂ ಟಿಕ್‌ (Blue Tick) ಪಡೆಯಲು 8 ಡಾಲರ್ ನೀಡಬೇಕು ಎಂಬ ಯೋಜನೆಯನ್ನು ಅಮೆರಿಕ (United States of America) ಸೇರಿದಂತೆ ಆಯ್ದ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಜಾರಿಗೆ ತರಲಾಗಿದೆ. ಮುಂದಿನ ತಿಂಗಳು ಈ ಯೋಜನೆ ಭಾರತಕ್ಕೂ ವಿಸ್ತರಿಸೋದಾಗಿ ಟ್ವಿಟ್ಟರ್ ತಿಳಿಸಿತ್ತು. ಆದರೆ, ಆದರೆ 8 ಡಾಲರ್‌ (Dollar) ಶುಲ್ಕ ಪಾವತಿಸಿ ಬ್ಲೂ ಟಿಕ್‌ (Blue Tick) ಪಡೆದ ಕೆಲವರು ಅದನ್ನು ದುರುಪಯೋಗಪಡಿಸಿಕೊಂಡಿರೋದು ಪತ್ತೆಯಾಗಿದೆ. ಹೀಗಾಗಿ 8 ಡಾಲರ್ ಪಾವತಿಸಿ ಬ್ಲೂ ಟಿಕ್‌ ಪಡೆಯುವ ಯೋಜನೆಗೆ ಟ್ವಿಟ್ಟರ್ ಶುಕ್ರವಾರ ರಾತ್ರಿ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ. ಎಲೋನ್ ಮಸ್ಕ್ ಅವರ ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್ ಹೆಸರಿನಲ್ಲಿ ಕೂಡ ನಕಲಿ ಖಾತೆಗಳು ಬ್ಲೂ ಟಿಕ್‌ನೊಂದಿಗೆ ಕಾಣಿಸಿಕೊಂಡಿವೆ. ಇನ್ನು ವಿಶ್ವದ ಅತೀದೊಡ್ಡ ಔಷಧ ಕಂಪನಿ ಎಲಿ ಲಿಲ್ಲಿ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ 'ಇನ್ಸುಲಿನ್ ಉಚಿತ' ಎಂದು ಟ್ವೀಟ್ ಮಾಡಲಾಗಿದೆ. ಈ ಬಗ್ಗೆ ಎಲಿ ಲಿಲ್ಲಿ ಸ್ಪಷ್ಟನೆ ನೀಡಿ, ಕ್ಷಮೆ ಕೂಡ ಕೋರಿದೆ.

ನಿಮ್ಮ ಎಟಿಎಂ ಕಾರ್ಡ್ ಕಳುವಾಗಿದೆಯಾ? ತಕ್ಷಣ ಬ್ಲಾಕ್ ಮಾಡಿಸೋದು ಹೇಗೆ? ಇಲ್ಲಿದೆ ಮಾಹಿತಿ

ಮನರಂಜನೆ, ರಾಜಕೀಯ, ಪತ್ರಿಕೋದ್ಯಮ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಪ್ರಸಿದ್ಧ ವ್ಯಕ್ತಿಗಳಿಗೆ ಮೊದಲು ಬ್ಲೂಟಿಕ್ ವೆರಿಫಿಕೇಶನ್ ಬ್ಯಾಡ್ಜ್ ನೀಡಲಾಗಿತ್ತು. ಆದರೆ ಎಲಾನ್ ಮಸ್ಕ್ ಅಧಿಕಾರ ವಹಿಸಿಕೊಂಡ ನಂತರ, ಕಂಪನಿಯು ಪರಿಶೀಲನೆ ನೀತಿಗೆ ತಿದ್ದುಪಡಿ ಮಾಡಲು ನಿರ್ಧರಿಸಿತು ಮತ್ತು 8 ಡಾಲರ್‌ ಪಾವತಿಸಲು ಸಿದ್ಧರಿರುವ ಯಾರಿಗಾದರೂ ಪರಿಶೀಲನೆ ಲೇಬಲ್‌ ಆಧ ಬ್ಲೂಟಿಕ್‌ ನೀಡಲು ನಿರ್ಧಾರ ಮಾಡಿತ್ತು. 

ಇನ್​ಸ್ಟಾಗ್ರಾಮ್ ನಲ್ಲಿ ಡ್ರೋನ್ ಪ್ರತಾಪ್ ಮತ್ತೆ ಪ್ರತ್ಯಕ್ಷ, ಹೊಸ ಕಂಪನಿ ಘೋಷಣೆ; ಸಖತ್ತಾಗಿ ಕಾಲೆಳೆದ ನೆಟ್ಟಿಗರು

ಬ್ಲೂ ಟಿಕ್‌ (Blue Tick) ಖಾತೆದಾರರಿಗೆ ಮಾಸಿಕ ಶುಲ್ಕ ವಿಧಿಸುವ ಟ್ವಿಟ್ಟರ್‌ ಸಂಸ್ಥೆ ಪ್ರಸ್ತಾಪಕ್ಕೆ ಭಾರತದ ಮೊದಲ ಬ್ಲೂಟಿಕ್‌ ಖಾತೆದಾರೆ ಎಂಬ ದಾಖಲೆ ಹೊಂದಿರುವ ನೈನಾ ರೇಧು ವಿರೋಧ ವ್ಯಕ್ತಪಡಿಸಿದ್ದಾರೆ. ನಾನು 16 ವರ್ಷದಿಂದ ಹಣ ಪಾವತಿಸದೆ ಟ್ವಿಟ್ಟರ್‌ ಬಳಸಿದ್ದೇನೆ. ಈಗಲೂ ಹಣ ಪಾವತಿಸುವುದಿಲ್ಲ ಎಂದು ನೈನಾ ಹೇಳಿದ್ದಾರೆ. 2006ರಲ್ಲಿ ಟ್ವಿಟ್ಟರ್‌ನಿಂದ ಬ್ಲೂ ಟಿಕ್‌ ಪಡೆದಿದ್ದ ನೈನಾ, ರಾಜಸ್ಥಾನದ (Rajasthana) ಹೊಟೇಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ 22000 ಹಿಂಬಾಲಕರಿದ್ದಾರೆ.

click me!